Uttama Prajakeeya Party: 'ನಿನ್ನ ತೀರ್ಮಾನ ಮತಗಟ್ಟೆಯಲ್ಲಿ ನಾನು ಮಾಡ್ತೀನಿ'... ಪ್ರಜಾಕೀಯ ಚುನಾವಣೆ ಪ್ರಚಾರಕ್ಕೆ 'ಕಾಂತಾರ' ದೃಶ್ಯ ಬಳಕೆ
ಕನ್ನಡ ಸುದ್ದಿ  /  ಮನರಂಜನೆ  /  Uttama Prajakeeya Party: 'ನಿನ್ನ ತೀರ್ಮಾನ ಮತಗಟ್ಟೆಯಲ್ಲಿ ನಾನು ಮಾಡ್ತೀನಿ'... ಪ್ರಜಾಕೀಯ ಚುನಾವಣೆ ಪ್ರಚಾರಕ್ಕೆ 'ಕಾಂತಾರ' ದೃಶ್ಯ ಬಳಕೆ

Uttama Prajakeeya Party: 'ನಿನ್ನ ತೀರ್ಮಾನ ಮತಗಟ್ಟೆಯಲ್ಲಿ ನಾನು ಮಾಡ್ತೀನಿ'... ಪ್ರಜಾಕೀಯ ಚುನಾವಣೆ ಪ್ರಚಾರಕ್ಕೆ 'ಕಾಂತಾರ' ದೃಶ್ಯ ಬಳಕೆ

ಬಹಳ ಒಳ್ಳೆಯ ಪ್ರಾರ್ಥನೆ ರಾಜಕೀಯ ನಾಯಕರೇ, ಈ ಊರಿನ ಜನರ ಮತವನ್ನು ನಿಮಗೆ ಹಾಕಿಸಿ ಕೋಡ್ತೀನಿ, ಆದರೆ ಇದುವರೆಗೂ ಇವರು ಕಟ್ಟಿದಂತ ತೆರಿಗೆ ಹಣವನ್ನು ಹಿಂತಿರುಗಿಸಿ ಕೊಡಬಹುದಾ ರಾಜಕೀಯ ನಾಯಕರೇ?

ಪ್ರಜಾಕೀಯ ಚುನಾವಣೆ ಪ್ರಚಾರಕ್ಕೆ 'ಕಾಂತಾರ' ದೃಶ್ಯ ಬಳಕೆ
ಪ್ರಜಾಕೀಯ ಚುನಾವಣೆ ಪ್ರಚಾರಕ್ಕೆ 'ಕಾಂತಾರ' ದೃಶ್ಯ ಬಳಕೆ

ಮುಂಬರುವ ವಿಧಾನಸಭೆ ಚುನಾವಣೆಗೆ ಈಗಾಗಲೇ ಪ್ರಚಾರ ಕಾರ್ಯ ಆರಂಭವಾಗಿದೆ. ಈ ಬಾರಿ ಅಧಿಕಾರಕ್ಕೆ ಬರಬೇಕೆಂಬ ಹಂಬಲದಿಂದ ಎಲ್ಲಾ ಪಕ್ಷಗಳು ನಾನಾ ರೀತಿಯ ಕಸರತ್ತು ನಡೆಸುತ್ತಿದೆ. ಈ ನಡುವೆ ನಟ ಉಪೇಂದ್ರ ಸ್ಥಾಪಿಸಿರುವ ಪ್ರಜಾಕೀಯ ಪಕ್ಷ ಕೂಡಾ ಪ್ರಚಾರಕ್ಕೆ ಮುಂದಾಗಿದೆ. ರಿಷಬ್‌ ಶೆಟ್ಟಿ ನಿರ್ದೇಶಿಸಿ, ನಟಿಸಿರುವ 'ಕಾಂತಾರ' ಚಿತ್ರದ ದೃಶ್ಯವನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡಿದ್ದು ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಪರ ವಿರೋಧ ಚರ್ಚೆಯೂ ಶುರುವಾಗಿದೆ.

ದೇವೇಂದ್ರ ಸುತ್ತೂರು ತಂದೆ, ತಮ್ಮ ಹಿರಿಕರು ಊರಿನ ಜನರಿಗೆ ನೀಡಿರುವ ಭೂಮಿಯನ್ನು ಪಂಜುರ್ಲಿ ಬಳಿ ವಾಪಸ್‌ ಕೇಳುವ ದೃಶ್ಯವನ್ನು ಪ್ರಜಾಕೀಯದ ಚುನಾವಣೆ ಪ್ರಚಾರಕ್ಕೆ ಬಳಸಿಕೊಳ್ಳಲಾಗಿದೆ. ಎಡಿಟ್‌ ಮಾಡಿರುವ ಡೈಲಾಗ್‌ ಈ ರೀತಿ ಇದೆ.

ಪಂಜುರ್ಲಿ: ನಾಡು ಕತ್ತಲಾಗಿ ಸೀರೆ, ಸಾರಾಯಿ ಹಂಚುವಂತ ರಾಜಕೀಯ ನಾಯಕರೇ, ನನ್ನ ಚುನಾವಣಾ ಕ್ಷೇತ್ರದಲ್ಲಿ ನಿಂತು ಕೇಳುವಂತ ವಾಡಿಕೆ, ಕೇಳುವಂತ ಪ್ರಶ್ನೆ ಏನಾದ್ರೂ ಉಳಿದಿದ್ಯಾ ರಾಜಕೀಯ ನಾಯಕರೇ?

ಊರಿನ ವ್ಯಕ್ತಿ: ಪಂಜುರ್ಲಿ, ನನ್ನ ಕ್ಷೇತ್ರದಲ್ಲಿ ಕೇಳುವಂತ ಪ್ರಶ್ನೆ ಎಂತ ಇಲ್ಲ.

ದೇವೇಂದ್ರ ಸುತ್ತೂರು ತಂದೆ: ನನ್ನಲ್ಲಿ ಉಂಟು, ಈ ಸೀರೆ, ಸಾರಾಯಿ, ಹಣ ಈ ಜನರಿಗೆ ಹಂಚುತ್ತೇನೆ, ಇವರ ಮತವನ್ನು ನನಗೆ ಹಾಕಿಸಿಕೊಡಬೇಕು.

ಪಂಜುರ್ಲಿ: ಬಹಳ ಒಳ್ಳೆಯ ಪ್ರಾರ್ಥನೆ ರಾಜಕೀಯ ನಾಯಕರೇ, ಈ ಊರಿನ ಜನರ ಮತವನ್ನು ನಿಮಗೆ ಹಾಕಿಸಿ ಕೋಡ್ತೀನಿ, ಆದರೆ ಇದುವರೆಗೂ ಇವರು ಕಟ್ಟಿದಂತ ತೆರಿಗೆ ಹಣವನ್ನು ಹಿಂತಿರುಗಿಸಿ ಕೊಡಬಹುದಾ ರಾಜಕೀಯ ನಾಯಕರೇ?

ದೇವೇಂದ್ರ ಸುತ್ತೂರು ತಂದೆ: ನಿನ್ನ ಕೈಲಿ ಆಗೋದಿಲ್ಲ ಸರಿ, ಇದರ ತೀರ್ಮಾನ ಎಲ್ಲಿ ಮಾಡ್ಕೊಬೇಕು, ಅಲ್ಲೇ ಮಾಡಿಕೊಳ್ಳುತ್ತೇನೆ

ಪಂಜುರ್ಲಿ: ಸೀರೆ, ಸಾರಾಯಿ ಹಂಚುತ್ತಿ, ನಿನ್ನ ತೀರ್ಮಾನ ಮತಗಟ್ಟೆಯಲ್ಲಿ ನಾನು ಮಾಡ್ತೀನಿ, ಈ ತೆರಿಗೆ ಹಣ ಊರಿನವರದ್ದು, ಅದರ ತೀರ್ಮಾನ ಇವತ್ತಲ್ಲ, ಮುಂದೊಂದು ದಿನ ಪ್ರಜಾಕೀಯ ಬರಬೇಕಾಗುತ್ತೆ,

ದೇವೇಂದ್ರ ಸುತ್ತೂರು ತಂದೆ: ರಾಜಕಾರಣಿನಾ, ಪ್ರಜಾಕಾರಣೀನ ಮಾತನಾಡೋದು?

ಪಂಜುರ್ಲಿ: ರಾಜಕಾರಣೀನಾ ಪ್ರಜಾಕಾರಣೀನಾ ಇವತ್ತೇ ತೀರ್ಮಾನ ಆಗಲಿ, ರಾಜಕಾರಣಿ ಆದರೆ ಸೀರೆ, ಸಾರಾಯಿಗೆ ಓಟು ಹಾಕುವಂತವನಾಗಲಿ, ಪ್ರಜಾಕಾರಣಿ ಆದ್ರೆ.......

ಈ ಡೈಲಾಗ್‌ ಇರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದು ಜನರ ಮೆಚ್ಚುಗೆ ಗಳಿಸುತ್ತಿದೆ. ಇನ್ನೂ ಕೆಲವರು , ಚುನಾವಣೆ ಪ್ರಚಾರಕ್ಕಾಗಿ ದೈವದ ದೃಶ್ಯ ಬಳಸುವ ಅವಶ್ಯಕತೆ ಇರಲಿಲ್ಲ ಎಂದು ಕಮೆಂಟ್‌ ಮಾಡುತ್ತಿದ್ದಾರೆ.

'UI' ಚಿತ್ರದಲ್ಲಿ ಬ್ಯುಸಿ ಇರುವ ಉಪೇಂದ್ರ

ರಾಜಕೀಯ ಹಾಗೂ ಸಿನಿಮಾ ಎರಡನ್ನೂ ಉಪೇಂದ್ರ ಬ್ಯಾಲೆನ್ಸ್‌ ಮಾಡುತ್ತಿದ್ದಾರೆ. ಬಹಳ ವರ್ಷಗಳ ನಂತರ ಉಪೇಂದ್ರ ನಿರ್ದೇಶನದಲ್ಲಿ 'UI' ಸಿನಿಮಾ ಘೋಷಣೆ ಆಗಿದೆ. ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನವನ್ನು ಉಪೇಂದ್ರ ಅವರೇ ಮಾಡುತ್ತಿದ್ದಾರೆ. ಕಳೆದ ಜೂನ್‌ನಲ್ಲಿ ಚಿತ್ರದ ಅದ್ದೂರಿ ಮುಹೂರ್ತ ಸಮಾರಂಭ ನೆರವೇರಿತ್ತು. ಡಾ. ಶಿವರಾಜ್​​ಕುಮಾರ್, ಪತ್ನಿ ಗೀತಾ, ಸುದೀಪ್, ಡಾಲಿ ಧನಂಜಯ್, ದುನಿಯಾ ವಿಜಯ್, ವಸಿಷ್ಠ ಸಿಂಹ ಹಾಗೂ ಇನ್ನಿತರರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮುಹೂರ್ತ ಕಾರ್ಯಕ್ರಮದಲ್ಲಿ ಉಪೇಂದ್ರ ಕಾವಿ ವಸ್ತ್ರಧಾರಿಯಾಗಿ ನಾಮ ಹಾಕಿ ಕಾಣಿಸಿಕೊಂಡರೆ, ನಿರ್ಮಾಪಕರು ಹಾಗೂ ಚಿತ್ರತಂಡದ ಹಲವರು ಬಿಳಿ ಷರ್ಟ್, ಪಂಚೆ ಧರಿಸಿ ನಾಮ ಹಾಕಿದ್ದು ವಿಶೇಷವಾಗಿತ್ತು. ಸದ್ಯಕ್ಕೆ ಈ ಸಿನಿಮಾ ಶೂಟಿಂಗ್‌ ಹಂತದಲ್ಲಿದ್ದು ಚಿತ್ರದಲ್ಲಿ ದೊಡ್ಡ ತಾರಾಬಳಗವಿದೆ.

Whats_app_banner