Kannada News  /  Entertainment  /  Kantara Releasing Soon Theatrically In Italian And Spanish
‘ಕಾಂತಾರ’ ಚಿತ್ರದಿಂದ ಮತ್ತೊಂದು ಸಾಹಸ; ವಿದೇಶದ ಈ ಎರಡು ಭಾಷೆಗಳಿಗೂ ಡಬ್‌.. ಶೀಘ್ರದಲ್ಲಿ ಚಿತ್ರಮಂದಿರದಲ್ಲಿ ರಿಲೀಸ್
‘ಕಾಂತಾರ’ ಚಿತ್ರದಿಂದ ಮತ್ತೊಂದು ಸಾಹಸ; ವಿದೇಶದ ಈ ಎರಡು ಭಾಷೆಗಳಿಗೂ ಡಬ್‌.. ಶೀಘ್ರದಲ್ಲಿ ಚಿತ್ರಮಂದಿರದಲ್ಲಿ ರಿಲೀಸ್

Kantara: ‘ಕಾಂತಾರ’ ಚಿತ್ರದಿಂದ ಮತ್ತೊಂದು ಸಾಹಸ; ವಿದೇಶದ ಈ ಎರಡು ಭಾಷೆಗಳಿಗೂ ಡಬ್‌.. ಶೀಘ್ರದಲ್ಲಿ ಚಿತ್ರಮಂದಿರದಲ್ಲಿ ರಿಲೀಸ್

19 March 2023, 9:00 ISTHT Kannada Desk
19 March 2023, 9:00 IST

ದೇಶದ ಹಲವು ಭಾಷೆಗಳಿಗೆ ಡಬ್‌ ಆಗಿ ಬಿಡುಗಡೆ ಆಗಿದ್ದ ಕಾಂತಾರ ಸಿನಿಮಾ ಇದೀಗ ವಿದೇಶಿ ಭಾಷೆಗಳಿಗೂ ಡಬ್‌ ಆಗಿ ತೆರೆಗೆ ಬರಲು ತಯಾರಿ ನಡೆಸಿದೆ. 

Kantara: ಕಳೆದ ವರ್ಷ ತೆರೆಕಂಡ ‘ಕಾಂತಾರ’ ಸಿನಿಮಾ ಕನ್ನಡದಲ್ಲಿ ಮಾತ್ರವಲ್ಲ ಭಾರತದ ಇತರೆ ಭಾಷೆಗಳಿಗೆ ಡಬ್‌ ಆಗಿ ಯಶಸ್ವಿಯಾಗಿತ್ತು. ಕಳೆದ ವರ್ಷ ಸೆಪ್ಟೆಂಬರ್‌ 30 ರಂದು 'ಕಾಂತಾರ' ಕನ್ನಡ ಭಾಷೆಯಲ್ಲಿ ಮಾತ್ರ ತೆರೆ ಕಂಡಿತ್ತು. ಈ ಸಿನಿಮಾ ತೆರೆ ಕಾಣುವ ಮುನ್ನ ಅದೊಂದು ಪ್ಯಾನ್‌ ಇಂಡಿಯಾ ಸಿನಿಮಾವಾಗಬಹುದು ಎಂದು ಸ್ವತ: ಚಿತ್ರತಂಡ ಕೂಡಾ ಊಹಿಸಿರಲಿಲ್ಲ. ನಂತರ ಆ ಚಿತ್ರಕ್ಕೆ ದೊರೆತ ಉತ್ತಮ ಪ್ರತಿಕ್ರಿಯೆ ನಂತರ ತೆಲುಗು, ಹಿಂದಿ ಹಾಗೂ ಇತರ ಭಾರತೀಯ ಭಾಷೆಗಳಲ್ಲಿ ಡಬ್‌ ಆಗಿ ಬಿಡುಗಡೆ ಆಯ್ತು. ಇಂಗ್ಲಿಷ್‌ಗೂ ಡಬ್‌ ಆಗಿ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್‌ ಆಗಿತ್ತು. ಇದೀಗ ಮತ್ತಷ್ಟು ವಿದೇಶಿ ಭಾಷೆಗಳಿಗೆ ಡಬ್‌ ಆಗುತ್ತಿದೆ ಈ ಸಿನಿಮಾ.

ಟ್ರೆಂಡಿಂಗ್​ ಸುದ್ದಿ

ವಿದೇಶಿ ಭಾಷೆಗಳಿಗೆ ಡಬ್‌..

ಎಲ್ಲೆಡೆಯಿಂದ ಮೆಚ್ಚುಗೆ ಪಡೆದ ‘ಕಾಂತಾರ’ ಸಿನಿಮಾ ಇದೀಗ ವಿದೇಶದ ಹಲವು ಭಾಷೆಗಳಿಗೆ ಡಬ್‌ ಆಗುತ್ತಿದೆ. ಈ ವಿಚಾರವನ್ನು ಚಿತ್ರತಂಡ ಅಧಿಕೃತವಾಗಿ ಘೋಷಣೆ ಮಾಡಿದೆ. ಇತ್ತೀಚಿನ ಕೆಲ ದಿನಗಳಿಂದ ‘ಕಾಂತಾರ’ ಸಿನಿಮಾ ಸರಣಿ ಸುದ್ದಿಯಲ್ಲಿದೆ. ವಿಶ್ವಸಂಸ್ಥೆಯಲ್ಲಿಯೂ ಈ ಚಿತ್ರ ಸದ್ದು ಮಾಡಿದೆ. ಅಲ್ಲಿನ ವಿದೇಶಿ ಗಣ್ಯರೂ ಈ ಚಿತ್ರ ಕಣ್ತುಂಬಿಕೊಂಡಿದ್ದಾರೆ. ಇದೆಲ್ಲದರ ನಡುವೆಯೇ ಇಟಾಲಿಯನ್‌ ಮತ್ತು ಸ್ಪ್ಯಾನಿಷ್‌ ಭಾಷೆಗೆ ಚಿತ್ರವನ್ನು ಡಬ್‌ ಮಾಡುತ್ತಿದೆ ಹೊಂಬಾಳೆ ಫಿಲಂಸ್.‌

ಈ ಹಿಂದೆ ಇಂಗ್ಲಿಷ್‌ ವರ್ಷನ್‌ಅನ್ನು ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್‌ ಮಾಡಲಾಗಿತ್ತು. ಇದೀಗ ಇಟಾಲಿಯನ್‌ ಮತ್ತು ಸ್ಪ್ಯಾನಿಷ್‌ ಅವತರಣಿಕೆಯ ‘ಕಾಂತಾರ’ ಚಿತ್ರವನ್ನು ಅಲ್ಲಿನ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಹೊಂಬಾಳೆ ಫಿಲಂಸ್‌ ನಿರ್ಧರಿಸಿದೆ. ಈಗಾಗಲೇ ಡಬ್ಬಿಂಗ್‌ ಕೆಲಸಗಳಿಗೂ ಚಾಲನೆ ದೊರಕಿದ್ದು, ಶೀಘ್ರದಲ್ಲಿ ಚಿತ್ರ ತೆರೆಕಾಣಲಿದೆ.

ವಿಶ್ವಸಂಸ್ಥೆಯಲ್ಲಿ ಕನ್ನಡ ಮಾತನಾಡಿದ ರಿಷಬ್‌ ಶೆಟ್ಟಿ

ರಿಷಬ್‌ ಶೆಟ್ಟಿ ಸ್ವಿಟ್ಜರ್ಲೆಂಡ್‌ನ ಜಿನೇವಾದಲ್ಲಿನ ವಿಶ್ವಸಂಸ್ಥೆಯ ವಾರ್ಷಿಕ ಸಭೆಯಲ್ಲಿ ಭಾಗವಹಿಸಿ ಕನ್ನಡದಲ್ಲಿಯೇ ಮಾತನಾಡಿದ್ದರು. ಆ 18 ಸೆಕೆಂಡ್‌ಗಳ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಕನ್ನಡಿಗರು ರಿಷಬ್‌ ಶೆಟ್ಟಿ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದರು.

"ಎಲ್ಲರಿಗೂ ನಮಸ್ಕಾರ.. ನಾನು ರಿಷಬ್ ಶೆಟ್ಟಿ. ಪರಿಸರ ಸಂರಕ್ಷಣೆಗಾಗಿ ಕಳೆದ ಒಂದುವರೆ ದಶಕಗಳಿಗಿಂತ ಹೆಚ್ಚು ಕಾಲ ತಳಮಟ್ಟದಿಂದ ಕಾರ್ಯನಿರ್ವಹಿಸುತ್ತಿರುವ ಭಾರತದ ಇಕೋಫಾರ್ಮ್ ಪ್ರತಿನಿಧಿಯಾಗಿ ನಾನು ಬಂದಿದ್ದೇನೆ. ಪರಿಸರದ ಸುಸ್ಥಿರತೆ ಕಾಪಾಡುವುದು ಸದ್ಯದ ಅಗತ್ಯ. ಒಬ್ಬ ನಟ, ನಿರ್ದೇಶಕನಾಗಿ ತಳಮಟ್ಟದಲ್ಲಿ ಪರಿಣಾಮ ಬೀರಬೇಕೆಂದು.. ರಿಷಬ್‌ ಹೇಳಿದ್ದರು.

ಸಿನಿಮಾ ಸಂಬಂಧಿ ಈ ಸುದ್ದಿಗಳನ್ನೂ ಓದಿ

Urigowda Nanjegowda: 'ಉರಿಗೌಡ- ನಂಜೇಗೌಡ' ಚಿತ್ರಕ್ಕೆ ನಿರ್ದೇಶಕರು ಫಿಕ್ಸ್, ಫಸ್ಟ್‌ ಲುಕ್‌ ರಿಲೀಸ್‌, ಮುಹೂರ್ತಕ್ಕೂ ದಿನಾಂಕ ನಿಕ್ಕಿ..

ಉರಿಗೌಡ ಮತ್ತು ನಂಜೇಗೌಡ ಟಿಪ್ಪುವನ್ನು ಹತ್ಯಗೈದ ಒಕ್ಕಲಿಗ ವೀರರೆಂದು ಬಿಜೆಪಿ ಹೇಳಿಕೆ ನೀಡಿತ್ತು. ರಾಜ್ಯ ರಾಜಕಾರಣದಲ್ಲಿ ದೊಡ್ಡ ಮಟ್ಟದ ಸಂಚಲನ ಸೃಷ್ಟಿಸಿದ ಈ ಹೇಳಿಕೆಯಿಂದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಬಿಜೆಪಿ ವಿರುದ್ಧ ತಿರುಗಿ ಬಿದ್ದಿದ್ದವು. ಸಿನಿಮಾ ಮಾಡುವುದಾಗಿಯೂ ನಿರ್ಮಾಪಕ ಮತ್ತು ಸಚಿವ ಮುನಿರತ್ನ ಶೀರ್ಷಿಕೆ ನೋಂದಣಿ ಮಾಡಿಸಿದ್ದರು. ಇದೀಗ ಸದ್ದಿಲ್ಲದೆ ಸಿನಿಮಾದ ಮುಹೂರ್ತಕ್ಕೆ ದಿನಾಂಕ ನಿಗದಿಯಾಗಿದೆ. ನಿರ್ದೇಶಕರೂ ಫಿಕ್ಸ್‌ ಆಗಿದ್ದಾರೆ! ಪೂರ್ತಿ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ