Seetha Rama Serial: ಸೀತಮ್ಮನ ಪ್ರಪಂಚಕ್ಕೆ ಸುಬ್ಬಿ ಪ್ರವೇಶ; ರೋಚಕ ತಿರುವಿನಲ್ಲಿ ಸೀತಾ ರಾಮ ಧಾರಾವಾಹಿ
Seetha Rama Serial: ಸಿಹಿ ಇಲ್ಲ ಅನ್ನೋ ನೋವನ್ನು ಭರಿಸಲು ಸೀತಾಳ ಪ್ರಪಂಚಕ್ಕೆ ಸುಬ್ಬಿಯ ಆಗಮನವಾಗಿದೆ. ಅಚ್ಚರಿಯ ರೀತಿಯಲ್ಲಿ ಸೀತಾಳ ಕೈಗೆ ಸುಬ್ಬಿ ಸಿಕ್ಕಿಬಿದ್ದಿದ್ದಾಳೆ. ಆದರೆ, ಇವಳು ಸಿಹಿಯಲ್ಲ ಅನ್ನೋ ಸತ್ಯ ಮಾತ್ರ ಸೀತಾಗೆ ಇನ್ನೂ ತಿಳಿದಿಲ್ಲ.
Seetha Rama Serial: ಸಿಹಿ ಇಲ್ಲದ ನೋವು ಶ್ರೀರಾಮನಿಗೆ ಅರಗಿಸಿಕೊಳ್ಳುವುದಕ್ಕೆ ಆಗುತ್ತಿಲ್ಲ. ಮತ್ತೊಂದು ಕಡೆ ಸೀತಾ ಮಾನಸಿಕವಾಗಿ ಸ್ಥಿಮಿತ ಕಳೆದುಕೊಂಡು ಗೊಂಬೆಯನ್ನೇ ಸಿಹಿ ಎಂದು ನಂಬಿದ್ದಾಳೆ. ಭಾರ್ಗವಿ ಮಾತ್ರ ಸಿಹಿ ಇಲ್ಲದ್ದನ್ನು, ಸೀತಾಳ ಸ್ಥಿತಿಯನ್ನು ಕಂಡು ಒಳಗೊಳಗೆ ಸಂಭ್ರಮಿಸುತ್ತಿದ್ದಾಳೆ. ಇದೀಗ ದೇಸಾಯಿ ಮನೆಯಲ್ಲಿ ಸಿಹಿಯ ಕಾರ್ಯ ನಡೆಯುತ್ತಿದೆ. ಸೀತಾಗೆ ಗೊತ್ತಾಗದಂತೆಯೇ ಸಿಹಿಯ ಕಾರ್ಯ ನೆರವೇರಿದೆ. ಆದರೆ, ಏನೂ ತಿಳಿಯದ ಸೀತಾ ಮಾತ್ರ, ಸಿಹಿ ಸಲುವಾಗಿ ಪೂಜೆ ನಡೆಸಲಾಗ್ತಿದೆ ಎಂದೇ ನಂಬಿದ್ದಾಳೆ.
ಹೀಗಿರುವಾಗಲೇ ಇದೇ ಮನೆಗೆ ಕಳ್ಳ ಬೆಕ್ಕಿನ ರೀತಿ ಸುಬ್ಬಿಯ ಎಂಟ್ರಿಯಾಗಿದೆ. ಅಮ್ಮನನ್ನು ಹುಡುಕಿಕೊಂಡು ದೇಸಾಯಿ ಮನೆಗೆ ಬಂದಿರುವ ಸುಬ್ಬಿ, ಅರಮನೆಯಂಥ ಮನೆ ನೋಡಿ ಹೌಹಾರಿದ್ದಾಳೆ. ಬೆರಗುಗಣ್ಣಿನಿಂದಲೇ ಇಡೀ ಮನೆಯನ್ನು ಸುತ್ತಿದ್ದಾಳೆ. ಕಂಡ ಕಂಡ ವಸ್ತುಗಳನ್ನು ಮುಟ್ಟಿ, ಚಕಿತಳಾಗಿದ್ದಾಳೆ. ನೇರವಾಗಿ ರಾಮ್‌ನ ಕೋಣೆ ಪ್ರವೇಶಿಸಿದ್ದಾಳೆ. ಬೆಡ್ ಮೇಲೆ ಬಿದ್ದು ಹೊರಳಾಡಿದ್ದಾಳೆ. ಅಲ್ಲೇ ಇದ್ದ ಸೀತಾಳ ಫೋಟೋ ಹಿಡಿದು ಖುಷಿಪಟ್ಟಿದ್ದಾಳೆ.
ಸಿಹಿ ಫೋಟೋ ನೋಡಿ ಸುಬ್ಬಿ ಶಾಕ್
ಸೀತಾಳ ಫೋಟೋ ಮಾತ್ರವಲ್ಲ ಅದರ ಪಕ್ಕದಲ್ಲಿಯೇ ಇದ್ದ ಸಿಹಿಯ ಫೋಟೋ ನೋಡಿ ಅಚ್ಚರಿಗೊಂಡಿದ್ದಾಳೆ ಸುಬ್ಬಿ. ಅರೇ ಇಸ್ಕಿ.. ಇವಳು ನೋಡೋಕೆ ಥೇಟ್ ನನ್ನ ಥರಾನೇ ಇದ್ದಾಳಲ್ಲ ಎಂದಿದ್ದಾಳೆ. ಇತ್ತ ಇನ್ನೊಂದು ಬದಿಯಲ್ಲಿ ಸಿಹಿಯ ಕೊನೇ ಕಾರ್ಯವನ್ನು ರಾಮ್ ನೆರವೇರಿಸುತ್ತಿದ್ದಾನೆ. ಪ್ರೇತದ ರೂಪದಲ್ಲಿ ಸಿಹಿ ಅಲ್ಲಿಯೇ ಸುತ್ತಾಡುತ್ತಿದ್ದಾಳೆ. ನನ್ನ ಜತೆ ಯಾಕೆ ಯಾರೂ ಮಾತನಾಡ್ತಿಲ್ಲ ಎಂದು ಎಲ್ಲರನ್ನೂ ಮಾತನಾಡಿಸುತ್ತಿದ್ದಾಳೆ. ಆದರೆ, ತಾನು ಸತ್ತಿರುವ ವಿಚಾರ ಸಿಹಿಗೆ ತಿಳಿದಿಲ್ಲ.
ಕಾರ್ಯದ ನಡುವೆ, ಸಿಹಿಯ ಇಷ್ಟದ ವಸ್ತು ತನ್ನಿ ಎಂದು ರಾಮ್‌ಗೆ ಹೇಳಿದ್ದಾರೆ ಪುರೋಹಿತರು. ಇತ್ತ ರಾಮನ ಕೋಣೆಯಲ್ಲಿದ್ದ ಚಿನ್ನದ ಚೈನ್‌ಅನ್ನು ನೋಡಿದ ಸುಬ್ಬಿ, ಅದನ್ನ ತನ್ನ ಕೊರಳಿಗೆ ಹಾಕಿಕೊಂಡಿದ್ದಾಳೆ. ಚೆನ್ನಾಗಿದೆ ಎನ್ನುತ್ತಲೇ, ಇದನ್ನು ನಾನೇ ಇಟ್ಕೋತಿನಿ ಎಂದಿದ್ದಾಳೆ. ಅಷ್ಟೊತ್ತಿಗೆ ಬಾಗಿಲ ಬಳಿ ರಾಮ್ ಬರುತ್ತಿದ್ದಂತೆ, ಬಚ್ಚಿಟ್ಟುಕೊಂಡಿದ್ದಾಳೆ. ಸುಬ್ಬಿ ಹಾಕಿಕೊಂಡಿದ್ದ ಚೈನ್‌ಅನ್ನೇ ರಾಮ್ ಹುಡುಕಾಡಿದ್ದಾನೆ. ಅದು ಸಿಗದಿದ್ದಾಗ, ಕೈಗೆ ಸಿಕ್ಕ ಕಾಲ್ಗೆಜ್ಜೆಯನ್ನೇ ಪೂಜೆಗೆ ಕೊಂಡೊಯ್ದಿದ್ದಾನೆ.
ಸೀತಾ ಪ್ರಪಂಚಕ್ಕೆ ಸುಬ್ಬಿ ಪ್ರವೇಶ
ಸೀತಾ ಪ್ರಜ್ಞೆ ತಪ್ಪಿ ಬೀಳುತ್ತಿದ್ದಂತೆ, ಆಕೆಯನ್ನು ಕೋಣೆಯಲ್ಲಿ ಮಲಗಿಸಲಾಗಿದೆ. ಹೀಗಿರುವಾಗಲೇ ಅದೇ ಕೋಣೆಯಲ್ಲಿದ್ದ ಸುಬ್ಬಿ, ಸೀತಾಳನ್ನು ನೋಡಿದ್ದಾಳೆ. ಸೀತಾಗೂ ಸುಬ್ಬಿ ರೂಪದಲ್ಲಿರೋ ಸಿಹಿ ಕಂಡಿದ್ದಾಳೆ. ನೀನು ನನ್ನ ಪ್ರಾಣ ಎಂದಿದ್ದಾಳೆ. ಅಲ್ಲಿಗೆ ಸೀತಮ್ಮನ ಪ್ರಪಂಚಕ್ಕೆ ಸುಬ್ಬಿಯ ಪ್ರವೇಶವಾಗಿದೆ. ಇತ್ತ ನಮ್ಮ ಸಿಹಿ ಸತ್ತಿದ್ದಾಳೆ ಅನ್ನೋ ವಿಚಾರವನ್ನು ಸೀತಾ ಎದುರು ಹೇಗೆ ಹೇಳೋದು ಎಂದು ಭಾರ್ಗವಿ ಮನೆಯ ಎಲ್ಲರ ಮುಂದೆ ಕಳ್ಳಾಟವಾಡಿದ್ದಾಳೆ. ಅಷ್ಟಕ್ಕೂ ಸೀತಾಗೆ ಸಿಹಿ ಇಲ್ಲ ಅನ್ನೋ ವಿಚಾರ ಗೊತ್ತಾಯ್ತಾ? ಈ ಸತ್ಯ ಇಂದಿನ ಸೀತಾ ರಾಮ ಸಂಚಿಕೆಯಲ್ಲಿ ಗೊತ್ತಾಗಲಿದೆ.
ಸೀತಾ ರಾಮ ಧಾರಾವಾಹಿ ಪಾತ್ರವರ್ಗ
ನಿರ್ದೇಶಕ: ಮಧುಸೂಧನ್
ಗಗನ್ ಚಿನ್ನಪ್ಪ: ಶ್ರೀರಾಮ (ನಾಯಕ)
ವೈಷ್ಣವಿ ಗೌಡ: ಸೀತಾ (ನಾಯಕ)
ರೀತು ಸಿಂಗ್: ಸಿಹಿ (ಸೀತಾ ಮಗಳು)
ಅಶೋಕ ಶರ್ಮಾ: ಅಶೋಕ (ಶ್ರೀರಾಮನ ಪ್ರಾಣ ಸ್ನೇಹಿತ)
ಭಾರ್ಗವಿ: ಪೂಜಾ ಲೋಕೇಶ್ (ಶ್ರೀರಾಮನ ಚಿಕ್ಕಮ್ಮ)
ಮುಖ್ಯಮಂತ್ರಿ ಚಂದ್ರು: ಸೂರ್ಯ ಪ್ರಕಾಶ್ ದೇಸಾಯಿ (ಶ್ರೀರಾಮನ ತಾತ)
ಮೇಘನಾ ಶಂಕರಪ್ಪ: ಪ್ರಿಯಾ (ಸೀತಾಳ ಸ್ನೇಹಿತೆ)
ವಿಕಾಸ್ ಕಾರ್‌ಗೋಡ್: ಲಾಯರ್ ರುದ್ರಪ್ರತಾಪ್
ಸತೀಶ್ ಚಂದ್ರ: ಚರಣ್. ಡಿ
ಪೂರ್ಣಚಂದ್ರ ತೇಜಸ್ವಿ: ವಿಶ್ವಜೀತ್ (ಶ್ರೀರಾಮನ ಚಿಕ್ಕಪ್ಪ)
ಜಯದೇವ್ ಮೋಹನ್: ಸತ್ಯಜೀತ್ (ಶ್ರೀರಾಮನ ಚಿಕ್ಕಪ್ಪ)
----
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope