‘ಭಾಗ್ಯಲಕ್ಷ್ಮೀ’ ಧಾರಾವಾಹಿಯಿಂದ ಸ್ಫೂರ್ತಿ ಪಡೆದು, ಮಗನ ಜತೆ SSLC ಪರೀಕ್ಷೆ ಬರೆದ ಯಾದಗಿರಿಯ ಗಂಗಮ್ಮ! INTERVIEW
ಕನ್ನಡ ಸುದ್ದಿ  /  ಮನರಂಜನೆ  /  ‘ಭಾಗ್ಯಲಕ್ಷ್ಮೀ’ ಧಾರಾವಾಹಿಯಿಂದ ಸ್ಫೂರ್ತಿ ಪಡೆದು, ಮಗನ ಜತೆ Sslc ಪರೀಕ್ಷೆ ಬರೆದ ಯಾದಗಿರಿಯ ಗಂಗಮ್ಮ! Interview

‘ಭಾಗ್ಯಲಕ್ಷ್ಮೀ’ ಧಾರಾವಾಹಿಯಿಂದ ಸ್ಫೂರ್ತಿ ಪಡೆದು, ಮಗನ ಜತೆ SSLC ಪರೀಕ್ಷೆ ಬರೆದ ಯಾದಗಿರಿಯ ಗಂಗಮ್ಮ! INTERVIEW

ಭಾಗ್ಯಲಕ್ಷ್ಮೀ ಸೀರಿಯಲ್‌ ಅಪಾರ ನೀಡುವ ವರ್ಗವವನ್ನು ಹೊಂದಿದೆ. ಕಲರ್ಸ್‌ ಕನ್ನಡದ ಟಾಪ್‌ ಧಾರಾವಾಹಿಗಳಲ್ಲೂ ಇದೂ ಸಹ ಒಂದು. ಹೀಗಿರುವ ಈ ಸೀರಿಯಲ್‌ ಈಗ ಇತತರಿಗೂ ಸ್ಫೂರ್ತಿ ತುಂಬುತ್ತಿದೆ. ಭಾಗ್ಯಾಳಂತೆ ತಾನೂ ಮಗನ ಜತೆಗೆ SSLC ಪರೀಕ್ಷೆ ಬರೆದಿದ್ದಾರೆ ಯಾದಗಿರಿಯ ಗಂಗಮ್ಮ.

‘ಭಾಗ್ಯಲಕ್ಷ್ಮೀ’ ಧಾರಾವಾಹಿಯಿಂದ ಸ್ಫೂರ್ತಿ ಪಡೆದು, ಮಗನ ಜತೆ SSLC ಪರೀಕ್ಷೆ ಬರೆದ ಯಾದಗಿರಿಯ ಗಂಗಮ್ಮ! INTERVIEW
‘ಭಾಗ್ಯಲಕ್ಷ್ಮೀ’ ಧಾರಾವಾಹಿಯಿಂದ ಸ್ಫೂರ್ತಿ ಪಡೆದು, ಮಗನ ಜತೆ SSLC ಪರೀಕ್ಷೆ ಬರೆದ ಯಾದಗಿರಿಯ ಗಂಗಮ್ಮ! INTERVIEW

Bhagyalakshmi Serial: ಕಲರ್ಸ್‌ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ಭಾಗ್ಯಲಕ್ಷ್ಮೀ ಸೀರಿಯಲ್‌ ನಾಡಿನ ಕಿರುತೆರೆ ವೀಕ್ಷಕರ ನೆಚ್ಚಿನ ಧಾರಾವಾಹಿಗಳಲ್ಲೊಂದು. ಹತ್ತು ಹಲವು ಕಾರಣಕ್ಕೆ ಈ ಧಾರಾವಾಹಿ ನೋಡುಗರನ್ನು ಆಕರ್ಷಿಸುತ್ತಿದೆ. ತಾಂಡವ್‌ನ ಉದ್ಧಟತನ, ಭಾಗ್ಯಾಳ ಮುಗ್ದತೆ, ಸೊಸೆಯ ಬೆನ್ನಿಗೆ ನಿಲ್ಲುವ ಅತ್ತೆ, ಅಮ್ಮನ ಮೇಲಿನ ಗುಂಡಣ್ಣನ ಪ್ರೀತಿ.. ಹೀಗೆ ಹತ್ತು ಹಲವು ಕಾರಣಕ್ಕೆ ಭಾಗ್ಯಲಕ್ಷ್ಮೀ ಸೀರಿಯಲ್‌ ಅನ್ನು ನೋಡುವ ವರ್ಗ ದೊಡ್ಡದೇ ಇದೆ. ಹೀಗಿರುವ ಇದೇ ಧಾರಾವಾಹಿ ಈಗ ಇನ್ನೊಬ್ಬರ ಜೀವನಕ್ಕೂ ಸ್ಪೂರ್ತಿದಾಯಕವಾಗಿದೆ.

ಕಳೆದ ಕೆಲವು ತಿಂಗಳುಗಳಿಂದ ಭಾಗ್ಯಲಕ್ಷ್ಮೀ ಸೀರಿಯಲ್‌ನಲ್ಲಿ ಭಾಗ್ಯಾ ಮಗಳ ಜತೆಗೆ ಶಾಲೆಗೆ ಹೋಗುವುದು, ತರಗತಿಗಳಲ್ಲಿ ಕೂತು ಪಾಠ ಕೇಳುವುದು ಮಾಡುತ್ತಿದ್ದಾಳೆ. ಅಷ್ಟೇ ಅಲ್ಲ SSLC ಪರೀಕ್ಷೆ ಬರೆದು, ಪಾಸ್‌ ಆಗಿ ತೋರಿಸುವೆ ಎಂದು ಹಠಕ್ಕೆ ಬಿದ್ದಿದ್ದಾಳೆ. ಅದರಂತೆ, ಕೆಲ ದಿನಗಳ ಹಿಂದಷ್ಟೇ ಭಾಗ್ಯಾ ಸಹ ಮಗಳ ಜತೆಗೆ SSLC ಪರೀಕ್ಷೆ ಬರೆದಿದ್ದಾಳೆ. ಇನ್ನೇನು ಮುಂದಿನ ದಿನಗಳಲ್ಲಿ ಭಾಗ್ಯಾ ಆ ಪರೀಕ್ಷೆ ಪಾಸ್‌ ಆಗ್ತಾಳಾ ಇಲ್ಲವಾ ಎಂಬುದು ಕೌತುಕ ಪ್ರಶ್ನೆ.

ಯಾದಗಿರಿಯ ಸಗರ ಗ್ರಾಮದ ಮಹಿಳೆಯ ಛಲ

ಈ ನಡುವೆ ಇದೇ ಭಾಗ್ಯಲಕ್ಷ್ಮೀ ಸೀರಿಯಲ್‌ ನೋಡುತ್ತ ಬಂದಿರುವ ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಸಗರ ಗ್ರಾಮದ ಮಹಿಳೆ ಗಂಗಮ್ಮ, ಮಗ ಮಲ್ಲಿಕಾರ್ಜುನನ ಜತೆಗೆ SSLC ಪರೀಕ್ಷೆ ಬರೆದಿದ್ದಾರೆ. ಹೀಗೆ ಪರೀಕ್ಷೆ ಬರೆಯಲು ಇದೇ ಭಾಗ್ಯಲಕ್ಷ್ಮೀ ಧಾರಾವಾಹಿಯೇ ಕಾರಣವಂತೆ. ಇದಕ್ಕಾಗಿ ಇತ್ತೀಚೆಗಷ್ಟೇ ಕಲರ್ಸ್‌ ಕನ್ನಡದ ವೇದಿಕೆ ಮೇಲೆ ಏರಿ, ಕರುನಾಡ ಮಂದಿಗೂ ಪರಿಚಿತರಾಗಿದ್ದಾರೆ ಗಂಗಮ್ಮ. ಈ ಬಗ್ಗೆ HT ಕನ್ನಡದ ಜತೆಗೆ ಮಾತನಾಡಿರುವ ಗಂಗಮ್ಮ, ಹೇಳಿದ್ದು ಹೀಗೆ.

ಭಾಗ್ಯಲಕ್ಷ್ಮೀ ಸೀರಿಯಲ್‌ ಸ್ಫೂರ್ತಿ..

"ಕಳೆದ ಮೂರು ವರ್ಷದಿಂದ SSLC ಪರೀಕ್ಷೆ ಬರೆಯಬೇಕು ಎಂದು ಅಂದುಕೊಳ್ಳುತ್ತಲೇ ಬಂದಿದ್ದೆ. ಆದರೆ, ಅದು ಸಾಧ್ಯವಾಗಿರಲಿಲ್ಲ. ಈ ನಡುವೆ ನನ್ನ ಮಗ ಮಲ್ಲಿಕಾರ್ಜುನ SSLCಗೆ ಬಂದ. ಇತ್ತ ಇದೇ ಸಮಯಕ್ಕೆ ಭಾಗ್ಯಲಕ್ಷ್ಮೀ ಸೀರಿಯಲ್‌ನಲ್ಲಿ ಭಾಗ್ಯಾ ಸಹ ಪರೀಕ್ಷೆ ಬರೆಯಲು ಮುಂದಾದಳು. ಅದನ್ನು ನೋಡಿ, ನಾನೂ ಏಕೆ ನನ್ನ ಮಗನ ಜತೆ ಪರೀಕ್ಷೆ ಬರೆಯಬಾರದು ಎಂದು ತೀರ್ಮಾನಿಸಿ, ಪರೀಕ್ಷೆ ಬರೆದಿದ್ದೇನೆ. ನನ್ನ ಪ್ರಯತ್ನ ನಾನು ಮಾಡಿದ್ದೇನೆ. ನನಗೆ ಗೊತ್ತಾಗದ ವಿಚಾರವನ್ನು ಮಗನಿಂದ ಹೇಳಿ ತಿಳಿದುಕೊಂಡಿದ್ದೇನೆ"

"ಪರೀಕ್ಷೆ ಬರೆದ ಮೇಲೆ ನನಗೆ ಭಯ ಶುರುವಾಗಿದೆ. ಎಲ್ಲೇ ಹೋದರೂ ನನ್ನ ಬಗ್ಗೆಯೇ ಕೇಳ್ತಿದ್ದಾರೆ. ಫಲಿತಾಂಶ ಏನಾಗುತ್ತೋ ಅನ್ನೋ ಭಯವೂ ಹೌದು. ಮನೆ ಕೆಲಸದ ಜತೆಗೆ ಟೇಲರಿಂಗ್‌ ಮಾಡ್ತಿನಿ. ತಾಲೂಕು ಪಂಚಾಯ್ತಿಯಲ್ಲಿ ಕೆಲಸ ಮಾಡ್ತಿದ್ದೇನೆ. ಇದರ ನಡುವೆ ಮನೆಯನ್ನೂ ನೋಡಿಕೊಳ್ಳಬೇಕು. ಹಾಗಾಗಿ ಸ್ವಲ್ಪ ನರ್ವಸ್‌ ಇದೆ. ಫೇಲ್‌ ಆದರೆ ಮತ್ತೆ ಪರೀಕ್ಷೆ ಬರೆಯುತ್ತೇನೆ. ನನ್ನ ಪ್ರಯತ್ನ ಮಾತ್ರ ನಾನು ಬಿಡುವುದಿಲ್ಲ"

ಪಾಸ್‌ ಆದ್ರೆ ಖುಷಿ, ಫೇಲ್‌ ಆದ್ರೆ ಮತ್ತೆ ಪರೀಕ್ಷೆ ಬರೆಯುವೆ

"ಸೀರಿಯಲ್‌ ನೋಡಿದ ಮೇಲೆ, ಅಲ್ಲಿ ಭಾಗ್ಯಾ ಅಷ್ಟು ಸಮಸ್ಯೆಗಳ ನಡುವೆ ಪರೀಕ್ಷೆ ಬರೆಯಲು ಮುಂದಾಗಿದ್ದಾಳೆ. ನನಗ್ಯಾಕೆ ಆಗ್ತಿಲ್ಲ. ನಾನೂ ಪರೀಕ್ಷೆ ಬರೀತಿನಿ ಅನ್ನೋ ಛಲ ಬಂತು. ನನ್ನಲ್ಲೂ ಉತ್ಸಾಹ ಜಾಸ್ತಿ ಆಯ್ತು. ನಿತ್ಯ ಮಗನ ಜತೆ ಕೂತು ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೆ. ಶಾಲೆಯಲ್ಲಿ ಕಲಿತಿದ್ದನ್ನು ಮನೆಗೆ ಬಂದು ನನಗೆ ಹೇಳುತ್ತಿದ್ದ. ನನಗೆಷ್ಟು ಸಾಧ್ಯವೋ ಅಷ್ಟು ತಿಳಿದುಕೊಂಡು, ಪರೀಕ್ಷೆ ಬರೆದಿದ್ದೇನೆ. ರಿಸಲ್ಟ್‌ ಇನ್ನೇನು ಶೀಘ್ರದಲ್ಲಿಯೇ ಬರುತ್ತೆ. ನಾನೂ ಅದಕ್ಕಾಗಿ ಕಾದಿದ್ದೇನೆ. ಪಾಸ್‌ ಆದ್ರೆ ಖುಷಿ, ಫೇಲ್‌ ಆದ್ರೆ ಮತ್ತೆ ಪರೀಕ್ಷೆ ಬರೆಯುವೆ" ಎಂದಿದ್ದಾರೆ ಗಂಗಮ್ಮ.

Whats_app_banner