Bhagyalakshmi Serial: ಕಸದಲ್ಲಿದ್ದ ಹೂವಿನ ಬೊಕ್ಕೆಯನ್ನು ಪತ್ನಿಗೆ ನೀಡಿ ಕಂಗ್ರಾಟ್ಸ್‌ ಹೇಳಿದ ತಾಂಡವ್‌; ಭಾಗ್ಯ ಪ್ರತಿಕ್ರಿಯೆ ಹೇಗಿತ್ತು?
ಕನ್ನಡ ಸುದ್ದಿ  /  ಮನರಂಜನೆ  /  Bhagyalakshmi Serial: ಕಸದಲ್ಲಿದ್ದ ಹೂವಿನ ಬೊಕ್ಕೆಯನ್ನು ಪತ್ನಿಗೆ ನೀಡಿ ಕಂಗ್ರಾಟ್ಸ್‌ ಹೇಳಿದ ತಾಂಡವ್‌; ಭಾಗ್ಯ ಪ್ರತಿಕ್ರಿಯೆ ಹೇಗಿತ್ತು?

Bhagyalakshmi Serial: ಕಸದಲ್ಲಿದ್ದ ಹೂವಿನ ಬೊಕ್ಕೆಯನ್ನು ಪತ್ನಿಗೆ ನೀಡಿ ಕಂಗ್ರಾಟ್ಸ್‌ ಹೇಳಿದ ತಾಂಡವ್‌; ಭಾಗ್ಯ ಪ್ರತಿಕ್ರಿಯೆ ಹೇಗಿತ್ತು?

ಭಾಗ್ಯ ಸ್ಕೂಲ್‌ಗೆ ಸೇರಿರುವ ಸುದ್ದಿ ಕೇಳಿ ಬಹಳ ಖುಷಿ ಆಯ್ತು ಅದಕ್ಕೆ ಅವಳಿಗೆ ಏನಾದರೂ ತರೋಣ ಎಂದು ಹೋಗಿದ್ದೆ ಎಂದು ಸುಳ್ಳು ಹೇಳುತ್ತಾನೆ. ಹೂವಿನ ಬೊಕ್ಕೆಯನ್ನು ಭಾಗ್ಯಳ ಮುಂದೆ ಹಿಡಿಯುತ್ತಾನೆ. ಈ ವಿಷಯ ಮೊದಲೇ ಗೊತ್ತಿದ್ದ ಭಾಗ್ಯ ಈ ಹೂವನ್ನು ಎಲ್ಲಿಂದ ತಂದ್ರಿ ಎಂದು ಅನುಮಾನದಿಂದ ಪ್ರಶ್ನಿಸುತ್ತಾಳೆ.

ಕಸದಲ್ಲಿ ಬಿದ್ದಿದ್ದ ಹೂವಿನ ಬೊಕ್ಕೆಯನ್ನು ತಂದು ಪತ್ನಿಗೆ ನೀಡಿ ಕಂಗ್ರಾಟ್ಸ್‌ ಹೇಳಿದ  ತಾಂಡವ್
ಕಸದಲ್ಲಿ ಬಿದ್ದಿದ್ದ ಹೂವಿನ ಬೊಕ್ಕೆಯನ್ನು ತಂದು ಪತ್ನಿಗೆ ನೀಡಿ ಕಂಗ್ರಾಟ್ಸ್‌ ಹೇಳಿದ ತಾಂಡವ್ (PC: Colors Kannada)

ತಾಯಿ ಭಾಗ್ಯ ತನ್ನ ಸ್ಕೂಲ್‌ಗೆ ಸೇರಿರುವ ವಿಚಾರ ತನ್ವಿಗೆ ತಿಳಿದಾಯ್ತು. ಆದರೆ ತನ್ವಿ ವಿರೋಧ ವ್ಯಕ್ತಪಡಿಸುವ ಸ್ಥಿತಿಯಲ್ಲಿಲ್ಲ. ಏಕೆಂದರೆ ನಾನು ಸ್ಕೂಲ್‌ಗೆ ಚಕ್ಕರ್‌ ಹಾಕುತ್ತಿರುವ ವಿಚಾರ ಅಮ್ಮನಿಗೆ ತಿಳಿದು ಹೋಗಿದೆ. ನಾನೇನಾದರೂ ಅಮ್ಮ ಸ್ಕೂಲ್‌ ಸೇರಿದ್ದನ್ನು ಪ್ರಶ್ನಿಸಿದರೆ ಅಮ್ಮ ನನ್ನ ಬಂಡವಾಳವನ್ನು ಬಯಲಿಗೆ ತರುತ್ತಾಳೆ ಎಂಬ ಭಯ ತನ್ವಿಗೆ ಕಾಡುತ್ತಿದೆ.

ಭಾಗ್ಯ ಸ್ಕೂಲ್‌ ವಿಚಾರ ತಿಳಿದು ಕೋಪಗೊಂಡ ತಾಂಡವ್

ಅಮ್ಮ, ಅಜ್ಜಿಯ ಮೇಲಿನ ಭಯದಿಂದ ತನ್ವಿ ಅಮ್ಮನಿಗೆ ಎದುರು ಮಾತನಾಡದೆ ಮೆತ್ತಗಾಗಿದ್ದಾಳೆ. ತಾಂಡವ್‌ ಆಫೀಸಿನಿಂದ ಮನೆಗೆ ಬಂದ ಕೂಡಲೇ ಕುಸುಮಾ ಪೂಜೆಯಲ್ಲಿ ಭಾಗವಹಿಸುವಂತೆ ಹೇಳುತ್ತಾಳೆ. ಮತ್ತೇನು ಪೂಜೆ ಎಂದು ತಾಂಡವ್‌ ಗೊಂದಲಕ್ಕೆ ಒಳಗಾಗುತ್ತಾನೆ. ಪೂಜೆ ಮುಗಿಸಿದ ನಂತರ ಭಾಗ್ಯ ಎಲ್ಲರಿಗೂ ಸಿಹಿ ತಂದುಕೊಡುತ್ತಾಳೆ. ಭಾಗ್ಯ ಸ್ಕೂಲ್‌ಗೆ ಸೇರಿದ ವಿಚಾರ ತಾಂಡವ್‌ಗೆ ತಿಳಿದು ಶಾಕ್‌ ಆಗುತ್ತಾನೆ. ಕೋಪದಿಂದ ಅಲ್ಲಿಂದ ಎದ್ದು ಹೋಗುತ್ತಾನೆ. ತಾಂಡವ್‌ ವರ್ತನೆ ನೋಡಿ ಎಲ್ಲರೂ ಗಾಬರಿ ಆಗುತ್ತಾರೆ. ತಾಂಡವ್‌ ಎಲ್ಲಿಗೆ ಹೋದರೂ ನಾನು ನೋಡಿ ಬರುತ್ತೇನೆ ಎಂದು ಭಾಗ್ಯ ಆತನನ್ನು ಹಿಂಬಾಲಿಸುತ್ತಾಳೆ.‌

ನನ್ನ ಪ್ರೀತಿ ಕಳೆದುಕೊಂಡಿರಿ ಎಂದು ಮನಸಿನಲ್ಲಿ ಬೇಸರ ವ್ಯಕ್ತಪಡಿಸಿದ ಭಾಗ್ಯ

ಒಂದು ಅಂಗಡಿಯಲ್ಲಿ ಕೂಲ್‌ಡ್ರಿಂಕ್ಸ್‌ ಬಾಟಲಿಗಳನ್ನು ಕೊಳ್ಳುವ ತಾಂಡವ್‌, ಖಾಲಿ ಸೈಟ್‌ ಬಳಿ ಹೋಗಿ ಕೋಪದಿಂದ ಎಲ್ಲವನ್ನೂ ಒಡೆಯುತ್ತಾನೆ, ನೀನು ಓದುವುದು ಬೇಡ ಎಂದು ಹೇಳಿದರೂ ನೀನು ಸ್ಕೂಲ್‌ಗೆ ಸೇರಿಕೊಂಡು ನನಗೆ ಅವಮಾನ ಮಾಡುತ್ತಿದ್ದೀಯ? ನನಗೆ ನಿನ್ನನ್ನು ಕಂಡರೆ ಇಷ್ಟವಿಲ್ಲ, ಯಾವುದೇ ಕಾರಣಕ್ಕೂ ನಿನ್ನನ್ನು ಓದಲು ಬಿಡುವುದಿಲ್ಲ ಎಂದು ಬೈದುಕೊಳ್ಳುತ್ತಾ ತಾಂಡವ್‌ ಕೋಪ ವ್ಯಕ್ತಪಡಿಸುತ್ತಾನೆ, ತಾಂಡವ್‌ ವರ್ತನೆಯನ್ನು ಮರೆಯಲ್ಲಿ ನಿಂತು ಗಮನಿಸುವ ಭಾಗ್ಯ ಬೇಸರಗೊಳ್ಳುತ್ತಾಳೆ. ನೀವು ಒಡೆಯುತ್ತಿರುವುದು ನನ್ನ ಪ್ರೀತಿಯನ್ನು, ನಿಮ್ಮ ಮೇಲಿನ ಪ್ರೀತಿಯನ್ನು ಕಳೆದುಕೊಂಡಿದ್ದೀರಿ. ಇನ್ಮುಂದೆ ನಿಮಗೆಲ್ಲಾ ಪಾಠ ಕಲಿಸುತ್ತೇನೆ ಎಂದುಕೊಂಡು ಅಲ್ಲಿಂದ ಹೋಗುತ್ತಾಳೆ.

ಕಸದಲ್ಲಿ ಬಿದ್ದಿದ್ದ ಹೂವಿನ ಬೊಕ್ಕೆ

ಕಾರಿನಲ್ಲಿ ಬಂದ ವ್ಯಕ್ತಿಯೊಬ್ಬ ಕಸದಲ್ಲಿ ಬಿಸಾಡಿ ಹೋದ ಹೂವಿನ ಬೊಕ್ಕೆಯನ್ನು ತಾಂಡವ್‌ ಮನೆಗೆ ತರುತ್ತಾನೆ. ಮಗ ಎಲ್ಲಿ ಹೋಗಿದ್ದಾನೋ ಎಂದು ಗಾಬರಿಗೊಂಡ ಕುಸುಮಾ ಆತ ವಾಪಸ್‌ ಬಂದಿದ್ದನ್ನು ನೋಡಿ ಸಮಾಧಾನವಾಗುತ್ತದೆ. ಭಾಗ್ಯ ಸ್ಕೂಲ್‌ಗೆ ಸೇರಿರುವ ಸುದ್ದಿ ಕೇಳಿ ಬಹಳ ಖುಷಿ ಆಯ್ತು ಅದಕ್ಕೆ ಅವಳಿಗೆ ಏನಾದರೂ ತರೋಣ ಎಂದು ಹೋಗಿದ್ದೆ ಎಂದು ಸುಳ್ಳು ಹೇಳುತ್ತಾನೆ. ಹೂವಿನ ಬೊಕ್ಕೆಯನ್ನು ಭಾಗ್ಯಳ ಮುಂದೆ ಹಿಡಿಯುತ್ತಾನೆ. ಈ ವಿಷಯ ಮೊದಲೇ ಗೊತ್ತಿದ್ದ ಭಾಗ್ಯ ಈ ಹೂವನ್ನು ಎಲ್ಲಿಂದ ತಂದ್ರಿ ಎಂದು ಅನುಮಾನದಿಂದ ಪ್ರಶ್ನಿಸುತ್ತಾಳೆ.

ತಾಂಡವ್‌ ಬಗ್ಗೆ ಕೋಪಗೊಂಡ ಶ್ರೇಷ್ಠ ಹೆತ್ತವರು

ಮತ್ತೊಂದೆಡೆ ಶ್ರೇಷ್ಠ ಮನೆಯಲ್ಲಿ ತಾಂಡವ್‌ ವಿಚಾರ ಪ್ರಸ್ತಾಪ ಆಗುತ್ತಿದೆ. ''ನಮಗಂತೂ ಹುಡುಗ ಇಷ್ಟ ಆಗಲಿಲ್ಲ. ಅವನನ್ನು ನೋಡಿದರೆ ಎರಡು ಮಕ್ಕಳ ತಂದೆ ಇದ್ದಂತೆ ಇದ್ದಾನೆ. ಮಗಳು ಇಷ್ಟಪಟ್ಟಿದ್ದಕ್ಕೆ ವಿಧಿ ಇಲ್ಲದೆ ನಾವು ಒಪ್ಪಿದ್ದೇವೆ'' ಎಂದು ಕಾವ್ಯ ತಾಯಿ ಬಳಿ ಹೇಳುತ್ತಾರೆ. ''ತಾಂಡವ್‌ ಅಷ್ಟು ಸುಲಭವಾಗಿ ನಿನ್ನನ್ನು ಮದುವೆ ಆಗುವುದಿಲ್ಲ, ಅವನನ್ನು ಮರೆತು ನಿನ್ನ ತಂದೆ ತಾಯಿ ಹೇಳಿದ ಹುಡುಗನನ್ನು ಮದುವೆ ಆಗು'' ಎಂದು ಕಾವ್ಯ, ತನ್ನ ಗೆಳತಿ ಶ್ರೇಷ್ಠಗೆ ಬುದ್ಧಿ ಹೇಳುತ್ತಾಳೆ. ಆದರೆ ಶ್ರೇಷ್ಠ ಮಾತ್ರ ಹಟ ಬಿಡುತ್ತಿಲ್ಲ.

ತಾಂಡವ್‌ ಕೊಟ್ಟ ಹೂವಿನ ಬೊಕ್ಕೆಯನ್ನು ಭಾಗ್ಯ ಸ್ವೀಕರಿಸುತ್ತಾಳಾ? ಯಾವುದೇ ಕಾರಣಕ್ಕೂ ನಿನ್ನನ್ನು ಓದಲು ಬಿಡುವುದಿಲ್ಲ ಎಂದು ಹಟ ತೊಟ್ಟಿರುವ ತಾಂಡವ್‌, ಏನೆಲ್ಲಾ ಪ್ಲಾನ್‌ ಮಾಡಿದ್ದಾನೆ ಅನ್ನೊದು ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.

Whats_app_banner