Exclusive: ಸೀತಾ ರಾಮ ಧಾರಾವಾಹಿ ವೀಕ್ಷಕರಿಗೆ ಶಾಕ್! ನಾ ನಿನ್ನ ಬಿಡಲಾರೆ ಹೊಸ ಸೀರಿಯಲ್‌ ಪ್ರವೇಶದಿಂದ ಕಿರುತೆರೆಯಲ್ಲಿ ಅಚ್ಚರಿಯ ಬದಲಾವಣೆ
ಕನ್ನಡ ಸುದ್ದಿ  /  ಮನರಂಜನೆ  /  Exclusive: ಸೀತಾ ರಾಮ ಧಾರಾವಾಹಿ ವೀಕ್ಷಕರಿಗೆ ಶಾಕ್! ನಾ ನಿನ್ನ ಬಿಡಲಾರೆ ಹೊಸ ಸೀರಿಯಲ್‌ ಪ್ರವೇಶದಿಂದ ಕಿರುತೆರೆಯಲ್ಲಿ ಅಚ್ಚರಿಯ ಬದಲಾವಣೆ

Exclusive: ಸೀತಾ ರಾಮ ಧಾರಾವಾಹಿ ವೀಕ್ಷಕರಿಗೆ ಶಾಕ್! ನಾ ನಿನ್ನ ಬಿಡಲಾರೆ ಹೊಸ ಸೀರಿಯಲ್‌ ಪ್ರವೇಶದಿಂದ ಕಿರುತೆರೆಯಲ್ಲಿ ಅಚ್ಚರಿಯ ಬದಲಾವಣೆ

Seetha Rama Serial: ಜೀ ಕನ್ನಡದಲ್ಲಿ ಇನ್ನೊಂದು ವಾರದಲ್ಲಿ ಅಚ್ಚರಿಯ ಬದಲಾವಣೆಗಳು ಘಟಿಸಲಿವೆ. ಹೊಸ ಧಾರಾವಾಹಿ ನಾ ನಿನ್ನ ಬಿಡಲಾರೆ ಆಗಮನದಿಂದ, ಸೀತಾ ರಾಮ ಸೀರಿಯಲ್‌ ಸಮಯದಲ್ಲಿ ಬದಲಾವಣೆ ಆಗುವ ಸಾಧ್ಯತೆಗಳಿವೆ. ಈ ಬಗ್ಗೆ ಇನ್ನಷ್ಟೇ ಅಧಿಕೃತ ಘೋಷಣೆ ಹೊರಬೀಳಬೇಕಿದೆ.

Exclusive: ಸೀತಾ ರಾಮ ಧಾರಾವಾಹಿ ವೀಕ್ಷಕರಿಗೆ ಶಾಕ್!
Exclusive: ಸೀತಾ ರಾಮ ಧಾರಾವಾಹಿ ವೀಕ್ಷಕರಿಗೆ ಶಾಕ್!

Seetha Rama Serial: ಕಳೆದ ಒಂದೂವರೆ ವರ್ಷದಿಂದ ಕನ್ನಡ ಕಿರುತೆರೆ ವೀಕ್ಷಕರ ಮನಗೆದ್ದ ಸೀರಿಯಲ್‌ಗಳ ಪೈಕಿ ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ಸೀತಾ ರಾಮ ಧಾರಾವಾಹಿಯೂ ಒಂದು. ಸಿಂಗಲ್‌ ಪೇರೆಂಟ್‌ ಮದರ್‌ (ಸೀತಾ) ಮತ್ತು ಶ್ರೀಮಂತ ಉದ್ಯಮಿಯ (ಶ್ರೀರಾಮ್‌ ದೇಸಾಯಿ) ಪ್ರೀತಿಯ ಕಥೆ ಈ ಸೀತಾ ರಾಮ. ಡಯಾಬಿಟಿಕ್‌ ಪೇಷಂಟ್‌ ಸಿಹಿ ಅನ್ನೋ ಪುಟ್ಟ ಹುಡುಗಿಯೇ ಈ ಸೀರಿಯಲ್‌ನ ಸೇತುವೆ. ಇಂತಿಪ್ಪ ಸೀರಿಯಲ್‌ ಇದೀಗ, ಹಲವು ರೋಚಕ ಘಟ್ಟಗಳನ್ನು ದಾಟಿ, ಬಹುದೂರ ಸಾಗಿ ಬಂದಿದೆ. ಮದುವೆಯ ಮೂಲಕ ಸೀತಾ ಮತ್ತು ರಾಮ್‌ ಹೊಸ ಬದುಕಿಗೆ ಕಾಲಿಟ್ಟಿದ್ದು, ಒಂದು ಕಡೆಯಾದರೆ, ಅಪಘಾತದಲ್ಲಿ ಸಿಹಿಯೂ ಇಲ್ಲವಾಗಿದ್ದಾಳೆ.

ಸಿಹಿ ಇಲ್ಲದ ನೋವು ರಾಮನನ್ನು ಬಾಧಿಸಿದರೆ, ಸೀತಾ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾಳೆ. ಆಸ್ತಿಗಾಗಿ, ರಾಮ್‌ ಮತ್ತು ಸೀತಾಳನ್ನು ಬೇರೆ ಬೇರೆ ಮಾಡಬೇಕು ಅನ್ನೋ ಪ್ಲಾನ್‌ ಭಾರ್ಗವಿಯದ್ದು. ಅದರಂತೆ, ಸೀತಾಳ ಹತ್ಯೆಗೆ ಸಂಚು ರೂಪಿಸಿ, ಸಿಹಿಯನ್ನು ಬಲಿ ಪಡೆದಿದ್ದಾಳೆ. ಇತ್ತ ಇದೇ ಅಪಘಾತ ಕೊಲೆಯಲ್ಲ, ಇದೊಂದು ಪ್ಲಾನ್ಡ್‌ ಮರ್ಡರ್‌ ಎಂದು ಅಶೋಕ ಮತ್ತು ಸತ್ಯ ಚಿಕ್ಕಪ್ಪನಲ್ಲಿ ಅನುಮಾನ ಮೂಡಿದೆ. ಸಿಹಿ ಸಾವಿನ ತನಿಖೆಯನ್ನೂ ಒಟ್ಟಿಗೆ ಸೇರಿ ಆರಂಭಿಸಿದ್ದಾರೆ. ಇತ್ತ ಸಾಕ್ಷ್ಯ ನಾಶದತ್ತ ರುದ್ರಪ್ರತಾಪ್‌ಗೆ ಡೀಲ್‌ ನೀಡಿದ್ದಾಳೆ ಭಾರ್ಗವಿ.

ಎಲ್ಲಿಗೆ ಬಂದಿದೆ ಸೀತಾ ರಾಮ ಕಥೆ

ಹೀಗೆ ಒಂದಷ್ಟು ಕೌತುಕದ ಜತೆಗೆ ಸಾಗುತ್ತಿರುವ, ಇದೇ ಸೀತಾ ರಾಮ ಧಾರಾವಾಹಿಗೆ ಸಿಹಿ ಸಾವಿನ ಬಳಿಕ ಸುಬ್ಬಿ ಅಲಿಯಾಸ್‌ ಸುಬ್ಬಲಕ್ಷ್ಮೀ ಅನ್ನೋ ಹೊಸ ಪುಟ ಸೇರಿದೆ. ಅಮ್ಮನಿಲ್ಲದ, ಕಷ್ಟಗಳನ್ನೇ ನೋಡಿಕೊಂಡು, ಸರ್ಕಸ್‌ ಮಾಡುತ್ತ ಜೀವನ ಸಾಗಿಸುವ ಸುಬ್ಬಿಗೆ, ಸೀತಮ್ಮನ ಮೇಲೆ ಅದೇನೋ ಒಲವು. ಅದೇ ಸೀತಮ್ಮನ ಮನೆಗೆ ಹೋಗಿ ಆಕೆಯನ್ನೂ ಭೇಟಿ ಮಾಡಿ ಬಂದಿದ್ದಾಳೆ ಸುಬ್ಬಿ. ದೇಸಾಯಿ ಮನೆಯಲ್ಲಿಯೂ ಸಿಹಿಯನ್ನೇ ಹೋಲುವ ಹುಡುಗಿಯನ್ನು ಕರೆತಂದರೆ, ಸೀತಾ ಮೊದಲಿನಂತಾಗಬಹುದು ಎಂಬುದು ತಾತ ಸೂರ್ಯಪ್ರಕಾಶ್‌ ಮಾತು. ಆ ಹುಡುಗಿ ಸುಬ್ಬಿನೇ ಆಗ್ತಾಳಾ? ಇದೆಲ್ಲದಕ್ಕೂ ಮುಂದಿನ ಸಂಚಿಕೆಗಳಲ್ಲಿ ಉತ್ತರ ಸಿಗಲಿದೆ.

ಸೀತಾ ರಾಮ ಸೀರಿಯಲ್‌ನಲ್ಲಿ ಹೊಸ ಬದಲಾವಣೆ

ಜೀ ಕನ್ನಡದಲ್ಲಿ ಇದೀಗ ಹೊಸ ಧಾರಾವಾಹಿ ನಾ ನಿನ್ನ ಬಿಡಲಾರೆ ಇನ್ನೇನು ಜನವರಿ 27ರಿಂದ ಆರಂಭವಾಗಲಿದೆ. ಕರುಳಬಳ್ಳಿಯ ಕಾಪಾಡಲು ಹೋರಾಡೋ ಅಮ್ಮನ ‘ಆತ್ಮ’ಕತೆಯೇ ಈ ನಾ ನಿನ್ನ ಬಿಡಲಾರೆ ಧಾರಾವಾಹಿ. ಈಗಾಗಲೇ ಪ್ರೋಮೋಗಳ ಮೂಲಕವೇ ವೀಕ್ಷಕರ ಎದೆಬಡಿತ ಹೆಚ್ಚಿಸಿರುವ ಈ ಸೀರಿಯಲ್‌, ಯಾವ ಸಮಯಕ್ಕೆ ಪ್ರಸಾರವಾಗಲಿದೆ ಎಂಬುದು ಇನ್ನೂ ಅಧಿಕೃತ ಘೋಷಣೆ ಆಗಿಲ್ಲ. ಆದರೆ, HT Kannadaಕ್ಕೆ ಸಿಕ್ಕ ಕೆಲ ಸೀರಿಯಲ್‌ ಉದ್ಯಮದ ಮೂಲಗಳ ಮಾಹಿತಿ ಪ್ರಕಾರ, ಸೀತಾ ರಾಮ ಸೀರಿಯಲ್‌ನ 9:30ರ ಸ್ಲಾಟ್‌ನಲ್ಲಿ ನಾ ನಿನ್ನ ಬಿಡಲಾರೆ ಸೀರಿಯಲ್‌ ಆಗಮಿಸಲಿದೆ ಎನ್ನಲಾಗುತ್ತಿದೆ.

ಸಮಯದಲ್ಲಿ ಅದಲು ಬದಲು

ಜೀ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9:30ಕ್ಕೆ ಸೀತಾ ರಾಮ ಧಾರಾವಾಹಿ ಪ್ರಸಾರ ಕಾಣುತ್ತಿದೆ. ಇದೀಗ ಇದೇ ಸ್ಲಾಟ್‌ನಲ್ಲಿ ಹೊಸ ಸೀರಿಯಲ್‌ ನಾ ನಿನ್ನ ಬಿಡಲಾರೆ ಪ್ರಸಾರವಾಗಲಿದೆ ಎನ್ನಲಾಗುತ್ತಿದೆ. ಹಾಗಾದರೆ, ಸೀತಾ ರಾಮ ಸೀರಿಯಲ್‌ಗೆ ಯಾವ ಸಮಯ ನಿಗದಿ ಆಗಲಿದೆ? ಈ ಬಗ್ಗೆ ಜೀ ಕನ್ನಡ ವಾಹಿನಿಯೇ ಅಧಿಕೃತವಾಗಿ ಘೋಷಣೆ ಮಾಡಬೇಕಿದೆ. ಕೆಲ ತಿಂಗಳ ಹಿಂದಷ್ಟೇ ಅಣ್ಣಯ್ಯ ಸೀರಿಯಲ್‌ ಸಲುವಾಗಿ, 7:30ಕ್ಕೆ ಪ್ರಸಾರ ಕಾಣುತ್ತಿದ್ದ ಪುಟ್ಟಕ್ಕನ ಮಕ್ಕಳು ಸೀರಿಯಲ್‌ ಸಮಯ ಬದಲಾಗಿ 6:30ಕ್ಕೆ ಸ್ಲಾಟ್‌ ಬದಲಿಸಿತ್ತು. ಈಗ ಶೀಘ್ರದಲ್ಲಿ ಮತ್ತೊಂದು ಬದಲಾವಣೆಗೆ ಜೀ ಕನ್ನಡ ಸಾಕ್ಷಿಯಾಗಲಿದೆ.

Whats_app_banner