ಕನ್ನಡ ಸುದ್ದಿ  /  Entertainment  /  Kannada Television News Tukali Santhosh Car Accident Case Auto Driver Jagadish From Kodihalli Kunigal Died Mnk

Tukali Santhosh Car Accident: ತುಕಾಲಿ ಸಂತೋಷ್‌ ಕಾರು ಅಪಘಾತ ಪ್ರಕರಣ: ಚಿಕಿತ್ಸೆ ಫಲಿಸದೇ ಆಟೋ ಚಾಲಕ ಸಾವು

ತುಕಾಲಿ ಸಂತೋಷ್‌ ಹೋಗುತ್ತಿದ್ದ ಕಾರು ಮತ್ತು ಆಟೋ ನಡುವೆ ಡಿಕ್ಕಿ ಸಂಭವಿಸಿದ ಹಿನ್ನೆಲೆಯಲ್ಲಿ ಆಟೋದಲ್ಲಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಮದ್ಯಪಾನ ಮಾಡಿ ಆಟೋ ಓಡಿಸುತ್ತಿದ್ದರು ಎಂದು ಹೇಳಲಾಗುತ್ತಿದೆ.

Tukali Santhosh Car Accident: ತುಕಾಲಿ ಸಂತೋಷ್‌ ಕಾರು ಅಪಘಾತ ಪ್ರಕರಣ: ಚಿಕಿತ್ಸೆ ಫಲಿಸದೇ ಆಟೋ ಚಾಲಕ ಸಾವು
Tukali Santhosh Car Accident: ತುಕಾಲಿ ಸಂತೋಷ್‌ ಕಾರು ಅಪಘಾತ ಪ್ರಕರಣ: ಚಿಕಿತ್ಸೆ ಫಲಿಸದೇ ಆಟೋ ಚಾಲಕ ಸಾವು

Tukali Santhosh: ಬಿಗ್‌ ಬಾಸ್‌ ಕನ್ನಡ ಸೀಸನ್‌ 10ರ ಫೈನಲಿಸ್ಟ್‌ ಮತ್ತು ಗಿಚ್ಚಿಗಿಲಿಗಿಲಿ ಶೋ ಖ್ಯಾತಿಯ ತುಕಾಲಿ ಸಂತೋಷ್‌ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬುಧವಾರ ರಾತ್ರಿ ಸಂತೋಷ್‌ ಅವರಿದ್ದ ಕಾರಿಗೆ ಆಟೋ ಡಿಕ್ಕಿ ಹೊಡೆದಿತ್ತು. ಈ ಅಪಘಾತದಲ್ಲಿ ತೀವ್ರ ಗಾಯಗಳಿಂದ ಆಸ್ಪತ್ರೆ ಸೇರಿದ್ದ ಚಾಲಕ ಸಾವನ್ನಪ್ಪಿದ್ದಾರೆ.

ಕುಣಿಗಲ್ ತಾಲ್ಲೂಕಿನ ಕೋಡಿಹಳ್ಳಿ ಪಾಳ್ಯದ 44 ವರ್ಷದ ಜಗದೀಶ್‌ ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ. ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿದ್ದ ಜಗದೀಶ್‌, ಬುಧವಾರ ರಾತ್ರಿ ಹೊನ್ನೆನಹಳ್ಳಿ ಬಳಿ ತುಕಾಲಿ ಸಂತೋಷ್ ಕಾರು ಹಾಗೂ ಆಟೋ ನಡುವೆ ಅಪಘಾತ ನಡೆದಿತ್ತು ಅಪಘಾತದಲ್ಲಿ ಆಟೋಚಾಲಕ ಜಗದೀಶ್‌ಗೆ ತೀವ್ರ ಗಾಯಗಳಾಗಿದ್ದವು.

ಕೂಡಲೇ ಕುಣಿಗಲ್ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಗುರುವಾರ ಬೆಳಗಿನ ಜಾವ ಚಿಕಿತ್ಸೆ ಫಲಕಾರಿಯಾಗದೇ ಆಟೋಚಾಲಕ ಜಗದೀಶ್ ಸಾವನ್ನಪ್ಪಿದ್ದಾರೆ. ಅಪಘಾತ ನಡೆದ ವೇಳೆ ಆಟೋಚಾಲಕ ಜಗದೀಶ್ ಮದ್ಯಪಾನ ಮಾಡಿದ್ದ ಎಂದು ಹೇಳಲಾಗ್ತಿತ್ತು. ಘಟನೆ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರಿಂದ ತನಿಖೆ ಮುಂದುವರಿದಿದೆ.

ಕಾಮಿಡಿಯನ್‌ ತುಕಾಲಿ ಸಂತೋಷ್‌ ತುಮಕೂರಿನಿಂದ ಹೊಳೆನರಸೀಪುರಕ್ಕೆ ಹೊರಟಿದ್ದ ವೇಳೆ ಕುಣಿಗಲ್‌ ಮಾರ್ಗ ಮಧ್ಯೆ ಈ ಅಪಘಾತ ಸಂಭವಿಸಿದೆ. ರಾತ್ರಿ ವೇಳೆ ಕುಣಿಗಲ್‌ನಿಂದ ಕುರುಡಿಹಳ್ಳಿಗೆ ಬರುತ್ತಿದ್ದ ಆಟೋ, ಹೊನ್ನೇನಹಳ್ಳಿ ಬಳಿ ತುಕಾಲಿ ಸಂತೋಷ್‌ ಅವರಿದ್ದ ಕಿಯಾ ಕಾರಿಗೆ ಎದುರಿನಿಂದ ಡಿಕ್ಕಿ ಹೊಡೆದಿದೆ. ಹೀಗೆ ಸಂಭವಿಸಿದ ಅಪಘಾತದ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ.

ಇತ್ತೀಚೆಗಷ್ಟೇ ಅಂದರೆ, ಮಾರ್ಚ್‌ ಮೊದಲ ವಾರದಲ್ಲಿಯೇ ಕಿಯಾ ಕಂಪನಿಯ ಹೊಸ ಕಾರನ್ನು ಖರೀದಿಸಿದ್ದರು ತುಕಾಲಿ ಸಂತೋಷ್‌. ಈ ವಿಚಾರವನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡು, ಕನಸೊಂದು ನನಸಾಗಿದೆ ಎಂದು ಬರೆದಿಕೊಂಡಿದ್ದರು. 

IPL_Entry_Point