ಟೈಮ್‌ ಲೂಪ್‌ನಲ್ಲಿ ಸಿಲುಕಿಕೊಡ ಗಂಡ-ಹೆಂಡತಿ ಮಾಡಿದ್ದನ್ನೇ ಮಾಡ್ತಾರಂತೆ; 69 ಕನ್ನಡ ಸಿನಿಮಾಕ್ಕೆ ಹೃತಿಕ್ ರೋಷನ್ ಸಾಥ್‌
ಕನ್ನಡ ಸುದ್ದಿ  /  ಮನರಂಜನೆ  /  ಟೈಮ್‌ ಲೂಪ್‌ನಲ್ಲಿ ಸಿಲುಕಿಕೊಡ ಗಂಡ-ಹೆಂಡತಿ ಮಾಡಿದ್ದನ್ನೇ ಮಾಡ್ತಾರಂತೆ; 69 ಕನ್ನಡ ಸಿನಿಮಾಕ್ಕೆ ಹೃತಿಕ್ ರೋಷನ್ ಸಾಥ್‌

ಟೈಮ್‌ ಲೂಪ್‌ನಲ್ಲಿ ಸಿಲುಕಿಕೊಡ ಗಂಡ-ಹೆಂಡತಿ ಮಾಡಿದ್ದನ್ನೇ ಮಾಡ್ತಾರಂತೆ; 69 ಕನ್ನಡ ಸಿನಿಮಾಕ್ಕೆ ಹೃತಿಕ್ ರೋಷನ್ ಸಾಥ್‌

69 ಕನ್ನಡ ಸಿನಿಮಾ: ಕನ್ನಡದ 69 ಎಂಬ ಸಿನಿಮಾವನ್ನು ಅಮೆರಿಕದಲ್ಲಿ ಟೆಕಿಯಾಗಿರುವ ರಾಮ್‌ ಮಾಡುತ್ತಿದ್ದಾರೆ. ಗಂಡ-ಹೆಂಡತಿ ಟೈಮ್‌ಲೂಪ್‌ನಲ್ಲಿ ಸಿಲುಕುವ ಹಾಸ್ಯ ಕಥಾ ಹಂದರ ಈ ಸಿನಿಮಾದಲ್ಲಿದೆಯಂತೆ. ಅಂದಹಾಗೆ, ಈ ಚಿತ್ರತಂಡ ಹೃತಿಕ್‌ ರೋಷನ್‌ ಅವರನ್ನು ಭೇಟಿಯಾಗಿದೆ.

69 ಕನ್ನಡ ಸಿನಿಮಾಕ್ಕೆ ಹೃತಿಕ್ ರೋಷನ್ ಸಾಥ್‌
69 ಕನ್ನಡ ಸಿನಿಮಾಕ್ಕೆ ಹೃತಿಕ್ ರೋಷನ್ ಸಾಥ್‌

69 ಕನ್ನಡ ಸಿನಿಮಾ: ಚಿಕ್ಕಂದಿನಿಂದಲೂ ಬಾಲಿವುಡ್ ನಟ ಹೃತಿಕ್‌ರೋಷನ್ ಅಭಿಮಾನಿಯಾಗಿರುವ ರಾಮ್ ಅವರ ಚಿತ್ರಗಳನ್ನು ನೋಡುತ್ತಾ, ತಾನು ಬಣ್ಣದಲೋಕಕ್ಕೆ ಬರಬೇಕೆಂಬ ತುಡಿತ ಅಂದಿನಿಂದಲೇ ಶುರುವಾಗಿದೆ. ಶಿಕ್ಷಣ ಮುಗಿಸಿ ಅಮೇರಿಕಾದ ಕಂಪೆನಿ ಒಂದರಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಮುಂದೆ 2022ರಲ್ಲಿ ”ನಹಿ ಜ್ಞಾನೇನ ಸದೃಶಂ’ ಚಿತ್ರಕ್ಕೆ ನಾಯಕ,ಸಾಹಿತ್ಯ, ನಿರ್ದೇಶನ ಮತ್ತು ನಿರ್ಮಾಣ ಮಾಡಿದ್ದು, ಪ್ರೇಕ್ಷಕರಿಂದ ಪ್ರಶಂಸೆ ಪಡೆದುಕೊಂಡಿತು. ಇದೇ ಹುಮ್ಮಸ್ಸಿನಿಂದ ಎರಡನೇ ಅನುಭವ ಎನ್ನುವಂತೆ 69 ಸಿನಿಮಾಕ್ಕೆ ನಾಲ್ಕು ಜವಾಬ್ದಾರಿಗಳನ್ನು ಹೊತ್ತುಕೊಂಡು, ಫ್ರೆಂಡ್ಸ್ ಫಂಡಡ್ ಫಿಲಿಂಸ್ ಮತ್ತು ವ್ಯಾಸ ಸ್ಟುಡಿಯೋ ಮೂಲಕ ಬಂಡವಾಳ ಹೂಡಿದ್ದಾರೆ. ’ಒಂದು ಕಾಲದ ಕಥೆ’ ಎಂಬ ಅಡಿಬರಹ ಇಂಗ್ಲೀಷ್‌ನಲ್ಲಿ ಹೇಳಿಕೊಂಡಿದೆ.

ಮೊನ್ನೆಯಷ್ಟೇ ಹೃತಿಕ್‌ರೋಷನ್ ಚಿತ್ರೀಕರಣದ ನಿಮಿತ್ತ ಚಿಕಾಗೋಗೆ ಆಗಮಿಸಿದ್ದಾರೆ. ಇದನ್ನು ತಿಳಿದು ಅವರನ್ನು ಭೇಟಿ ಮಾಡಿದ್ದಾರೆ. ಆತ್ಮೀಯವಾಗಿ ಬರಮಾಡಿಕೊಂಡ ಹೃತಿಕ್‌ರೋಷನ್ ಎಲ್ಲವನ್ನು ಕೇಳಿ ತುಣುಕುಗಳನ್ನು ವೀಕ್ಷಿಸಿ, ತುಂಬಾ ಚೆನ್ನಾಗಿದೆ. ಎಂಜಿನಿಯರಿಂಗ್‌ ಆಗಿದ್ದರೂ ಸಮಯ ತೆಗೆದುಕೊಂಡು ಉತ್ತಮ ಸಿನಿಮಾ ಮಾಡಿದ್ದೀರಾ. ನಾನು ಇನ್ನಷ್ಟು ದಿನ ಇಲ್ಲಿಯೆ ಇರುವೆನು. ನನಗೂ ಸಿನಿಮಾ ತೋರಿಸಿ ಎಂದು ಕೋರಿಕೊಂಡು, ಶುಭಹಾರೈಸಿರುವುದು ತಂಡಕ್ಕೆ ಶಕ್ತಿ ಬಂದಿದೆಯಂತೆ.

ಸದ್ಯ ರಾಮ್ ಅವರು ಯುಎಸ್‌ಎ ಕಂಪೆನಿಯಲ್ಲಿ ಟೆಕ್ಕಿಯಾಗಿದ್ದು, ಬಿಡುವಿನ ವೇಳೆಯಲ್ಲಿ ಸಿನಿಮಾ ಮಾಡಿ ಮುಗಿಸಿದ್ದಾರೆ. ಇಡೀ ಚಿತ್ರವು ಪ್ರಯೋಗಾತ್ಮಕ ರೀತಿಯಲ್ಲಿ ಎರಡು ಪಾತ್ರಗಳ ಸುತ್ತ ಸಾಗುವುದು ವಿಶೇಷ. ಗಂಡ ಹೆಂಡತಿ ತಮಗೆ ತಿಳಿಯದೆ, ಮುಂದಿನದನ್ನು ಅರಿತುಕೊಳ್ಳದೆ ಸಮಯದ ಸರಣಿ (TIME LOOP)ದಲ್ಲಿ ಸಿಲುಕಿಕೊಂಡು ಪಡಬಾರದ ಕಷ್ಟಗಳನ್ನು ಅನುಭವಿಸುತ್ತಾರೆ. ಅಲ್ಲದೆ ಪ್ರತಿದಿನ ಮಾಡಿದ್ದನ್ನೇ ದಂಪತಿಗಳು ಪುನರಾವರ್ತಿಸಿರುತ್ತಾರೆ. ಇದರಿಂದ ಹೊರಗೆ ಬರಲು ಮಾಡಿದ ತಂತ್ರಗಳೇನು? ಕೊನೆಗೆ ಅದರಲ್ಲಿ ಸಪಲರಾಗುತ್ತಾರಾ? ಎಂಬುದನ್ನು ಹಾಸ್ಯರೂಪದಲ್ಲಿ ತೋರಿಸಲಾಗಿದೆ.

ಕನ್ನಡತಿ ಶೃತಿ ಬೇಕಲ್ ಹಾಲಿವುಡ್ ನಟಿ ಹಾಗೂ ಮಿಸಸ್. ಯುಎಸ್‌ಎ ಆಗಿ ಗುರುತಿಸಿಕೊಂಡಿದ್ದು, ಇದರಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಮೂರು ಹಾಡುಗಳಿಗೆ ಶಲೀಂ ರಾಜ್ ಸಂಗೀತ, ಹರ್ಷ ಮಹದೇಶ್ವರ್ ಛಾಯಾಗ್ರಹಣ, ಚಂದನ್.ಪಿ ಸಂಕಲನ, ರಾಮ್ ಮತ್ತು ಸುದರ್ಶನ ಸಂಭಾಷಣೆ, ಕಾರ್ಯಕಾರಿ ನಿರ್ಮಾಪಕ ಕಶ್ಯಪ್ ಕೋಲಾಚಲಂ ಅವರದಾಗಿದೆ. ಅಮೇರಿಕಾದ ರ‍್ಯಾನ್‌ಸಂ ಕಾನ್‌ಯಾನ್, ಟೆಕ್ಸಾಸ್ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಈಗಾಗಲೇ ಚಿತ್ರವು ವಿದೇಶದಲ್ಲಿ ಸದ್ದು ಮಾಡುತ್ತಿರುವುದರಿಂದ ಮೊದಲು ಅಲ್ಲಿನ ಜನರಿಗೆ ತೋರಿಸಿ, ನಂತರ ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಯೋಜನೆ ರೂಪಿಸಿಕೊಂಡಿದ್ದೇವೆ ಎನ್ನುತ್ತಾರೆ ರಾಮ್. ಕರ್ನಾಟಕದಲ್ಲಿ ಯಾವಾಗ ಬಿಡುಗಡೆ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿಲ್ಲ. 

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in