Puttakkana Makkalu: ಮುರಿದುಬಿದ್ದ ಮದುವೆ, ಕಂಠಿ ಸ್ನೇಹಾ ಪ್ರೀತಿ ಮುಂದುವರೆಯುತ್ತಾ; ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಟ್ವಿಸ್ಟ್
ಕಾಳಿ ಹಾಗೂ ರಾಧಾಳನ್ನು ನನ್ನ ಸ್ನೇಹಿತರೇ ಕಿಡ್ನಾಪ್ ಮಾಡಿರುವ ವಿಚಾರ ಕಂಠಿಗೆ ಮೊದಲೇ ತಿಳಿದಿರುತ್ತದೆ. ಮುಂದೆ ಕಂಠಿ ಹಾಗೂ ಸ್ನೇಹಾ ಪ್ರೀತಿ ಇದೇ ರೀತಿ ಮುಂದುವರೆಯುವುದಾ? ಕಂಠಿ ಬಂಗಾರಮ್ಮನ ಮಗ ಎಂದು ತಿಳಿದು ಕಂಠಿಯನ್ನು ಸ್ನೇಹಾ ಶಾಶ್ವತವಾಗಿ ತಿರಸ್ಕರಿಸುವಳಾ ಅನ್ನೋದು ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.
ಕಿರುತೆರೆಪ್ರಿಯರ ಮೆಚ್ಚಿನ ಧಾರಾವಾಹಿಗಳಲ್ಲಿ ಪುಟ್ಟಕ್ಕನ ಮಕ್ಕಳು ಕೂಡಾ ಒಂದು. ಈ ಧಾರಾವಾಹಿ ಆರಂಭವಾದಾಗಿನಿಂದ ಇಲ್ಲಿವರೆಗೂ ಕಥೆ ಹಾಗೂ ಪಾತ್ರಧಾರಿಗಳ ಮೂಲಕ ಸಾಕಷ್ಟು ಗಮನ ಸೆಳೆದಿದೆ. ಕಂಠಿ, ಸ್ನೇಹ, ಪುಟ್ಟಕ್ಕ ಒಂದೊಂದು ಪಾತ್ರವೂ ನೋಡುಗರಿಗೆ ಖುಷಿ ನೀಡುತ್ತಿದೆ.
ಮೊದಲ ಸ್ಥಾನದಲ್ಲಿ ಪುಟ್ಟಕ್ಕನ ಮಕ್ಕಳು
ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಮೂಲಕ ಸ್ಯಾಂಡಲ್‌ವುಡ್ ಪುಟ್ಮಲ್ಲಿ, ಹಿರಿಯ ನಟಿ ಉಮಾಶ್ರೀ ಅವರನ್ನು ಕಿರುತೆರೆಗೆ ಕರೆತಂದ ಹೆಗ್ಗಳಿಕೆ ಜೀ ವಾಹಿನಿಗೆ ಸೇರುತ್ತದೆ. ಮೊದಲ ಸಂಚಿಕೆಯಿಂದ ಇದುವರೆಗೂ ಕಥೆಯ ನಿರೂಪಣಾ ಶೈಲಿಯಲ್ಲಿ ಹಿಡಿತ ಸಾಧಿಸಿ ಜನ ಮೆಚ್ಚುಗೆ ಸಂಪಾದಿಸಿರುವುದಕ್ಕೆ ಈ ಧಾರಾವಾಹಿ ಸಾಕ್ಷಿಯಾಗಿದೆ. ಪ್ರತಿದಿನ ರಾತ್ರಿ 7.30 ಕ್ಕೆ ಪ್ರಸಾರವಾಗುವ ಈ ಪುಟ್ಟಕ್ಕನ ಮಕ್ಕಳು ಮನರಂಜನೆಯ ಮಹಾಪೂರವನ್ನೇ ಹರಿಸುತ್ತಿದೆ. ಅಷ್ಟೇ ಅಲ್ಲ, ಆರಂಭದಿಂದ ಇಲ್ಲಿಯವರೆಗೂ ಕನ್ನಡ ಮನರಂಜನಾ ಮಾರುಕಟ್ಟೆಯಲ್ಲಿ ಗರಿಷ್ಠ ರೇಟಿಂಗ್ ಗಳಿಸುವುದರ ಮೂಲಕ ನಂಬರ್ ಧಾರಾವಾಹಿಯಾಗಿ ಮುಂದುವರೆಯುತ್ತಿದೆ.
ಮುರಿದು ಬಿದ್ದ ಕಂಠಿ ಸ್ನೇಹಾ ಮದುವೆ
ಇದೀಗ , ಈ ಜನಪ್ರಿಯ ಧಾರಾವಾಹಿ ರೋಚಕ ಘಟ್ಟ ತಲುಪಿದ್ದು ಧಾರಾವಾಹಿಯ ಪ್ರಮುಖ ಪಾತ್ರಧಾರಿಗಳಾದ ಕಂಠಿ - ಸ್ನೇಹಾ ಜೋಡಿಯ ಮದುವೆ ಮುರಿದು ಬಿದ್ದಿದೆ. ಮುಂದೇನು ನಡೆಯಬಹುದು ಎಂದು ವೀಕ್ಷಕರು ಬಹಳ ಕುತೂಹಲದಿಂದ ಕಾಯುತ್ತಿದ್ದಾರೆ. ಕಂಠಿ ಸ್ನೇಹಾಳನ್ನು ಪ್ರೀತಿಸುತ್ತಿದ್ದಾಳೆ ಎಂದು ತಿಳಿದ ಕಂಠಿ ತಾಯಿ ಬಂಗಾರಮ್ಮ ಮಗನಿಗೆ ಅತ್ತೆ ಮಗಳೊಂದಿಗೆ ಮದುವೆ ನಿಶ್ಚಯಿಸುತ್ತಾಳೆ, ಇತ್ತ ಪುಟ್ಟಕ್ಕ ಕೂಡಾ ಸ್ನೇಹಾ ಮದುವೆಯನ್ನು ಭುವನ್ ಜೊತೆ ನಿಶ್ಚಯ ಮಾಡುತ್ತಾರೆ. ಇಬ್ಬರ ಮದುವೆ ಒಂದೇ ದಿನ ನಿಶ್ಚಯವಾಗಿರುತ್ತದೆ. ಆದರೆ ಭುವನ್ ಕೊನೆ ಕ್ಷಣದಲ್ಲಿ ಸ್ನೇಹಾಳನ್ನು ಮದುವೆ ಆಗಲು ನಿರಾಕರಿಸುತ್ತಾನೆ. ಇತ್ತ ಕಂಠಿಯನ್ನು ಮದುವೆ ಆಗಬೇಕಾದ ಹುಡುಗಿಯನ್ನು ಆತನ ಸ್ನೇಹಿತರೇ ಕಿಡ್ನಾಪ್ ಮಾಡಿರುತ್ತಾರೆ. ಇದರಿಂದ ಕಂಠಿ ಮದುವೆ ಕೂಡಾ ನಿಲ್ಲುತ್ತದೆ.
ಧಾರಾವಾಹಿಯಲ್ಲಿ ತಿರುವು
ಇದನ್ನು ತಿಳಿದು ಬಂಗಾರಮ್ಮ ಸ್ನೇಹಾ ಮದುವೆ ಮಂಟಪಕ್ಕೆ ಬಂದು ರಾಜೇಶ್ವರಿ ತಮ್ಮ ಕಾಳಿಯೇ ಕಂಠಿ ಮದುವೆ ಆಗಬೇಕಿದ್ದ ಹುಡುಗಿಯನ್ನು ಅಪಹರಿಸಿದ್ದಾರೆ ಎಂದು ಆರೋಪಿಸುತ್ತಾಳೆ. ಕಾಳಿ ಹಾಗೂ ರಾಧಾಳನ್ನು ನನ್ನ ಸ್ನೇಹಿತರೇ ಕಿಡ್ನಾಪ್ ಮಾಡಿರುವ ವಿಚಾರ ಕಂಠಿಗೆ ಮೊದಲೇ ತಿಳಿದಿರುತ್ತದೆ. ಮುಂದೆ ಕಂಠಿ ಹಾಗೂ ಸ್ನೇಹಾ ಪ್ರೀತಿ ಇದೇ ರೀತಿ ಮುಂದುವರೆಯುವುದಾ? ಕಂಠಿ ಬಂಗಾರಮ್ಮನ ಮಗ ಎಂದು ತಿಳಿದು ಕಂಠಿಯನ್ನು ಸ್ನೇಹಾ ಶಾಶ್ವತವಾಗಿ ತಿರಸ್ಕರಿಸುವಳಾ ಅನ್ನೋದು ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.
ಈ ಧಾರಾವಾಹಿ ಸ್ತ್ರೀಶಕ್ತಿಯನ್ನು ಪ್ರತಿನಿಧಿಸುತ್ತಿರುವುದು ಇದರ ಗೆಲುವಿಗೆ ಪ್ರಮುಖ ಕಾರಣವಾಗಿದೆ. ಪುಟ್ಟಕ್ಕ ಪತಿಯಿಂದ ತಿರಸ್ಕರಿಸ್ಪಟ್ಟ ಮಹಿಳೆ. ಒಂಟಿ ಮಹಿಳೆ ಆಗಿ ಎಲ್ಲಾ ಅಡೆತಡೆಗಳನ್ನು ದಾಟಿ ಮೂವರು ಹೆಣ್ಣು ಮಕ್ಕಳನ್ನು ಇಡೀ ಜಗತ್ತೇ ಹೆಮ್ಮೆ ಪಡುವಂತೆ ಬೆಳೆಸುತ್ತಿರುವುದು ಸ್ತ್ರೀ ಕುಲಕ್ಕೆ ಆದರ್ಶವಾಗಿದೆ . ಒಬ್ಬ ಧೈರ್ಯಶಾಲಿ ಮನೆ ಮಗಳಾಗಿ ನಾಯಕಿ ಸ್ನೇಹ , ಇಡೀ ಊರನ್ನೇ ನಡುಗಿಸುವ ಶೂರನಾಗಿ ನಾಯಕ ಕಂಠಿ ತಮ್ಮ ಮುದ್ದಾದ ಅಭಿನಯದ ಮೂಲಕ ಇಡೀ ಕರ್ನಾಟಕದ ಮನೆ ಮಾತಾಗಿದ್ದಾರೆ. ಈ ಮುದ್ದಾದ ಜೋಡಿಯ ಪ್ರೇಮಕಥೆಗೆ ಟ್ವಿಸ್ಟ್ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಕಥೆ ಯಾವ ರೀತಿ ಸಾಗಬಹುದು ಎಂದು ತಿಳಿಯಲು ವೀಕ್ಷಕರು ಕೂಡಾ ಕಾಯುತ್ತಿದ್ದಾರೆ.