ಕನ್ನಡ ಸುದ್ದಿ  /  ಮನರಂಜನೆ  /  14 ದಿನಗಳ ನ್ಯಾಯಾಂಗ ಬಂಧನ ಅಂತ್ಯ; ಪರಪ್ಪನ ಅಗ್ರಹಾರ ಜೈಲಿಂದ ಸೋನು ಶ್ರೀನಿವಾಸ್‌ ಗೌಡ ಬಿಡುಗಡೆ

14 ದಿನಗಳ ನ್ಯಾಯಾಂಗ ಬಂಧನ ಅಂತ್ಯ; ಪರಪ್ಪನ ಅಗ್ರಹಾರ ಜೈಲಿಂದ ಸೋನು ಶ್ರೀನಿವಾಸ್‌ ಗೌಡ ಬಿಡುಗಡೆ

ಏಳು ವರ್ಷದ ಬಾಲಕಿಯನ್ನು ದತ್ತು ಪಡೆದ ಆರೋಪದ ಮೇಲೆ ಜೈಲು ಸೇರಿದ್ದ ಸೋಷಿಯಲ್‌ ಮೀಡಿಯಾ ಇನ್‌ಫ್ಲೂಯೆನ್ಸರ್‌ ಸೋನು ಶ್ರೀನಿವಾಸ್‌ ಗೌಡ ಬಿಡುಗಡೆಯಾಗಿದ್ದಾರೆ.

14 ದಿನಗಳ ನ್ಯಾಯಾಂಗ ಬಂಧನ ಅಂತ್ಯ; ಪರಪ್ಪನ ಅಗ್ರಹಾರ ಜೈಲಿಂದ ಸೋನು ಶ್ರೀನಿವಾಸ್‌ ಗೌಡ ಬಿಡುಗಡೆ
14 ದಿನಗಳ ನ್ಯಾಯಾಂಗ ಬಂಧನ ಅಂತ್ಯ; ಪರಪ್ಪನ ಅಗ್ರಹಾರ ಜೈಲಿಂದ ಸೋನು ಶ್ರೀನಿವಾಸ್‌ ಗೌಡ ಬಿಡುಗಡೆ

Sonu Srinivas gowda: ಅಕ್ರಮವಾಗಿ ಬಾಲಕಿಯನ್ನು ದತ್ತು ಪಡೆದ ಆರೋಪದ ಮೇಲೆ ಜೈಲು ಸೇರಿದ್ದ ಸೋಷಿಯಲ್‌ ಮೀಡಿಯಾ ಇನ್‌ಫ್ಲೂಯೆನ್ಸರ್‌ ಸೋನು ಶ್ರೀನಿವಾಸ್‌ ಗೌಡ, ಜೈಲಿಂದ ಬಿಡುಗಡೆಯಾಗಿದ್ದಾರೆ. ಜಾಮೀನು ಮಂಜೂರಾದ ಹಿನ್ನೆಲೆಯಲ್ಲಿ 14 ದಿನಗಳ ನ್ಯಾಯಾಂಗ ಬಂಧನದ ಬಳಿಕ ಮನೆಗೆ ಮರಳಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಮಾರ್ಚ್‌ 22ರಂದು ಸೋನು ಶ್ರೀನಿವಾಸ್‌ ಗೌಡ ಅವರ ವಿರುದ್ಧ ರಾಜ್ಯ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಗೀತಾ ಅವರು ನೀಡಿದ ದೂರಿನ ಹಿನ್ನೆಲೆಯಲ್ಲಿ, ಕೇಸ್‌ ದಾಖಲಾಗಿತ್ತು. ಅದಾದ ಬಳಿಕ ವಿಚಾರಣೆ ನಡೆಸಿ, ಸೋನು ಅವರನ್ನು ವಶಕ್ಕೆ ಪಡೆಯಲಾಗಿತ್ತು. ಕೋರ್ಟ್‌ಗೂ ಹಾಜರುಪಡಿಸಲಾಗಿತ್ತು.

ಅಪ್ರಾಪ್ತ ಮಕ್ಕಳನ್ನು ದತ್ತು ಪಡೆಯಲು ಕಾನೂನಿನ ಚೌಕಟ್ಟಿನಲ್ಲಿ ಅದರದೇ ಆದ ಒಂದಷ್ಟು ನಿಯಮಗಳು, ಕಟ್ಟುಪಾಡುಗಳಿವೆ. ಅದರ ಅನ್ವಯ ಮಗುವನ್ನು ದತ್ತು ಪಡೆಯಬೇಕಾಗುತ್ತದೆ. ಅದ್ಯಾವುದರ ಅರಿವಿಲ್ಲದೆ, ಮಗುವನ್ನು ಮನೆಗೆ ಕರೆತಂದು, ಆಕೆಯ ಹತ್ತಾರು ವಿಡಿಯೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದರು ಸೋನು.

ಈ ವಿಚಾರ ಹೊರಬೀಳುತ್ತಿದ್ದಂತೆ, ದೂರಿನ ಅನ್ವಯ ಬೆಂಗಳೂರಿನ ಬ್ಯಾಡರಹಳ್ಳಿ ಠಾಣೆ ಪೊಲೀಸರು ಸೋನು ಅವರನ್ನು ವಶಕ್ಕೆ ಪಡೆದಿದ್ದರು. ಜತೆಗೆ ಬಾಲಕಿಯ ಹುಟ್ಟೂರಿಗೂ ಕರೆದೊಯ್ದು, ಹೆತ್ತವರಿಂದಲೂ ಹೇಳಿಕೆ ಪಡೆಯಲಾಗಿತ್ತು. ಈಗ 14 ದಿನಗಳ ನ್ಯಾಯಾಂಗ ಬಂಧನದ ಬಳಿಕ ಸೋನು ಅವರಿಗೆ ಜಾಮೀನು ಸಿಕ್ಕಿದ್ದು, ನಿಟ್ಟುಸಿರು ಬಿಟ್ಟಿದ್ದಾರೆ.

ಯೂಟ್ಯೂಬ್‌ನಲ್ಲಿ ಬಾಲಕಿಯ ವಿಡಿಯೋ

ಬಾಲಕಿಯನ್ನು ದುಡ್ಡು ಮಾಡುವ ಸಲುವಾಗಿ ಬಳಸಿಕೊಂಡಿದ್ದಾರೆ ಎಂದೂ ದೂರಿನಲ್ಲಿ ನಮೂದಿಸಲಾಗಿದೆ. ತಮ್ಮ ಯಟ್ಯೂಬ್‌ನಲ್ಲಿ ಬಾಲಕಿಯ ಶಾಪಿಂಗ್‌ ಸೇರಿ ಹತ್ತಾರು ಬಗೆಬಗೆಯ ವಿಡಿಯೋಗಳನ್ನು ಸೋನಿ ಶ್ರೀನಿವಾಸ್‌ ಗೌಡ ತಮ್ಮ ಯೂಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡಿದ್ದರು. ಆ ವಿಡಿಯೋಗಳು ಲಕ್ಷ ಲಕ್ಷ ವೀಕ್ಷಣೆ ಸಹ ಪಡೆದುಕೊಂಡಿದ್ದವು.

IPL_Entry_Point