ಸ್ವಾರ್ಥಕ್ಕಾಗಿ ಕುಸುಮಾ ಕಾಲು ಮುರಿದ ಶ್ರೇಷ್ಠ; ತಾಂಡವ್‌ ಪಾಲು ಹೆಚ್ಚು ಎಂದ ಧಾರಾವಾಹಿಪ್ರಿಯರು
ಕನ್ನಡ ಸುದ್ದಿ  /  ಮನರಂಜನೆ  /  ಸ್ವಾರ್ಥಕ್ಕಾಗಿ ಕುಸುಮಾ ಕಾಲು ಮುರಿದ ಶ್ರೇಷ್ಠ; ತಾಂಡವ್‌ ಪಾಲು ಹೆಚ್ಚು ಎಂದ ಧಾರಾವಾಹಿಪ್ರಿಯರು

ಸ್ವಾರ್ಥಕ್ಕಾಗಿ ಕುಸುಮಾ ಕಾಲು ಮುರಿದ ಶ್ರೇಷ್ಠ; ತಾಂಡವ್‌ ಪಾಲು ಹೆಚ್ಚು ಎಂದ ಧಾರಾವಾಹಿಪ್ರಿಯರು

ಶ್ರೇಷ್ಠ ತಳ್ಳಿದ ರಭಸಕ್ಕೆ ಕುಸುಮಾ ಕೆಳಗೆ ಬಿದ್ದು ಕಾಲಿಗೆ ಪೆಟ್ಟಾಗುತ್ತದೆ. ಕುಸುಮಾಗೆ ಶ್ರೇಷ್ಠ ಮೇಲೆ ಅನುಮಾನ. ಹುಡುಗನ ಮನೆಗೆ ಹೋಗಬಾರದು ಎಂಬ ಕಾರಣಕ್ಕೆ ಹೀಗೆಲ್ಲಾ ಮಾಡಿದ್ದೀಯ ಏನೇ ಆಗಲಿ ಇವತ್ತು ಹುಡುಗನ ಮನೆಗೆ ನಾನು ಬಂದೇ ಬರುತ್ತೇನೆ ಎನ್ನುತ್ತಾಳೆ.

ಭಾಗ್ಯಲಕ್ಷ್ಮಿ ಧಾರಾವಾಹಿ 270ನೇ ಎಪಿಸೋಡ್‌
ಭಾಗ್ಯಲಕ್ಷ್ಮಿ ಧಾರಾವಾಹಿ 270ನೇ ಎಪಿಸೋಡ್‌ (PC: Colors Kannada)

Bhagyalaskhmi Kannada Serial: ಶ್ರೇಷ್ಠ ಪ್ರೀತಿಸುತ್ತಿರುವ ಹುಡುಗ ಯಾರು, ಎಂಥವನು ಎಂದು ತಿಳಿಯುವ ಉದ್ದೇಶದಿಂದ ಎಲ್ಲರೂ ಕಾರಿನಲ್ಲಿ ಹೊರಡುತ್ತಾರೆ. ಆದರೆ ತನ್ನ ಅಪ್ಪ ಅಮ್ಮ ಕೂಡಾ ಜೊತೆಯಲ್ಲಿ ಬರುತ್ತಿದ್ದಾರೆ ಎಂದು ತಿಳಿದ ತಾಂಡವ್‌ ಹೇಗಾದರೂ ಮಾಡಿ ಅವರನ್ನು ನೀನು ತಡೆಯಲೇಬೇಕು ಎಂದು ಶ್ರೇಷ್ಠಗೆ ಹೇಳುತ್ತಾನೆ.

ಕುಸುಮಾಳನ್ನು ಕೆಳಗೆ ಬೀಳಿಸಿ‌ ಏನೂ ಗೊತ್ತಿಲ್ಲದಂತೆ ನಾಟಕವಾಡುವ ಶ್ರೇಷ್ಠ

ತನ್ನ ಸ್ವಾರ್ಥಕ್ಕಾಗಿ ಕೀಳು ಮಟ್ಟಕ್ಕೆ ಇಳಿಯುವ ಶ್ರೇಷ್ಠ, ಜ್ಯೂಸ್‌ ಕೊಡುವ ನೆಪದಲ್ಲಿ ಕುಸುಮಾಳನ್ನು ಕೆಳಗೆ ಬೀಳಿಸುತ್ತಾಳೆ. ಆಕೆ ತಳ್ಳಿದ ರಭಸಕ್ಕೆ ಕುಸುಮಾ ಕೆಳಗೆ ಬಿದ್ದು ಕಾಲಿಗೆ ಪೆಟ್ಟಾಗುತ್ತದೆ. ಕುಸುಮಾಗೆ ಶ್ರೇಷ್ಠ ಮೇಲೆ ಅನುಮಾನ. ಹುಡುಗನ ಮನೆಗೆ ಹೋಗಬಾರದು ಎಂಬ ಕಾರಣಕ್ಕೆ ಹೀಗೆಲ್ಲಾ ಮಾಡಿದ್ದೀಯ ಏನೇ ಆಗಲಿ ಇವತ್ತು ಹುಡುಗನ ಮನೆಗೆ ನಾನು ಬಂದೇ ಬರುತ್ತೇನೆ ಎನ್ನುತ್ತಾಳೆ. ಈ ಹೆಂಗಸನ ಕಾಲ ಮೇಲೆ ಕಲ್ಲು ಹಾಕಬೇಕಿತ್ತು. ಹಾಗೇ ಇವಳ ಬಾಯಿ ಕೂಡಾ ಮಾತನಾಡದಂತೆ ಆಗಬೇಕು ಎಂದು ಶ್ರೇಷ್ಠ ಮನಸ್ಸಿನಲ್ಲೇ ಬೈದುಕೊಳ್ಳುತ್ತಾಳೆ. ಆಸ್ಪತ್ರೆಗೆ ಹೋಗೋಣ ಬನ್ನಿ ಆಂಟಿ ಎಂದು ನಾಟಕವಾಡುತ್ತಾಳೆ.

ಕುಸುಮಾಳನ್ನು ಆ ಪರಿಸ್ಥಿತಿಯಲ್ಲಿ ಬಿಟ್ಟು ಹುಡುಗನ ಮನೆಗೆ ಹೋಗಲು ಶ್ರೇಷ್ಠ ತಂದೆ ತಾಯಿ, ಕಾವ್ಯ ತಾಯಿ ಒಪ್ಪುವುದಿಲ್ಲ. ನನ್ನ ಮಗ ಬಂದರೆ ನನಗೆ ಧೈರ್ಯ, ಅವನಿಗೆ ಫೋನ್‌ ಮಾಡಿ ಎಂದಾಗ ಶ್ರೇಷ್ಠಗೆ ಗಾಬರಿ ಆಗುತ್ತದೆ. ತಾಂಡವ್‌ ಈಗ ಬಂದರೆ ಕಥೆ ಮುಗಿಯಿತು ಎಂದುಕೊಳ್ಳುತ್ತಾಳೆ. ಧರ್ಮರಾಜ್‌ ಮಗನಿಗೆ ಫೋನ್‌ ಮಾಡಿ ಕುಸುಮಾ ಕೈಗೆ ಕೊಡುತ್ತಾರೆ. ನನಗೆ ಕಾಲು ಪೆಟ್ಟಾಗಿದೆ ನೀನು ಬಂದು ಆಸ್ಪತ್ರೆಗೆ ಕರೆದುಕೊಂಡು ಹೋಗು ಎಂದು ಮಾತನಾಡುತ್ತಿರುವಾಗ ಶ್ರೇಷ್ಠ ಫೋನ್‌ ಕಸಿದುಕೊಂಡು ತಾಂಡವ್‌ ಸರ್‌ ಅಮ್ಮನಿಗೆ ಏನೂ ಆಗಿಲ್ಲ, ಸಣ್ಣ ಪೆಟ್ಟು ಅಷ್ಟೇ ಎನ್ನುತ್ತಾಳೆ. ಶ್ರೇಷ್ಠ ವರ್ತನೆ ನೋಡಿ ಕುಸುಮಾ ಮತ್ತಷ್ಟು ಕೋಪಗೊಳ್ಳುತ್ತಾಳೆ.

ತಾಂಡವ್‌ ಮನೆಯಲ್ಲಿ ಬೆಳ್ಳಿ ಸಾಮಗ್ರಿಗಳನ್ನು ಕದಿಯುವ ಸುಂದರಿ

ಇತ್ತ ತಾಂಡವ್‌ಗೆ ಮದುವೆ ಆಗಿ ಮಕ್ಕಳಿದ್ದಾರೆ ಎಂಬ ವಿಚಾರ ಸುಂದರಿಗೆ ಗೊತ್ತಾಗುತ್ತದೆ. ಈ ವಿಚಾರವನ್ನು ಯಾರಿಗೂ ಹೇಳಬಾರದು ಎಂದರೆ ಹೆಚ್ಚಿಗೆ ದುಡ್ಡು ಕೊಡು ಎಂದು ಬ್ಲಾಕ್‌ ಮೇಲ್‌ ಮಾಡಿ ಹಣ ಕೀಳುತ್ತಾಳೆ. ತಾಂಡವ್‌ ಸುಂದರಿಗೆ ದುಡ್ಡು ಕೊಟ್ಟು ಮನೆಗೆ ಹೋಗುವಂತೆ ಹೇಳಿ ಮೇಲಿನ ಫ್ಲೋರ್‌ ಹಾಲ್‌ನಲ್ಲೇ ಉಳಿಯುತ್ತಾನೆ. ದೇವರ ಕೋಣೆ ಬಳಿ ಬರುವ ಸುಂದರಿ, ದೇವರ ಮನೆಯಲ್ಲಿ ಬೆಳ್ಳಿ ಸಾಮಗ್ರಿಗಳನ್ನು ಕದ್ದು ಒಂದು ಬ್ಯಾಗ್‌ಗೆ ಹಾಕಿಕೊಂಡು ತಾಂಡವ್‌ ಕಣ್ಣಿಗೆ ಬೀಳಬಾರದು ಎಂದು ಹಿಂಭಾಗದ ಬಾಗಿಲಿನ ಹೊರಬಂದು ಬಚ್ಚಿಡುತ್ತಾಳೆ.

ನನಗೆ ಬೇರೆ ಕೆಲಸ ಇದೆ ನೀನು ಮನೆಗೆ ಹೋಗು ಎಂದು ತಾಂಡವ್‌ ಸುಂದರಿಗೆ ಹೇಳುತ್ತಾನೆ. ಮುಂದಿನ ಬಾಗಿಲಿಂದ ಹೋದರೆ ಯಾರಾದರೂ ನೋಡುತ್ತಾರೆ. ಆದ್ದರಿಂದ ನಾನು ಹಿಂಬಾಗಿಲಿನಿಂದ ಹೋಗುತ್ತೇನೆ ಎನ್ನುತ್ತಾಳೆ. ತಾಂಡವ್‌ಗೆ ಆಕೆ ಕಳ್ಳತನ ಮಾಡಿರುವುದು ತಿಳಿಯದೆ ಹೇಗಾದರೂ ಹೋಗು ಎನ್ನುತ್ತಾನೆ. ಮೇಲಿನ ರೂಮ್‌ನಲ್ಲಿ ಮಗಳನ್ನು ಲಾಕ್‌ ಮಾಡಿರುವುದನ್ನು ಕೂಡಾ ತಾಂಡವ್‌ ಮರೆಯುತ್ತಾನೆ.

ತಾಂಡವ್‌, ಅಮ್ಮನನ್ನು ನೋಡಲು ಆಸ್ಪತ್ರೆಗೆ ಬರುತ್ತಾನಾ? ಇಬ್ಬರ ನಾಟಕ ಇನ್ನೆಷ್ಟು ದಿನ ಎಂದು ತಿಳಿಯಲು ವೀಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ. ಕುಸುಮಾ ಕಾಲು ಮುರಿಯುವಲ್ಲಿ ತಾಂಡವ್‌ ಪಾಲು ಹೆಚ್ಚಾಗಿದೆ ಎಂದು ಧಾರಾವಾಹಿಪ್ರಿಯರು ಕಾಮೆಂಟ್‌ ಮಾಡುತ್ತಿದ್ದಾರೆ.

Whats_app_banner