ಬಿಗ್‌ಬಾಸ್ ಕನ್ನಡ 11; ಜಗಳದ ನಡುವೆ ತುಟಿಗೆ ತುಟಿ ಒತ್ತಿದ್ರಾ ಉಗ್ರಂ ಮಂಜು ಲಾಯರ್ ಜಗದೀಶ್? ಸರ್‌ಗೆ ಸಿನಿಮಾ ಅನುಭವ ಕಡಿಮೆ ಎಂದ ನೆಟಿಜನ್ಸ್
ಬಿಗ್‌ಬಾಸ್ ಮನೆಯಲ್ಲಿ ಸ್ಪರ್ಧಿಗಳ ಅತಿರೇಕ ವರ್ತನೆ ನೋಡುಗರಿಗೆ ಮುಜುಗರ ತರಿಸಿದೆ. ಇದರ ನಡುವೆ ಉಗ್ರಂ ಮಂಜು ಹಾಗೂ ಜಗದೀಶ್ ಇಬ್ಬರೂ ತುಟಿಗೆ ತುಟಿ ಒತ್ತುತ್ತಿರುವ ವಿಡಿಯೋವೊಂದು ವೈರಲ್ ಆಗುತ್ತಿದೆ. ಬಹುಶ: ಇದನ್ನು ಡೀಪ್ ಫೇಕ್ ತಂತ್ರಜ್ಞಾನದ ಮೂಲಕ ಮಾಡಿರಬಹುದು ಎನ್ನಲಾಗುತ್ತಿದೆ.

ಬಿಗ್‌ಬಾಸ್ ಸೀಸನ್ 11 ಮೂರನೇ ವಾರ ಮುಗಿಯುತ್ತಾ ಬಂದಿದೆ. ಮನೆಯಲ್ಲಿ ಮೊದಲ ದಿನದಿಂದಲೇ ಜಗಳ ಅರಂಭಿಸಿದ್ದ ಸ್ಪರ್ಧಿಗಳು ಈಗ ಕೈ ಕೈ ಮಿಲಾಯಿಸುವ ಹಂತಕ್ಕೆ ಬಂದಿದ್ದಾರೆ. ಕಂಟೆಸ್ಟಂಟ್‌ಗಳ ಜಗಳ ನೋಡಿ ಸ್ವತ: ಬಿಗ್‌ಬಾಸ್ ಬೇಸತ್ತಿದ್ದಾರೆ. ವಾರದ ಮಧ್ಯದಲ್ಲೇ ಜಗದೀಶ್ ಹಾಗೂ ರಂಜಿತ್ ಇಬ್ಬರನ್ನು ಹೊರ ಹಾಕಿದ್ದಾರೆ. ಆದರೆ ಇಬ್ಬರೂ ಮನೆಯಿಂದ ಎಲಿಮಿನೇಟ್ ಆಗಿದ್ದಾರೋ, ಅಥವಾ ಇಲ್ಲವೋ ಶೀಘ್ರದಲ್ಲೇ ತಿಳಿಯಲಿದೆ.
ಟ್ರೋಲ್ ಆಗುತ್ತಿರುವ ಜಗದೀಶ್ ಉಗ್ರಂ ಮಂಜು
ಮೊದಲ ದಿನದಿಂದಲೂ ಜಗದೀಶ್, ಎಲ್ಲಾ ಸ್ಪರ್ಧಿಗಳೊಂದಿಗೆ ಜಗಳವಾಡುತ್ತಲೇ ಬಂದಿದ್ದಾರೆ. ಮಹಿಳಾ ಸ್ಪರ್ಧಿಗಳು ಕೂಡಾ ಜಗದೀಶ್ ಅವರ ಮಾತುಗಳಿಗೆ ಬೇಸರ ವ್ಯಕ್ತಪಡಿಸಿದ್ದಾರೆ. ಈಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋವೊಂದನ್ನು ನೋಡಿ ವೀಕ್ಷಕರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಉಗ್ರಂ ಮಂಜು ಹಾಗೂ ಜಗದೀಶ್ ಜಗಳವಾಡುವ ಸಮಯದಲ್ಲಿ ತುಟಿಗೆ ತುಟಿ ಒತ್ತಿದ್ದಾರೆ ಎನ್ನಲಾದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದೇ ವಿಚಾರಕ್ಕೆ ಜಗದೀಶ್ ಹಾಗೂ ಮಂಜು ಇಬ್ಬರೂ ಟ್ರೋಲ್ ಆಗುತ್ತಿದ್ದಾರೆ. ಜಗಳ ಆಡುವ ಗ್ಯಾಪ್‌ನಲ್ಲಿ ಇದೆಲ್ಲಾ ಯಾವಾಗ ನಡೆಯಿತಪ್ಪಾ ಎಂದು ವೀಕ್ಷಕರು ಪ್ರಶ್ನಿಸುತ್ತಿದ್ದಾರೆ. ಒಂದೆಡೆ ಸುದೀಪ್, ಇನ್ಮುಂದೆ ಬಿಗ್‌ಬಾಸ್ ನಿರೂಪಣೆ ಮಾಡುವುದಿಲ್ಲ ಎಂಬ ಸುದ್ದಿ ಚರ್ಚೆಯಾಗುತ್ತಿದ್ದರೆ ಮತ್ತೊಂದೆಡೆ, ಈ ವೈರಲ್ ವಿಡಿಯೋನದ್ದೇ ಚರ್ಚೆ ಶುರುವಾಗಿದೆ.
ಜಗದೀಶ್ ಸರ್‌ಗೆ ಸಿನಿಮಾ ಅನುಭವ ಕಡಿಮೆ ಎಂದು ಕಾಲೆಳೆದ ನೆಟಿಜನ್ಸ್
ಜಗದೀಶ್ ಹಾಗೂ ಉಗ್ರಂ ಮಂಜು ನಡುವೆ ಮಾತಿನ ಚಕಮಕಿ ತಾರಕಕ್ಕೆ ಏರಿದೆ. ಇಬ್ಬರೂ ಒಬ್ಬರ ಎದುರಿಗೆ ಒಬ್ಬರು ಬಂದು ನಿಂತಿದ್ದಾರೆ. ಆಗ ಜಗದೀಶ್, ಉಗ್ರಂ ಮಂಜು ತುಟಿಗೆ ತಮ್ಮ ತುಟಿ ಒತ್ತಿರುವ ವಿಡಿಯೋ ಟ್ರೋಲ್ ಆಗುತ್ತಿದೆ. ಇದಕ್ಕೆ ಕೆಲವರು ಕಾಮಿಡಿಯಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಸಿನಿಮಾಗಳಲ್ಲಿ ಹೀರೋ ವಿಲನ್ ಜಗಳವಾಡುವಾಗ ಮುಖಕ್ಕೆ ಮುಖ ಹತ್ತಿರ ತರುತ್ತಾರೆ. ಮಂಜಣ್ಣನಿಗೆ ಸಿನಿಮಾ ಅನುಭವ ಜಾಸ್ತಿ, ವಿಲನ್, ಹೀರೋ ಮುಖದ ಬಳಿ ಮುಖ ತಂದಾಗ ನೋಡಲು ಚೆನ್ನಾಗಿರುತ್ತದೆ. ಜಗದೀಶ್ ಸರ್ ಹಾಗೇ ಬಂದು ಸ್ಟಾಪ್ ಆಗ್ತಾರೆ ಅಂತ ಮಂಜಣ್ಣ ಸುಮ್ಮನೆ ನಿಂತಿದ್ದಾರೆ. ಅದರೆ ಜಗದೀಶ್ ಅವರಿಗೆ ಸಿನಿಮಾ ಅನುಭವ ಕಡಿಮೆ, ಅದಕ್ಕೆ ಹಾಗೆ ಮಾಡಿಬಿಟ್ಟಿದ್ಧಾರೆ, ಇಬ್ಬರೂ ಒಳ್ಳೆಯವರೇ ಎಂದು ಟ್ರೋಲರ್‌ಗಳು ಕಾಮಿಡಿ ಮಾಡುತ್ತಿದ್ದಾರೆ.
ಡೀಪ್ ಫೇಕ್ ತಂತ್ರಜ್ಞಾನದಿಂದ ತಯಾರಿಸಲಾದ ವಿಡಿಯೋ?
ಆದರೆ ಬಿಗ್‌ಬಾಸ್ ಶೋನಲ್ಲಿ ಎಂದಿಗೂ ಈರೀತಿಯ ವಿಡಿಯೋ ಪ್ರಸಾರವಾಗಿಲ್ಲ. ಬಹುಶಃ ಇದನ್ನು ಡೀಪ್ ಫೇಕ್ ತಂತ್ರಜ್ಞಾನದ ಮೂಲಕ ಸೃಷ್ಟಿಸಲಾಗಿ ಈ ರೀತಿ ಟ್ರೋಲ್ ಮಾಡಲಾಗುತ್ತಿದೆ ಎನ್ನಲಾಗುತ್ತಿದೆ. ಎಡಿಟರ್ ಒಳ್ಳೆ ಮೂಡ್‌ನಲ್ಲಿದ್ದಾರೆ, ಇಬ್ಬರೂ ಹೊರಗಡೆ ಬಂತು ಈ ವಿಡಿಯೋ ನೋಡಿದರೆ ಏನು ಮಾಡ್ಕೊತಾರೋ ಏನೋ, ಬಿಗ್‌ಬಾಸ್‌ನಲ್ಲಿ ಇದೊಂದೇ ನೋಡೋದು ಬಾಕಿ ಇತ್ತು, ಲಾಯರ್ ಜಗದೀಶ್ ಈ ವಿಡಿಯೋ ಮಾಡಿದವರ ಮೇಲೆ ಕೇಸ್ ಹಾಕಿಬಿಟ್ರೆ ಕಷ್ಟ, ಈ ವಿಡಿಯೋ ಸೃಷ್ಟಿಸಿದವರಿಗೆ ಅವಾರ್ಡ್ ಕೊಡಲೇಬೇಕು ಎಂದೆಲ್ಲಾ ನೆಟಿಜನ್ಸ್ ಈ ವಿಡಿಯೋಗೆ ಕಾಮೆಂಟ್ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಜಗದೀಶ್ ಹಾಗೂ ಮಂಜು ಈ ವಿಡಿಯೋ ಮೂಲಕ ಭಾರೀ ಟ್ರೋಲ್ ಆಗ್ತಿರೋದಂತೂ ನಿಜ.
