ಅಶೋಕನನ್ನು ತಬ್ಬಿಕೊಂಡ ಸಿಹಿ ಆತ್ಮ! ದುಷ್ಟೆ ಭಾರ್ಗವಿಯ ಅಂತ್ಯ ಇನ್ನಷ್ಟು ಸನಿಹ; ಸೀತಾ ರಾಮ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಅಶೋಕನನ್ನು ತಬ್ಬಿಕೊಂಡ ಸಿಹಿ ಆತ್ಮ! ದುಷ್ಟೆ ಭಾರ್ಗವಿಯ ಅಂತ್ಯ ಇನ್ನಷ್ಟು ಸನಿಹ; ಸೀತಾ ರಾಮ ಧಾರಾವಾಹಿ

ಅಶೋಕನನ್ನು ತಬ್ಬಿಕೊಂಡ ಸಿಹಿ ಆತ್ಮ! ದುಷ್ಟೆ ಭಾರ್ಗವಿಯ ಅಂತ್ಯ ಇನ್ನಷ್ಟು ಸನಿಹ; ಸೀತಾ ರಾಮ ಧಾರಾವಾಹಿ

ಇಷ್ಟು ದಿನ ಸಿಹಿಯ ಆತ್ಮ ಕೇವಲ ಸುಬ್ಬಿಗೆ ಮಾತ್ರ ಕಾಣಿಸುತ್ತಿತ್ತು. ಇದೀಗ ಆ ಸಿಹಿ ಆತ್ಮ ಇರುವುದು ಅಶೋಕನ ಗಮನಕ್ಕೂ ಬಂದಿದೆ. ಅಸ್ಥಿ ವಿಸರ್ಜಿಸಲು ಹೊರಟಿದ್ದ ಆತನನ್ನು ತಡೆದ ಸಿಹಿ, ಕಾರ್‌ನ ಗಾಜಿನ ಮೇಲೆ “ನಾನು ಸಿಹಿ” ಎಂದು ಬರೆಯುವ ಮೂಲಕ ಅಶೋಕನಿಗೂ ಅರೇ ಕ್ಷಣ ಅಚ್ಚರಿಗೆ ದೂಡಿದ್ದಳು.

ಅಶೋಕನನ್ನು ತಬ್ಬಿಕೊಂಡ ಸಿಹಿ ಆತ್ಮ! ದುಷ್ಟೆ ಭಾರ್ಗವಿಯ ಅಂತ್ಯ ಇನ್ನಷ್ಟು ಸನಿಹ; ಸೀತಾ ರಾಮ ಧಾರಾವಾಹಿ
ಅಶೋಕನನ್ನು ತಬ್ಬಿಕೊಂಡ ಸಿಹಿ ಆತ್ಮ! ದುಷ್ಟೆ ಭಾರ್ಗವಿಯ ಅಂತ್ಯ ಇನ್ನಷ್ಟು ಸನಿಹ; ಸೀತಾ ರಾಮ ಧಾರಾವಾಹಿ

ಜೀ ಕನ್ನಡದಲ್ಲಿ ಇನ್ನೇನು ಮೇ ತಿಂಗಳಲ್ಲಿ ಹೊಸ ಧಾರಾವಾಹಿ ʻಶ್ರೀ ರಾಘವೇಂದ್ರ ಮಹಾತ್ಮೆʼ ಶುರುವಾಗುವ ಸಾಧ್ಯತೆಗಳಿವೆ. ಆ ಸೀರಿಯಲ್‌ ಆಗಮನಕ್ಕೆ ಈಗಾಗಲೇ ಪ್ರಸಾರ ಕಾಣುವ ಸೀರಿಯಲ್‌ವೊಂದು ಮುಕ್ತಾಯವಾಗಬೇಕಿದೆ. ಆ ಧಾರಾವಾಹಿ ಯಾವುದು ಎಂಬುದಕ್ಕೆ ಸದ್ಯಕ್ಕೆ ಉತ್ತರವಿಲ್ಲ. ಆದರೆ, ಯಾವ ಸೀರಿಯಲ್‌ ಕೊನೆಯಾಗಬಹುದು ಎಂದು ಯೋಚಿಸಿದರೆ, ʻಶ್ರೀರಸ್ತು ಶುಭಮಸ್ತುʼ ಧಾರಾವಾಹಿ ಆ ಲಿಸ್ಟ್‌ನಲ್ಲಿ ಕಾಣಿಸುತ್ತವೆ. ಈಗಾಗಲೇ ಶುಭಂಗೆ ಈ ಸೀರಿಯಲ್‌ ಸನಿಹದಲ್ಲಿದೆ. ಇದೀಗ ʻಸೀತಾ ರಾಮʼ ಸೀರಿಯಲ್‌ ಎದುರಾಗಿರುವ ರೋಚಕ ಟ್ವಿಸ್ಟ್‌ಗಳನ್ನು ನೋಡಿದರೆ, ಇನ್ನೇನು ಶೀಘ್ರದಲ್ಲಿಯೇ ಈ ಧಾರಾವಾಹಿಯೂ ಅಂತ್ಯಕಾಣಲಿದೆ ಎನ್ನಲಾಗುತ್ತಿದೆ.

ಸಿಹಿ ಸತ್ತಿದ್ದಾಳೆ ಎಂಬ ವಿಚಾರವನ್ನು ಭಾರ್ಗವಿ ಚಿಕ್ಕಿ ಸೀತಾಳ ಗಮನಕ್ಕೆ ತಂದಿದ್ದಾಳೆ. ಅಪಘಾತದ ಸಮಯದಲ್ಲಿ ಏನೆಲ್ಲ ಆಯಿತು ಎಂಬುದನ್ನು ಎಳೆ ಎಳೆಯಾಗಿ ಹೇಳಿದ್ದಾಳೆ. ಭಾರ್ಗವಿಯ ಮಾತು ಕೇಳಿ, ಗಾಬರಿಯಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ ಸೀತಾ. ಇತ್ತ ಭಾರ್ಗವಿಯ ಮಾತಿಗೆ ಆಕೆಯ ಮೇಲೆಯೇ ಎರಗಿದ್ದಾನೆ ರಾಮ್.‌ ಇಷ್ಟು ದಿನ ಮುಚ್ಚಿಟ್ಟುಕೊಂಡು ಬಂದ ಸಿಹಿ ಸತ್ಯವನ್ನು ಸೀತಾಳ ಮುಂದೆ ಹೇಳಿದ ಭಾರ್ಗವಿ ವಿರುದ್ಧ ರಾಮ್‌ ಹರಿಹಾಯ್ದಿದ್ದಾನೆ. ರಾಮನ ವರ್ತನೆ ಕಂಡು ಭಾರ್ಗವಿ ಸಹ ಕೊಂಚ ನಡುಗಿದ್ದಾಳೆ. ಅಲ್ಲಿಗೆ ಸೀತಾಗೆ ಸಿಹಿ ಸತ್ತ ವಿಷಯ ತಿಳಿದಿದೆ.

ಇಷ್ಟು ದಿನ ಸಿಹಿಯ ಆತ್ಮ ಕೇವಲ ಸುಬ್ಬಿಗೆ ಮಾತ್ರ ಕಾಣಿಸುತ್ತಿತ್ತು. ಇದೀಗ ಆ ಸಿಹಿ ಆತ್ಮ ಇರುವುದು ಅಶೋಕನ ಗಮನಕ್ಕೂ ಬಂದಿದೆ. ಅಸ್ಥಿ ವಿಸರ್ಜಿಸಲು ಹೊರಟಿದ್ದ ಆತನನ್ನು ತಡೆದ ಸಿಹಿ, ಕಾರ್‌ನ ಗಾಜಿನ ಮೇಲೆ “ನಾನು ಸಿಹಿ” ಎಂದು ಬರೆಯುವ ಮೂಲಕ ಅಶೋಕನಿಗೂ ಅರೇ ಕ್ಷಣ ಅಚ್ಚರಿಗೆ ದೂಡಿದ್ದಳು. ಅಸ್ಥಿ ವಿಸರ್ಜಿಸಿದರೆ ಸಿಹಿ ಆತ್ಮಕ್ಕೆ ಮೋಕ್ಷ ಸಿಕ್ಕಿಬಿಡುತ್ತದೆ. ಆಗ ಆಕೆ ಯಾರ ಕಣ್ಣಿಗೂ ಕಾಣಿಸುವುದಿಲ್ಲ. ಇದನ್ನು ಅರಿತ ಸಿಹಿ, ಆ ಅಸ್ಥಿ ಮಡಿಕೆಯನ್ನೇ ಬಚ್ಚಿಡುತ್ತಾಳೆ. ಜತೆಗೆ ನಾನು ಆತ್ಮವಾಗಿ ನಿಮ್ಮ ಸುತ್ತಲೇ ಇದ್ದೇನೆ ಎಂಬುದನ್ನು ಅಶೋಕನಿಗೂ ಮನವರಿಕೆ ಮಾಡಿಕೊಟ್ಟಿದ್ದಾಳೆ.

ಇತ್ತ ಸಿಹಿ ಮೇಲೆ ತನ್ನ ಜೀವವನ್ನೇ ಇಟ್ಟಿದ್ದ ಅಶೋಕನಿಗೆ, ಆಕೆ ಆತ್ಮ ಆಗಿರುವ ವಿಚಾರ ತಿಳಿದಿದೆ. ಸ್ವತಃ ಸುಬ್ಬಿಯೇ ಅಶೋಕ್‌ನನ್ನು ಟೆರೆಸ್‌ ಮೇಲೆ ಕರೆತಂದು, ನಿಮಗೆ ಸಿಹಿಯನ್ನ ತೋರಿಸ್ತಿನಿ ಎಂದಿದ್ದಾಳೆ. ಅಲ್ಲಿಯೇ ಕೂತಿದ್ದಾಳೆ ನೋಡಿ ಎಂದಿದ್ದಾಳೆ ಸುಬ್ಬಿ. ಗಿಡಿದ ಬಳಿ ಹೋದ ಅಶೋಕ, ನಿನ್ನನ್ನು ಎಷ್ಟು ಮಿಸ್‌ ಮಾಡಿಕೊಳ್ತಿದ್ದೇವೆ ಗೊತ್ತಾ ಎಂದಿದ್ದಾನೆ ಅಶೋಕ. ಒಂದೇ ಒಂದು ಸಲ ನಿನ್ನನ್ನು ಹಗ್‌ ಮಾಡಬೇಕು. ಬಾ ಸಿಹಿ ಎಂದು ಕಣ್ಣಿರಿಟ್ಟಿದ್ದಾನೆ. ಕೂಡಲೇ ಅಶೋಕನ ಹತ್ತಿರ ಬಂದ ಸಿಹಿ, ಆತನನ್ನು ಅಪ್ಪಿಕೊಂಡಿದ್ದಾಳೆ. ಆ ಅನುಭವ ಅಶೋಕನಿಗೂ ಆಗಿದೆ. ಅಲ್ಲಿಗೆ ಸಿಹಿಯ ಆತ್ಮದ ಸತ್ಯ ಅಶೋಕನಿಗೂ ತಿಳಿದಿದೆ.

ಮುಂದೇನಾಗಬಹುದು?

ಭಾರ್ಗವಿಗೆ ಕೊನೆಗಾಲ ಹತ್ತಿರ ಬಂದಂತಾಗಿದೆ. ಮೊದಲಿಂದಲೂ ಭಾರ್ಗವಿ ಮೇಲೆ ಅಶೋಕನಿಗೆ ಅನುಮಾನ. ಇದೀಗ ಸಿಹಿ ಸಾವಿನ ವಿಚಾರ ಸಿಹಿಯಿಂದಲೇ ಅಶೋಕನಿಗೆ ತಿಳಿಯಲಿದೆ. ಮತ್ತೊಂದು ಕಡೆ, ರಾಮ್‌ ತಾಯಿ ವಾಣಿ ಹತ್ಯೆಯ ಸುಳಿವೂ ಚಿಕ್ಕಪ್ಪ ಸತ್ಯಜೀತ್ ಮೂಲಕ ತಿಳಿಯಲಿದೆ. ಅಲ್ಲಿಗೆ ಭಾರ್ಗವಿ ಕೊಲೆ ಆರೋಪದ ಮೇಲೆ ಜೈಲು ಸೇರುವ ಸಾಧ್ಯತೆ ಇದೆ. ಸೀತಾಗೆ ಇಬ್ಬರು ಅವಳಿ ಮಕ್ಕಳು ಎಂಬ ಸತ್ಯವೂ ಹೊರಬೀಳಲಿದೆ.

ಸೀತಾ ರಾಮ ಧಾರಾವಾಹಿ ಪಾತ್ರವರ್ಗ

ನಿರ್ದೇಶಕ: ಮಧುಸೂಧನ್‌

ಗಗನ್‌ ಚಿನ್ನಪ್ಪ: ಶ್ರೀರಾಮ (ನಾಯಕ)

ವೈಷ್ಣವಿ ಗೌಡ: ಸೀತಾ (ನಾಯಕ)

ರೀತು ಸಿಂಗ್: ಸಿಹಿ (ಸೀತಾ ಮಗಳು)

ಅಶೋಕ ಶರ್ಮಾ: ಅಶೋಕ (ಶ್ರೀರಾಮನ ಪ್ರಾಣ ಸ್ನೇಹಿತ)

ಭಾರ್ಗವಿ: ಪೂಜಾ ಲೋಕೇಶ್‌ (ಶ್ರೀರಾಮನ ಚಿಕ್ಕಮ್ಮ)

ಮುಖ್ಯಮಂತ್ರಿ ಚಂದ್ರು: ಸೂರ್ಯ ಪ್ರಕಾಶ್‌ ದೇಸಾಯಿ (ಶ್ರೀರಾಮನ ತಾತ)

ಮೇಘನಾ ಶಂಕರಪ್ಪ: ಪ್ರಿಯಾ (ಸೀತಾಳ ಸ್ನೇಹಿತೆ)

ವಿಕಾಸ್‌ ಕಾರ್‌ಗೋಡ್:‌ ಲಾಯರ್‌ ರುದ್ರಪ್ರತಾಪ್

ಸತೀಶ್‌ ಚಂದ್ರ: ಚರಣ್‌. ಡಿ

ಪೂರ್ಣಚಂದ್ರ ತೇಜಸ್ವಿ: ವಿಶ್ವಜೀತ್‌ (ಶ್ರೀರಾಮನ ಚಿಕ್ಕಪ್ಪ)

ಜಯದೇವ್‌ ಮೋಹನ್:‌ ಸತ್ಯಜೀತ್‌ (ಶ್ರೀರಾಮನ ಚಿಕ್ಕಪ್ಪ)

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.