‘ಆ ಟೈಮ್‌ನಲ್ಲಿ ನಾನು ಸೀರಿಯಲ್‌ ಬಿಡ್ತಿದೀನಿ ಅಂತ ಕೆಲವ್ರು ಅನ್ಕೊಂಡ್ರು’: ಪುಟ್ಟಕ್ಕನ ಮಕ್ಕಳು ಧಾರಾವಾಹಿ ನಟಿ ಅಕ್ಷರಾ ಸಂದರ್ಶನ
ಕನ್ನಡ ಸುದ್ದಿ  /  ಮನರಂಜನೆ  /  ‘ಆ ಟೈಮ್‌ನಲ್ಲಿ ನಾನು ಸೀರಿಯಲ್‌ ಬಿಡ್ತಿದೀನಿ ಅಂತ ಕೆಲವ್ರು ಅನ್ಕೊಂಡ್ರು’: ಪುಟ್ಟಕ್ಕನ ಮಕ್ಕಳು ಧಾರಾವಾಹಿ ನಟಿ ಅಕ್ಷರಾ ಸಂದರ್ಶನ

‘ಆ ಟೈಮ್‌ನಲ್ಲಿ ನಾನು ಸೀರಿಯಲ್‌ ಬಿಡ್ತಿದೀನಿ ಅಂತ ಕೆಲವ್ರು ಅನ್ಕೊಂಡ್ರು’: ಪುಟ್ಟಕ್ಕನ ಮಕ್ಕಳು ಧಾರಾವಾಹಿ ನಟಿ ಅಕ್ಷರಾ ಸಂದರ್ಶನ

Puttakkana Makkalu Serial: ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸಾಕಷ್ಟು ಕಥೆಗಳು ಸಾಗುತ್ತಿವೆ, ಒಂದು ಪಾತ್ರದ ಅಂತ್ಯವಾಗಿ, ಇನ್ನೊಂದು ಪಾತ್ರದ ಎಂಟ್ರಿ ಆಗಿದೆ. ಈ ಕುರಿತ ಸಾಕಷ್ಟು ಪ್ರಶ್ನೆಗಳಿಗೆ ನಟಿ ಅಕ್ಷರಾ ಅವರು ಮಾತನಾಡಿದ್ದಾರೆ. ಸಂದರ್ಶನ: ಪದ್ಮಶ್ರೀ ಭಟ್‌, ಪಂಚಮಿ ಟಾಕ್ಸ್‌

ಪುಟ್ಟಕ್ಕನ ಮಕ್ಕಳು ಧಾರಾವಾಹಿ ನಟಿ ಅಕ್ಷರಾ ಸಂದರ್ಶನ
ಪುಟ್ಟಕ್ಕನ ಮಕ್ಕಳು ಧಾರಾವಾಹಿ ನಟಿ ಅಕ್ಷರಾ ಸಂದರ್ಶನ

Puttkkana Makkalu Serial Sahana Interview: ಪ್ರೀತಿಸಿ, ಮದುವೆಯಾದ ಗಂಡ ನಂಬದೆ ಇದ್ದಾಗ ಡಿವೋರ್ಸ್ ಕೊಟ್ಟು ಮೆಸ್‌ ಆರಂಭಿಸಿ ಬದುಕು ಕಟ್ಟಿಕೊಳ್ಳುತ್ತಲಿರುವ ಸಹನಾ ಕಿರುತೆರೆಯ ವೀಕ್ಷಕರಿಗೆ ತುಂಬ ಫೇವರಿಟ್‌. ಅಂದಹಾಗೆ ನಾವಿಲ್ಲಿ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಸಹನಾ ಬಗ್ಗೆ ಮಾತಾಡ್ತಿದೀವಿ. ಸಹನಾ ಪಾತ್ರದಲ್ಲಿ ಅಕ್ಷರಾ ಅಭಿನಯಿಸುತ್ತಿದ್ದಾರೆ. ಸಹನಾ ಪಾತ್ರ, ಸೀರಿಯಲ್‌, ಸಿನಿಮಾ ಕುರಿತಂತೆ ಅವರು ಪಂಚಮಿ ಟಾಕ್ಸ್‌ ಯುಟ್ಯೂಬ್‌ ಚಾನೆಲ್‌ ಜೊತೆ ಮಾತನಾಡಿದ್ದಾರೆ.

  • ಸಹನಾ ಪಾತ್ರದ ಬಗ್ಗೆ ಹೇಳಿ, ಹೊರಗಡೆ ಜನರ ಪ್ರತಿಕ್ರಿಯೆ ಹೇಗಿದೆ?

ಸಹನಾ ಪಾತ್ರ ಅಂದ್ರೆ ನನಗೆ ತುಂಬ ಇಷ್ಟ. ಸೀರಿಯಲ್‌ ಕೂಡ ಚೆನ್ನಾಗಿ ನಡೆಯುತ್ತಿದೆ. ನಾನು ವೆಸ್ಟರ್ನ್‌ ಡ್ರೆಸ್‌ನಲ್ಲಿದ್ದರೂ ಕೂಡ ವೀಕ್ಷಕರು ಬಂದು ಮಾತನಾಡಿಸುತ್ತಾರೆ, ನಾನು ಮಾಸ್ಕ್‌ ಹಾಕಿಕೊಂಡಿದ್ರೂ ಕೂಡ ಇನ್ನೂ ಕೆಲವರು ಬಂದು ಮಾತನಾಡಿಸುತ್ತಾರೆ. ಟ್ರೆಡಿಷನಲ್‌, ವೆಸ್ಟರ್ನ್‌ ಡ್ರೆಸ್‌ನಲ್ಲಿಯೂ ನೀವು ಚೆನ್ನಾಗಿ ಕಾಣಿಸ್ತೀರಿ ಅಂತ ಹೇಳುತ್ತಾರೆ. ಟ್ರೆಡಿಷನಲ್‌ ಡ್ರೆಸ್‌ ಅಂದ್ರೆ ತುಂಬ ಇಷ್ಟ. ನಾನು ಸ್ಲಿಮ್‌ ಆಗಿದ್ದೀನಿ, ಸ್ಕಿನ್‌ ಚೆನ್ನಾಗಿದೆ, ಧಾರಾವಾಹಿಗಿಂತ ರಿಯಲ್‌ ಆಗಿ ಚೆನ್ನಾಗಿ ಕಾಣಸ್ತೀರಿ, ಇನ್ನೂ ಯಂಗ್‌ ಆಗಿ ಕಾಣಸ್ತೀರಿ ಅಂತಲೂ ಕೆಲವರು ಹೇಳಿದ್ದುಂಟು. ಇನ್ನು ಸಿನಿಮಾ ಮಾಡಿ ಅಂತ ಕೂಡ ಕೆಲವರು ಹೇಳಿದ್ದುಂಟು.

  • ವೀಕ್ಷಕರು ಏನು ಹೇಳ್ತಾರೆ?

ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ಸ್ನೇಹಾ ಪಾತ್ರ ಅಂತ್ಯ ಆಗಿದ್ದಕ್ಕೆ ಕೆಲವರಿಗೆ ಬೇಸರ ಆಗಿದೆ. ಟ್ರ್ಯಾಕ್‌ ಚೆನ್ನಾಗಿ ಬರುತ್ತಿದೆ, ಇಡೀ ಕಥೆ ಚೆನ್ನಾಗಿ ಬರುತ್ತಿರೋದರಿಂದ ವೀಕ್ಷಕರು ಖುಷಿ ಆಗಿದ್ದಾರೆ.

  • ಸಹನಾ ಪಾತ್ರದ ಅಂತ್ಯಕ್ರಿಯೆ ಎಪಿಸೋಡ್‌ ಬಂದಾಗ ವೀಕ್ಷಕರು ಏನಂದ್ರು?

ನೀವು ಧಾರಾವಾಹಿ ಬಿಟ್ಟು ಹೋಗ್ತಿದೀರಾ? ನೀವು ಧಾರಾವಾಹಿಯಲ್ಲಿರಬೇಕು, ಇಲ್ಲ ಅಂದ್ರೆ ನಮಗೆ ಬೇಸರ ಆಗುತ್ತದೆ. ನೀವು ಸಾಯೋದನ್ನು ಕನಸಿನ ಥರ ತೋರಸ್ತಾರಾ ಅಂತ ಕೂಡ ಕೆಲವರು ಹೇಳಿದ್ರು.

  • ಮುರಳಿ ಮಾಡಿದ ನಂಬಿಕೆ ದ್ರೋಹದಿಂದ ಸಹನಾ ದೂರ ಆಗ್ತಾಳೆ. ಈ ಬಗ್ಗೆ ಏನು ಹೇಳ್ತೀರಿ?

ಹೆಂಡ್ತಿ ಮೇಲೆ ಮುರಳಿಗೆ ನಂಬಿಕೆ ಇಲ್ಲ. ತಾಯಿ ಮಾತನ್ನು ಮಗ ಕೇಳಬೇಕು ಆದರೆ ತಾಯಿ ವಿಷ ಹಾಕಿದ್ದಾಳೆ ಅಂತ ಹೇಳಿದರೂ ಕೂಡ ಮುರಳಿ ಕೇಳಲು ರೆಡಿ ಇಲ್ಲ. ಮುರಳಿಗೆ ಇನ್ನೊಂದು ಚಾನ್ಸ್‌ ಕೊಡಬಹುದಿತ್ತು ಅಂತ ನನಗೆ ಅನಿಸಿತ್ತು. ಆ ಜಾಗದಲ್ಲಿ ನಾನು ಇದ್ದಿದ್ರೆ ಒಂದು ಚಾನ್ಸ್‌ ಕೊಡುತ್ತಿದ್ದೆ. ಕೆಲ ವೀಕ್ಷಕರು ಮುರಳಿಗೆ ಚಾನ್ಸ್‌ ಕೊಡಬಹುದಿತ್ತು ಅಂತ ಹೇಳಿದ್ದಾರೆ.

  • ಮುರಳಿ-ಸಹನಾ ಜೀವನದಲ್ಲಿ ನಡೆದಿರೋದು ಸಮಾಜದಲ್ಲಿಯೂ ನಡೆದಿರುತ್ತದೆ.

ಯಾವುದೇ ರಿಲೇಶನ್‌ಶಿಪ್‌ನಲ್ಲಿಯೂ ನಂಬಿಕೆ ಮುಖ್ಯ, ಎಲ್ಲರಿಂದಲೂ ತಪ್ಪಾಗುತ್ತದೆ. ಆದರೆ ಯಾವುದೇ ಕಾರಣಕ್ಕೂ ಗಂಡ-ಹೆಂಡತಿ ದೂರ ಆಗಬಾರದು.

  • ಸಹನಾ ಮೆಸ್‌ ಆರಂಭಿಸುತ್ತಾಳೆ. ಆರ್ಥಿಕವಾಗಿ ಗಟ್ಟಿಯಾಗುತ್ತಾಳೆ.

ನಾನು ಚಿಕ್ಕ ವಯಸ್ಸಿನಿಂದಲೂ ಮನೆಯಲ್ಲಿಯೇ ಬೆಳೆದಿದ್ದೇನೆ, ತಾಯಿಯಿಂದ ದೂರ ಆದ ಸಹನಾ ಮತ್ತೆ ಮನೆಗೆ ಬರುತ್ತಾಳೆ. ಅದು ವೈಯಕ್ತಿಕವಾಗಿ ನನಗೆ ಎಮೋಶನಲ್‌ ಆಗಿತ್ತು.

  • ಸ್ನೇಹಾ ಪಾತ್ರಕ್ಕೆ ಸಂಜನಾ ಬುರ್ಲಿ ವಿದಾಯ ಹೇಳಿದ್ದಾರೆ

ಸಂಜನಾ ಅವರು ಧಾರಾವಾಹಿಯಿಂದ ಹೊರಗಡೆ ಹೋಗುವ ಎರಡು ದಿನದ ಮುಂಚೆ ನನಗೆ ಈ ವಿಷಯ ಹೇಳಿದರು. ನನಗೆ ಈ ವಿಷಯ ಬಹಳ ಬೇಸರ ತಂದಿತು. ಇನ್ನು ಸ್ನೇಹಾ ಅಂತ್ಯಕ್ರಿಯೆ ಎಪಿಸೋಡ್‌ ನೋಡಲು ನನಗೆ ತುಂಬ ಕಷ್ಟ ಆಯ್ತು, ನಾನು ನೋಡಲಿಲ್ಲ.

  • ಸಹನಾ ಮತ್ತೆ ಮದುವೆ ಆಗಬೇಕಾ?

ಮುರಳಿ ಜೊತೆ ಸಹನಾಳ ಪ್ರೀತಿ ಸತ್ಯ. ಇಂದು ಅವಳು ಗಂಡನಿಂದ ದೂರ ಆದರೂ ಕೂಡ ಮತ್ತೆ ಮದುವೆ ಆಗಬಾರದು.

  • ಸ್ನೇಹಾಳನ್ನು ಕಳೆದುಕೊಂಡು ಕಂಠಿ ದುಃಖದಲ್ಲಿದ್ದಾನೆ. ಹೊಸ ಸ್ನೇಹಾ ಪಾತ್ರ ಎಂಟ್ರಿ ಆಗ್ತಿದೆ. ಸಾಕಷ್ಟು ಟ್ರ್ಯಾಕ್‌ ನಡೆಯುತ್ತಿದೆ.

ಹೊಸ ಸ್ನೇಹಾಳನ್ನು ಜನರು ಇಷ್ಟಪಟ್ಟಿದ್ದಾರೋ ಇಲ್ಲವೋ ಎಂದು ನನಗೆ ಐಡಿಯಾ ಇಲ್ಲ. ಕಂಠಿ ನೋವಲ್ಲಿದ್ದಾನೆ, ಕಥೆ ಚೆನ್ನಾಗಿ ಸಾಗುತ್ತಿದೆ. ತುಂಬ ಟ್ರ್ಯಾಕ್‌ ಇರೋದು ಖುಷಿ ಕೊಡುತ್ತದೆ, ಫ್ಯಾಮಿಲಿ ಎಮೋಶನ್ಸ್‌, ಲವ್‌, ಕಾಮಿಡಿ ಎಲ್ಲವೂ ಇರೋದರಿಂದ ಜನರಿಗೆ ಖುಷಿ ಆಗುತ್ತಿದೆ. ಬಂಗಾರಮ್ಮ, ಸಿಂಗಾರಮ್ಮ, ರಾಜೇಶ್ವರಿ, ಪುಟ್ಟಕ್ಕನ ಫ್ಯಾಮಿಲಿ ಕಥೆ ನಡೆಯುತ್ತಿರೋದರಿಂದ ಧಾರಾವಾಹಿ ಚೆನ್ನಾಗಿ ಸಾಗುತ್ತಿದೆ.

ಉಮಾಶ್ರೀ ಅಮ್ಮ ನಾವು ನಟಿಸುವಾಗ ತಪ್ಪು ಮಾಡಿದ್ರೆ ಹೇಳ್ತಾರೆ. ಮಂಜುಭಾಷಿಣಿ ಅವರು ತುಂಬ ಸ್ವೀಟ್.‌ ಇನ್ನು ಧನುಷ್‌, ಇನ್ನು ಮೂವರು ಅಕ್ಕ-ತಂಗಿಯರು ಕೂಡ ಚೆನ್ನಾಗಿ ಇದ್ದೇವೆ. ರಮೇಶ್‌ ಪಂಡಿತ್‌ ಅವರು ನೀಟ್‌ ಆಗಿ ನಟನೆ ಹೇಳಿಕೊಡ್ತಾರೆ.

(ಸಂದರ್ಶನ: ಪದ್ಮಶ್ರೀ ಭಟ್‌, ಪಂಚಮಿ ಟಾಕ್ಸ್‌)

Whats_app_banner