ಕನ್ನಡ ಸುದ್ದಿ  /  ಮನರಂಜನೆ  /  Jyothi Rai: ಹೆಸರು ಕೆಡಿಸುವ ಹುನ್ನಾರ, ಇದು ಪ್ರೀ ಪ್ಲಾನ್‌; ಖಾಸಗಿ ವಿಡಿಯೋ ಲೀಕ್‌ ಬಗ್ಗೆ ಜ್ಯೋತಿ ರೈಗೆ ಸಿಕ್ಕಿತ್ತು ಮುನ್ಸೂಚನೆ!

Jyothi Rai: ಹೆಸರು ಕೆಡಿಸುವ ಹುನ್ನಾರ, ಇದು ಪ್ರೀ ಪ್ಲಾನ್‌; ಖಾಸಗಿ ವಿಡಿಯೋ ಲೀಕ್‌ ಬಗ್ಗೆ ಜ್ಯೋತಿ ರೈಗೆ ಸಿಕ್ಕಿತ್ತು ಮುನ್ಸೂಚನೆ!

ಕಿರುತೆರೆ ನಟಿ ಜ್ಯೋತಿ ಅವರದ್ದು ಎನ್ನಲಾದ ಖಾಸಗಿ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಲೀಕ್‌ ಆಗಿ ಸಂಚಲನ ಸೃಷ್ಟಿಸಿವೆ. ಈ ನಡುವೆ, ಈ ಪ್ರಕರಣದ ಬಗ್ಗೆ ಮೊದಲೇ ಅರಿತಿದ್ದ ಜ್ಯೋತಿ ರೈ ಸೈಬರ್‌ ಠಾಣೆಗೂ ದೂರು ನೀಡಿದ್ದರು. ಆ ದೂರಿನ ವಿವರ ಹೀಗಿದೆ.

Jyothi Rai: ಹೆಸರು ಕೆಡಿಸುವ ಹುನ್ನಾರ, ಇದು ಪ್ರೀ ಪ್ಲಾನ್‌; ಖಾಸಗಿ ವಿಡಿಯೋ ಲೀಕ್‌ ಬಗ್ಗೆ ಜ್ಯೋತಿ ರೈಗೆ ಸಿಕ್ಕಿತ್ತು ಮುನ್ಸೂಚನೆ!
Jyothi Rai: ಹೆಸರು ಕೆಡಿಸುವ ಹುನ್ನಾರ, ಇದು ಪ್ರೀ ಪ್ಲಾನ್‌; ಖಾಸಗಿ ವಿಡಿಯೋ ಲೀಕ್‌ ಬಗ್ಗೆ ಜ್ಯೋತಿ ರೈಗೆ ಸಿಕ್ಕಿತ್ತು ಮುನ್ಸೂಚನೆ!

Jyothi Rai: ಸೋಷಿಯಲ್‌ ಮೀಡಿಯಾದಲ್ಲಿ ಹಸಿ ಬಿಸಿ ಫೋಟೋಗಳನ್ನು ಶೇರ್‌ ಮಾಡುತ್ತ, ಹಲ್‌ಚಲ್‌ ಸೃಷ್ಟಿಸುತ್ತಿದ್ದ ಕಿರುತೆರೆ ನಟಿ ಜ್ಯೋತಿ ರೈ, ಇದೀಗ ಖಾಸಗಿ ವಿಡಿಯೋ ಲೀಕ್‌ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಜ್ಯೋತಿ ರೈ ಅವರದ್ದೇ ಎನ್ನುವ ಫೋಟೋಗಳು ಮತ್ತು ವಿಡಿಯೋಗಳು ವಾಟ್ಸಾಪ್‌ನಲ್ಲಿ ಸಂಚಲನ ಸೃಷ್ಟಿಸಿವೆ. ಈಗಾಗಲೇ ಕರ್ನಾಟಕದಲ್ಲಿ ಪ್ರಜ್ವಲ್‌ ರೇವಣ್ಣ ಲೈಂಗಿಕ ದೌರ್ಜನ್ಯ ಕೇಸ್‌ ಚಾಲ್ತಿಯಲ್ಲಿರುವಾಗಲೇ ಜ್ಯೋತಿ ರೈ ಖಾಸಗಿ ವಿಡಿಯೋಗಳು ಲೀಕ್‌ ಆಗಿದ್ದು ಚರ್ಚೆಗೆ ಕಾರಣವಾಗಿವೆ.

ಟ್ರೆಂಡಿಂಗ್​ ಸುದ್ದಿ

ಮೊದಲೇ ಸಿಕ್ಕಿತ್ತು ಮುನ್ಸೂಚನೆ!

ಹೀಗೆ ಜ್ಯೋತಿ ರೈ ಅವರದ್ದೇ ಎಂಬ ವಿಡಿಯೋ ಮತ್ತು ಫೋಟೋಗಳು ಹರಿದಾಡುತ್ತಿದ್ದಂತೆ, ನಟಿ ಇದ್ಯಾವುದಕ್ಕೂ ಪ್ರತಿಕ್ರಿಯೆ ನೀಡಲು ಮುಂದಾಗಿಲ್ಲ. ಆದರೆ, ಈ ರೀತಿ ಆಗುತ್ತದೆ ಎಂಬ ಅರಿವಿದ್ದು, ಮೊದಲೇ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದರು. ನನ್ನ ಕುಟುಂಬದ ಮರ್ಯಾದೆ ಹಾಳು ಮಾಡುವ ನಿಟ್ಟಿನಲ್ಲಿ ಈ ರೀತಿ ಮಾಡಲಾಗುತ್ತಿದೆ ಎಂದು ಬೇಸರದಲ್ಲಿಯೇ ಬರೆದುಕೊಂಡು, ಸೈಬರ್‌ ಕ್ರೈಂ ವಿಭಾಗಕ್ಕೂ ದೂರು ನೀಡಿದ್ದರು. ಇದೀಗ ಆ ದೂರಿನ ನಡುವೆಯೇ ಖಾಸಗಿ ಫೋಟೋಗಳು ಲೀಕ್‌ ಆಗಿವೆ.

ಹೆಸರು ಹಾಳು ಮಾಡುವ ಹುನ್ನಾರ

ಕಳೆದ ಕೆಲ ದಿನಗಳ ಹಿಂದೆಯೇ, ಈ ಬಗ್ಗೆ ಸುದೀರ್ಘವಾಗಿ ಬರೆದುಕೊಂಡಿದ್ದ ಜ್ಯೋತಿ ರೈ, "ನನಗೆ ಕೆಲವೊಂದು ಸಂದೇಶಗಳು ಮಾನಸಿಕ ಆಘಾತವನ್ನುಂಟು ಮಾಡಿವೆ. ನನ್ನನ್ನು ಮತ್ತು ನನ್ನ ಕುಟುಂಬದ ಗೌರವ, ಪ್ರತಿಷ್ಠೆಯನ್ನು ಹಾಳು ಮಾಡುವ ಉದ್ದೇಶಕ್ಕೆ ಈ ರೀತಿಯ ಕೃತ್ಯ ಎಸಗುತ್ತಿದ್ದಾರೆ. ಇವರಿಂದ ನನ್ನ ಕುಟುಂಬ ಅಪಾಯದಲ್ಲಿದೆ. ಹಾಗಾಗಿ ಇಂಥವರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ಅವರಿಂದ ನಾನು ದೊಡ್ಡ ಪ್ರಮಾಣದಲ್ಲಿ ಮಾನಹಾನಿ ಆಗಲಿದೆ. ಈ ದೂರಿನ ಮೂಲಕ ಸಂಬಂಧಪಟ್ಟ ಐಡಿಗಳನ್ನು ನಾನು ನಿಮಗೆ ನೀಡುತ್ತಿದ್ದೇನೆ" ಎಂದಿದ್ದರು.

ಈ ಫೋಟೋಗಳು ಮತ್ತು ವಿಡಿಯೋಗಳನ್ನು ನೋಡಿ ತುಂಬಾ ಭಾವುಕರಾದ ಜ್ಯೋತಿ ರೈ, ಇಂತಹ ನೀಚ ಕೃತ್ಯಗಳಲ್ಲಿ ತೊಡಗಿರುವವರನ್ನು ನಿರ್ಲಕ್ಷಿಸಿದರೆ ನನ್ನ ವೈಯಕ್ತಿಕ ಜೀವನಕ್ಕೆ ತೊಂದರೆಯಾಗುವುದಲ್ಲದೆ ವೃತ್ತಿ ಜೀವನಕ್ಕೂ ತೀವ್ರ ಧಕ್ಕೆಯಾಗುತ್ತದೆ ಎಂದಿದ್ದಾರೆ. ಅಶ್ಲೀಲ ವೀಡಿಯೊಗಳನ್ನು ಪೋಸ್ಟ್ ಮಾಡಿದ ಬಳಕೆದಾರರನ್ನು ಅವರ ಖಾತೆಗಳೊಂದಿಗೆ ಲಿಂಕ್ ಮಾಡಬೇಕು ಮತ್ತು ಅವರ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜ್ಯೋತಿ ರೈ ದೂರಿನಲ್ಲಿ ಒತ್ತಾಯಿಸಿದ್ದರು.

ತುಟಿ ಬಿಚ್ಚದ ಜ್ಯೋತಿ ರೈ

ಸೋಷಿಯಲ್‌ ಮೀಡಿಯಾದಲ್ಲಿ ಜ್ಯೋತಿ ರೈ ಅವರದ್ದೇ ಎನ್ನಲಾದ ವಿಡಿಯೋ ಮತ್ತು ಫೋಟೋಗಳು ಹರಿದಾಡುತ್ತಿವೆಯಾದರೂ, ಈ ಬಗ್ಗೆ ನಟಿ ತುಟಿ ಬಿಚ್ಚಿಲ್ಲ. ವಿಡಿಯೋ ಲೀಕ್‌ ಬಳಿಕ ತಮ್ಮದೇ ಇನ್‌ಸ್ಟಾಗ್ರಾಂನಲ್ಲಿ ಎರಡನೇ ಪತಿ ಸುಕು ಪೂರ್ವಜ್‌ ಜತೆಗಿನ ಫೋಟೋ ಶೇರ್‌ ಮಾಡಿ ಹಾರ್ಟ್‌ ಎಮೋಜಿ ಹಾಕಿ ಸ್ಟೋರಿ ಪೋಸ್ಟ್‌ ಮಾಡಿದ್ದಾರೆ. ಬಹಿರಂಗವಾಗಿಯೂ ಎಲ್ಲಿಯೂ ಈ ಘಟನೆಯ ಬಗ್ಗೆ ಅವರು ಮಾತನಾಡಿಲ್ಲ.

IPL_Entry_Point