ಟಿವಿಯಲ್ಲಿ ಪುಷ್ಪ 2 ಟೆಲಿಕಾಸ್ಟ್, ಅಲ್ಲು ಅರ್ಜುನ್- ರಶ್ಮಿಕಾ ಮಂದಣ್ಣ ನಟನೆಯ ಬ್ಲಾಕ್‌ಬಸ್ಟರ್ ಸಿನಿಮಾವನ್ನು ಮನೆಯಲ್ಲೇ ನೋಡಿ
Pushpa 2: ಅಲ್ಲು ಅರ್ಜುನ್–ರಶ್ಮಿಕಾ ಮಂದಣ್ಣ ನಟನೆಯ ಬ್ಲಾಕ್ ಬಸ್ಟರ್ ‘ಪುಷ್ಪಾ–2‘ ಚಿತ್ರವನ್ನು ನಿಮಗೆ ಇನ್ನೂ ನೋಡೋಕೆ ಆಗಿಲ್ವಾ, ಹಾಗಿದ್ರೆ ಈ ಭಾನುವಾರ ಸಂಜೆ ಫ್ರಿ ಮಾಡ್ಕೊಳ್ಳಿ. ಮನೆಯಲ್ಲೇ ಕೂತು ಪುಷ್ಪಾ 2 ನೋಡಬಹುದು. ಯಾವ ಚಾನೆಲ್ ಅಲ್ಲಿ, ಯಾವ ಸಮಯಕ್ಕೆ ಪ್ರಸಾರ ಆಗುತ್ತೆ ಅನ್ನೋ ವಿವರ ಇಲ್ಲಿದೆ.

ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಗಳಿಕೆ ಕಂಡು, ಥಿಯೇಟರ್ ಹಾಗೂ ಒಟಿಟಿಯಲ್ಲಿ ಪ್ರಸಾರವಾಗಿ ಸಾಕಷ್ಟು ಯಶಸ್ಸು ಗಳಿಸಿದ ಸಿನಿಮಾ ‘ಪುಷ್ಪಾ 2‘. ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ಈ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ಈ ಚಿತ್ರವನ್ನು ನಿಮಗೆ ಇನ್ನೂ ನೋಡೋಕೆ ಆಗಿಲ್ವಾ, ಹಾಗಿದ್ರೆ ಭಾನುವಾರ ಸಂಜೆ ಫ್ರಿ ಮಾಡ್ಕೊಳ್ಳಿ.
ಏಪ್ರಿಲ್ 13, ಭಾನುವಾರ ಸಂಜೆ 7 ಗಂಟೆಗೆ ಪುಷ್ಪಾ 2 ಸಿನಿಮಾ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದೆ. ಈ ಕುರಿತು ಪ್ರೋಮೊ ಹಂಚಿಕೊಂಡಿರುವ ಕಲರ್ಸ್ ಕನ್ನಡ ಇನ್ನೆರಡೇ ದಿನ ಬಾಕಿ ಎಂದಿದೆ. ಅಲ್ಲು, ರಶ್ಮಿಕಾ ನಟನೆಯ ಈ ಚಿತ್ರಕ್ಕೆ ಸುಕುಮಾರ್ ನಿರ್ದೇಶನವಿದೆ. ಇದು 2021ರಲ್ಲಿ ಬಿಡುಗೆಯಾದ ‘ಪುಷ್ಪಾ ದಿ ರೂಲ್‘ ಸಿನಿಮಾದ ಮುಂದುವರಿದ ಭಾಗವಾಗಿದೆ.
ಪುಷ್ಪಾ 2 ಸಿನಿಮಾ 2024 ಡಿಸೆಂಬರ್ 5 ರಂದು ವಿಶ್ವದಾದ್ಯಂತ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿತ್ತು. 400 ಕೋಟಿ ಬಜೆಟ್‌ನ ಈ ಚಿತ್ರವು 1600 ಕೋಟಿ ಗಳಿಕೆ ಮಾಡಿತ್ತು. ಸುಮಾರು 2 ತಿಂಗಳ ಕಾಲ ಥಿಯೇಟರ್‌ಗಳಲ್ಲಿ ಪ್ರದರ್ಶನಗೊಂಡ ಈ ಚಿತ್ರ ತೆಲುಗು, ತಮಿಳು, ಕನ್ನಡ, ಹಿಂದಿ ಹಾಗೂ ಮಲೆಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಿದೆ. ನಂತರ 2025 ಜನವರಿ 30 ರಂದು ಈ ಚಿತ್ರ ಒಟಿಟಿಯಲ್ಲಿ ಬಿಡುಗಡೆಯಾಯ್ತು. ಇದೀಗ ಟಿವಿಯಲ್ಲೂ ಹವಾ ಎಬ್ಬಿಸಲು ಬರ್ತಿದ್ದಾರೆ ಅಲ್ಲು ಅರ್ಜುನ್.
ಪುಷ್ಪಾ 2 ಸಿನಿಮಾದ ಕನ್ನಡ ಅವತರಣಿಕೆ ಕಲರ್ಸ್‌ನಲ್ಲಿ ಪ್ರಸಾರವಾಗುತ್ತಿದೆ. ಕಿರುತೆರೆಯಲ್ಲಿ ಮೊಟ್ಟ ಮೊದಲ ಬಾರಿಗೆ ಬೆಳ್ಳಿಪರದೆ ಮೇಲೆ ಅದ್ದೂರಿ ಯಶಸ್ಸು ಕಂಡ ವೈಲ್ಡ್ ಬ್ಲಾಕ್ ಬಸ್ಟರ್ ಸಿನಿಮಾ ಎಂದು ಶೀರ್ಷಿಕೆ ಬರೆದುಕೊಂಡು ಪ್ರೋಮೊ ಹಂಚಿಕೊಂಡಿದೆ ವಾಹಿನಿ.
ಏಪ್ರಿಲ್ 13ರ ಸಂಜೆ 7 ಗಂಟೆಗೆ ನೀವು ಈ ಸಿನಿಮಾವನ್ನು ಕಲರ್ಸ್ ಕನ್ನಡ ವಾಹಿನಿಯಲ್ಲಿ ವೀಕ್ಷಣೆ ಮಾಡಬಹುದು. ಇಷ್ಟೇ ಅಲ್ಲ ಶನಿವಾರ ಹಾಗೂ ಭಾನುವಾರ ಮಧ್ಯಾಹ್ನ 3 ಗಂಟೆಗೆ ಸಿನಿಮಾದ ಮೇಕಿಂಗ್ ದೃಶ್ಯಗಳನ್ನೂ ನೀವು ಈ ವಾಹಿನಿಯಲ್ಲಿ ವೀಕ್ಷಿಸಬಹುದು. ಭಾನುವಾರ ಮಧ್ಯಾಹ್ನ 3.30ಕ್ಕೆ ಪುಷ್ಪಾ ಸಿನಿಮಾ ಕೂಡ ಪ್ರಸಾರ ಆಗಲಿದೆ.
ಪುಷ್ಪಾ ದಿ ರೂಲ್ ಸಿನಿಮಾ ಬ್ಲಾಕ್ ಬ್ಲಸ್ಟರ್ ಹಿಟ್ ಆಗಿತ್ತು. ನಂತರ ಪುಷ್ಪಾ 2 ಕೂಡ ಸೂಪರ್ ಹಿಟ್ ಆಗಿದೆ. ಪುಷ್ಪಾ 3 ಕೂಡ ಬರಲಿದೆ. ಮೈತ್ರಿ ಮೂವೀ ಮೇಕರ್ಸ್ ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದು, ಚಿತ್ರದಲ್ಲಿ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಜೊತೆ ಫಹಾದ್ ಫಾಸಿಲ್, ಡಾಲಿ ಧನಂಜಯ್, ಸುನಿಲ್, ತಾರಕ್ ಪೊನ್ನಪ್ಪ, ರಾವ್ ರಮೇಶ್, ಜಗಪತಿ ಬಾಬು, ಅಜೆಯ್ ಮೊದಲಾದವರು ನಟಿಸಿದ್ದಾರೆ.
