ಜೀ ಕುಟುಂಬ ಅವಾರ್ಡ್ಸ್: ‘ಏಸಿ‘ಯಲ್ಲಿ ಅಡಗಿದೆ ಸುಖಿ ಕುಟುಂಬದ ಗುಟ್ಟು; ಜೀ ವೇದಿಕೆಯಲ್ಲಿ ಡಾ. ಸಿಎನ್ ಮಂಜುನಾಥ್ ಮಾತು
Zee Kutumba awards 2024: ಈ ವರ್ಷದ ಜೀ ಕುಟುಂಬ ಅವಾರ್ಡ್ ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಮೂರು ದಿನಗಳ ಈ ಕಾರ್ಯಕ್ರಮ ನಿನ್ನೆ (ಅಕ್ಟೋಬರ್ 25) ಟೆಲಿಕಾಸ್ಟ್ ಆಗಿದ್ದು, ಇಂದು ಹಾಗೂ ನಾಳೆ ಕೂಡ ಪ್ರಸಾರವಾಗಲಿದೆ. ಕಾರ್ಯಕ್ರಮಕ್ಕೆ ಬಂದಿದ್ದ ಖ್ಯಾತ ಹೃದ್ರೋಗ ತಜ್ಞ ಸಿಎನ್ ಮಂಜುನಾಥ್ ಸುಖಿ ಕುಟುಂಬ ಹೇಗಿರಬೇಕು ಎಂಬುದನ್ನು ಬಹಳ ಚೆಂದವಾಗಿ ವಿವರಿಸಿದ್ದಾರೆ.
ಜೀ ಕನ್ನಡ ವಾಹಿನಿಯಲ್ಲಿ ಪ್ರತಿ ವರ್ಷ ಜೀ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮ ಬಹಳ ಅದ್ಧೂರಿಯಾಗಿ ನಡೆಯುತ್ತದೆ. ಈ ವರ್ಷವು ಇದೀಗ ಜೀ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮ ನಡೆದು, ಈ ಕಾರ್ಯಕ್ರಮವು ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಜೀ ಕುಟುಂಬ ಅವಾರ್ಡ್ಸ್‌ನಲ್ಲಿ ಫಿಕ್ಷನ್ ಹಾಗೂ ನಾನ್ ಫಿಕ್ಷನ್ ವಿಭಾಗದಲ್ಲಿ ಪ್ರಶಸ್ತಿ ನೀಡಲಾಗುತ್ತದೆ.
ಈ ವರ್ಷದ ಮೊದಲ ದಿನದ ಕಾರ್ಯಕ್ರಮದಲ್ಲಿ ಅತ್ಯುತ್ತಮ ಅಮ್ಮ, ಅತ್ಯುತ್ತಮ ಮಗಳು, ನೆಚ್ಚಿನ ಅಳಿಯ, ನೆಚ್ಚಿನ ಸೊಸೆ, ನೆಚ್ಚಿನ ಸಹೋದರಿ ಇಂತಹ ಹಲವು ಪ್ರಶಸ್ತಿಗಳನ್ನು ನೀಡಲಾಗಿದೆ. ಈ ಕಾರ್ಯಕ್ರಮಕ್ಕೆ ರವಿಚಂದ್ರನ್, ಅನು ಪ್ರಭಾಕರ್, ಶರಣ್, ಡಾ.ಸಿಎನ್ ಮಂಜುನಾಥ್ ಸೇರಿದಂತೆ ಹಲವು ಗಣ್ಯರು ಬಂದಿದ್ದರು. ಈ ವೇಳೆ ನೆಚ್ಚಿನ ಅಳಿಯ ಪ್ರಶಸ್ತಿ ನೀಡಲು ವೇದಿಕೆ ಮೇಲೆ ಖ್ಯಾತ ಹೃದ್ರೋಗ ತಜ್ಞ ಡಾ. ಸಿಎನ್ ಮಂಜುನಾಥ್ ಕುಟುಂಬ ಎಂದರೆ ಏನು ಎಂಬುದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕುಟುಂಬ ಎಂದರೆ...
ಹೃದಯದ ಆರೋಗ್ಯ ಹೇಗಿರಬೇಕು ಎಂದು ನೀವು ಸಾಕಷ್ಟು ಬಾರಿ ಹೇಳಿದ್ದೀರಾ, ಆದರೆ ಕುಟುಂಬ ಆರೋಗ್ಯ ಹೇಗಿರಬೇಕು ಎಂದು ಹೇಳ್ತೀರಾ ಎಂದು ಗಾಯಕ ವಿಜಯ್ ಪ್ರಕಾಶ್ ಅವರ ಪ್ರಶ್ನೆಗೆ ಮಂಜುನಾಥ್ ಅವರು ಅರ್ಥಪೂರ್ಣವಾಗಿ ಉತ್ತರ ನೀಡಿದ್ದಾರೆ. ಅವರ ಅರ್ಥದಲ್ಲಿ ಕುಟುಂಬದ ಆರೋಗ್ಯ ಎಂದರೆ ‘ತನ್ನ ಅರ್ಥದಲ್ಲಿ ಕುಟುಂಬ ಎಂದರೆ ಕೇವಲ ರಕ್ತ ಹಂಚಿ ಹುಟ್ಟಿದವರು ಮಾತ್ರ ಕುಟುಂಬದ ಸದಸ್ಯರಾಗುವುದಿಲ್ಲ. ನಿಮ್ಮ ಕಷ್ಟದಲ್ಲಿ ನಿಮ್ಮ ಜೊತೆ ಇರುವವರು, ನಿಮ್ಮ ಕಣ್ಣೀರು ಒರೆಸುವವರು, ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕೊಡುವವರು ಅವರು ಯಾರೇ ಆಗಿದ್ದರೂ ಕೂಡ ಅವರನ್ನು ಕುಟುಂಬದ ಸದಸ್ಯರು ಎಂದು ಹೇಳುತ್ತಾರೆ.
ಏನಿದು ಏಸಿ?
ಒಂದು ಕುಟುಂಬ ಸಾಮರಸ್ಯದಿಂದ ಕೂಡಿ ಒಳ್ಳೆಯ ರೀತಿಯಲ್ಲಿ ಇರ್ಬೇಕು ಅಂದರೆ ಕುಟುಂಬದಲ್ಲಿ ಏಸಿ ಇರ್ಬೇಕಂತೆ. ಏಸಿ ಅಂದರೆ ಏರ್ ಕಂಡೀಷನರ್ ಅಲ್ಲಾ, ಎ ಅಂದ್ರೆ ಅಕಾಮಡೇಟಿವ್ ಆಗಿರಬೇಕು, ಸಿ ಅಂದ್ರೆ ಕಾಂಪ್ರಮೈಸಿಂಗ್ ನೇಚರ್ ಇರಬೇಕು. ಆವಾಗ ಒಂದು ಕುಟುಂಬ ಚೆನ್ನಾಗಿರುತ್ತದೆ’ ಎಂದು ಮಂಜುನಾಥ್ ಅವರ ಸುಂದರವಾಗಿ ಕುಟುಂಬ ವವಸ್ಥೆಯ ಬಗ್ಗೆ ಹೇಳಿದ್ದಾರೆ.
ಇವರು ನೆಚ್ಚಿನ ಅಳಿಯ ವಿಭಾಗಕ್ಕೆ ಪ್ರಶಸ್ತಿ ನೀಡಲು ವೇದಿಕೆ ಮೇಲೆ ಬಂದಿದ್ದರು. ಈ ಬಾರಿ ಜೀ ಕನ್ನಡ ಅಳಿಯ ಪ್ರಶಸ್ತಿ ಅಮೃತಧಾರೆಯ ಗೌತಮ್ ದಿವಾನ್ ಮುಡಿಗೇರಿದೆ.