ಕರ್ಮ ಯಾರನ್ನೂ ಬಿಡಲ್ಲ! ಡಿವೋರ್ಸ್‌ ಬಳಿಕ ಟ್ರೂ ಲವ್‌ ಹುಡುಕಾಟದಲ್ಲಿದ್ದೇನೆ; ಕಾಮಿಡಿ ಕಿಲಾಡಿಗಳು ನಿರೂಪಕಿ ಚೈತ್ರಾ ವಾಸುದೇವನ್‌
ಕನ್ನಡ ಸುದ್ದಿ  /  ಮನರಂಜನೆ  /  ಕರ್ಮ ಯಾರನ್ನೂ ಬಿಡಲ್ಲ! ಡಿವೋರ್ಸ್‌ ಬಳಿಕ ಟ್ರೂ ಲವ್‌ ಹುಡುಕಾಟದಲ್ಲಿದ್ದೇನೆ; ಕಾಮಿಡಿ ಕಿಲಾಡಿಗಳು ನಿರೂಪಕಿ ಚೈತ್ರಾ ವಾಸುದೇವನ್‌

ಕರ್ಮ ಯಾರನ್ನೂ ಬಿಡಲ್ಲ! ಡಿವೋರ್ಸ್‌ ಬಳಿಕ ಟ್ರೂ ಲವ್‌ ಹುಡುಕಾಟದಲ್ಲಿದ್ದೇನೆ; ಕಾಮಿಡಿ ಕಿಲಾಡಿಗಳು ನಿರೂಪಕಿ ಚೈತ್ರಾ ವಾಸುದೇವನ್‌

ಪಟ ಪಟ ಅಂತ ಮಾತನಾಡೋ ಸುಂದರಿ ಚೈತ್ರಾ ವಾಸುದೇವನ್‌ ಬಾಳಿನಲ್ಲಿ ನುಂಗಲಾರದಷ್ಟು ನೋವಿದೆ. ಪತಿಯಿಂದ ವಿಚ್ಛೇದನ ಪಡೆದು ಘಾಸಿಗೊಳಗಾಗಿದ್ದಾರೆ. ಜತೆಗೆ ನಿಜ ಪ್ರೀತಿಯ ಹುಡುಕಾಟದಲ್ಲಿದ್ದಾರೆ ಈ ನಿರೂಪಕಿ. ಈ ಎಲ್ಲದರ ಬಗ್ಗೆ ಸುದೀರ್ಘವಾಗಿಯೇ ಮಾತನಾಡಿದ್ದಾರೆ ಚೈತ್ರಾ.

ಕರ್ಮ ಯಾರನ್ನೂ ಬಿಡಲ್ಲ! ಡಿವೋರ್ಸ್‌ ಬಳಿಕ ಟ್ರೂ ಲವ್‌ ಹುಡುಕಾಟದಲ್ಲಿದ್ದೇನೆ; ಕಾಮಿಡಿ ಕಿಲಾಡಿಗಳು ನಿರೂಪಕಿ ಚೈತ್ರಾ ವಾಸುದೇವನ್‌
ಕರ್ಮ ಯಾರನ್ನೂ ಬಿಡಲ್ಲ! ಡಿವೋರ್ಸ್‌ ಬಳಿಕ ಟ್ರೂ ಲವ್‌ ಹುಡುಕಾಟದಲ್ಲಿದ್ದೇನೆ; ಕಾಮಿಡಿ ಕಿಲಾಡಿಗಳು ನಿರೂಪಕಿ ಚೈತ್ರಾ ವಾಸುದೇವನ್‌ (Photo/ Rapid Rashmi Youtube)

Chaitra Vasudevan Personal Life: ನಿರೂಪಕಿಯಾಗಿ, ಇವೆಂಟ್‌ ಮ್ಯಾನೇಜರ್‌ ಆಗಿ ಗುರುತಿಸಿಕೊಂಡು, ಬಿಗ್‌ಬಾಸ್‌ ಸೀಸನ್‌ 7ರಲ್ಲಿಯೂ ಸ್ಪರ್ಧಿಯಾಗಿದ್ದವರು ಚೈತ್ರಾ ವಾಸುದೇವನ್.‌ ಮೂಲತಃ ಕುಂದಾಪುರದ ಚೈತ್ರಾ, 2017ರಲ್ಲಿಯೇ ಸತ್ಯ ನಾಯ್ಡು ಎಂಬುವವರ ಜತೆಗೆ ಬಾಳ ಬಂಧನಕ್ಕೆ ಅಡಿಯಿಟ್ಟಿದ್ದರು. ಕಷ್ಟಪಟ್ಟುಕೊಂಡೇ ಐದೂವರೆ ವರ್ಷ ಸಂಸಾರ ನಡೆಸಿದರೂ, ಇಬ್ಬರ ನಡುವೆ ಹೊಂದಾಣಿಕೆ ಮೂಡಲಿಲ್ಲ. ಆದರೆ, 2023ರಲ್ಲಿ ಆ ಮದುವೆ ಡಿವೋರ್ಸ್‌ ಮೂಲಕ ಇಬ್ಭಾಗವಾಯ್ತು. ಸದ್ಯ ಅಪ್ಪನ ಅಮ್ಮನ ಜತೆಗಿರುವ ಚೈತ್ರಾ, ಆ ಡಿವೋರ್ಸ್‌ ನೋವು, ಮುಂದಿನ ಪ್ರೀತಿಯ ಹುಡುಕಾಟದ ಬಗ್ಗೆ ರ್ಯಾಪಿಡ್‌ ರಶ್ಮಿ ಯೂಟ್ಯೂಬ್‌ ಜತೆಗೆ ಆಡಿದ ಮಾತು ಇಲ್ಲಿದೆ.

"ಡಿವೋರ್ಸ್‌ ಅನೌನ್ಸ್‌ ಮಾಡುವುದಕ್ಕೂ ಮುಂಚೆಯೇ ನಾವು ಬೇರೆ ಬೇರೆಯಾಗಿದ್ದೆವು. ಅಪ್ಪ ಅಮ್ಮನಿಗೂ ಭಯ. ನಾವು ಮಾಡಿರುವುದನ್ನು ಆ ದೇವರು ನೋಡ್ತಿರುತ್ತಾನೆ. ಕರ್ಮ ಗೊತ್ತಿರುತ್ತದೆ. ಯಾರ್ಯಾರು ಏನೇನು ಕರ್ಮಗಳನ್ನು ಮಾಡಿರುತ್ತಾರೋ, ಅದೆಲ್ಲವೂ ಒಂದಲ್ಲ ಒಂದು ದಿನ ಬಂದೇ ಬರುತ್ತದೆ. ನೀನು ಒಳ್ಳೆಯವಳೇ ಆಗಿದ್ದರೆ, ನಿನಗೆ ಒಳ್ಳೆಯದೇ ಆಗುತ್ತದೆ. ಯಾರ ಬಗ್ಗೆ ಎಲ್ಲಿಯೂ ಕಂಪ್ಲೇಂಟ್‌ ಮಾಡಬೇಡ ಎಂದೇ ಅಪ್ಪ ಅಮ್ಮ ಹೇಳಿದ್ದರು. ಅದರಂತೆ, ಸಾರ್ವಜನಿಕವಾಗಿ ಗುರುತಿಸಿಕೊಂಡಿದ್ದರಿಂದ ಡಿವೋರ್ಸ್‌ ಆಗಿದೆ ಎಂಬ ವಿಚಾರವನ್ನಷ್ಟೇ ಹೇಳಿದೆ."

ಪ್ರೀತಿಯ ಹುಡುಕಾಟದಲ್ಲಿದ್ದೇನೆ..

"ಡಿವೋರ್ಸ್‌ ಬಗ್ಗೆ, ನನ್ನ ವೈಯಕ್ತಿಕ ವಿಚಾರಗಳ ಬಗ್ಗೆ ಎಲ್ಲಿಯೂ ನಾನು ಓಪನ್‌ ಆಗಿ ಮಾತನಾಡಿಲ್ಲ. ನಮ್ಮ ಜೀವನದಲ್ಲಿ ಯಾರೇ ಬಂದು ಹೋಗ್ತಾರೆ ಅಂದರೂ ಅಲ್ಲೊಂದು ಕಾರಣ ಇದ್ದೇ ಇರುತ್ತದೆ. ಕೆಲವರು ನಿಮಗೆ ಒಳ್ಳೆಯ ಮೆಮೊರಿಯಾಗಿ ಉಳಿತಾರೆ. ಕೆಲವರು ಖುಷಿಕೊಡ್ತಾರೆ, ಇನ್ನು ಕೆಲವರು ಹೀಗೆ ಮಾಡಬಾರ್ದು ಅಂತ ಕೇಳಿಕೊಡ್ತಾರೆ. ಅದೇ ರೀತಿ ನಮ್ಮ ಬ್ಯಾಚ್‌ನಲ್ಲಿಯೇ ನನ್ನದೇ ಬಹುಬೇಗ ಮದುವೆ ಆಗಿದ್ದು. ಇವಾಗ ಮದುವೆಯಾಗಿ ಎಲ್ಲರಿಗೂ ಮಕ್ಕಳಿದ್ದಾರೆ. ಆದರೆ, ನನ್ನ ಜೀವನದಲ್ಲಿ ಹಾಗಾಗಲಿಲ್ಲ. ಮುಂದಿನ ದಿನಗಳಲ್ಲಿ ಟ್ರೂ ಲವ್‌ ಹುಡುಕಾಟದಲ್ಲಿದ್ದೇನೆ. ನೋಡೋಣ."

ಸಾಕಷ್ಟು ಕನಸು ಕಟ್ಟಿದ್ದೆ, ನನಸಾಗಲಿಲ್ಲ..

"ಸುದೀರ್ಘ ಐದೂವರೆ ವರ್ಷಗಳ ವರೆಗೂ ಕಾದೆ. ಏನಾದರೂ ಬದಲಾವಣೆ ಆಗಬಹುದು. ಹೊಸ ಭರವಸೆ ಮೂಡಬಹುದು ಎಂದು ವೇಟ್‌ ಮಾಡಿದೆ. ಆದರೆ, ಅದ್ಯಾವುದೂ ಆಗಲಿಲ್ಲ. ಅಷ್ಟಕ್ಕೂ ನಾನು ಸಿಲ್ಲಿ ಗರ್ಲ್‌ ಅಲ್ಲ. ಸಣ್ಣ ಸಣ್ಣದಕ್ಕೂ ತಲೆ ಕೆಡಿಸಿಕೊಳ್ಳಲ್ಲ. ಏಕೆಂದರೆ, ನಾನು ಸಾಕಷ್ಟು ಪ್ಲಾನ್‌ ಹಾಕಿದ್ದೆ. ನಾನು, ನನ್ನ ಕುಟುಂಬ, ನನ್ನ ಗಂಡ, ನಮ್ಮ ಮಕ್ಕಳು.. ಹೀಗೆ ಕನಸು ಕಟ್ಟಿದ್ದೆ. ಅದರಲ್ಲೂ ಒಂದು ಹುಡುಗ ಅವರ ಅಪ್ಪ ಅಮ್ಮನ ಜತೆಗೆ ಇದ್ದಾಗ, ಕುಟುಂಬದ ಮೌಲ್ಯಗಳ ಬಗ್ಗೆ ಗೊತ್ತಿರುತ್ತದೆ. ಅಂಥ ಕುಟುಂಬವೇ ನಮಗೆ ಬೇಕಿತ್ತು. ಹುಟ್ಟುವ ಮಗುವಿಗೆ ಎಲ್ಲವನ್ನೂ ಹೇಳಿಕೊಡಬೇಕು ಎಂಬ ಸಾಕಷ್ಟು ಕಲ್ಪನೆ ಮಾಡಿದ್ದೆ. ಆದರೆ, ಅದ್ಯಾವುದೂ ಕೈಗೂಡಲಿಲ್ಲ."

ಇದು ನನ್ನ ಕರ್ಮದ ಪ್ರತಿಫಲವಿರಬಹುದೇ?

"ಎರಡು ವರ್ಷದ ಹಿಂದೆ ನನ್ನ ಸ್ಥಿತಿ ಹೀಗಿರಲಿಲ್ಲ. ಅಳುವೊಂದೇ ನನಗಿತ್ತು. ಕೈ ಕಟ್ಟಿ ಕೂರಿಸಿದಂತಿತ್ತು. ಯಾರಾದರೂ ಬಂದು ಹಗ್ ಮಾಡ್ತಾರಾ ಅಂತ ಕಾಯ್ತಿದ್ದೆ.ಊಟ ಮಾಡುವಾಗಲೂ ಅಳು, ಗಾಡಿ ಓಡಿಸುವಾಗಲೂ ಅಳು. ಅಪ್ಪ ಅಮ್ಮನಿಗೆ ವಯಸ್ಸಾಗ್ತಿದೆ. ಅನಾರೋಗ್ಯ ಕಾಡ್ತಿದೆ ಅದೂ ಟೆನ್ಷನ್‌ ಆಗ್ತಿತ್ತು. ನನ್ನ ಜೀವನದ ಕೆಟ್ಟ ಸಮಯವದು. ಪ್ರೀತಿ ಮಾಡೋದಾದರೆ ನಿಜ ಹೇಳಿ, ಚೀಟ್‌ ಮಾಡಬೇಡಿ. ಈ ವರೆಗೂ ನಾನು ಯಾರಿಗೂ ಕೆಟ್ಟದನ್ನು ಬಯಸಿಲ್ಲ. ನನಗೆ ಏಕೆ ಹೀಗಾಗ್ತಿದೆ. ನಾನು ಹಿಂದಿನ ಜನ್ಮದಲ್ಲಿ ಮಾಡಿದ ಕರ್ಮದ ಪ್ರತಿಫಲವಿರಬಹುದೇ? ಎಂದು ಅನಿಸಿದ್ದುಂಟು."

ಅತ್ಯುತ್ತಮವಾದುದೇ ಸಿಗಲಿದೆ..

"ನಾನೆಷ್ಟು ಘಾಸಿಗೊಳಗಾಗಿದ್ದೇನೆ ಎಂದರೆ, ಈಗ ನನ್ನನ್ನು ಯಾರೂ ಹರ್ಟ್‌ ಮಾಡಲಾರರು. ಅಷ್ಟೊಂದು ಸ್ಟ್ರಾಂಗ್‌ ಆಗಿದ್ದೇನೆ. ಆದರೆ ನಮ್ಮ ಹೆತ್ತವರು ಹಾಗಿರುವುದಿಲ್ಲ. ನನಗೆ ಒಳ್ಳೆಯದಾಗಲಿ ಅಂತ ಸಿಕ್ಕ ಸಿಕ್ಕ ವ್ರತಗಳನ್ನು ಅಮ್ಮ ಮಾಡ್ತಿದ್ದಾರೆ. ನನಗೂ ಮಾಡಿಸ್ತಿದ್ದಾರೆ. Extraordinary ಪೀಪಲ್‌ಗೆ Extraordinary ಆಗಿರುವುದೇ ಅವರ ಜೀವನದಲ್ಲಿ ಘಟಿಸಲಿದೆ ಎಂದು ನಾನು ನಂಬಿದ್ದೇನೆ. ಅದಕ್ಕಾಗಿಯೇ ಕಾಯುತ್ತಿದ್ದೇನೆ" ಎಂದಿದ್ದಾರೆ ಚೈತ್ರಾ.

Whats_app_banner