ಕನ್ನಡ ಸುದ್ದಿ  /  Entertainment  /  Kannada Television News Zee Kannada Serials Paru And Hitler Kalyana Serials Will End This Week Mnk

Kannada Television: ಕಿರುತೆರೆಯಲ್ಲಿ ಹಲವು ಬದಲಾವಣೆ, ಈ ವಾರ ಎರಡು ಧಾರಾವಾಹಿಗಳಿಗೆ ಕೊನೇ ಆಟ, ಹೊಸ ಸೀರಿಯಲ್‌ಗಳ ಉದಯ

ಜೀ ಕನ್ನಡದಲ್ಲೀಗ ಹೊಸ ಹೊಸ ಸೀರಿಯಲ್‌, ಹೊಸ ರಿಯಾಲಿಟಿ ಶೋಗಳದ್ದೇ ಪರ್ವ. ಮಹಾನಟಿ ರಿಯಾಲಿಟಿ ಶೋ ಇನ್ನೇನು ಆರಂಭವಾಗುತ್ತದೆ ಎನ್ನುವಷ್ಟರಲ್ಲಿ ಎರಡು ಧಾರಾವಾಹಿಗಳ ಆಟ ಮುಗಿಯಲಿದೆ. ಇನ್ನೊಂದು ಹೊಸ ಸೀರಿಯಲ್‌ನ ಉದಯವಾಗಲಿದೆ. ಈ ನಡುವೆ ಎರಡು ಧಾರಾವಾಹಿಗಳು ಬದಲಾದ ಸಮಯಕ್ಕೆ ಬರಲಿವೆ. ಇಲ್ಲಿದೆ ಆ ಕುರಿತು ಹೆಚ್ಚಿನ ಮಾಹಿತಿ.

Kannada Television: ಕಿರುತೆರೆಯಲ್ಲಿ ಹಲವು ಬದಲಾವಣೆ, ಈ ವಾರ ಎರಡು ಧಾರಾವಾಹಿಗಳಿಗೆ ಕೊನೇ ಆಟ, ಹೊಸ ಸೀರಿಯಲ್‌ಗಳ ಉದಯ
Kannada Television: ಕಿರುತೆರೆಯಲ್ಲಿ ಹಲವು ಬದಲಾವಣೆ, ಈ ವಾರ ಎರಡು ಧಾರಾವಾಹಿಗಳಿಗೆ ಕೊನೇ ಆಟ, ಹೊಸ ಸೀರಿಯಲ್‌ಗಳ ಉದಯ

Kannada Television: ಕನ್ನಡ ಕಿರುತೆರೆಯಲ್ಲಿ ಆಗಾಗ ಸಾಕಷ್ಟು ಬದಲಾವಣೆ ಕಾಣುತ್ತಲೇ ಬರುತ್ತಿದೆ. ಮೇಕಿಂಗ್‌ ದೃಷ್ಟಿಯಲ್ಲಿ ಸಿನಿಮಾ ರೇಂಜಿಗೆ ಧಾರಾವಾಹಿಗಳು ನಿರ್ಮಾಣವಾಗುತ್ತಿವೆ. ಅದೇ ರೀತಿ ಹಳೇ ಸೀರಿಯಲ್‌ಗಳು ಮುಕ್ತಾಯ ಕಂಡರೆ, ಅದರ ಜತೆಗೆ ಹೊಸ ಧಾರಾವಾಹಿಗಳ ಉದಯವೂ ಆಗುತ್ತಿದೆ. ಈಗ ಜೀ ಕನ್ನಡದಲ್ಲಿ ಕಳೆದ ಕೆಲವು ವರ್ಷಗಳಿಂದ ಪ್ರಸಾರ ಕಾಣುತ್ತಲೇ ಬರುತ್ತಿದ್ದ ಎರಡು ಸೀರಿಯಲ್‌ಗಳಿಗೆ ಮುಕ್ತಿ ಸಿಗುವ ಸಮಯ ಬಂದಿದೆ. ಅಂದರೆ, ಇನ್ನೇನು ಶೀಘ್ರದಲ್ಲಿ ಆ ಸೀರಿಯಲ್‌ಗಳ ಕೊನೇ ಸಂಚಿಕೆಗಳು ಪ್ರಸಾರವಾಗಲಿವೆ.

ಕಿರುತೆರೆ ಎಂದರೆ, ಮನೆಯ ಹೆಣ್ಣುಮಕ್ಕಳ ಅಚ್ಚುಮೆಚ್ಚಿನ ಸಂಗಾತಿ. ಸಂಜೆ 6ರಿಂದ ಶುರುವಾದರೆ, ರಾತ್ರಿ 11ರ ವರೆಗೂ ಒಂದಾದ ಮೇಲೊಂದರಂತೆ ಹತ್ತು ಹಲವು ವಿವಿಧ ಬಗೆಯ ಸೀರಿಯಲ್‌ಗಳು ಕನ್ನಡದ ಮನರಂಜನಾ ವಾಹಿನಿಗಳಲ್ಲಿ ಪ್ರಸಾರವಾಗುತ್ತವೆ. ಪ್ರೇಕ್ಷಕರನ್ನು ಸೆಳೆಯುವ ದೃಷ್ಟಿಯಿಂದ ಟ್ವಿಸ್ಟ್‌ ಮತ್ತು ಟರ್ನ್‌ಗಳ ಮೂಲಕ ನೋಡುಗರ ಎದೆಬಡಿತ ಹೆಚ್ಚಿಸುತ್ತಿವೆ. ಅದರಲ್ಲೂ ಆ ಸೀರಿಯಲ್‌ಗಳು ನೋಡುಗರಿಗೆ ಇಷ್ಟವಾಗದಿದ್ದರೆ, ಸೋಷಿಯಲ್‌ ಮೀಡಿಯಾದಲ್ಲಿ ಮನಬಂದಂತೆ ಕಾಮೆಂಟ್‌ ಮಾಡುವ ಕೆಲಸವೂ ಆಗುತ್ತಿರುತ್ತದೆ.

ಈಗ ಕಳೆದ ನಾಲ್ಕು ವರ್ಷಗಳಿಂದ ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿದ್ದ ಪಾರು ಸೀರಿಯಲ್‌ ಮತ್ತು ಹಿಟ್ಲರ್‌ ಕಲ್ಯಾಣ ಧಾರಾವಾಹಿಗಳು ಕೊನೇ ಸಂಚಿಕೆಗಳ ಶೂಟಿಂಗ್‌ನಲ್ಲಿ ಬಿಜಿಯಾಗಿವೆ. ಈ ವಿಚಾರವನ್ನು ಜೀ ಕನ್ನಡ ವಾಹಿನಿಯೇ ಅಧಿಕೃತವಾಗಿ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದು, ರೋಚಕ ತಿರುವಿನಲ್ಲಿರುವ ನಿಮ್ಮ ನೆಚ್ಚಿನ ಪಾರು ಮತ್ತು ಹಿಟ್ಲರ್ ಕಲ್ಯಾಣ ಧಾರಾವಾಹಿಗಳ ಅಂತಿಮ ಸಂಚಿಕೆಗಳನ್ನು ಮಿಸ್ ಮಾಡದೇ ನೋಡಿ ಎಂದಿದೆ. ಈ ಮೂಲಕ ಇನ್ನೇನು ಇದೇ ವಾರ ಈ ಧಾರಾವಾಹಿಗಳ ಆಟ ಕೊನೆಯಾಗಲಿದೆ.

ಎರಡು ಧಾರಾವಾಹಿಗಳು ಬದಲಾದ ಸಮಯದಲ್ಲಿ

ಸದ್ಯ ಜೀ ಕನ್ನಡದಲ್ಲಿ ಪಾರು ಸೀರಿಯಲ್‌ ಸಂಜೆ 6ಗಂಟೆಗೆ ಪ್ರಸಾರ ಕಾಣುತ್ತಿದೆ. ಅದೇ ರೀತಿ ಸಂಜೆ 6:30ಕ್ಕೆ ಹಿಟ್ಲರ್‌ ಕಲ್ಯಾಣ ಧಾರಾವಾಹಿ ಪ್ರಸಾರ ಕಾಣುತ್ತಿದೆ. ಇದೇ ವಾರ ಈ ಎರಡೂ ಸೀರಿಯಲ್‌ಗಳು ಮುಕ್ತಾಯವಾಗುತ್ತಿದ್ದಂತೆ, ಆ ಸಮಯಕ್ಕೆ ಬೇರಾವ ಧಾರಾವಾಹಿ ಬರುತ್ವೆ? ಅದಕ್ಕೂ ಉತ್ತರ ಸಿಕ್ಕಿದೆ. ಈಗಾಗಲೇ ರಾತ್ರಿ 9ಕ್ಕೆ ಪ್ರಸಾರವಾಗುತ್ತಿರುವ ಸತ್ಯ ಸೀರಿಯಲ್‌ ಇನ್ಮೇಲೆ 6ಗಂಟೆಗೆ ಶುರುವಾಗಲಿದೆ. ಅದೇ ರೀತಿ, 8:30ಕ್ಕೆ ಬರುತ್ತಿದ್ದ ಶ್ರೀರಸ್ತು ಶುಭಮಸ್ತು ಸೀರಿಯಲ್‌ 6:30ಕ್ಕೆ ಜೀ ಕನ್ನಡದಲ್ಲಿ ಪ್ರಸಾರವಾಗಲಿದೆ. ಈ ಮೂಲಕ ಹೊಸ ಧಾರಾವಾಹಿಗಳ ಆಗಮನಕ್ಕೆ ಈ ಸೀರಿಯಲ್‌ಗಳು ಜಾಗ ಮಾಡಿಕೊಡುತ್ತಿವೆ.

ಮಾ. 18ರಿಂದ ಶ್ರಾವಣಿ ಸುಬ್ರಮಣ್ಯ ಸೀರಿಯಲ್‌

ಇನ್ನು ಈಗಾಗಲೇ ಪ್ರೋಮೋ ಮೂಲಕವೇ ಗಮನ ಸೆಳೆದಿರುವ ಜೀ ಕನ್ನಡದಲ್ಲಿ ಪ್ರಸಾರವಾಗಲಿರುವ ಹೊಸ ಧಾರಾವಾಹಿ ಶ್ರಾವಣಿ ಸುಬ್ರಮಣ್ಯ. ಬಡತನದಲ್ಲಿ ಬೆಂದ ಸುಬ್ರಮಣ್ಯ ಮತ್ತು ಸಿರಿತನದಲ್ಲಿ ಅರಳಿದ ಶ್ರಾವಣಿ ಜೋಡಿಯ ಕಥೆಯೇ ಈ ಶ್ರಾವಣಿ ಸುಬ್ರಮಣ್ಯ. ಇದೀಗ ಈ ಹೊಸ ಸೀರಿಯಲ್‌ ಮಾ. 18ರಿಂದ ಪ್ರಸಾರವಾಗಲಿದ್ದು, ಇನ್ನಷ್ಟೇ ಸಮಯ ನಿಗದಿಯಾಗಬೇಕಿದೆ.

IPL_Entry_Point