ಕೋಟೆ ನಾಡು ಚಿತ್ರದುರ್ಗದಲ್ಲಿ Lakshmi Nivasa Serial ತಂಡದ ಜತೆಗೆ ಜೀ ಕನ್ನಡ ಗಣೇಶ ಉತ್ಸವ ಸಂಭ್ರಮ
ಕೋಟೆ ನಾಡು ಚಿತ್ರದುರ್ಗದಲ್ಲಿ ಇದೇ ಸೆಪ್ಟೆಂಬರ್ 1ರಂದು ಭಾನುವಾರ ಮಧ್ಯಾಹ್ನ 3 ಗಂಟೆಗೆ ಲಕ್ಷ್ಮೀ ನಿವಾಸ ತಂಡದವರೊಂದಿಗೆ ಅದ್ಧೂರಿ 'ಜೀ ಗಣೇಶ ಉತ್ಸವ 2024' ಕಾರ್ಯಕ್ರಮವನ್ನು ಆಯೋಜಿಸಿದೆ.
Zee Kannada Ganesh Utsava 2024: ಕನ್ನಡದ ಮನರಂಜನಾ ಚಾನೆಲ್ ಜೀ ಕನ್ನಡ ಅನೇಕ ಸದಭಿರುಚಿಯುಳ್ಳ ಧಾರಾವಾಹಿಗಳನ್ನು ಕರುನಾಡ ಜನತೆಗೆ ನೀಡುತ್ತ ಬಂದಿದೆ. ಜೊತೆಗೆ ವಿಭಿನ್ನ ರೀತಿಯ ರಿಯಾಲಿಟಿ ಷೋಗಳು, ಮನರಂಜನಾ ಕಾರ್ಯಕ್ರಮಗಳನ್ನು ವೀಕ್ಷಕರಿಗೆ ನೀಡುತ್ತಾ ಬರುತ್ತಿದೆ. ಹೀಗಾಗಿ ಜೀ ಕನ್ನಡ ವಾಹಿನಿಯು ಪ್ರೇಕ್ಷಕರ ಮನೆ ಮಾತಾಗಿ ನಂಬರ್ 1 ಪಟ್ಟದಲ್ಲಿ ಮುಂದುವರೆಯುತ್ತಿದೆ.
ತಮ್ಮ ವಿಭಿನ್ನ ಕಾರ್ಯಕ್ರಮಗಳ ಮೂಲಕ ನಿರಂತರವಾಗಿ ಮನರಂಜಿಸುತ್ತಿರುವ ವಾಹಿನಿಯು ತಮಗೆ ಪ್ರೋತ್ಸಾಹ ನೀಡಿ ಬೆನ್ನು ತಟ್ಟುತ್ತಿರುವ ಜನರ ಬಳಿಯೇ ತೆರಳಿ ಅವರಿಗೊಂದು ಧನ್ಯವಾದ ಅರ್ಪಿಸುವುದು ವಾಡಿಕೆ. ಇದೀಗ ಕೋಟೆ ನಾಡು ಚಿತ್ರದುರ್ಗದಲ್ಲಿ ಇದೇ ಸೆಪ್ಟೆಂಬರ್ 1 ರಂದು ಭಾನುವಾರ ಮಧ್ಯಾಹ್ನ 3 ಗಂಟೆಗೆ ಲಕ್ಷ್ಮೀ ನಿವಾಸ ತಂಡದವರೊಂದಿಗೆ 'ಜೀ ಗಣೇಶ ಉತ್ಸವ' ಕಾರ್ಯಕ್ರಮವನ್ನು ಆಯೋಜಿಸಿದ್ದು ಎಲ್ಲರನ್ನು ಪ್ರೀತಿಯಿಂದ ಸ್ವಾಗತಿಸುತ್ತಿದೆ.
ಲಕ್ಷ್ಮೀ ನಿವಾಸ ತಂಡದ ಜತೆಗೆ ಸಂಭ್ರಮ
ಜೀ ಕನ್ನಡ ವಾಹಿನಿಯ 'ಲಕ್ಷ್ಮೀ ನಿವಾಸ' ಧಾರಾವಾಹಿಯು ಆರಂಭದಿಂದಲೂ ನೋಡುಗರ ಮನಗೆದ್ದು ಕನ್ನಡಿಗರ ಮನದಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. ಟಿಆರ್‌ಪಿಯಲ್ಲಿ ಕಳೆದ ವಾರದಿಂದ ನಂಬರ್ ಒನ್ ಸ್ಥಾನದಲ್ಲಿ ಮುಂದುವರಿಯುತ್ತಿದೆ.
ಮಧ್ಯಮ ವರ್ಗದ ಜನರ ಕಷ್ಟ, ಸುಖ, ಬಾಂಧವ್ಯ, ಸಮಸ್ಯೆ ಎಲ್ಲವನ್ನು ಒಳಗೊಂಡಿರುವ ಕಥೆ ಲಕ್ಷ್ಮೀ ನಿವಾಸ ಸೀರಿಯಲ್‌ನದ್ದು. ಕಥೆಯಲ್ಲಿ ಹಲವು ಮಜಲುಗಳಿದ್ದು ದಿನದಿಂದ ದಿನಕ್ಕೆ ವೀಕ್ಷಕರಲ್ಲಿ ಕುತೂಹಲ ಹೆಚ್ಚಿಸುತ್ತಿರುವ ಈ ಧಾರಾವಾಹಿ ತಂಡದ ಕಲಾವಿದರೊಂದಿಗೆ ಇದೀಗ ಜೀ ಕನ್ನಡ ವಾಹಿನಿಯು ಗಣೇಶ ಉತ್ಸವ'ವನ್ನು ಚಿತ್ರದುರ್ಗದಲ್ಲಿ ಏರ್ಪಡಿಸಿದೆ. ನಿರೂಪಕ ಮಾಸ್ಟರ್ ಆನಂದ್ ಈ ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ.
ಜೊತೆಗೆ ನಟ ನಟಿಯರೊಂದಿಗೆ ನೇರವಾಗಿ ಮಾತನಾಡುವ ಅವಕಾಶ ಲಭ್ಯವಿದೆ. ಧಾರಾವಾಹಿಯ ಪ್ರತಿಯೊಂದು ಪಾತ್ರಗಳು ಸಹ ತನ್ನದೇ ಆದ ಅಭಿಮಾನಿಗಳ ಬಳಗವನ್ನು ಹೊಂದಿದೆ. ಈ ಮನರಂಜನೆಯ ಮಹಾ ಉತ್ಸವದಲ್ಲಿ ಇಡೀ 'ಲಕ್ಷೀ ನಿವಾಸ' ಧಾರಾವಾಹಿ ತಂಡ ಇರಲಿದ್ದು ನಿಮ್ಮೆಲ್ಲರನ್ನು ನೇರವಾಗಿ ಭೇಟಿಯಾಗಲಿದ್ದಾರೆ. ನಿಮ್ಮ ನೆಚ್ಚಿನ ಕಲಾವಿದರು ನಿಮ್ಮ ಸಮ್ಮುಖದಲ್ಲೇ ಕುಣಿದು ಕುಪ್ಪಳಿಸಿ ನಿಮ್ಮೆಲ್ಲ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ.
ಚಿತ್ರದುರ್ಗದಲ್ಲಿ ಎಲ್ಲಿ ನಡೆಯಲಿದೆ ಕಾರ್ಯಕ್ರಮ
ಸೆಪ್ಟೆಂಬರ್ 1 ರಂದು ಭಾನುವಾರ ಲಕ್ಷ್ಮೀ ನಿವಾಸ ತಂಡದವರೊಂದಿಗೆ 'ಜೀ ಗಣೇಶ ಉತ್ಸವ' ಕಾರ್ಯಕ್ರಮದ ಜತೆಗೆ ಈ ಕಾರ್ಯಕ್ರಮದ ಆಕರ್ಷಣೆ ಪರಿಸರ ಸ್ನೇಹಿ ಗಣೇಶನನ್ನು ಉಪಯೋಗಿಸುತ್ತಿರುವುದು, ಹಾಗೂ ಜನರಲ್ಲಿ ಪರಿಸರ ಸ್ನೇಹಿ ಗಣೇಶನನ್ನು ಉಪಯೋಗಿಸುವಂತೆ ಜಾಗೃತಿ ಮೂಡಿಸುವುದು. ಇದೇ ಸೆಪ್ಟೆಂಬರ್ 1 ಭಾನುವಾರ ಚಿತ್ರದುರ್ಗದ ಅನುಭವ ಮಂಟಪ, ಮುರುಘಾಮಠ ಆವರಣ, ಮಧ್ಯಾಹ್ನ 3ಗಂಟೆಗೆ ಕಾರ್ಯಕ್ರಮ ನಡೆಯಲಿದೆ.