Dr Bro: ರಸ್ತೆ ಬದಿಯಲ್ಲಿ ಖ್ಯಾತ ಯೂಟ್ಯೂಬರ್‌ ಡಾಕ್ಟರ್‌ ಬ್ರೋ ಭಿಕ್ಷಾಟನೆ! ಯಾವ ಧರ್ಮದವರಿಂದ ಸಿಕ್ತು ಅತಿ ಹೆಚ್ಚು ಭಿಕ್ಷೆ?
ಕನ್ನಡ ಸುದ್ದಿ  /  ಮನರಂಜನೆ  /  Dr Bro: ರಸ್ತೆ ಬದಿಯಲ್ಲಿ ಖ್ಯಾತ ಯೂಟ್ಯೂಬರ್‌ ಡಾಕ್ಟರ್‌ ಬ್ರೋ ಭಿಕ್ಷಾಟನೆ! ಯಾವ ಧರ್ಮದವರಿಂದ ಸಿಕ್ತು ಅತಿ ಹೆಚ್ಚು ಭಿಕ್ಷೆ?

Dr Bro: ರಸ್ತೆ ಬದಿಯಲ್ಲಿ ಖ್ಯಾತ ಯೂಟ್ಯೂಬರ್‌ ಡಾಕ್ಟರ್‌ ಬ್ರೋ ಭಿಕ್ಷಾಟನೆ! ಯಾವ ಧರ್ಮದವರಿಂದ ಸಿಕ್ತು ಅತಿ ಹೆಚ್ಚು ಭಿಕ್ಷೆ?

ದೇಶ ವಿದೇಶಗಳ ಅಚ್ಚರಿಯ ಗುಚ್ಛಗಳನ್ನು ಹೊತ್ತು ತರುತ್ತಿದ್ದ ಡಾ. ಬ್ರೋ ಇದೀಗ ಮಲ್ಲೇಶ್ವರಂನ ಬೀದಿಯಲ್ಲಿ ಭಿಕ್ಷಾಟನೆಗಿಳಿದಿದ್ದಾರೆ. ಅದರ ನೆನಪನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ.

Dr Bro: ರಸ್ತೆ ಬದಿಯಲ್ಲಿ ಖ್ಯಾತ ಯೂಟ್ಯೂಬರ್‌ ಡಾಕ್ಟರ್‌ ಬ್ರೋ ಭಿಕ್ಷಾಟನೆ! ಯಾವ ಧರ್ಮದವರಿಂದ ಸಿಕ್ತು ಅತಿ ಹೆಚ್ಚು ಭಿಕ್ಷೆ?
Dr Bro: ರಸ್ತೆ ಬದಿಯಲ್ಲಿ ಖ್ಯಾತ ಯೂಟ್ಯೂಬರ್‌ ಡಾಕ್ಟರ್‌ ಬ್ರೋ ಭಿಕ್ಷಾಟನೆ! ಯಾವ ಧರ್ಮದವರಿಂದ ಸಿಕ್ತು ಅತಿ ಹೆಚ್ಚು ಭಿಕ್ಷೆ?

Dr Bro Social Experiment: ಕನ್ನಡದ ಹೆಮ್ಮೆ ಎಂದೇ ಕರೆಸಿಕೊಂಡಿದ್ದಾರೆ 24 ವರ್ಷದ ಡಾ. ಬ್ರೋ ಅಲಿಯಾಸ್‌ ಗಗನ್‌ ಶ್ರೀನಿವಾಸ್.‌ ಕಿರಿ ವಯಸ್ಸಿಲ್ಲಿಯೇ ಹತ್ತಾರು ದೇಶ ಸುತ್ತಿ, ಅಲ್ಲಿನ ಅಚ್ಚರಿಯ ವಿಚಾರಗಳನ್ನು ನೋಡುಗರಿಗೆ ತಮ್ಮ ಯೂಟ್ಯೂಬ್‌ ಮೂಲಕ ವೇದಿಕೆ ಕಲ್ಪಿಸಿದ್ದರು ಡಾ. ಬ್ರೋ. ದುರ್ಗಮ ಕಾಡುಗಳಲ್ಲಿ, ಗುರುತು ಪರಿಚಯ ಇಲ್ಲದ ದೇಶದಲ್ಲಿ ಒಂಟಿಯಾಗಿ ಸುತ್ತಾಡಿ ಅಲ್ಲಿನ ಆಚಾರ ವಿಚಾರ, ಸಂಪ್ರದಾಯಗಳನ್ನು ಕಣ್ಣಿಗೆ ಕಟ್ಟುವಂತೆ ದೃಶ್ಯಗಳ ಮೂಲಕ ಕಟ್ಟಿಕೊಡುವ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಇಂಡೋನೇಷ್ಯಾದ ವಾಲ್ಕೇನೋ ಬಳಿ ಪ್ರತಿಷ್ಠಾಪಿತವಾದ ಗಣೇಶನನ್ನು ತೋರಿಸಿದ್ದರು ಗಗನ್.‌ ಇದೆಲ್ಲದ ನಡುವೆ ಭಿಕ್ಷಾಟನೆ ದಿನವನ್ನು ನೆನಪಿಸಿಕೊಂಡಿದ್ದಾರೆ.

2019ರ ನೆನಪು

ಯೂಟ್ಯೂಬ್‌ ಶುರುವಾದ ಆರಂಭದಲ್ಲಿ ಸೋಷಿಯಲ್‌ ಎಕ್ಸ್‌ಪೀರಿಮೆಂಟ್‌ಗಳಲ್ಲಿ ಡಾ. ಬ್ರೋ ತೊಡಗಿಸಿಕೊಳ್ಳುತ್ತಿದ್ದರು. ಆ ಪೈಕಿ 2019ರಲ್ಲಿ ಮಾಡಿದ ಪ್ರಯೋಗವೊಂದರ ಫೋಟೋಗಳನ್ನು ಗಗನ್‌ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿದ್ದಾರೆ. ಆ ಪ್ರಯೋಗವೇ ಒಂದು ರೀತಿಯಲ್ಲಿ ವಿಭಿನ್ನವಾಗಿದೆ. ತಲೆಗೆ ಹ್ಯಾಟ್‌ ಧರಿಸಿ, ಹರಿದ ಅಂಗಿ ತೊಟ್ಟು, ತುಂಡು ಚಡ್ಡಿ ಮೇಲೆ ಬೆಂಗಳೂರಿನ ಬೀದಿಗೆ ಭಿಕ್ಷಾಟನೆಗೆ ಇಳಿದಿದ್ದರು ಡಾ. ಬ್ರೋ. ಕೊರಳಲ್ಲಿ ಒಂದು ಬೋರ್ಡ್‌ ಹಾಕಿಕೊಂಡು, ತಮ್ಮ ಮುಂದೆ ಮೂರು ಬೌಲ್‌ಗಳನ್ನಿಟ್ಟುಕೊಂಡು ಕೂತಿದ್ದರು.

ಮಲ್ಲೇಶ್ವರಂನಲ್ಲಿ ಭಿಕ್ಷಾಟನೆ

ಬೆಂಗಳೂರಿನ ಮಲ್ಲೇಶ್ವರದಲ್ಲಿ ಈ ಎಕ್ಸ್‌ಪೀರಿಮೆಂಟ್‌ ಮಾಡಿದ್ದ ಡಾ. ಬ್ರೋ, ಯಾವ ಧರ್ಮದವರಿಂದ ಅತಿ ಹೆಚ್ಚು ಭಿಕ್ಷೆ ಸಿಗಬಹುದು ಎಂದು ಪ್ರಯೋಗ ಮಾಡಿದ್ದರು. ಯಾವ ಧರ್ಮದವರು ಭಿಕ್ಷುಕನನ್ನು ತುಂಬಾ ಕೇರ್‌ ಮಾಡುತ್ತಾರೆ ಎಂದು ಬರೆದ ಫಲಕವನ್ನು ಕೊರಳಿಗೆ ಹಾಕಿಕೊಂಡಿದ್ದರು. ತಮ್ಮ ಮುಂದೆ ಮೂರು ಬೌಲ್‌ಗಳನ್ನಿಟ್ಟುಕೊಂಡು, ಹಿಂದೂ, ಮುಸ್ಲಿಂ, ಕ್ರೈಸ್ತ ಎಂದು ಬರೆದಿದ್ದರು. 2019ರ ಮೇ 28ರಂದು ಈ ಎಕ್ಸ್‌ಪೀರಿಮೆಂಟ್‌ ಮಾಡಿದ್ದರಿಂದ ಅಂದಿನ ಫೋಟೋಗಳನ್ನು ಗಗನ್‌ ಶೇರ್‌ ಮಾಡಿದ್ದಾರೆ.

ಸೋಷಿಯಲ್‌ ಎಕ್ಸ್‌ಪಿರಿಮೆಂಟ್‌

ಬರೀ ಇದಷ್ಟೇ ಅಲ್ಲದೇ ಈ ಬೌಲ್‌ ಬಳಿ ಭಾರತ, ಕರ್ನಾಟಕ ಎಂಬ ಬೋರ್ಡ್ ಹಾಕಿಯೂ ಸೋಷಿಯಲ್‌ ಎಕ್ಸ್‌ಪೀರಿಮೆಂಟ್‌ ಮಾಡಿದ್ದರು. ಅಲ್ಲಿಯೂ ಎಷ್ಟೋ ಮಂದಿ ಭಾರತ ಮತ್ತು ಕರ್ನಾಟಕ ಎಂದಿದ್ದ ಬೌಲ್‌ಗೆ ಹಣ ಹಾಕಿದ್ದರು. ಇನ್ನು ಕೆಲವರು ಅಚ್ಚರಿಯ ರೀತಿಯಲ್ಲಿ ನೋಡಿ, ಏನಿದು ಎಂದು ಗಗನ್‌ ಅವರಿಂದಲೇ ವಿವರಣೆ ಪಡೆದಿದ್ದರು. ಕೆಲವರು ಈ ಬಗ್ಗೆ ಚಕಾರ ಎತ್ತಿದರೆ, ಇನ್ನು ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದರಾಚೆಗೆ ಕೆಲವರು ಡಾ. ಬ್ರೋ ಅವರ ಫೋಟೋ ಕ್ಲಿಕ್‌ ಮಾಡಿದ್ದರು. ಪೊಲೀಸರೂ ಸಹ ತಮಗೇನು ಗೊತ್ತೆ ಇಲ್ಲ ಎಂಬಂತೆ, ಹಾದು ಹೋದರು.

ಯಾವ ಧರ್ಮದಿಂದ ಹೆಚ್ಚು ಭಿಕ್ಷೆ ಸಿಕ್ತು?

ವಿಡಿಯೋ ಮುಗಿದ ಬಳಿಕ ವಿವರಣೆ ನೀಡಿದ್ದ ಡಾಕ್ಟರ್‌ ಬ್ರೋ, 21ನೇ ಶತಮಾನದಲ್ಲಿದ್ದೇವೆ. ಕೇವಲ ಶೇ. 5ರಷ್ಟು ಜನ ಮಾತ್ರ ಜಾತಿ ಕಡೆಗೆ ಒಲವಿದ್ದಾರೆ. ಇನ್ನುಳಿದ ಶೇ. 95 ಜನ ನಾನು ಭಾರತೀಯ ಎಂದು ಹೇಳಿಕೊಂಡಿದ್ದಾರೆ. ಕೊನೆಗೆ ಭಿಕ್ಷಾಟನೆಯಿಂದ ಬಂದ ಹಣವನ್ನು ಅಲ್ಲೇ ಭಿಕ್ಷೆ ಬೇಡುತ್ತಿದ್ದ ವೃದ್ಧೆಯೊಬ್ಬರಿಗೆ ನೀಡಿದ್ದಾರೆ ಗಗನ್. ಇದೀಗ ಅಂದಿನ 4 ವರ್ಷಗಳ ಹಿಂದಿನ ಭಿಕ್ಷಾಟನೆ ದಿನಗಳ ಫೋಟೋಗಳನ್ನು ಶೇರ್‌ ಮಾಡುತ್ತಿದ್ದಂತೆ, ಡಾ. ಬ್ರೋ ಅವರ ಫ್ಯಾನ್ಸ್‌ ಬಗೆಬಗೆ ಕಾಮೆಂಟ್‌ಗಳ ಮೂಲಕ ಅವರ ಅಂದಿನ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನೆಟ್ಟಿಗರ ಪ್ರತಿಕ್ರಿಯೆ

ಅಂದಿನ ಹಳೇ ಫೋಟೋಗಳನ್ನು ಶೇರ್‌ ಮಾಡುತ್ತಿದ್ದಂತೆ, ಆ ಫೋಟೋಗಳಿಗೆ ಬಗೆಬಗೆ ಕಾಮೆಂಟ್‌ಗಳು ಸಂದಾಯವಾಗಿವೆ. “ಭಿಕ್ಷುಕರ ಬಗ್ಗೆ ಯಾವ ಧರ್ಮದವರು care ಮಾಡುತ್ತಾರೋ ಇಲ್ವೋ ಗೊತ್ತಿಲ್ಲ ಆದ್ರೆ ಭಿಕ್ಷುಕ ಚರ್ಚ್ ಮುಂದೆ ಮಸೀದಿ ಮುಂದೆ ಬಿಕ್ಷೆ ಬೇಡಲ್ಲ ದೇವಸ್ಥಾನದ ಎದುರುಗಡೆ ನೇ ಬಿಕ್ಷೆ ಬೇಡುತ್ತಾನೆ ಇದು ಸತ್ಯ” ಎಂದಿದ್ದಾರೆ.

"ನಿಮ್ಮ ಈ ವೀಡಿಯೋ ಯೂಟ್ಯೂಬ್‌ನಲ್ಲಿ ಕಮೆಂಟ್ ಮಾಡಿ ಹೇಳಿದ್ದೆ " ನೀವ್ ಮುಂದೆ ಯೂಟ್ಯೂಬ್ ನಲ್ಲಿ ದೊಡ್ಡ ಸ್ಟಾರ್‌ ಆಗ್ತೀರಾ “ ಅಂತಾ ಅದಕ್ಕೆ ನೀವು ಥ್ಯಾಂಕ್ಸ್ ಅಂತಾ ರಿಪ್ಲೈ ಕೊಟ್ಟಿದ್ರಿ. ಆವಾಗ ನಾನು ಅದೊಂದೆ ಕಮೆಂಟ್ ಮಾಡಿದಕ್ಕೆ ರಿಪ್ಲೈ ಎಷ್ಟು ಸಲಿಸಾಗಿ ಬೇಗ ರಿಪ್ಲೈ ಮಾಡಿದ್ರಿ ಇವಾಗ್ ನೋಡಿ ನಾನು ಸಾವಿರ ಕಮೆಂಟ್ ಮಾಡಿದ್ರು ನಿಮ್ ಕಡೆಯಿಂದ ರಿಪ್ಲೈ ಇರಲಿ ಆ ಕಮೆಂಟ್‌ಗೆ ಲೈಕ್ ಕೂಡಾ ಇಲ್ಲಾ. ಯಾಕೆಂದರೆ ನಾನು ಇನ್ನು ಅಲ್ಲೇ ಇದೀನಿ ನೀವು ಎಲ್ಲೋ ಹೋಗ್‌ಬಿಟ್ರಿ ಆದರೂ ಲವ್ ಯೂ ಬ್ರೋ” ಎಂದಿದ್ದಾರೆ ಮತ್ತೊಬ್ಬ ನೆಟ್ಟಿಗ.

Whats_app_banner