BBK 11: ಬಿಗ್‌ ಬಾಸ್‌ ಸೀಸನ್‌ 11 ರಲ್ಲಿ ಸ್ವಲ್ಪ ಬದಲಾವಣೆ, ವೀಕ್ಷಕರಿಗೆ ನಿರಾಸೆ; ಏನದು?-kannada television news small changes in bigg boss season 11 kannada small screen reality show rsm ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Bbk 11: ಬಿಗ್‌ ಬಾಸ್‌ ಸೀಸನ್‌ 11 ರಲ್ಲಿ ಸ್ವಲ್ಪ ಬದಲಾವಣೆ, ವೀಕ್ಷಕರಿಗೆ ನಿರಾಸೆ; ಏನದು?

BBK 11: ಬಿಗ್‌ ಬಾಸ್‌ ಸೀಸನ್‌ 11 ರಲ್ಲಿ ಸ್ವಲ್ಪ ಬದಲಾವಣೆ, ವೀಕ್ಷಕರಿಗೆ ನಿರಾಸೆ; ಏನದು?

ಈ ಬಾರಿಯೂ ಕಿಚ್ಚ ಸುದೀಪ್‌, ಬಿಗ್‌ ಬಾಸ್‌ ನಿರೂಪಣೆ ಮಾಡುತ್ತಿದ್ದರೂ ವೀಕ್ಷಕರಿಗೆ ನಿರಾಸೆ ಆಗುವ ವಿಚಾರವೊಂದಿದೆ. ಕಲರ್ಸ್‌ ಕನ್ನಡ ವಾಹಿನಿ ಹೊರತುಪಡಿಸಿ ಜಿಯೋದಲ್ಲಿ ಕಾರ್ಯಕ್ರಮ ವೀಕ್ಷಣೆಗೆ ಅವಕಾಶವಿಲ್ಲ, 24 ಗಂಟೆ ಲೈವ್‌ ಕೂಡಾ ಇರುವುದಿಲ್ಲ ಎನ್ನಲಾಗುತ್ತಿದೆ.

BBK 11: ಬಿಗ್‌ ಬಾಸ್‌ ಸೀಸನ್‌ 11 ರಲ್ಲಿ ಸ್ವಲ್ಪ ಬದಲಾವಣೆ, ವೀಕ್ಷಕರಿಗೆ ನಿರಾಸೆ; ಏನದು?
BBK 11: ಬಿಗ್‌ ಬಾಸ್‌ ಸೀಸನ್‌ 11 ರಲ್ಲಿ ಸ್ವಲ್ಪ ಬದಲಾವಣೆ, ವೀಕ್ಷಕರಿಗೆ ನಿರಾಸೆ; ಏನದು? (PC: Colors Kannada)

ಬಿಗ್‌ ಬಾಸ್‌ ಸೀಸನ್‌ 11ಕ್ಕೆ ಇನ್ನು ವಾರವಷ್ಟೇ ಬಾಕಿ ಇದೆ. ಕಾರ್ಯಕ್ರಮಕ್ಕೆ ವಾಹಿನಿ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಸ್ಪರ್ಧಿಗಳು ಉಳಿದುಕೊಳ್ಳುತ್ತಿರುವ ಮನೆ ರೆಡಿ ಆಗುತ್ತಿದೆ. ಇದುವರೆಗೂ ಕನ್ನಡದಲ್ಲಿ 10 ಸೀಸನ್‌ಗಳು ಯಶಸ್ವಿಯಾಗಿದ್ದು. ಹಿಂದಿ ಹೊರತುಪಡಿಸಿ ಕಿರುತೆರೆಯಲ್ಲಿ ಹೆಚ್ಚು ಸೀಸನ್‌ಗಳು ಪ್ರಸಾರವಾಗಿರುವುದು ಕನ್ನಡದಲ್ಲೇ. ಕಿರುತೆರೆಪ್ರಿಯರು ಕೂಡಾ ಈ ಬಾರಿಯ ಶೋ ನೋಡಲು ಕಾಯುತ್ತಿದ್ದಾರೆ.

ಸುದೀಪ್‌ ನಿರೂಪಣೆ ಮಾಡೋದು ಕನ್ಫರ್ಮ್‌

ಇನ್ನು ಬಿಗ್‌ ಬಾಸ್‌ ಅನೌನ್ಸ್‌ ಅದಾಗಿನಿಂದ ಈ ಬಾರಿ ಕಿಚ್ಚ ನಿರೂಪಣೆ ಮಾಡುತ್ತಿಲ್ಲ ಎಂಬ ಮಾತು ಕೇಳಿಬಂದಿತ್ತು. ಹಿಂದಿ, ತಮಿಳು, ತೆಲುಗಿನಲ್ಲಿ ಈಗಾಗಲೇ ನಿರೂಪಕರು ಬದಲಾಗಿದ್ದು ಕನ್ನಡದಲ್ಲಿ ಕೂಡಾ ಆಂಕರ್‌ ಬದಲಾಗಿದ್ದಾರೆ ಎಂಬ ಸುದ್ದಿ ಕೂಡಾ ಹರಿದಾಡಿತ್ತು. ವಾಹಿನಿ ಕೂಡಾ ಇದರ ಬಗ್ಗೆ ಏನೂ ಮಾಹಿತಿ ನೀಡಿರಲಿಲ್ಲ. ಕಿಚ್ಚನ ಬದಲಿಗೆ ರಿಷಬ್‌ ಶೆಟ್ಟಿ ಬರಬಹುದು, ರಮೇಶ್‌ ಅರವಿಂದ್‌ ಬರಬಹುದು ಎಂದು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆ ನಡೆದಿತ್ತು. ಗಣೇಶ್‌ ಹೆಸರು ಕೂಡಾ ಕೇಳಿ ಬಂದಿತ್ತು. ಆದರೆ ಕೊನೆಗೆ ಈ ಬಾರಿಯೂ ಸುದೀಪ್‌ ಬಿಗ್‌ ಬಾಸ್‌ ನಿರೂಪಣೆ ಮಾಡುತ್ತಿದ್ದಾರೆ ಅನ್ನೋದು ಪಕ್ಕಾ ಆಯ್ತು. ಇದು ವೀಕ್ಷಕರಿಗೆ ಖುಷಿ ನೀಡಿದೆ. ಆದರೆ ಇದರ ನಡುವೆ ಕಿರುತೆರೆಪ್ರಿಯರಿಗೆ ಒಂದು ಬೇಸರದ ಸುದ್ದಿ ಇದೆ.

ವಾಹಿನಿ ಹೊರತುಪಡಿಸಿ ಜಿಯೋದಲ್ಲಿ ಕಾರ್ಯಕ್ರಮ ಲಭ್ಯವಿಲ್ಲ?

ಇಷ್ಟು ಸೀಸನ್‌ಗಳಲ್ಲಿ ಒಂದೂವರೆ ಗಂಟೆಗಳ ಕಾಲ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು. ಈ ಬಾರಿಯೂ ಅದೇ ಸಮಯ ನಿಗದಿಯಾಗಿದೆ. ಇದಕ್ಕಾಗಿ ಕಲರ್ಸ್‌ ಕನ್ನಡದ 2 ಧಾರಾವಾಹಿಗಳು ಕೂಡಾ ಮುಕ್ತಾಯವಾಗುತ್ತಿದೆ. ಆದರೆ ಈ ಸೀಸನ್‌ನಲ್ಲಿ ಕಳೆದ ಬಾರಿಯಂತೆ 24 ಗಂಟೆಗಳ ಲೈವ್‌ ಇರುವುದಿಲ್ಲವಂತೆ. ಅಷ್ಟೇ ಅಲ್ಲ, ಕಾರ್ಯಕ್ರಮದ ಲೈವ್‌ ಮಿಸ್‌ ಮಾಡಿಕೊಂಡವರು ಅದನ್ನು ಜಿಯೋದಲ್ಲಿ ನೋಡುವ ಅವಕಾಶವಿತ್ತು. ಆದರೆ ಈ ಬಾರಿ ವಾಹಿನಿ ಜಿಯೋದಲ್ಲಿ ಕಾರ್ಯಕ್ರಮವನ್ನು ಪ್ರಸಾರ ಮಾಡದಿರಲು ನಿರ್ಧರಿಸಿದೆ ಎಂಬ ಮಾತು ಕೇಳಿಬರುತ್ತಿದೆ. ಕಾರ್ಯಕ್ರಮ ಆರಂಭವಾಗಲು ಇನ್ನು 9 ದಿನಗಳಷ್ಟೇ ಬಾಕಿ ಇದೆ. ಕೆಲವೇ ದಿನಗಳಲ್ಲಿ ಸುದೀಪ್‌ ಹಾಗೂ ಕಾರ್ಯಕ್ರಮದ ಪ್ರಮುಖರು ಸುದ್ದಿಗೋಷ್ಠಿ ನಡೆಸಲಿದ್ದಾರೆ. ಈ ಸಮಯದಲ್ಲಿ ಈ ಎಲ್ಲಾ ಗೊಂದಲಗಳಿಗೂ ತೆರೆ ಬೀಳಲಿದೆ.

ಈ ಬಾರಿ ದೊಡ್ಮನೆಯೊಳಗೆ ಹೋಗ್ತೀರೋದು ಇವರೇ?

ಅಂದ ಹಾಗೆ ಈ ಬಾರಿ ತುಕಾಲಿ ಸಂತು ಪತ್ನಿ ಮಾನಸ, ಮಜಾ ಭಾರತ ಖ್ಯಾತಿಯ ರಾಘವೇಂದ್ರ, ಜೊತೆಗೆ ಸೋಷಿಯಲ್‌ ಮೀಡಿಯಾ ಇನ್‌ಫ್ಲುಯರ್‌ಗಳು, ಕಿರುತೆರೆ ಕಲಾವಿದರು, ಸ್ಯಾಂಡಲ್‌ವುಡ್‌ ಅವಳಿ ಸಹೋದರಿಯರಾದ ಅದ್ವಿತಿ ಶೆಟ್ಟಿ-ಅಶ್ವಿತಿ ಶೆಟ್ಟಿ, ವರುಣ್‌ ಆರಾಧ್ಯ, ಅಮೂಲ್ಯ ಭಾರಧ್ವಾಜ್‌, ಗಾಯಕಿ ಐಶ್ವರ್ಯ ರಂಗನಾಜನ್‌, ಗಿಚ್ಚಿ ಗಿಲಿಗಿಲಿ 3 ವಿನ್ನರ್ ಹುಲಿ ಕಾರ್ತಿಕ್, ಗೀತಾ ಧಾರಾವಾಹಿಯ ಭವ್ಯಾ ಗೌಡ, ಒಲವಿನ ನಿಲ್ದಾಣ ಧಾರಾವಾಹಿಯ ಅಕ್ಷಯ್‌ ನಾಯಕ್‌ ಹಾಗೂ ಇನ್ನಿತರರು ಸ್ಪರ್ಧಿಗಳಾಗಿ ಹೋಗುತ್ತಿದ್ದಾರೆ ಎನ್ನಲಾಗುತ್ತಿದೆ. ಎಲ್ಲದಕ್ಕೂ ಸೆಪ್ಟೆಂಬರ್‌ 29 ರಂದು ಉತ್ತರ ದೊರೆಯಲಿದೆ.

mysore-dasara_Entry_Point