ಬಿಗ್‌ಬಾಸ್‌ ಕನ್ನಡ 11: ಐದನೇ ವಾರ ಎಲಿಮಿನೇಟ್‌ ಆದ ಮಾನಸಾ ಸಂತೋಷ್‌; ಮನೆಯಲ್ಲಿದ್ದ ಮಗು ಹೊರ ಹೋದಂತೆ ಆಯ್ತು ಎಂದ ತ್ರಿವಿಕ್ರಮ್‌
ಕನ್ನಡ ಸುದ್ದಿ  /  ಮನರಂಜನೆ  /  ಬಿಗ್‌ಬಾಸ್‌ ಕನ್ನಡ 11: ಐದನೇ ವಾರ ಎಲಿಮಿನೇಟ್‌ ಆದ ಮಾನಸಾ ಸಂತೋಷ್‌; ಮನೆಯಲ್ಲಿದ್ದ ಮಗು ಹೊರ ಹೋದಂತೆ ಆಯ್ತು ಎಂದ ತ್ರಿವಿಕ್ರಮ್‌

ಬಿಗ್‌ಬಾಸ್‌ ಕನ್ನಡ 11: ಐದನೇ ವಾರ ಎಲಿಮಿನೇಟ್‌ ಆದ ಮಾನಸಾ ಸಂತೋಷ್‌; ಮನೆಯಲ್ಲಿದ್ದ ಮಗು ಹೊರ ಹೋದಂತೆ ಆಯ್ತು ಎಂದ ತ್ರಿವಿಕ್ರಮ್‌

Bigg Boss Kannada 11: ಐದನೇ ವಾರ ಮಾನಸಾ ಬಿಗ್‌ಬಾಸ್‌ ಕನ್ನಡ 11 ಶೋನಿಂದ ಹೊರ ಬಂದಿದ್ದಾರೆ. ಮನೆಯಿಂದ ಮಗು ಹೊರ ಹೋದಂತೆ ಆಯ್ತು ಎಂದು ತ್ರಿವಿಕ್ರಮ್‌ ಬೇಸರ ವ್ಯಕ್ತಪಡಿಸಿದರೆ, ಮಾನಸಾ ಪತಿ ಸಂತೋಷ್‌, ಹಳ್ಳಿಯಿಂದ ಬಂದು ಅವಳು ಬಿಗ್‌ಬಾಸ್‌ಗೆ ಹೋಗಿ ಬಂದಿದ್ದೇ ದೊಡ್ಡ ಸಾಧನೆ. ಅವಳ ಮಾತಿನಿಂದ ಯಾರಿಗಾದರೂ ಬೇಸರ ಆದಲ್ಲಿ ಕ್ಷಮಿಸಿ ಎಂದು ಸಾರಿ ಕೇಳಿದರು.

ಬಿಗ್‌ಬಾಸ್‌ ಕನ್ನಡ 11: ಐದನೇ ವಾರ ಎಲಿಮಿನೇಟ್‌ ಆದ ಮಾನಸಾ ಸಂತೋಷ್‌
ಬಿಗ್‌ಬಾಸ್‌ ಕನ್ನಡ 11: ಐದನೇ ವಾರ ಎಲಿಮಿನೇಟ್‌ ಆದ ಮಾನಸಾ ಸಂತೋಷ್‌ (PC: Jio Cinema )

ಬಿಗ್‌ಬಾಸ್‌ ಕನ್ನಡ 11: ಐದನೇ ವಾರ ಯಶಸ್ವಿಯಾಗಿ ಪೂರ್ಣಗೊಂಡಿದೆ. ಕಳೆದ ವಾರ ಕಾರ್ಯಕ್ರಮಕ್ಕೆ ಮಿಸ್‌ ಆಗಿದ್ದ ಸುದೀಪ್‌, ಈ ವಾರ ಶೋ ನಡೆಸಿಕೊಟ್ಟಿದ್ದಾರೆ. ಭಾನುವಾರದ ಸೂಪರ್‌ ಸಂಡೇ ಎಪಿಸೋಡ್‌ನಲ್ಲಿ ಮನೆಯಿಂದ ಐದನೇ ಸ್ಪರ್ಧಿ ಹೊರ ಹೋಗಿದ್ದಾರೆ. ತುಕಾಲಿ ಸಂತೋಷ್‌ ಪತ್ನಿ ಮಾನಸಾ ಎಲಿಮಿನೇಟ್‌ ಆಗಿ ಮನೆಯಿಂದ ಹೊರ ಹೋಗಿದ್ದಾರೆ.

ಅನುಷಾ ಸೇಫ್‌ ಮಾನಸಾ ಎಲಿಮಿನೇಟ್‌

ಕಳೆದ ವಾರ ನಾಮಿನೇಟ್‌ ಆಗಿದ್ದವರಲ್ಲಿ ಸುದೀಪ್‌ ಒಬ್ಬೊಬ್ಬರನ್ನೇ ಸೇಫ್‌ ಮಾಡುತ್ತಾ ಬಂದರು. ಕೊನೆಯಲ್ಲಿ ಅನುಷಾ ಹಾಗೂ ಮಾನಸಾ ಉಳಿದುಕೊಂಡರು. ಈ ಬಾರಿ ಮನೆಯಲ್ಲಿ ಯಾರು ಇರಬೇಕು? ಯಾರು ಸೇಫ್‌ ಆಗಬೇಕು ಎಂದು ಸುದೀಪ್‌ ಸಹಸ್ಪರ್ಧಿಗಳಿಗೆ ಪ್ರಶ್ನಿಸಿದರು. ಐಶ್ವರ್ಯ ಹೊರತು ಪಡಿಸಿ ಉಳಿದ ಎಲ್ಲಾ ಸ್ಪರ್ಧಿಗಳು ಈ ವಾರ ಅನುಷಾ ಸೇಫ್‌ ಆಗಿ ಮನೆಯಲ್ಲಿ ಉಳಿಯಬೇಕು, ಮಾಸನಾ ಮನೆಯಿಂದ ಹೊರ ಹೋಗಬೇಕು ಎಂದರು. ಸುದೀಪ್‌ ಅನುಷಾ ಹಾಗೂ ಮಾನಸಾ ಇಬ್ಬರಿಗೂ ಲಗ್ಗೇಜ್‌ ಪ್ಯಾಕ್‌ ಮಾಡಲು ಹೇಳಿದರು. ಇಬ್ಬರ ಅಭಿಪ್ರಾಯವನ್ನೂ ಕೇಳಿ ಮಾನಸಾ ಇಲ್ಲಿಗೆ ನಿಮ್ಮ ಬಿಗ್‌ಬಾಸ್‌ ಜರ್ನಿ ಮುಕ್ತಾಯವಾಗುತ್ತಿದೆ. ಎಲ್ಲರಿಗೂ ಬೈ ಹೇಳಿ ವೇದಿಕೆಗೆ ಬನ್ನಿ ಎಂದು ಮಾನಸಾ ಎಲಿಮಿನೇಟ್‌ ಆಗಿದ್ದನ್ನು ಅನೌನ್ಸ್‌ ಮಾಡುತ್ತಾರೆ.

ಫ್ರೀಜ್‌ ಆಗಿದ್ದ ಮನೆಮಂದಿಯನ್ನು ಮಾನಸಾ ಮಾತನಾಡಿಸಿ ಎಲ್ಲರಿಗೂ ಆಲ್‌ ದಿ ಬೆಸ್ಟ್‌ ಹೇಳುತ್ತಾರೆ. ಮನೆಯಿಂದ ಹೊರ ಹೋಗುತ್ತಿರುವ ಮಾನಸಾಗೆ ಬಿಗ್‌ಬಾಸ್‌ ವಿಶೇಷ ಅಧಿಕಾರ ನೀಡುತ್ತಾರೆ. ಮುಂದಿನ ಆದೇಶದವರೆಗೂ ಜೈಲಿನಲ್ಲಿರಲು ಮನೆಯ ಒಬ್ಬ ಸ್ಪರ್ಧಿಯ ಹೆಸರು ಹೇಳಲು ಸೂಚಿಸುತ್ತಾರೆ. ಆಗ ಮಾನಸಾ ಮಂಜು ಹೆಸರನ್ನು ಸೂಚಿಸಿ, ಅವರು ನನ್ನಂತೆಯೇ ಸ್ವಲ್ಪ ಕೋಪಿಷ್ಠ, ತಾಳ್ಮೆ ಇಲ್ಲ ಅವರನ್ನು ನೋಡಿದರೆ ನನ್ನನ್ನು ನಾನು ನೋಡಿಕೊಂಡಂತೆ ಆಗುತ್ತದೆ ಆದ್ದರಿಂದ ಅವರ ಹೆಸರನ್ನು ಹೇಳಿದ್ದೇನೆ ಎನ್ನುತ್ತಾರೆ. ಮುಂದಿನ ಆದೇಶದವರೆಗೂ ಮಂಜು ಜೈಲಿನಲ್ಲಿರಬೇಕು ಎಂದು ಬಿಗ್‌ಬಾಸ್‌ ಸೂಚಿಸುತ್ತಾರೆ. ಮಾನಸಾ ಹೊರ ಹೋದಾಗ ಬಿಗ್‌ಬಾಸ್‌ ಎಲ್ಲರಿಗೂ ಫ್ರೀಜ್‌ನಿಂದ ರಿಲೀಸ್‌ ಮಾಡುತ್ತಾರೆ. ಆಗ ಎಲ್ಲರೂ ಓಡಿ ಬಂದು ಮಾನಸಾ ಅವರನ್ನು ಹಗ್‌ ಮಾಡಿ ಸಮಾಧಾನ ಮಾಡುತ್ತಾರೆ.

ಮಾನಸಾ ಹೊರ ಹೋಗಿದ್ದಕ್ಕೆ‌ ಬೇಸರ ವ್ಯಕ್ತಪಡಿಸಿದ ಮನೆ ಮಂದಿ

ಮಾನಸಾ ಹೊರ ಹೋಗುತ್ತಿದ್ದಂತೆ ಎಲ್ಲರೂ ಭಾವುಕರಾಗುತ್ತಾರೆ. ಮನೆಯಲ್ಲಿದ್ದ ಮಗು ಹೊರ ಹೋದಂತೆ ಆಯ್ತು ಎಂದು ತ್ರಿವಿಕ್ರಮ್‌ ಹೇಳುತ್ತಾರೆ. ಶಿಶಿರ್‌ ಕೂಡಾ ಇದಕ್ಕೆ ಬೇಸರಗೊಳ್ಳುತ್ತಾರೆ. ಇತ್ತ ವೇದಿಕೆಗೆ ಬರುವ ಮಾನಸಾ ದೊಡ್ಡದಾಗಿ ಎಡವಿ ಬಿದ್ದ ಹಾಗೆ ಆಯ್ತು. ಮನೆಯಲ್ಲಿ ಯಾವ ರೀತಿ ಇರಬೇಕು ಅಂತ ನನಗೆ ಗೊತ್ತಾಗಲಿಲ್ಲ. ನಾನು ಇಷ್ಟು ದಿನ ಮನೆಯವರನ್ನು ಬಿಟ್ಟು ದೂರ ಇದ್ದಿದ್ದೇ ಇಲ್ಲ. ಏನೋ ಒಂದು ನಿರೀಕ್ಷೆಯಿಂದ ನನ್ನನ್ನು ಒಳಗೆ ಕಳಿಸಿದ್ದಿರಿ, ಅದರೆ ನಾನು ಏನೂ ಮಾಡಲು ಸಾಧ್ಯವಾಗಲಿಲ್ಲ ಎನಿಸುತ್ತಿದೆ. ದೊಡ್ಡದಾಗಿ ಹೇಳಿ ಹೋಗಿದ್ದೆ ಆದರೆ ಈಗ ಸಂತೋಷ್‌ ಮುಖ ನೋಡಲು ನಾಚಿಕೆ ಆಗುತ್ತಿದೆ ಎಂದು ಮಾನಸಾ ಮನೆಯಿಂದ ಹೊರ ಬಂದ ಬೇಸರ ಹಂಚಿಕೊಂಡರು.

ಪತ್ನಿ ಎಲಿಮಿನೇಟ್‌ ಆಗಿದ್ದಕ್ಕೆ ಪ್ರತಿಕ್ರಿಯಿಸಿದ ಸಂತೋಷ್‌ ಮಾಸನಾ ಹೊರ ಬಂದಿದ್ದಕ್ಕೆ ಬೇಸರ , ಸಂತೋಷ ಎರಡೂ ಆಗ್ತಿದೆ. ಎಲ್ಲೋ ಒಂದು ಹಳ್ಳಿಯಲ್ಲಿ ಇದ್ದವಳನ್ನು, ಬೆಂಗಳೂರು ನೋಡದೆ ಇದ್ದವಳನ್ನು ಇಲ್ಲಿಗೆ ಕರೆತಂದು ರಿಯಾಲಿಟಿ ಶೋ ತೋರಿಸಿ, ಅವಳೂ ಸ್ಪರ್ಧಿಯಾಗಿ ಹೋಗಿ ಬಂದಿರುವುದೇ ದೊಡ್ಡ ಸಾಧನೆ, ಆಲ್‌ರೆಡಿ ನನ್ನ ಹೆಂಡತಿ ಗೆದ್ದಿದ್ದಾಳೆ. ನೀನು ಯಾವಾಗಲೂ ನನ್ನ ಮೊನಾಲಿಸಾ, ನನ್ನ ಮಿಸ್‌ ಇಂಡಿಯಾ ನಿನ್ನನ್ನು ನಾನು ಎಂದಿಗೂ ಬಿಟ್ಟುಕೊಡುವುದಿಲ್ಲ ಎಂದು ಸಂತೋಷ್‌, ಪತ್ನಿ ಬಗ್ಗೆ ಹೆಮ್ಮೆ ವ್ಯಕ್ತಪಡಿಸುತ್ತಾರೆ.

ಮಾನಸಾ ಮಗು ಇದ್ದಂತೆ, ಅವಳ ಮಾತಿನಿಂದ ಯಾರಿಗಾದರೂ ನೋವಾಗಿದ್ದಲ್ಲಿ ನಾನು ಕ್ಷಮೇ ಕೇಳುತ್ತೇನೆ ಎಂದು ಸಂತೋಷ್‌ ಕರ್ನಾಟಕದ ಜನತೆಗೆ ಸಾರಿ ಕೇಳುತ್ತಾರೆ. ನಂತರ ಸುದೀಪ್‌, ಮಾನಸಾಗೆ 1 ಲಕ್ಷ ರೂ. ಚೆಕ್‌ ಹಾಗೂ 50 ಸಾವಿರ ರೂ ಬೆಲೆಯ ಗಿಫ್ಟ್‌ ಓಚರ್‌ ನೀಡುತ್ತಾರೆ.

Whats_app_banner