ಕನ್ನಡ ಸುದ್ದಿ  /  ಮನರಂಜನೆ  /  ಸೀತಾ ರಾಮ ಸೀರಿಯಲ್‌ ದೃಶ್ಯದಲ್ಲಿ ಹೆಲ್ಮೆಟ್‌ ಧರಿಸದೇ ಪ್ರಯಾಣ; ನಟಿ ವೈಷ್ಣವಿ ಗೌಡಗೆ ದಂಡ ವಿಧಿಸಿದ ಟ್ರಾಫಿಕ್‌ ಪೊಲೀಸರು

ಸೀತಾ ರಾಮ ಸೀರಿಯಲ್‌ ದೃಶ್ಯದಲ್ಲಿ ಹೆಲ್ಮೆಟ್‌ ಧರಿಸದೇ ಪ್ರಯಾಣ; ನಟಿ ವೈಷ್ಣವಿ ಗೌಡಗೆ ದಂಡ ವಿಧಿಸಿದ ಟ್ರಾಫಿಕ್‌ ಪೊಲೀಸರು

ಸೀತಾ ರಾಮ ಸೀರಿಯಲ್‌ ಶೂಟಿಂಗ್‌ ವೇಳೆ ತಲೆಗೆ ಹೆಲ್ಮೆಟ್‌ ಧರಿಸದೇ ದ್ವಿಚಕ್ರ ವಾಹ ಏರಿದ ಸೀತಾ ಪಾತ್ರಧಾರಿ ವೈಷ್ಣವಿ ಗೌಡ ವಿರುದ್ಧ ದೂರು ದಾಖಲಾಗಿದೆ. ಮಂಗಳೂರು ಮೂಲದ ಜಯಪ್ರಕಾಶ್‌ ದೂರು ನೀಡಿದ್ದು, ಬೆಂಗಳೂರಿನ ಸಂಚಾರಿ ಪೊಲೀಸರು ದಂಡ ವಸೂಲಿ ಮಾಡಿದ್ದಾರೆ.

ಸೀತಾ ರಾಮ ಸೀರಿಯಲ್‌ ದೃಶ್ಯದಲ್ಲಿ ಹೆಲ್ಮೆಟ್‌ ಧರಿಸದೇ ಪ್ರಯಾಣ; ನಟಿ ವೈಷ್ಣವಿ ಗೌಡಗೆ ದಂಡ ವಿಧಿಸಿದ ಟ್ರಾಫಿಕ್‌ ಪೊಲೀಸರು
ಸೀತಾ ರಾಮ ಸೀರಿಯಲ್‌ ದೃಶ್ಯದಲ್ಲಿ ಹೆಲ್ಮೆಟ್‌ ಧರಿಸದೇ ಪ್ರಯಾಣ; ನಟಿ ವೈಷ್ಣವಿ ಗೌಡಗೆ ದಂಡ ವಿಧಿಸಿದ ಟ್ರಾಫಿಕ್‌ ಪೊಲೀಸರು (Photo\ Varta Bharathi)

Seetha Rama Serial: ಸಂಚಾರ ನಿಯಮ ಉಲ್ಲಂಘಿಸಿದರೆ ದಂಡವನ್ನು ವಸೂಲಿ ಮಾಡುವ ಟ್ರಾಫಿಕ್‌ ಪೊಲೀಸರು, ಈ ಸಲ ಸೀರಿಯಲ್‌ ದೃಶ್ಯದಲ್ಲಿ ದ್ವಿಚಕ್ರ ವಾಹನದ ಮೇಲೆ ಚಲಾಯಿಸುತ್ತಿದ್ದ ನಟಿಗೂ ದಂಡ ವಿಧಿಸಿದ್ದಾರೆ! ಅಂದರೆ, ಜೀ ಕನ್ನಡದಲ್ಲಿ ಪ್ರಸಾರವಾಗುವ ಸೀತಾ ರಾಮ ಧಾರಾವಾಹಿ ನಟಿ ಸೀತಾ ಅಲಿಯಾಸ್‌ ವೈಷ್ಣವಿ ಗೌಡ ಅವರಿಂದ ಬೆಂಗಳೂರಿನ ಟ್ರಾಫಿಕ್‌ ಪೊಲೀಸರು ದಂಡ ವಸೂಲಿ ಮಾಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಸಿನಿಮಾ, ಸೀರಿಯಲ್‌ ಶೂಟಿಂಗ್‌ ಸಂದರ್ಭದಲ್ಲಿ ಸಂಚಾರ ನಿಯಮ ಪಾಲನೆ ಪೂರ್ಣಪ್ರಮಾಣದಲ್ಲಿ ಆಗದು. ಕೆಲವರು ಕಟ್ಟುನಿಟ್ಟಾಗಿ ಪಾಲಿಸಿದರೆ, ಇನ್ನು ಕೆಲವರು ಹೆಲ್ಮೆಟ್‌ ಧರಿಸದೇ ಚಿತ್ರೀಕರಿಸುತ್ತಾರೆ. ಇದೀಗ ಸೀತಾ ರಾಮ ಸೀರಿಯಲ್‌ನಲ್ಲಿಯೂ ಅದೇ ನಡೆದಿದೆ. ಸೀರಿಯಲ್‌ ಶೂಟಿಂಗ್‌ ವೇಳೆ ಪ್ರಿಯಾ ಮತ್ತು ಸೀತಾ ದ್ವಿಚಕ್ರದಲ್ಲಿ ತೆರಳುತ್ತಿದ್ದಾರೆ. ಇಬ್ಬರ ಪೈಕಿ ವಾಹನ ಚಲಾಯಿಸುತ್ತಿರುವ ಪ್ರಿಯಾ ಹೆಲ್ಮೆಟ್‌ ಧರಿಸಿದರೆ, ಸೀತಾ ಧರಿಸಿರಲಿಲ್ಲ.

ಮಂಗಳೂರಲ್ಲಿ ಕೇಸ್‌

ಈ ಸೀರಿಯಲ್‌ ದೃಶ್ಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದಂತೆ, ಮಂಗಳೂರಿನ ಜಯಪ್ರಕಾಶ್‌ ಎಕ್ಕೂರು ಎಂಬುವವರು ಮಂಗಳೂರು ನಗರ ಪೊಲೀಸ್‌ ಆಯುಕ್ತರಿಗೆ ದೂರು ದಾಖಲಿಸಿದ್ದರು. ಸೀತಾ ರಾಮ ಸೀರಿಯಲ್‌ನಲ್ಲಿ ಸಂಚಾರ ನಿಯಮ ಉಲ್ಲಂಘನೆಯಾಗಿದೆ. ಸಮಾಜಕ್ಕೆ ಇದರಿಂದ ತಪ್ಪು ಸಂದೇಶ ರವಾನೆಯಾಗಲಿದೆ. ಈ ಕೂಡಲೇ ಆ ನಟಿಯ ಮೇಲೆ, ಸೀರಿಯಲ್‌ ನಿರ್ದೇಶಕ ಮತ್ತು ವಾಹಿನಿ ಮೇಲೆ ಕಟ್ಟು ನಿಟ್ಟಿನ ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ನಮೂದಿಸಿದ್ದರು ಜಯಪ್ರಕಾಶ್‌.

500 ರೂಪಾಯಿ ದಂಡ

ದೂರಿನ ಆಧಾರದ ಮೇಲೆ ಮಂಗಳೂರು ಪೂರ್ವ ಸಂಚಾರ ಠಾಣೆಗೆ ಈ ಕೇಸ್‌ ವರ್ಗಾವಣೆಯಾಗಿತ್ತು. ಅಲ್ಲಿಂದ ವಾಹಿನಿ ಮತ್ತು ನಟಿಗೆ ನೋಟಿಸ್‌ ರವಾನಿಸಲಾಗಿತ್ತು. ಜತೆಗೆ ಈ ಸೀರಿಯಲ್‌ ಶೂಟಿಂಗ್‌ ಬೆಂಗಳೂರಿನ ನಂದಿನಿ ಲೇಔಟ್‌ನಲ್ಲಿ ನಡೆದಿದ್ದರಿಂದ ಆ ಭಾಗದ ರಾಜಾಜಿನಗರ ಪೊಲೀಸ್‌ ಠಾಣೆಗೆ ಪ್ರಕರಣವನ್ನು ವರ್ಗಾಯಿಸಲಾಗಿತ್ತು. ದೂರು ದಾಖಲಿಸಿ ವಾಹನ ಮಾಲೀಕರಾದ ಸವಿತಾ ಎಂಬುವವರಿಗೆ ಮೇ 10ರಂದು 500 ರೂಪಾಯಿ ದಂಡ ವಿಧಿಸಲಾಗಿತ್ತು. ನಟಿ ವೈಷ್ಣವಿ ಅವರಿಂದಲೂ 500 ರೂಪಾಯಿ ದಂಡ ವಸೂಲಿ ಮಾಡಲಾಗಿದೆ.

ಎಲ್ಲಿಗೆ ಬಂದು ನಿಂತಿದೆ ಸೀತಾ ರಾಮ ಸೀರಿಯಲ್

ರಾಮ ಬಿಜಿನೆಸ್‌ ವಿಚಾರವಾಗಿ ದುಬೈಗೆ ಹಾರಿದ್ದಾನೆ. ದೇಸಾಯಿ ಮನೆಯಲ್ಲಿ ವಾಣಿ ಮತ್ತು ಇಂದ್ರಜಿತ್‌ ಪೂಜೆ ನಡೆಯುತ್ತಿದೆ. ಸೀತಾ ತನ್ನ ಅಣ್ಣ ಅತ್ತಿಗೆ ಜತೆಗೆ ಆಗಮಿಸಿ ಪೂಜೆಯಲ್ಲಿ ಭಾಗವಹಿಸಿದ್ದಾರೆ. ಸತ್ಯಜಿತ್‌ ಕಣ್ಣೀರು ಒರೆಸಿದ ಸಿಹಿ ಆತನಿಗೆ ಸಾಂತ್ವನ ಹೇಳಿದರೆ, ಇತ್ತ ಭಾರ್ಗವಿಯ ಕುತಂತ್ರ ಮುಂದುವರಿದಿದೆ.

ಸೀತಾ ರಾಮ ಧಾರಾವಾಹಿ ಪಾತ್ರವರ್ಗ

ನಿರ್ದೇಶಕ: ಮಧುಸೂಧನ್‌

ಗಗನ್‌ ಶ್ರೀನಿವಾಸ್: ಶ್ರೀರಾಮ (ನಾಯಕ)

ವೈಷ್ಣವಿ ಗೌಡ: ಸೀತಾ (ನಾಯಕ)

ರೀತು ಸಿಂಗ್: ಸಿಹಿ (ಸೀತಾ ಮಗಳು)

ಅಶೋಕ ಶರ್ಮಾ: ಅಶೋಕ (ಶ್ರೀರಾಮನ ಪ್ರಾಣ ಸ್ನೇಹಿತ)

ಭಾರ್ಗವಿ: ಪೂಜಾ ಲೋಕೇಶ್‌ (ಶ್ರೀರಾಮನ ಚಿಕ್ಕಮ್ಮ)

ಮುಖ್ಯಮಂತ್ರಿ ಚಂದ್ರು: ಸೂರ್ಯ ಪ್ರಕಾಶ್‌ ದೇಸಾಯಿ (ಶ್ರೀರಾಮನ ತಾತ)

ಶ್ವೇತಾ ಶಂಕರಪ್ಪ: ಪ್ರಿಯಾ (ಸೀತಾಳ ಸ್ನೇಹಿತೆ)

ವಿಕಾಸ್‌ ಕಾರ್‌ಗೋಡ್:‌ ಲಾಯರ್‌ ರುದ್ರಪ್ರತಾಪ್

ಸತೀಶ್‌ ಚಂದ್ರ: ಚರಣ್‌. ಡಿ

ಪೂರ್ಣಚಂದ್ರ ತೇಜಸ್ವಿ: ವಿಶ್ವಜೀತ್‌ (ಶ್ರೀರಾಮನ ಚಿಕ್ಕಪ್ಪ)

ಜಯದೇವ್‌ ಮೋಹನ್:‌ ಸತ್ಯಜೀತ್‌ (ಶ್ರೀರಾಮನ ಚಿಕ್ಕಪ್ಪ)

IPL_Entry_Point