ಅತ್ತೆ–ಮಾವ, ಮಕ್ಕಳನ್ನು ಬಿಟ್ಟು ಭಾಗ್ಯಕ್ಕ ಹೊರಟಿದ್ದಾದರೂ ಎಲ್ಲಿಗೆ? ಹೊಸ ಸಾಹಸಕ್ಕೆ ಕೈ ಹಾಕಿದ ನಟಿ ಸುಷ್ಮಾ ರಾವ್‌
ಕನ್ನಡ ಸುದ್ದಿ  /  ಮನರಂಜನೆ  /  ಅತ್ತೆ–ಮಾವ, ಮಕ್ಕಳನ್ನು ಬಿಟ್ಟು ಭಾಗ್ಯಕ್ಕ ಹೊರಟಿದ್ದಾದರೂ ಎಲ್ಲಿಗೆ? ಹೊಸ ಸಾಹಸಕ್ಕೆ ಕೈ ಹಾಕಿದ ನಟಿ ಸುಷ್ಮಾ ರಾವ್‌

ಅತ್ತೆ–ಮಾವ, ಮಕ್ಕಳನ್ನು ಬಿಟ್ಟು ಭಾಗ್ಯಕ್ಕ ಹೊರಟಿದ್ದಾದರೂ ಎಲ್ಲಿಗೆ? ಹೊಸ ಸಾಹಸಕ್ಕೆ ಕೈ ಹಾಕಿದ ನಟಿ ಸುಷ್ಮಾ ರಾವ್‌

Sushma Rao: ನಟಿ, ನಿರೂಪಕಿ ಸುಷ್ಮಾ ರಾವ್ ಹೊಸ ಸಾಹಸವೊಂದಕ್ಕೆ ಸಿದ್ಧರಾಗಿ ಹೊರಟಿದ್ದಾರೆ. ಅಂದ ಹಾಗೆ, ಅವರು ಹೋಗ್ತಾ ಇರೋದು ಅಂತಿಂಥ ಜಾಗಕ್ಕಲ್ಲ. ಈ ಬಗ್ಗೆ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಹಾಗಾದರೆ ನಮ್ಮ ಭಾಗ್ಯಕ್ಕ ಹೋಗ್ತಾ ಇರೋದಾದ್ರೂ ಎಲ್ಲಿಗೆ ನೋಡಿ.

ಹೊಸ ಸಾಹಸಕ್ಕೆ ಕೈ ಹಾಕಿದ ನಟಿ ಸುಷ್ಮಾ ರಾವ್‌; ಭಾಗ್ಯಕ್ಕ ಹೊರಟಿದ್ದಾದರೂ ಎಲ್ಲಿಗೆ?
ಹೊಸ ಸಾಹಸಕ್ಕೆ ಕೈ ಹಾಕಿದ ನಟಿ ಸುಷ್ಮಾ ರಾವ್‌; ಭಾಗ್ಯಕ್ಕ ಹೊರಟಿದ್ದಾದರೂ ಎಲ್ಲಿಗೆ?

ನಟಿ ಸುಷ್ಮಾ ರಾವ್ ಸದ್ಯ ಕನ್ನಡ ಕಿರುತೆರೆಯ ಭಾಗ್ಯಕ್ಕನಾಗಿ ಎಲ್ಲರ ಮನ ಗೆಲ್ಲುತ್ತಿದ್ದಾರೆ. ಕಲರ್ಸ್ ಕನ್ನಡದ ಭಾಗ್ಯಲಕ್ಷ್ಮೀ ಧಾರಾವಾಹಿಯ ಭಾಗ್ಯಳ ಪಾತ್ರಕ್ಕೆ ಜೀವ ತುಂಬುತ್ತಿರುವ ಸುಷ್ಮಾ ರಾವ್‌ ಗಂಡನಿಂದ ನೊಂದ ಹೆಣ್ಣುಮಕ್ಕಳ ಪ್ರತಿನಿಧಿಯಾಗಿ ತೆರೆ ಮೇಲೆ ಕಾಣಿಸಿದ್ದಾರೆ. ಗಂಡ ಮೋಸ ಮಾಡಿದರೂ ಎಷ್ಟೇ ಕಷ್ಟ ಕೊಟ್ರು ಜಗ್ಗದೇ ಮಕ್ಕಳು, ಅತ್ತೆ–ಮಾವನ ಜೊತೆ ನಿಂತು ಬದುಕನ್ನು ದಿಟ್ಟವಾಗಿ ಎದುರಿಸುವ ಭಾಗ್ಯ ಹಲವು ಹೆಣ್ಣುಮಕ್ಕಳಿಗೆ ಸ್ಫೂರ್ತಿಯಾಗಿದ್ದಾರೆ.

ಇಂತಿಪ್ಪ ಭಾಗ್ಯಕ್ಕ ಇದೀಗ ಇದ್ದಕ್ಕಿದ್ದಂತೆ ಮಕ್ಕಳು ಹಾಗೂ ಅತ್ತೆ ಮಾವನನ್ನು ಬಿಟ್ಟು ಹೊರಟಿದ್ದಾರೆ. ಎಲ್ಲಿಗೆ ಹೊರಟಿದ್ದಾರೆ ಅಂತ ಕೇಳಿದ್ರೆ ಖಂಡಿತ ನಿಮಗೆ ಆಶ್ಚರ್ಯವಾಗುತ್ತೆ. ಹೌದು ಭಾಗ್ಯ ಅಲಿಯಾಸ್ ಸುಷ್ಮಾ ರಾವ್ ಹೊರಟಿರುವುದು ಮೌಂಟ್ ಎವರೆಸ್ಟ್ ಕಡೆಗೆ, ಭಾಗ್ಯಕ್ಕಂಗೆ ಅಲ್ಲೇನು ಕೆಲಸ ಅನ್ಬೇಡಿ. ಮೌಂಟ್ ಎವರೆಸ್ಟ್ ಹತ್ತಬೇಕು ಅನ್ನೋದು ಸುಷ್ಮಾ ರಾವ್ ಅವರ ಬಹುದಿನಗಳ ಕನಸು. ಹಾಗಂತ ಈ ಬಾರಿ ಅವರು ಹೋಗ್ತಾ ಇರೋದು ಮೌಂಟ್ ಎವರೆಸ್ಟ್ ಹತ್ತೋಕೆ ಅಲ್ಲ, ಬದಲಾಗಿ ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್‌ಗೆ, ಅದು ಒಂಟಿಯಾಗಿ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಮಾಡಿ ಹೇಳಿದ್ದಾರೆ ಸುಷ್ಮಾ ರಾವ್. ಭಾಗ್ಯಕ್ಕ ಹೊಸ ಸಾಹಸಕ್ಕೆ ಕೈ ಹಾಕ್ತಾ ಇರೋದು ಅಭಿಮಾನಿಗಳಿಗೆ ಖುಷಿ ನೀಡಿದೆ. ನೀವು ಧಾರಾವಾಹಿಯಲ್ಲಿ ಮಾತ್ರವಲ್ಲ, ನಿಜ ಜೀವನದಲ್ಲೂ ನಮಗೆಲ್ಲಾ ಸ್ಫೂರ್ತಿ ಎಂದು ಮನಸಾರೆ ಹಾಡಿ ಹೊಗಳುತ್ತಿದ್ದಾರೆ.

ವಿಡಿಯೊದಲ್ಲಿ ಏನು ಹೇಳಿದ್ದಾರೆ ಸುಷ್ಮಾ

ಬೆಳಗಿನ ಜಾವ 3.15ರ ಸುಮಾರಿಗೆ ವಿಡಿಯೊ ಮಾಡಿರುವ ಸುಷ್ಮಾ ಅದನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ‘ಸಮಯ ಈಗ 3.15, ನಾನೀಗ ಏರ್‌ಪೋರ್ಟ್‌ಗೆ ಹೋಗ್ತಾ ಇದೀನಿ. ಅಲ್ಲಿಂದ ಎಲ್ಲಿಗೆ ಹೋಗ್ತಾ ಇದೀನಿ ಅಂದ್ರೆ ಮೌಂಟ್ ಎವರೆಸ್ಟ್‌ ಬೇಸ್ ಕ್ಯಾಂಪ್. ಎವರೆಸ್ಟ್ ಹತ್ತಬೇಕು ಎನ್ನುವ ಆಸೆ ಹಲವು ವರ್ಷಗಳಿಂದ ಹಾಗೇ ಇದೆ. ಆದರೆ ಮೊದಲು ಎವರೆಸ್ಟ್ ಬೇಸ್ ಕ್ಯಾಂಪ್ ನೋಡಿಕೊಂಡು ಬರೋಣ. ಮೊದಲು ಆ ಯೋಗ್ಯತೆ ಇದ್ಯಾ ಹತ್ತೋಕೆ, ಅದು ಹತ್ತಿದ ಮೇಲೆ ನಂತರ ಎವೆರೆಸ್ಟ್ ಪರ್ವತ ಹತ್ತಬೇಕು ಎನ್ನುವ ಕನಸನ್ನು ನನಸು ಮಾಡಿಕೊಳ್ಳೋಕೆ ಟ್ರೈ ಮಾಡೋಣ ಅಂತ. ನಮ್ಮ ಶೂಟಿಂಗ್‌ನಿಂದ ರಜೆ ಇಷ್ಟು ದಿನ ತಗೋಳೋದು ಕಷ್ಟ. ಅದಕ್ಕಾಗಿ ಬ್ಯಾಕ್ ಟು ಬ್ಯಾಕ್‌ ಶೂಟಿಂಗ್ ಎಲ್ಲಾ ಮಾಡಿಕೊಟ್ಟಿದ್ದೇನೆ. ಈಗ ನನ್ನ ಜರ್ನಿ ಹೇಗೆ ಅಂದ್ರೆ ಇಲ್ಲಿಂದ ಮೊದಲು ಕಠ್ಮಂಡುಗೆ ಹೋಗಿ, ಅ‌ಲ್ಲಿಂದ ರಾಮೇಚಾಪ್ ಅಂತ ಒಂದು ಜಾಗ ಇದೆ. ಅಲ್ಲಿಂದ ಲೂಕ್ಲಾಗೆ ಫ್ಲೈಟ್‌ನಲ್ಲಿ ಹೋಗಿ ಲೂಕ್ಲಾಯಿಂದ ನಮ್ಮ ಟ್ರೆಕ್‌ ಶುರುವಾಗುತ್ತೆ. ನಾನು ಸೋಲೊ ಟ್ರೆಕ್ ಹೋಗ್ತಾ ಇರೋದು‘ ಎಂದಿರುವ ಸುಷ್ಮಾ ವಿಡಿಯೊದಲ್ಲಿ ನಮ್ಮ ಪ್ಯಾಕಿಂಗ್, ಪ್ರಯಾಣದ ವಿವರಗಳನ್ನು ಹಂಚಿಕೊಂಡಿದ್ದಾರೆ. ಅಲ್ಲದೇ ಎವರೆಸ್ಟ್ ಬೇಸ್‌ ಕ್ಯಾಂಪ್‌ನ ಪ್ರತಿ ವಿಡಿಯೊಗಳನ್ನು ಹಂಚಿಕೊಳ್ಳುತ್ತೇನೆ ಎಂದು ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ.

ಸುಷ್ಮಾ ರಾವ್ ಈ ಹೊಸ ಸಾಹಸಕ್ಕೆ ಅಭಿಮಾನಿಗಳು ಆಲ್ ದಿ ಬೆಸ್ಟ್ ಹೇಳ್ತಾ ಇದಾರೆ, ಮಾತ್ರವಲ್ಲ ಕೆಲವರು ನಾವು ಬರ್ತೀವಿ ಅಂತ ಆಸೆ ವ್ಯಕ್ತಪಡಿಸಿದ್ದಾರೆ. ನೀವು ಅನ್‌ಸ್ಕ್ರೀನ್ ಮಾತ್ರವಲ್ಲ ಆಫ್‌ಸ್ಕ್ರೀನ್‌ನಲ್ಲೂ ನಮಗೆಲ್ಲಾ ಸ್ಫೂರ್ತಿ ಎಂದಿರುವ ಅಭಿಮಾನಿಗಳು ಭಾಗ್ಯಕ್ಕನ ಎವೆರೆಸ್ಟ್ ವಿಡಿಯೊಗಳಿಗಾಗಿ ಎದುರು ನೋಡುತ್ತಿರುವುದು ಸುಳ್ಳಲ್ಲ.

ಸದ್ಯ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಭಾಗ್ಯ ಜೀವನ ಹಾಳು ಮಾಡಲು ಕನ್ನಿಕಾ ಜೊತೆ ಕೈ ಜೋಡಿಸಿದ್ದಾರೆ ತಾಂಡವ್ ಹಾಗೂ ಶ್ರೇಷ್ಠಾ. ಇವರನ್ನು ಎದುರಿಸಿ ಭಾಗ್ಯ ಹೇಗೆ ಬದುಕಿನ ಸವಾಲುಗಳನ್ನು ಎದುರಿಸುತ್ತಾಳೆ ಎಂಬುದನ್ನು ಕಾದು ನೋಡಬೇಕಿದೆ. 

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner