ಹಿಂಬಾಗಿಲಿನಿಂದ ತಪ್ಪಿಸಿಕೊಳ್ಳಲು ಯತ್ನಿಸುವ ಶ್ರೇಷ್ಠ; ತಾಂಡವ್‌ ಮೇಲೆ ಶ್ರೀವರ ಫುಲ್‌ ಗರಂ
ಕನ್ನಡ ಸುದ್ದಿ  /  ಮನರಂಜನೆ  /  ಹಿಂಬಾಗಿಲಿನಿಂದ ತಪ್ಪಿಸಿಕೊಳ್ಳಲು ಯತ್ನಿಸುವ ಶ್ರೇಷ್ಠ; ತಾಂಡವ್‌ ಮೇಲೆ ಶ್ರೀವರ ಫುಲ್‌ ಗರಂ

ಹಿಂಬಾಗಿಲಿನಿಂದ ತಪ್ಪಿಸಿಕೊಳ್ಳಲು ಯತ್ನಿಸುವ ಶ್ರೇಷ್ಠ; ತಾಂಡವ್‌ ಮೇಲೆ ಶ್ರೀವರ ಫುಲ್‌ ಗರಂ

ರೂಮ್‌ನಲ್ಲಿ ಲಾಕ್‌ ಆಗುವ ಶ್ರೇಷ್ಠ ಹಾಗೂ ತಂದೆ ತಾಯಿ ಹರಸಾಹಸ ಮಾಡಿ ರೂಮ್‌ ಲಾಕ್‌ ತೆಗೆದು ಹೊರ ಬರುತ್ತಾರೆ. ಅಲ್ಲಿ ತಾಂಡವ್‌ ಇಲ್ಲದ್ದನ್ನು ನೋಡಿ, ಮೇನ್‌ ಡೋರ್‌ ಲಾಕ್‌ ಆಗಿರುವುದನ್ನು ನೋಡಿ ಮತ್ತೆ ತಾಂಡವ್‌ ಮೇಲೆ ಕೋಪಗೊಳ್ಳುತ್ತಾರೆ. ನಿಮ್ಮ ಮಗ ಎಂಥವನು ಪದೇ ಪದೆ ಹೀಗೇಕೆ ಆಡುತ್ತಾನೆ ಎಂದು ಸುಂದರಿಯನ್ನು ಕೇಳುತ್ತಾರೆ.

ಭಾಗ್ಯಲಕ್ಷ್ಮಿ ಧಾರಾವಾಹಿ 274ನೇ ಎಪಿಸೋಡ್‌
ಭಾಗ್ಯಲಕ್ಷ್ಮಿ ಧಾರಾವಾಹಿ 274ನೇ ಎಪಿಸೋಡ್‌ (PC: Colors Kannada)

Bhagyalakshmi Kannada Serial: ಶ್ರೇಷ್ಠ ಹಾಗೂ ತಾಂಡವ್‌ ಪರಿಸ್ಥಿತಿ ಅಡ ಕತ್ತರಿಯಲ್ಲಿ ಸಿಲುಕಿದಂತೆ ಆಗಿದೆ. ತನ್ವಿಗೆ ಏನೂ ತಿಳಿಯಬಾರದು ಎಂದು ತಾಂಡವ್‌ ಮಗಳನ್ನು ರೂಮ್‌ಗೆ ಕೂಡಿ ಹಾಕಿದ್ದರಿಂದ ಆಕೆ ಪ್ರಜ್ಞೆ ತಪ್ಪುತ್ತಾಳೆ. ಕೂಡಲೇ ತಾಂಡವ್‌ ಹಾಗೂ ಭಾಗ್ಯ ಇಬ್ಬರೂ ತನ್ವಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಾರೆ.

ತಾಂಡವ್‌ನನ್ನು ತರಾಟೆಗೆ ತೆಗೆದುಕೊಳ್ಳುವ ಭಾಗ್ಯ

ಕಾರಿನಲ್ಲಿ ಭಾಗ್ಯ ತಾಂಡವ್‌ನನ್ನು ತರಾಟೆಗೆ ತೆಗೆದುಕೊಳ್ಳುತ್ತಾಳೆ. ಮನೆ ಮಕ್ಕಳಿಗಿಂತ ದೊಡ್ಡ ಜವಾಬ್ದಾರಿ ನಿಮಗೆ ಅಂತಾದ್ದೇನಿತ್ತು? ತನ್ವಿಯನ್ನು ಹೀಗೇಕೆ ಕೂಡಿ ಹಾಕಿದ್ದಿರಿ, ತನ್ವಿಗೆ ಏನಾದರೂ ಆದರೆ ನಿಮ್ಮನಂತೂ ಸುಮ್ಮನೆ ಬಿಡುವುದಿಲ್ಲ ಎನ್ನುತ್ತಾಳೆ. ಭಾಗ್ಯಳ ಮಾತಿಗೆ ತಾಂಡವ್‌ ಸರಿಯಾಗಿ ಉತ್ತರ ಕೊಡಲಾಗದೆ ತಡಬಡಾಯಿಸುತ್ತಾನೆ. ಅಷ್ಟರಲ್ಲಿ ತನ್ವಿ ಎಚ್ಚರಗೊಳ್ಳುತ್ತಾಳೆ. ಅಪ್ಪ ನನ್ನನ್ನು ರೂಮ್‌ನಲ್ಲಿ ಲಾಕ್‌ ಮಾಡಿದ್ದರು ಎಂದು ತನ್ವಿ ಹೇಳಿದಾಗ, ಅಪ್ಪ ಗಡಿಬಿಡಿಯಲ್ಲಿ ಆ ರೀತಿ ಮಾಡಿದ್ದಾರೆ, ಬೇಕಂತ ಮಾಡಿಲ್ಲ ಎಂದು ಮಗಳನ್ನು ಸಮಾಧಾನ ಮಾಡುತ್ತಾಳೆ. ಭಾಗ್ಯ ಮಾತಿಗೆ ತಾಂಡವ್‌ ಸೈಲೆಂಟ್‌ ಆಗುತ್ತಾನೆ.

ಹಿಂಬಾಗಿಲಿನಿಂದ ತಪ್ಪಿಸಿಕೊಳ್ಳಲು ಶ್ರೇಷ್ಠ ಯತ್ನ

ಇತ್ತ ರೂಮ್‌ನಲ್ಲಿ ಲಾಕ್‌ ಆಗುವ ಶ್ರೇಷ್ಠ ಹಾಗೂ ತಂದೆ ತಾಯಿ ಹರಸಾಹಸ ಮಾಡಿ ರೂಮ್‌ ಲಾಕ್‌ ತೆಗೆದು ಹೊರ ಬರುತ್ತಾರೆ. ಅಲ್ಲಿ ತಾಂಡವ್‌ ಇಲ್ಲದ್ದನ್ನು ನೋಡಿ, ಮೇನ್‌ ಡೋರ್‌ ಲಾಕ್‌ ಆಗಿರುವುದನ್ನು ನೋಡಿ ಮತ್ತೆ ತಾಂಡವ್‌ ಮೇಲೆ ಕೋಪಗೊಳ್ಳುತ್ತಾರೆ. ನಿಮ್ಮ ಮಗ ಎಂಥವನು ಪದೇ ಪದೆ ಹೀಗೇಕೆ ಆಡುತ್ತಾನೆ ಎಂದು ಸುಂದರಿಯನ್ನು ಕೇಳುತ್ತಾರೆ. ಆದರೆ ಸುಂದರಿಗೆ ಏನು ಹೇಳಬೇಕೆಂದು ತಿಳಿಯುವುದಿಲ್ಲ. ಅಷ್ಟರಲ್ಲಿ ಕಾಲಿಂಗ್‌ ಬೆಲ್‌ ರಿಂಗ್ ಆಗುತ್ತದೆ. ಹೊರಗೆ ಕುಸುಮಾ ನಿಂತಿರುವುದನ್ನು ನೋಡಿ ಶಾಕ್‌ ಆದ ಶ್ರೇಷ್ಠ ಹಿಂಬಾಗಿಲಿನಿಂದ ಹೊಗೋಣ ಎಂದು ಅಪ್ಪ ಅಮ್ಮನಿಗೆ ಹೇಳುತ್ತಾಳೆ.

ಮಗನ ಮೇಲೆ ಕುಸುಮಾ ಅಸಮಾಧಾನ

ಬಾಗಿಲು ಲಾಕ್‌ ಆಗಿರುವುದನ್ನು ನೋಡಿ, ಭಾಗ್ಯ ಇನ್ನೂ ಮನೆಗೆ ಬಂದಿಲ್ಲವೇನೋ ಎಂದು ಕುಸುಮಾ ಕೋಪಗೊಳ್ಳುತ್ತಾಳೆ. ಭಾಗ್ಯಳಿಗೆ ಫೋನ್‌ ಮಾಡಿದಾಗ ಆಕೆ ನಡೆದ ಎಲ್ಲಾ ವಿಚಾರವನ್ನೂ ಮಾವನಿಗೆ ತಿಳಿಸುತ್ತಾಳೆ. ಮಗನ ಬಗ್ಗೆ ಕುಸುಮಾ ಅಸಮಾಧಾನಗೊಳ್ಳುತ್ತಾಳೆ. ತುಳಸಿಕಟ್ಟೆಯ ಬಳಿ ಕೀ ಇಟ್ಟಿರುವುದಾಗಿ ಭಾಗ್ಯ ಹೇಳುತ್ತಾಳೆ. ಅದನ್ನು ತೆಗೆದುಕೊಳ್ಳುವಾಗ ಮನೆ ಒಳಗಿಂದ ಮಾತನಾಡುವ ಸದ್ದು ಕೇಳುತ್ತದೆ. ಯಾರೋ ಕಳ್ಳರು ಬಂದಿರಬೇಕು ಎಂದುಕೊಂಡು ಬಾಗಿಲು ತೆರೆದು ಒಳ ಹೋಗುತ್ತಾರೆ.

ಮನೆ ಒಳಗೆ ಶ್ರೇಷ್ಠ ತಂದೆ ತಾಯಿಯೊಂದಿಗೆ ಇರುವ ವಿಚಾರ ಕುಸುಮಾ ಮನೆಯವರಿಗೆ ತಿಳಿಯಲಿದ್ಯಾ? ಕುಸುಮಾ ಹೇಗೆ ಪ್ರತಿಕ್ರಿಯಿಸುತ್ತಾಳೆ ಎಂದು ತಿಳಿಯಲು ಇಂದಿನ ಎಪಿಸೋಡ್‌ ನೋಡಬೇಕು.

Whats_app_banner