Yajamana Serial: ಗಂಡಸರನ್ನ ದ್ವೇಷಿಸೋ ಹೆಣ್ಣಿನ ಕಥೆ; ಕಲರ್ಸ್ ಕನ್ನಡದ ಹೊಸ ಸೀರಿಯಲ್ ಯಜಮಾನ ಪ್ರಸಾರಕ್ಕೆ ಮುಹೂರ್ತ ಫಿಕ್ಸ್
Yajamana New Serial: ಕಲರ್ಸ್ ಕನ್ನಡದಲ್ಲಿ ಇನ್ನೇನು ಬಿಗ್‌ಬಾಸ್ ಮುಕ್ತಾಯವಾಗಲಿದೆ. ಇತ್ತ ಹೊಸ ಸೀರಿಯಲ್‌ಗಳೂ ವೀಕ್ಷಕರ ಎದುರು ಬರಲು ಸಜ್ಜಾಗಿವೆ. ಆ ಪೈಕಿ ಯಜಮಾನ ಸೀರಿಯಲ್ ಸಹ ಒಂದು. ಕಳೆದ ವಾರವಷ್ಟೇ ಈ ಧಾರಾವಾಹಿಯ ಮೊದಲ ಪ್ರೋಮೋ ಬಿಡುಗಡೆ ಆಗಿತ್ತು. ಈಗ ಪ್ರಸಾರದ ದಿನಾಂಕ ಮತ್ತು ಸಮಯದ ಜತೆಗೆ ಆಗಮಿಸಿದೆ.

Yajamana Serial: ಕಲರ್ಸ್ ಕನ್ನಡದಲ್ಲಿ ಸದ್ಯ ಬಿಗ್ ಬಾಸ್ ಕೊನೇ ದಿನಗಳ ಆಟ ನಡೆಯುತ್ತಿದೆ. ರಾತ್ರಿ 9:30ರಿಂದ 11 ಗಂಟೆ ವರೆಗೆ ಫಿನಾಲೆ ದಿನದ ರೋಚಕತೆ ವೀಕ್ಷಕರನ್ನು ಕುತೂಹಲಕ್ಕೆ ದೂಡಿದೆ. ಅದರಂತೆ, ಜ 25 ಮತ್ತು 26ರಂದು ಗ್ರ್ಯಾಂಡ್ ಫಿನಾಲೆ ರಂಗೇರಲಿದೆ. ಯಾರು ಸೀಸನ್ 11ರ ವಿನ್ನರ್? ಯಾರ ಕೈ ಸೇರಲಿದೆ ಬಿಗ್ ಬಾಸ್ ಟ್ರೋಫಿ? ಗೆದ್ದವರಿಗೆ ಸಿಗುವ ಮೊತ್ತ ಎಷ್ಟು? ಹೀಗೆ ಒಂದಷ್ಟು ಕೌತುಕದ ಜತೆ ಈ ಶೋ ಸಾಗುತ್ತಿದೆ. ಹೀಗಿರುವಾಗಲೇ, ಇದೇ ಶೋ ಮುಗಿದ ಬಳಿಕ 10 ಗಂಟೆಯ ಸ್ಲಾಟ್‌ಗೆ ಹೊಸ ಸೀರಿಯಲ್ ಆಗಮಿಸುತ್ತಿದೆ. ಅದೇ ಯಜಮಾನ.
ಕಳೆದ ವಾರವಷ್ಟೇ (ಜ. 12) ಯಜಮಾನ ಸೀರಿಯಲ್‌ನ ಮೊದಲ ಪ್ರೋಮೋ ಕಲರ್ಸ್ ಕನ್ನಡದಲ್ಲಿ ಬಿಡುಗಡೆ ಆಗಿತ್ತು. ಹಿರಿಯ ನಟಿ ಶ್ರುತಿ, ನಟಿ ಸಪ್ತಮಿ ಗೌಡ ಹೊಸ ಯಜಮಾನ ಸೀರಿಯಲ್‌ಅನ್ನು ನಿರೂಪಣೆ ಮಾಡಿದ್ದರು. ಶ್ರೀಮಂತಿಕೆಯ ದರ್ಪ, ಬಡವನ ಕಷ್ಟ ಅನ್ನೋ ಕಾನ್ಸೆಪ್ಟ್‌ನಲ್ಲಿ ಯಜಮಾನ ಸೀರಿಯಲ್ ಮೂಡಿಬರಲಿದೆ ಎಂಬ ಸುಳಿವು ಸಿಕ್ಕಿತ್ತು. ಈಗ ಎರಡನೇ ಪ್ರೋಮೋ ಬಿಡುಗಡೆ ಆಗಿದ್ದು, ಕಥೆ ಹೇಗಿರಲಿದೆ ಎಂಬುದನ್ನು ಪ್ರೇಕ್ಷಕರ ಮುಂದಿಟ್ಟಿದೆ ಕಲರ್ಸ್ ಕನ್ನಡ ವಾಹಿನಿ.
ಗಂಡನ್ನು ದ್ವೇಷಿಸೋ ಹೆಣ್ಣಿನ ಕಥೆ
ಜೀವನದಲ್ಲಿ ಕ್ಷಣ ಕ್ಷಣಕ್ಕೂ ಆಶ್ಚರ್ಯ ನಡೆಯುತ್ತೆ. ಅದೇ ರೀತಿ ಎಸ್ ಎಂ ಕಂಪನಿಯ ಅಕೌಂಟಂಟ್ ಜಾಬ್‌ಗೆ ಇಂಟರ್ವ್ಯೂ ನಡೆಯುತ್ತಿದೆ. ಆದರೆ, ಇದು ಝಾನ್ಸಿ ಗಂಡನ ಪೊಸಿಷನ್‌ಗೆ ನಡೆಯುತ್ತಿರುವ ಸಂದರ್ಶನ ಎಂಬುದು ಕಥಾನಾಯಕನಿಗೆ ಗೊತ್ತಾಗುತ್ತೆ. ಇತ್ತ ಐಶಾರಾಮಿ ಕಾರ್‌ನಿಂದ ಇಳಿದ ಝಾನ್ಸಿ ಕಾಲಿನ ಮೇಲೆ ಟೀ ಗ್ಲಾಸ್ ಬೀಳುತ್ತೆ. ಅದೇ ಗ್ಲಾಸ್ ಎತ್ತಿಡಲು, ಗಂಡಸರನ್ನು ನೇಮಿಸಿಕೊಂಡಿರ್ತಾಳೆ ಝಾನ್ಸಿ. "ಇಂಥ ಚಿಲ್ಲರೆ ಕೆಲಸ ಮಾಡೋಕೆ ಅಂತಾನೇ, ನಿನ್ನಂಥ ಗಂಡ ಜಾತಿಯನ್ನ ನನ್ನ ಆಫೀಸ್‌ನಲ್ಲಿ ಇಟ್ಕೊಂಡಿರೋದು" ಎಂಬ ದರ್ಪದ ಮಾತು ಝಾನ್ಸಿ ಬಾಯಿಂದ ಬರುತ್ತೆ.
ಏನಿದೆ ಪ್ರೋಮೋದಲ್ಲಿ?
"30 ದಿನದ ಪ್ರಪಂಚದ ಕಣ್ಣಿಗೆ ನೀನು ಗಂಡನಾಗಿರಬೇಕು. ತಾಳಿ ಕಟ್ಟೋದಕ್ಕೂ ಸಹ ನೀನು ನನ್ನನ್ನ ಟಚ್ ಮಾಡೋ ಹಾಗಿಲ್ಲ. ಬೆಡ್ ಅಲ್ಲ ನನ್ನ ಬೆಡ್‌ರೂಮ್‌ಗೂ ನಿನಗೆ ಎಂಟ್ರಿ ಇರಲ್ಲ. 31ನೇ ದಿನ ನೀನು ಜೀವನದಲ್ಲಿಯೇ ನೋಡಿರಲ್ಲ ಅಷ್ಟು ದುಡ್ಡು ನೋಡ್ತಿಯಾ. ಇಷ್ಟ ಇದ್ರೆ ಈ ಕಾಂಟ್ರ್ಯಾಕ್ಟ್‌ಗೆ ಸಹಿ ಮಾಡು. ಇಲ್ಲ ಅಂದ್ರೆ ಗೆಟ್ ಔಟ್" ಎಂದು ಝಾನ್ಸಿ ಆವಾಜ್ ಹಾಕ್ತಾಳೆ. ಇತ್ತ, "ಈ ಒಂದು ಸೈನ್‌ನಿಂದ ನನ್ನ ಬದುಕು ಹೇಗೆ ಬೇಕಾದರೂ ಬದಲಾಗಬಹುದು. ಏನು ಬೇಕಾದರೂ ಕಳೆದುಕೊಳ್ಳಬಹುದು. ನನ್ನ ತಂಗಿ ಮದುವೆಗೋಸ್ಕರ ಸ್ವಾಭಿಮಾನ ಕಳೆದುಕೊಳ್ಳಬೇಕಾ?" ಈ ರೀತಿಯ ಹಳಿಯ ಮೇಲೆ ಸಾಗಲಿದೆ ಯಜಮಾನ ಧಾರಾವಾಹಿ.
ಜ 27ರಿಂದ ರಾತ್ರಿ 10ಕ್ಕೆ ಯಜಮಾನ
ಗಂಡಸರನ್ನ ದ್ವೇಷಿಸೋ ಹೆಣ್ಣಿಗೆ, ಹೆಣ್ಣನ್ನ ಪೂಜಿಸೋ ಗಂಡೇ ಯಜಮಾನ… ಅನ್ನೋ ಹೊಸ ಕಾನ್ಸೆಪ್ಟ್‌ನಲ್ಲಿ ಯಜಮಾನ ಸೀರಿಯಲ್ ಮೂಡಿಬರುತ್ತಿದೆ. ಇನ್ನೇನು ಕಲರ್ಸ್ ಕನ್ನಡದಲ್ಲಿ ಜನವರಿ 27ರಿಂದ ರಾತ್ರಿ 10 ಗಂಟೆಗೆ ಈ ಸೀರಿಯಲ್ ಪ್ರಸಾರ ಆರಂಭಿಸಲಿದೆ. ಇನ್‌ಸ್ಟಾಗ್ರಾಂ ಇನ್‌ಪ್ಲುಯೆನ್ಸರ್ ಮಧುಶ್ರೀ ಈ ಧಾರಾವಾಹಿ ನಾಯಕಿಯಾಗಿ ಬಣ್ಣದ ಲೋಕಕ್ಕೆ ಎಂಟ್ರಿಕೊಡುತ್ತಿದ್ದಾರೆ. ಇದೇ ಸೀರಿಯಲ್‌ನಲ್ಲಿ ಡೆಲಿವರಿ ಬಾಯ್ ಪಾತ್ರದಲ್ಲಿ ಹರ್ಷ ಬಿಎಸ್ ಯಜಮಾನ ಧಾರಾವಾಹಿಯಲ್ಲಿದ್ದಾರೆ.

ವಿಭಾಗ