Bigg Boss 18: ಕರಣ್ ವೀರ್ ಮೆಹ್ರಾಗೆ ಒಲಿದ ಹಿಂದಿ ಬಿಗ್ ಬಾಸ್ 18 ವಿನ್ನರ್ ಪಟ್ಟ; ಬಹುಮಾನವಾಗಿ ಸಿಕ್ಕ ನಗದೆಷ್ಟು?
Bigg Boss 18 Winner: ಹಿಂದಿಯ ಕಿರುತೆರೆ ನಟ ಕರಣ್ ವೀರ್ ಮೆಹ್ರಾ ಬಿಗ್ ಬಾಸ್ 18ರ ವಿಜೇತರಾಗಿ ಹೊರಹೊಮ್ಮಿದ್ದಾರೆ. ಪ್ರಬಲ ಪೈಪೋಟಿ ನೀಡಿದ್ದ ವಿವಿಯನ್ ಡಿಸೇನಾ ಮೊದಲ ರನ್ನರ್ ಅಪ್ ಸ್ಥಾನಕ್ಕೆ ಖುಷಿಪಟ್ಟಿದ್ದಾರೆ. ಹಾಗಾದರೆ ವಿಜೇತರಿಗೆ ಸಿಕ್ಕ ಬಹುಮಾನ ಎಷ್ಟು? ಇಲ್ಲಿದೆ ವಿವರ.

Bigg Boss 18 Winner: ಕರಣ್ ವೀರ್ ಮೆಹ್ರಾ ಹಿಂದಿಯ ಬಿಗ್ ಬಾಸ್ 18ರ ವಿಜೇತರಾಗಿದ್ದಾರೆ. 104 ದಿನಗಳ ಕಾಲ ನಡೆದ ಈ ಶೋನಲ್ಲಿ ಹಲವು ಟಾಸ್ಕ್‌ಗಳನ್ನು ಗೆದ್ದು, ವಾದ ವಿವಾದಗಳ ಮೂಲಕವೂ ಗಮನ ಸೆಳೆದು ಇದೀಗ ಅಂತಿಮವಾಗಿ ಸೀಸನ್ 18ರ ವಿಜೇತರಾಗಿ ಹೊರಹೊಮ್ಮಿದ್ದಾರೆ. ಎಂದಿನಂತೆ ತಮ್ಮ ಸಿಗ್ನೇಚರ್ ಸ್ಟೈಲ್‌ನಲ್ಲಿ ವೇದಿಕೆ ಮಧ್ಯೆ ಬಂದ ಸಲ್ಮಾನ್ ಖಾನ್, ಕರಣ್ ವೀರ್ ವೊಹ್ರಾ ಮತ್ತು ವಿವಿಯನ್ ಡಿಸೇನಾ ಪೈಕಿ ಕರಣ್ ಅವರ ಕೈ ಎತ್ತುವ ಮೂಲಕ ವಿಜೇತರನ್ನು ಘೋಷಣೆ ಮಾಡಿದ್ದಾರೆ. ಇತ್ತ ವಿವಿಯನ್ ರನ್ನರ್ ಅಪ್ ಸ್ಥಾನಕ್ಕೆ ಖುಷಿಪಟ್ಟರು.
ವಿಜೇತರಿಗೆ ಸಿಕ್ಕಿದ್ದೇನು?
ಪ್ರೇಕ್ಷಕರ ಮತಗಳ ಆಧಾರದ ಮೇಲೆ ವಿಜೇತರನ್ನು ಆಯ್ಕೆ ಮಾಡಲಾಯಿತು. ಅದರಂತೆ ಬಿಗ್ ಬಾಸ್ 18ರ ವಿಜೇತರಾಗಿ ಕರಣ್, ಟ್ರೋಫಿಯೊಂದಿಗೆ 50 ಲಕ್ಷ ನಗದು ಬಹುಮಾನ ಪಡೆದರು. ಈ ಮೂಲಕ ಈ ಹಿಂದಿನ ಕಿರುತೆರೆ ವಿಜೇತರಾದ ಮುನ್ವರ್ ಫಾರೂಕಿ, ಎಂಸಿ ಸ್ಟಾನ್ ಮತ್ತು ತೇಜಸ್ವಿ ಪ್ರಕಾಶ್ ಅವರ ಸಾಲಿಗೆ ಕರಣ್ ಸಹ ಸೇರ್ಪಡೆಯಾಗಿದ್ದಾರೆ. ರನ್ನರ್ ಅಪ್ ವಿವಿಯನ್ ಅವರಿಗೆ ಸಿಕ್ಕ ಬಹುಮಾನದ ಮೊತ್ತ ಎಷ್ಟು ಎಂದು ವಾಹಿನಿ ಘೋಷಣೆ ಮಾಡಿಲ್ಲ.
ಟಾಪ್ ಆರರಲ್ಲಿ ಇದ್ದವರು ಯಾರು?
ಬಿಗ್ ಬಾಸ್ 18ರಲ್ಲಿ ಅಂತಿಮವಾಗಿ ಒಟ್ಟು ಆರು ಸ್ಪರ್ಧಿಗಳು ಕಣದಲ್ಲಿದ್ದರು. ಕಲರ್‌ಫುಲ್ ಹಾಡುಗಳೊಂದಿಗೆ ಆರಂಭವಾದ ಶೋನಲ್ಲಿ, ಸಲ್ಮಾನ್ ಖಾನ್ ಪ್ರಮುಖ ಆಕರ್ಷಣೆ ಆಗಿದ್ದರು. ಬಳಿಕ ಟಾಪ್ ಆರರಲ್ಲಿ ಒಬ್ಬೊಬ್ಬರನ್ನೇ ಎಲಿಮಿನೇಟ್ ಮಾಡಲಾಯ್ತು. ಮೊದಲಿಗೆ ಈಶಾ ಸಿಂಗ್ ಎಲಿಮಿನೇಟ್ ಆಗಿ ಆರನೇ ಸ್ಥಾನ ಪಡೆದರು. ಬಳಿಕ ಕ್ರಮವಾಗಿ ಚುಮ್ ದರಂಗ್, ಅವಿನಾಶ್ ಮಿಶ್ರಾ ಗ್ರ್ಯಾಂಡ್ ಫಿನಾಲೆಯಿಂದ ಎಲಿಮಿನೇಟ್ ಆದರು. ಟಾಪ್ ಮೂರನೇ ಸ್ಥಾನದಲ್ಲಿದ್ದ ರಜತ್ ದಲಾಲ್ ಸಹ ಹಿಂದೆ ಸರಿದರು. ಅಂತಿಮವಾಗಿ ಕರಣ್ ವೊಹ್ರಾ ಮತ್ತು ವಿವಿಯನ್ ಪೈಕಿ ಕರಣ್ ವಿಜೇತರಾದರು.
ಎರಡು ಮದುವೆ, ಇಬ್ಬರಿಗೂ ಡಿವೋರ್ಸ್!
ಕರಣ್ ವೀರ್ ಮೆಹ್ರಾ ಕಳೆದ 19 ವರ್ಷಗಳಿಂದ ಬಣ್ಣದ ಲೋಕದ ಭಾಗವಾಗಿದ್ದಾರೆ. ಸಿನಿಮಾಗಳ ಜೊತೆಗೆ ಧಾರಾವಾಹಿಗಳಲ್ಲಿಯೂ ನಟಿಸಿದ್ದಾರೆ. 2004ರಲ್ಲಿ ಕಿರುತೆರೆಗೆ ಪದಾರ್ಪಣೆ ಮಾಡಿ, ರಿಯಾಲಿಟಿ ಶೋಗಳಲ್ಲಿಯೂ ಗುರುತಿಸಿಕೊಂಡಿದ್ದಾರೆ. ಕಳೆದ ವರ್ಷದ ಖತ್ರೋಂ ಕೆ ಕಿಲಾಡಿ ಶೋನ ವಿನ್ನರ್ ಸಹ ಆಗಿದ್ದ 47ರ ಪ್ರಾಯದ ಕರಣ್, ಈಗ ಬಿಗ್ ಬಾಸ್ ಸೀಸನ್ 18ರ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಅಚ್ಚರಿಯ ವಿಚಾರ ಏನೆಂದರೆ ಎರಡು ಮದುವೆ ಆಗಿರುವ ಕರಣ್, ಇಬ್ಬರು ಹೆಂಡತಿಯರಿಂದಲೂ ಡಿವೋರ್ಸ್ ಪಡೆದಿದ್ದಾರೆ.

ವಿಭಾಗ