ಕನ್ನಡ ಸುದ್ದಿ  /  Entertainment  /  Kareen Kapoor: I Got Married At A Time When Actresses Refused To Get Married!: Kareena Kapoor?

Kareena kapoor: ʼನಟಿಯರು ಮದುವೆಯಾಗಲು ಹಿಂದೇಟು ಹಾಕುತ್ತಿದ್ದ ಕಾಲದಲ್ಲಿ ನಾನು ಮದುವೆಯಾದೆʼ! ಎಂದಿದ್ದೇಕೆ ಕರೀನಾ ಕಪೂರ್‌?

Kareena Kapoor: ʼನಟಿಯರು ಮದುವೆಯಾದರೆ ಸಿನಿಮಾಗಳಲ್ಲಿ ನಟಿಸುವ ಅವಕಾಶ ಕಡಿಮೆ ಆಗುತ್ತದೆ ಎನ್ನುವ ಕಾಲದಲ್ಲೇ ನಾನು ಸೈಫ್‌ ಅವರನ್ನು ಮದುವೆಯಾದೆʼ ಎಂದು ತಮ್ಮ ಮದುವೆಯ ದಿನಗಳ ಬಗ್ಗೆ ನೆನಪಿಸಿಕೊಂಡಿದ್ದಾರೆ ಬಾಲಿವುಡ್‌ ಬೆಡಗಿ ಕರೀನಾ ಕಪೂರ್‌

ಕರೀನಾ ಕಪೂರ್‌ ಮತ್ತು ಸೈಫ್‌ ಅಲಿ ಖಾನ್‌
ಕರೀನಾ ಕಪೂರ್‌ ಮತ್ತು ಸೈಫ್‌ ಅಲಿ ಖಾನ್‌

ಬಾಲಿವುಡ್‌ನ ಖ್ಯಾತ ನಟಿ ಕರೀನಾ ಕಪೂರ್‌ ಮದುವೆಯಾಗಿ, ಎರಡು ಮಕ್ಕಳಾದ ನಂತರವೂ ಸಿನಿಮಾಗಳಲ್ಲಿ ಸಕ್ರಿಯರಾಗಿದ್ದಾರೆ. ʼನಟಿಯರು ಮದುವೆಯಾದರೆ ಸಿನಿಮಾಗಳಲ್ಲಿ ನಟಿಸುವ ಅವಕಾಶ ಕಡಿಮೆ ಆಗುತ್ತದೆ ಎನ್ನುವ ಕಾಲದಲ್ಲೇ ನಾನು ಸೈಫ್‌ ಅವರನ್ನು ಮದುವೆಯಾದೆʼ ಎಂದು ತಮ್ಮ ಮದುವೆಯ ದಿನಗಳ ಬಗ್ಗೆ ನೆನಪಿಸಿಕೊಂಡಿದ್ದಾರೆ ಬೆಬೊ.

ʼನಾನು ಮದುವೆಯಾದ ಸಮಯದಲ್ಲಿ ವೃತ್ತಿ ಬದುಕಿನ ಭದ್ರತೆಯ ದೃಷ್ಟಿಯಿಂದ ನಟಿಯರು ಮದುವೆಯಾಗಲು ಹಿಂದೇಟು ಹಾಕುತ್ತಿದ್ದರು. ಆದರೆ ನನ್ನ ವಿಷಯದಲ್ಲಿ ಮದುವೆ ನನ್ನ ಸ್ವಂತ ಆಯ್ಕೆಯಾಗಿತ್ತು. ನಾನು ಮದುವೆಯಾಗಿ, ಮಕ್ಕಳಾದ ಮೇಲೂ ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ. ಸಿನಿಮಾ ಹಾಗೂ ಸಾಂಸಾರಿಕ ಬದುಕು ಎರಡನ್ನೂ ಸಮನಾಗಿ ಸ್ವೀಕರಿಸಿದ್ದೇನೆʼ ಎಂದಿದ್ದಾರೆ.

2000 ಇಸವಿಯಲ್ಲಿ ಅಭಿಷೇಕ್‌ ಬಚ್ಚನ್‌ ನಟನೆಯ, ಜೆಪಿ ದತ್ತಾ ನಿರ್ದೇಶನದ ʼರೆಫ್ಯೂಜಿʼ ಸಿನಿಮಾದ ಮೂಲಕ ಕರೀನಾ ಮೊದಲ ಬಾರಿ ನಾಯಕಿಯಾಗಿ ನಟಿಸಿದ್ದರು. ಅದಾದ 12 ವರ್ಷಗಳ ಬಳಿಕ ಅಂದರೆ 2012ರ ಅಕ್ಟೋಬರ್‌ನಲ್ಲಿ ಈಕೆ ಬಾಲಿವುಡ್‌ ನಟ ಸೈಫ್‌ ಅಲಿ ಖಾನ್‌ ಅವರೊಂದಿಗೆ ಮದುವೆಯಾದರು. ಅಲ್ಲದೆ ಮದುವೆಯ ಬಳಿಕ ಇವರು ನಟನೆಯಿಂದ ವಿರಾಮ

ತೆಗೆದುಕೊಂಡಿರಲಿಲ್ಲ. ಮದುವೆ ಕೆಲ ದಿನಗಳಲ್ಲೇ ನಟನೆಗೆ ಮರಳಿದರು. ಸಲ್ಮಾನ್‌ ಖಾನ್‌ ನಟನೆಯ ʼದಬಾಂಗ್‌ 2ʼ ಚಿತ್ರದ ʼಫೆವಿಕೋಲ್‌ ಸೆʼ ಹಾಡಿನ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಅಂದಿನಿಂದ ಇಂದಿನವರೆಗೆ ಸಿನಿಮಾಗಳಲ್ಲಿ ನಟಿಸುತ್ತಲೇ ಇದ್ದಾರೆ ಕರೀನಾ.

ಎಕನಾಮಿಕ್‌ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಇವರಿಗೆ ʼಬಾಕ್ಸ್‌ ಆಫೀಸ್‌ ಫಲಿತಾಂಶ ನಿಮ್ಮನ್ನು ಕಂಗೆಡಿಸಿರುವುದು ಇದೆಯೇ?ʼ ಎಂದು ಕೇಳಲಾಗಿತ್ತು.

ಆ ಪ್ರಶ್ನೆಗೆ ಆಕೆ ʼಬಾಕ್ಸ್‌ ಆಫೀಸ್‌ ಕರೀನಾ ನನಗೆ ಯಾವಾಗಲೂ ಮುಖ್ಯವಾಗಿತ್ತು, ಹಾಗಂತ ನಾನು ನಟನೆಯಲ್ಲಿ ಯಾರೊಂದಿಗೂ ಸ್ಪರ್ಧಿಸುವುದಿಲ್ಲʼ ಎಂದಿದ್ದಾರೆ.

ʼನಾನು ತುಂಬಾ ಸಂತಸದ ವಾತಾವರಣದಲ್ಲಿದ್ದೇನೆ, ಯಾಕೆಂದರೆ ನಾನು ಯಾವಾಗಲೂ ನನಗೆ ಏನು ಇಷ್ಟ ಅದನ್ನಷ್ಟೇ ಆಯ್ಕೆ ಮಾಡಿಕೊಳ್ಳುತ್ತೇನೆ. ಈ ವಿಷಯದಲ್ಲಿ ನಾನು ಲಕ್ಕಿ. ನನಗೆ ಮದುವೆಯಾಗಬೇಕು ಎನ್ನಿಸಿತು ಮದುವೆಯಾದೆ. ಅದು ಯಾವ ನಟಿಯರು ವೃತ್ತಿ ಬದುಕನ್ನು ಪಣಕಿಟ್ಟು ಮದುವೆಯಾಗಲು ಮುಂದೆ ಬಾರದೆ ಇರುವಂತಹ ಸಮಯವಾಗಿತ್ತು. ಇಂದು ಹಲವು ನಟಿಯರು ಮದುವೆಯಾಗುತ್ತಿದ್ದಾರೆ, ಅಲ್ಲದೆ ಮದುವೆಯ ಬಳಿಕವೂ ನಟನೆಯಲ್ಲಿ ಮುಂದುವರಿಯುತ್ತಿದ್ದಾರೆ. ಅದು ಈಗ ಅಂತಹ ಚರ್ಚಾ ವಿಷಯವಾಗಿ ಕೂಡ ಉಳಿದಿಲ್ಲ. ಮೊದಲು ಮಕ್ಕಳಾದರೆ ಕೆಲಸ ಮಾಡುವುದು ಕಷ್ಟ ಎಂಬುವುದಿತ್ತು, ಆದರೆ ಈಗ ಹಾಗಲ್ಲ. ಮಕ್ಕಳಾದ ಮೇಲೂ ಆರಾಮಾಗಿ ನಟಿಸಬಹುದುʼ ಎಂದು ಕರೀನಾ ಕಪೂರ್‌ ಅನುಭವವನ್ನು ಹಂಚಿಕೊಂಡಿದ್ದಾರೆ.

2016ರಲ್ಲಿ ಮೊದಲ ಮಗು ತೈಮೂರ್‌ ಗರ್ಭದಲ್ಲಿದ್ದಾಗ ಇವರು ಜಾಹೀರಾತೊಂದರ ಶೂಟಿಂಗ್‌ನಲ್ಲಿ ಭಾಗವಹಿಸಿದ್ದರು, ಅಲ್ಲದೆ ರಾಂಪ್‌ ಮೇಲೆ ಹೆಜ್ಜೆ ಹಾಕಿ ಅಚ್ಚರಿ ಮೂಡಿಸಿದ್ದರು. ತೈಮೂರ್‌ ಹುಟ್ಟಿದ ಎರಡೇ ತಿಂಗಳು ಅವರು ರೆಸ್ಟ್‌ ಮಾಡಿದ್ದರು, ನಂತರ ಪುನಃ ನಟನೆಗೆ ಮರಳಿದ್ದರು. 2021ರಲ್ಲಿ ಎರಡನೇ ಮಗು ಜೇಹ್‌ ಜನಿಸಿದ ಬಳಿಕ ಒಂದೇ ತಿಂಗಳಲ್ಲಿ ಕೆಲಸಕ್ಕೆ ಅಂದರೆ ನಟನೆಗೆ ಮರಳಿದ್ದರು ಈ ಬೆಡಗಿ.

ಕಳೆದ ವರ್ಷ ಅಮೀರ್‌ ಖಾನ್‌ ನಟನೆಯ ʼಲಾಲ್‌ ಸಿಂಗ್‌ ಛಡ್ಡಾʼ ಸಿನಿಮಾದಲ್ಲಿ ಇವರು ಪರದೆಯ ಮೇಲೆ ಕಾಣಿಸಿದ್ದರು. ಈ ಚಿತ್ರಕ್ಕೆ ಅದ್ವಿತ್‌ ಚೌವ್ಹಾಣ್‌ ನಿರ್ದೇಶನ ಮಾಡಿದ್ದರು. ಚಿತ್ರವು ಹಾಲಿವುಡ್‌ನ ʼಫಾರೆಸ್ಟ್ ಗಂಪ್‌ʼನ ಅಧಿಕೃತ ಹಿಂದಿ ರಿಮೇಕ್‌ ಆಗಿತ್ತು. ʼಲಾಲ್‌ ಸಿಂಗ್‌ ಛಡ್ಡಾʼ ಚಿತ್ರ ಮಿಶ್ರ ವಿಮರ್ಶೆ ಪಡೆದಿತ್ತು. ಮೋನಾ ಸಿಂಗ್‌ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.

ಸದ್ಯ ʼದಿ ಕ್ರಿವ್‌ʼ, ʼದಿ ಬಂಕಿಂಗ್‌ಹ್ಯಾಮ್‌ ಮರ್ಡರ್ಸ್‌ʼ ಹಾಗೂ ʼದಿ ಡಿವೋಷನ್‌ ಆಫ್‌ ಸಸ್ಪೆಕ್ಟ್‌ ಎಕ್ಸ್‌ʼ ಸಿನಿಮಾಗಳು ಕರೀನಾ ಕೈಯಲ್ಲಿವೆ.

IPL_Entry_Point

ವಿಭಾಗ