Kishen Bilagali: ಚಗಳಿ ಇರುವೆ ಚಟ್ನಿ ವಿಡಿಯೋ ಹಂಚಿಕೊಂಡು, ಛೀ ಥೂ ಎನ್ನಬೇಡಿ ಇದು ಮಲೆನಾಡಿನ ಆಹಾರ ಸಂಸ್ಕೃತಿ ಎಂದ ಕಿಶನ್ ಬಿಳಗಲಿ
ಈ ಇರುವೆ ಚಟ್ನಿಯಲ್ಲಿ ಉತ್ತಮ ಪ್ರಮಾಣದ ಜಿಂಕ್, ಕ್ಯಾಲ್ಸಿಯಂ ಹಾಗೂ ಪ್ರೋಟೀನ್ ಇದೆ. ಇದು ಇಮ್ಯುನಿಟಿ ಸಿಸ್ಟಮ್‌ಗೆ ಬಹಳ ಒಳ್ಳೆಯದು. ಇದು ಮಳೆ, ಚಳಿಗಾಲದ ಕೆಮ್ಮು, ಫ್ಲೂ, ಉಸಿರಾಟದ ತೊಂದರೆ, ಶೀತ ಹಾಗೂ ಇನ್ನಿತರ ಸಮಸ್ಯೆಗಳಿಗೆ ರಾಮಬಾಣ'' ಎಂದು ಕಿಶನ್, ಚಗಳಿ ಇರುವೆ ಚಟ್ನಿಯ ಉಪಯೋಗಗಳನ್ನು ತಿಳಿಸಿದ್ದಾರೆ.
'ನಮ್ಮೂರ ಮಂದಾರ ಹೂವೇ' ಚಿತ್ರದಲ್ಲಿ ಕೆಂಪು ಇರುವ ಚಟ್ನಿ ಮಾಡುವ ದೃಶ್ಯವನ್ನು ಮೊದಲ ಬಾರಿಗೆ ನೋಡಿದ ಹಲವರು ಹೀಗೂ ತಿಂತಾರಾ? ಇಂಥದ್ದನ್ನೆಲ್ಲಾ ವಿದೇಶದವರು ಮಾತ್ರ ಅಲ್ವಾ ತಿನ್ನೋದು ಎಂದುಕೊಂಡಿದ್ದರು. ಆದರೆ ಇದನ್ನು ಮಲೆನಾಡಿನಲ್ಲಿ ಕೂಡಾ ಈ ರೀತಿಯ ಚಟ್ನಿ ಬಹಳ ಫೇಮಸ್. ಇದೀಗ ನಟ ಕಿಶನ್ ಬಿಳಗಲಿ ಕೂಡಾ ಕೆಂಪು ಇರುವ ಚಟ್ನಿ ಮಾಡಿ ಸವಿದಿದ್ದಾರೆ.
ಕೆಂಪು ಇರುವ ಚಟ್ನಿ ರೆಸಿಪಿ ವಿಡಿಯೋ ಹಂಚಿಕೊಂಡ ಕಿಶನ್
ಬಿಗ್ ಬಾಗ್ ಮಾಜಿ ಸ್ಪರ್ಧಿ ಕಿಶನ್ ಬಿಳಗಲಿ ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಇದ್ದಾರೆ. ಅನೇಕ ರೀಲ್ಸ್ ಮಾಡಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಅವರ ಡ್ಯಾನ್ಸ್‌ಗೆ ಎಷ್ಟೋ ಜನರು ಫಿದಾ ಆಗಿದ್ದಾರೆ. ಕೆಲವೊಂದು ರೆಸಿಪಿ ವಿಡಿಯೋಗಳನ್ನು ಕೂಡಾ ಕಿಶನ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಅವರು ಮಲೆನಾಡಿನ ಭಾಗದಲ್ಲಿ ಬಹಳ ಫೇಮಸ್ ಆದ ಕೆಂಪು ಇರುವ ಚಟ್ನಿ ಮಾಡುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಇದು ಮಲೆನಾಡಿನ ಆಹಾರ ಸಂಸ್ಕೃತಿ
ಈ ವಿಡಿಯೋದಲ್ಲಿ ಸ್ವತ: ಕಿಶನ್ ಮರದ ಮೇಲೆ ಹತ್ತಿ, ಕೆಂಪು ಇರುವೆ ಗೂಡನ್ನು ಕತ್ತರಿಸಿ, ಅದರೊಂದಿಗೆ ಇತರ ಸಾಮಗ್ರಿಗಳನ್ನು ಸೇರಿಸಿ ಚಟ್ನಿ ಮಾಡುತ್ತಾರೆ, ರೊಟ್ಟಿ ಮಾಡಿ ಚಗಳಿ ಇರುವೆ ಚಟ್ನಿಗೆ ತುಪ್ಪ ಸೇರಿಸಿ ತಿನ್ನುತ್ತಾರೆ. ಈ ವಿಡಿಯೋ ಹಂಚಿಕೊಂಡ ಕಿಶನ್, ''ಕಾಮೆಂಟ್ ಮಾಡುವ ಮೊದಲು ಗೂಗಲ್‌ನಲ್ಲಿ ಸರ್ಚ್ ಮಾಡಿ. ಅದರ ಪ್ರಯೋಜನಗಳನ್ನು ಮೊದಲು ತಿಳಿದುಕೊಳ್ಳಿ, ನಿಮಗೆ ಇಷ್ಟವಾಗದಿದ್ದರೆ ಸುಮ್ಮನಿದ್ದು ಬಿಡಿ, ಥೂ, ಛೀ ಎನ್ನಬೇಡಿ. ಈ ಇರುವೆ ಚಟ್ನಿಯಲ್ಲಿ ಉತ್ತಮ ಪ್ರಮಾಣದ ಜಿಂಕ್, ಕ್ಯಾಲ್ಸಿಯಂ ಹಾಗೂ ಪ್ರೋಟೀನ್ ಇದೆ. ಇದು ಇಮ್ಯುನಿಟಿ ಸಿಸ್ಟಮ್‌ಗೆ ಬಹಳ ಒಳ್ಳೆಯದು. ಇದು ಮಳೆ, ಚಳಿಗಾಲದ ಕೆಮ್ಮು, ಫ್ಲೂ, ಉಸಿರಾಟದ ತೊಂದರೆ, ಶೀತ ಹಾಗೂ ಇನ್ನಿತರ ಸಮಸ್ಯೆಗಳಿಗೆ ರಾಮಬಾಣ'' ಎಂದು ಕಿಶನ್, ಚಗಳಿrak ಇರುವೆ ಚಟ್ನಿಯ ಉಪಯೋಗಗಳನ್ನು ತಿಳಿಸಿದ್ದಾರೆ. ಎಂದಿದ್ದಾರೆ ಇಷ್ಟಾದರೂ ಕಿಶನ್ ವಿಡಿಯೋಗೆ ಬಹುತೇಕ ಜನರು ನೆಗೆಟಿವ್ ಕಾಮೆಂಟ್ ಮಾಡಿದ್ದಾರೆ.
ನೆಟಿಜನ್ಸ್ ವಿಭಿನ್ನ ಕಾಮೆಂಟ್ಸ್
ಡಿಸ್ ಲೈಕ್ ಬಟನ್ ಎಲ್ಲಿದೆ? ಅಣ್ಣಾ ಚೈನೀಸ್ ಡಯಟ್ ಫಾಲೋ ಮಾಡುತ್ತಿದ್ದಾರೆ, ನೀವು ಅಲ್ಲಿಗೇ ಹೋಗಿ, ಪ್ರೋಟೀನ್‌ಗಾಗಿ ನೀವು ಈ ಎಲ್ಲಾ ಇರುವೆಗಳನ್ನು ಸಾಯಿಸಿದ್ರಾ? ಎಂದು ಪ್ರಶ್ನಿಸಿ ಕಾಮೆಂಟ್ ಮಾಡುತ್ತಿದ್ದಾರೆ. ನೆಗೆಟಿವ್ ಕಾಮೆಂಟ್ ಮಾಡಿದವರಿಗೆ ಕ್ಲಾಸ್ ತೆಗೆದುಕೊಂಡಿರುವ ಇತರರು, ''ಎಲ್ಲೆಲ್ಲಿಂದಾನೋ ಮಳೆಗಾಲಕ್ಕೆ ಬಂದು ಮಲ್ನಾಡ್ is heaven ಅದೂ ಇದು ಅಂತ ಪೋಸ್ ಕೊಡೊರಿಗೆ ಇಲ್ಲಿನ ನಿಜವಾದ ಆಹಾರ ಪದ್ದತಿ ,ಸಂಸ್ಕೃತಿ ಬಗ್ಗೆ ಏನ್ ಗೊತ್ತಾಗ್ಬೇಕು? ಇದೂ ಕೂಡಾ ಮಲೆನಾಡ ಸೊಗಡು, ಆ ಇಂಜೆಕ್ಷನ್ ಹಾಕಿರೊ ಕೋಳಿನಾ ಯಮ್ಮಿ ಯಮ್ಮಿ ಅನ್ಕೊಂಡ್ ತಿಂತೀರ, ಚಗಳಿ ಚಟ್ನಿಗೆ ಸೀಮೆಗ್ ಇಲ್ದಿರೋ ಮಡಿವಂತಿಕೆ? 7ನೇ ಕ್ಲಾಸ್ ಕನ್ನಡ ಪುಸ್ತಕದಲ್ಲಿ ಸರ್ಕಾರಾನೇ ಇದರ ವಿಶೇಷತೆ ಬಗ್ಗೆ ಪಾಠ ಇಟ್ಟಿದಾರೆ. ಮಲೆನಾಡಿನ ಆಹಾರ ಸಂಸ್ಕೃತಿಯನ್ನು ಒಪ್ಪಿಕೊಳ್ಳಿ'' ಎಂದು ಬುದ್ಧಿ ಹೇಳಿದ್ದಾರೆ. ಇನ್ನೊಬ್ಬರು ಕಾಮೆಂಟ್ ಮಾಡಿ, ''ಪ್ರತಿದಿನ ಬಟರ್ ಚಿಕನ್, ಕೆಎಫ್‌ಸಿ ಚಿಕನ್ ತಿನ್ನೋರು ಇಲ್ಲಿ ಇರುವ ಬಗ್ಗೆ ಭಾರೀ ಕಾಳಜಿ ತೋರಿಸುತ್ತಿದ್ದಾರೆ. ಮತ್ತೊಂದು ಊರಿನ ಆಹಾರ ಸಂಸ್ಕೃತಿಗೆ ಗೌರವ ನೀಡಿ'' ಎಂದಿದ್ದಾರೆ. ಒಟ್ಟಿನಲ್ಲಿ ಕಿಶನ್ ಅವರ ಈ ವಿಡಿಯೋ ಬಹಳ ಚರ್ಚೆ ಆಗುತ್ತಿದೆ.