Bombat Bhojana 5: ‘ಬೊಂಬಾಟ್ ಭೋಜನ’ ಮಾತ್ರವಲ್ಲ ‘ಬೊಂಬಾಟ್‌ ಬಾಡೂಟ’ ಹೊತ್ತು ಹೊಸ ಸೀಸನ್‌ ಜತೆ ಬಂದ್ರು ಸಿಹಿ ಕಹಿ ಚಂದ್ರು
ಕನ್ನಡ ಸುದ್ದಿ  /  ಮನರಂಜನೆ  /  Bombat Bhojana 5: ‘ಬೊಂಬಾಟ್ ಭೋಜನ’ ಮಾತ್ರವಲ್ಲ ‘ಬೊಂಬಾಟ್‌ ಬಾಡೂಟ’ ಹೊತ್ತು ಹೊಸ ಸೀಸನ್‌ ಜತೆ ಬಂದ್ರು ಸಿಹಿ ಕಹಿ ಚಂದ್ರು

Bombat Bhojana 5: ‘ಬೊಂಬಾಟ್ ಭೋಜನ’ ಮಾತ್ರವಲ್ಲ ‘ಬೊಂಬಾಟ್‌ ಬಾಡೂಟ’ ಹೊತ್ತು ಹೊಸ ಸೀಸನ್‌ ಜತೆ ಬಂದ್ರು ಸಿಹಿ ಕಹಿ ಚಂದ್ರು

Bombat Bhojana 5: ಹೊಸ ಕಾನ್ಸೆಪ್ಟ್‌ ಜತೆಗೆ ಮತ್ತಷ್ಟು ವಿಶೇಷತೆಗಳೊಂದಿಗೆ ಬೊಂಬಾಟ್‌ ಭೋಜನ ಕಾರ್ಯಕ್ರಮ ಹೊತ್ತು ಬಂದಿದ್ದಾರೆ ಸಿಹಿಕಹಿ ಚಂದ್ರು. ಬೊಂಬಾಟ್ ಭೋಜನದ ಗಾಡಿ ರಾಜ್ಯಾದ್ಯಂತ ಸಂಚರಿಸಿ ನಿಮ್ ಊರಿಗೆ, ನಿಮ್ ಕೇರಿಗೆ, ನಿಮ್ ಗಲ್ಲಿಗಳಿಗೂ ಬರಲಿದೆ.

ಬೊಂಬಾಟ್ ಭೋಜನ ಹೊಸ ಸೀಸನ್‌ ಜತೆ ಬಂದ್ರು ಸಿಹಿ ಕಹಿ ಚಂದ್ರು
ಬೊಂಬಾಟ್ ಭೋಜನ ಹೊಸ ಸೀಸನ್‌ ಜತೆ ಬಂದ್ರು ಸಿಹಿ ಕಹಿ ಚಂದ್ರು

Bombat Bhojana Season 5: ಕನ್ನಡ ಕಿರುತೆರೆಯಲ್ಲಿ ಅಡುಗೆ ಶೋ ಅಂದ್ರೆ ಥಟ್ಟನೆ ನೆನಪಾಗೋದೇ ಸ್ಟಾರ್ ಸುವರ್ಣ ವಾಹಿನಿಯ 'ಬೊಂಬಾಟ್ ಭೋಜನ'. ಸಾವಿರಕ್ಕೂ ಹೆಚ್ಚು ಸಂಚಿಕೆಗಳನ್ನು ದಾಟಿ ಹೊಸ ಮೈಲಿಗಲ್ಲು ಸೃಷ್ಟಿಸಿರುವ ಈ ಶೋ ಈಗಾಗಲೇ 4 ಸೀಸನ್‌ಗಳನ್ನು ಯಶಸ್ವಿಯಾಗಿ ಪೂರೈಸಿದೆ. ಇದೀಗ ಇನ್ನಷ್ಟು ಹೊಸತನವನ್ನೊಳಗೊಂಡು 5ನೇ ಆವೃತ್ತಿಯೊಂದಿಗೆ ವೀಕ್ಷಕರ ಮುಂದೆ ಬರಲು ಸಜ್ಜಾಗಿದೆ.

ಈ ಬಾರಿ 'ಬೊಂಬಾಟ್ ಭೋಜನ ಸೀಸನ್ 5' ರ ಪ್ರಮುಖ ವಿಶೇಷತೆಯಂದ್ರೆ "ಬೊಂಬಾಟ್ ಭೋಜನ On Wheels". ಇನ್ಮುಂದೆ ಬೊಂಬಾಟ್ ಭೋಜನದ ಗಾಡಿ ರಾಜ್ಯಾದ್ಯಂತ ಸಂಚರಿಸಿ ನಿಮ್ ಊರಿಗೆ, ನಿಮ್ ಕೇರಿಗೆ, ನಿಮ್ ಗಲ್ಲಿಗಳಿಗೆ ಬಂದು ರುಚಿ ರುಚಿಯಾದ ಅಡುಗೆಯನ್ನು ತಯಾರಿಸಿ ಆ ರುಚಿಯನ್ನು ಅಲ್ಲಿನ ಜನರಿಗೆ ತಿಳಿಸಿಕೊಡಲಿದೆ. ಇದು ಈ ಸೀಸನ್ ನ ಮುಖ್ಯ ಆಕರ್ಷಣೆ.

ಈ ಸೀಸನ್‌ನಲ್ಲಿ ಏನಿರಲಿದೆ?

  • 1. ಸ್ಪೆಷಲ್ ಊಟ: ಸಿಹಿ ಕಹಿ ಚಂದ್ರು ಅವರು ರುಚಿ-ರುಚಿಯಾದ ಅಡುಗೆಯನ್ನು ತಿಳಿಸುತ್ತಾರೆ.
  • 2. ಹೋಟೆಲ್ ಊಟ: ಕರ್ನಾಟಕದಾದ್ಯಂತ ಚಲಿಸಿ, ಜನಪ್ರಿಯತೆಗಳಿಸಿರುವ ವರ್ಷಗಳ ಇತಿಹಾಸವಿರುವ ಹೋಟೆಲ್‌ಗಳಿಗೆ ಧಾವಿಸಿ ಅಲ್ಲಿನ ಜನಪ್ರಿಯ ತಿನಿಸುಗಳನ್ನು ಸವಿದು ಜನರಿಗೆ ತಿಳಿಸುವುದು.
  • 3. ಊಟ ರೆಡಿ: ಜನಸಾಮಾನ್ಯರು / ಸೆಲೆಬ್ರಿಟಿಸ್‌ಗಳು ಬಂದು ವಿವಿಧ ರೀತಿಯ ಕೈರುಚಿಯನ್ನು ತಿಳಿಸುವುದು.
  • 4. ಆರೋಗ್ಯ ಅಡುಗೆ: ಡಾ. ಗೌರಿ ಸುಬ್ರಮಣ್ಯ ರವರು ಜನರಿಗೆ ಉಪಯುಕ್ತವಾದ ಮನೆಮದ್ದನ್ನು ಇಲ್ಲಿ ತಿಳಿಸುತ್ತಾರೆ.
  • 5. ಸವಿಯೂಟ : ಬೇರೆ ಬೇರೆ ಜಿಲ್ಲೆಗಳಲ್ಲಿರುವ ಲೇಡೀಸ್ ಕ್ಲಬ್‌ಗಳಿಗೆ ಹೋಗಿ ಅಲ್ಲಿನ ಜನರೊಂದಿಗೆ ಬೆರೆತು, ಅಡುಗೆ ಮಾಂತ್ರಿಕ ಸಿಹಿ ಕಹಿ ಚಂದ್ರುರವರು ವಿಭಿನ್ನ ಅಡುಗೆ ಡಿಶ್‌ಗಳನ್ನು ತಯಾರಿಸುತ್ತಾರೆ.

ಇದನ್ನೂ ಓದಿ: ಬಿಗ್‌ಬಾಸ್‌ ಕನ್ನಡ ಆಂಗ್ಲಮಯ, ರೂಪೇಶ್‌ ರಾಜಣ್ಣ ಹೇಳಿದ್ಮೇಲೆ ಪರಿಸ್ಥಿತಿ ಬದಲಾಯ್ತ; ಕನ್ನಡ ರಾಜ್ಯೋತ್ಸವ ನವೆಂಬರ್‌ 1ಕ್ಕೆ ಸೀಮಿತವೇ?

ಇದೆಲ್ಲದರ ಜೊತೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇದೇ ಮೊದಲ ಬಾರಿಗೆ ಪ್ರತೀ ಶನಿವಾರ ಮಾಂಸ ಪ್ರಿಯರಿಗಾಗಿ ಸಿದ್ಧವಾಗ್ತಿದೆ 'ಬೊಂಬಾಟ್ ಬಾಡೂಟ'. ಅಡುಗೆ ಮಾಂತ್ರಿಕ ಆದರ್ಶ್ ತಟಪತಿ ಈ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಇದರಲ್ಲಿ ಖಾರ ಮಸಾಲ, ಮಿರ್ಚಿ ಮಸಾಲ ಹಾಗೂ ನಾಟಿ ಮಸಾಲ ಎಂಬ ವಿಭಾಗಗಳು ಹೊಂದಿರುತ್ತದೆ.

ನಳ ಮಹಾರಾಜ ಸಿಹಿ ಕಹಿ ಚಂದ್ರುರವರ ನೇತೃತ್ವದಲ್ಲಿ ಶುರುವಾಗುತ್ತಿರುವ 'ಬೊಂಬಾಟ್ ಭೋಜನ ಸೀಸನ್ 5' ಇದೇ ಸೋಮವಾರದಿಂದ ಮಧ್ಯಾಹ್ನ 12ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.

Whats_app_banner