ʻಕರಿಕಾಡʼ ಸಿನಿಮಾ ಮೂಲಕ ಚಂದನವನದಲ್ಲಿ ಅದೃಷ್ಟ ಪರೀಕ್ಷೆಗಿಳಿದ ಟೆಕ್ಕಿ ನಟರಾಜ್
ಬಣ್ಣದ ಲೋಕದ ಕನಸು ಹೊತ್ತು ಕಾಡ ನಟರಾಜ್ ‘ಕರಿಕಾಡ’ ಚಿತ್ರದ ಮೂಲಕ ಪ್ರೇಕ್ಷಕರ ಆಶೀರ್ವಾದ ಗಿಟ್ಟಿಸಿಕೊಳ್ಳಲು ಬರುತ್ತಿದ್ದಾರೆ. ಕಾಡ ನಟರಾಜ್ ಈ ಸಿನಿಮಾದ ನಾಯಕ. ಸದಾ ಚಿತ್ರಜಗತ್ತಿನ ಕನಸು ಕಾಣುತ್ತಾ ಐಟಿ ವಲಯದಲ್ಲಿ ಮಾರ್ಕೆಟಿಂಗ್ ಮತ್ತು ಬ್ರ್ಯಾಂಡಿಂಗ್ ಕೆಲಸ ಮಾಡ್ತಿರೋ ಕಲಾವಿದ.
ಅನೇಕರು ಕನ್ನಡ ಸಿನಿಮಾ ರಂಗಕ್ಕೆ ಬೇರೆ ಬೇರೆ ಕ್ಷೇತ್ರದಿಂದ ಕನಸು ಹೊತ್ತು ಬಂದು ತಮ್ಮದೆಯಾದ ಕೊಡುಗೆಯನ್ನ ನೀಡುತ್ತಾ ಬಂದಿದ್ದಾರೆ. ಅದ್ರಲ್ಲೂ ಐಟಿ ಜಗತ್ತಿನಿಂದ ವಿವಿಧ ಪ್ರತಿಭಾವಂತ ಕಲಾವಿದರು ತಂತ್ರಜ್ಞರು ಆಗಮಿಸಿದ್ದಾರೆ. ಈಗ ಅದೇ ಸಾಲಿಗೆ ಸೇರುವ ಸಿನಿಮಾ ತಂಡವಾಗಲಿದೆ ‘ಕರಿಕಾಡ’. ಕನ್ನಡ ಮಾತ್ರವಲ್ಲದೆ ತಮಿಳು ಭಾಷೆಯಲ್ಲಿಯೂ ಈ ಸಿನಿಮಾ ಬಿಡುಗಡೆ ಆಗಲಿದೆ.
‘ಕರಿಕಾಡ’ ಇದೊಂದು ಮ್ಯೂಸಿಕಲ್ ಜರ್ನಿ & ಅಡ್ವೆಂಚರಸ್ ಎಲಿಮೆಂಟ್ಸ್ ಹೊಂದಿರುವ ಸಿನಿಮಾ. ಬಣ್ಣದ ಲೋಕದ ಕನಸು ಹೊತ್ತು ಕಾಡ ನಟರಾಜ್ ‘ಕರಿಕಾಡ’ ಚಿತ್ರ ಮೂಲಕ ಪ್ರೇಕ್ಷಕರ ಆಶೀರ್ವಾದ ಗಿಟ್ಟಿಸಿಕೊಳ್ಳಲು ಬರುತ್ತಿದ್ದಾರೆ. ಕಾಡ ನಟರಾಜ್ ಈ ಸಿನಿಮಾದ ನಾಯಕ. ಸದಾ ಚಿತ್ರಜಗತ್ತಿನ ಕನಸು ಕಾಣುತ್ತಾ ಐಟಿ ವಲಯದಲ್ಲಿ ಮಾರ್ಕೆಟಿಂಗ್ ಮತ್ತು ಬ್ರ್ಯಾಂಡಿಂಗ್ ಕೆಲಸ ಮಾಡ್ತಿರೋ ಕಲಾವಿದ. ಐಟಿ ಜಗತ್ತಿನಲ್ಲಿ ವಾರದ ಐದು ದಿನ ಕೆಲಸ ಮಾಡಿ ಇನ್ನೆರಡು ದಿನ ಸಿನಿಮಾ ಶೂಟಿಂಗ್‌ನಲ್ಲಿ ಕನಸಿನ ಗುರಿಯ ಕಡೆ ಧ್ಯಾನ ಮಾಡಿದ್ದಾರೆ ಕಾಡ ನಟರಾಜ್.
2024 ಆಗಸ್ಟ್ 15ರಂದು ‘ಕರಿಕಾಡ’ ಚಿತ್ರೀಕರಣದಲ್ಲಿ ಭಾಗವಹಿಸಿ, ಕೆಲಸಕ್ಕೆ ರಜೆ ಸಿಕ್ಕಾಗೆಲ್ಲ ಅಭಿನಯ ಮಾಡಿ ನವೆಂಬರ್ 2024ರ ಒಳಗೆ ಸಿನಿಮಾದ ಮಾತಿನ ಭಾಗ ಕಂಪ್ಲೀಟ್ ಮಾಡಿಕೊಟ್ಟಿದ್ದಾರೆ ಕಾಡ ನಟರಾಜ್. ತಾವೇ ಈ ಸಿನಿಮಾದ ಕಥೆ ಬರೆದಿರೋದು ವಿಶೇಷ. ರಿದ್ಧಿ ಎಂಟರ್ಟೈನ್ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ಕಾಡ ನಟರಾಜ್ ಅವರ ಧರ್ಮಪತ್ನಿ ದೀಪ್ತಿ ದಾಮೋದರ್ ಪತಿಯ ಕನಸಿನ ಗುರಿಗೆ ದಾರಿ ತೋರಿಸಿದ್ದಾರೆ. ಈ ದಾರಿಗೆ ಸ್ನೇಹಿತರಾದ ರವಿಕುಮಾರ್ ಎಸ್.ಆರ್ ಸಹ ನಿರ್ಮಾಣದಲ್ಲಿ ಸಾಥ್ ನೀಡಿದ್ದಾರೆ.
ಇನ್ನೂ ಈ ಸಿನಿಮಾದ ನಿರ್ದೇಶಕರು ಗಿಲ್ಲಿ ವೆಂಕಟೇಶ್. ಕಿರುತೆರೆಯ ಅನೇಕ ರಿಯಾಲಿಟಿ ಶೋಗಳಲ್ಲಿ ಕೆಲಸ ಮಾಡಿದ ಅನುಭವ ಇವರಿಗಿದೆ. ಹುಲಿಬೇಟೆ ಅನ್ನೋ ಸಿನಿಮಾದಲ್ಲಿ ಸಹ ನಿರ್ದೇಶನದ ಜೊತೆಗೆ ನೆಗೆಟಿವ್ ರೋಲ್‌ನಲ್ಲಿಯೂ ನಟಿಸಿದ್ದಾರೆ. ‘ತಾಳಟ್ಟಿ’ ಅನ್ನೋ ಸಿನಿಮಾವನ್ನ ನಿರ್ದೇಶನ ಮಾಡಿರುವ ಗಿಲ್ಲಿ ವೆಂಕಟೇಶ್ ಅವರ ಮಹತ್ವಾಕಾಂಕ್ಷೆಯ ಸಿನಿಮಾ ಕರಿಕಾಡ. ಚಿತ್ರಕತೆ , ಸಂಭಾಷಣೆ ಮತ್ತು ನಿರ್ದೇಶನದ ಜವಾಬ್ದಾರಿಯನ್ನ ವೆಂಕಟೇಶ್ ಹೊತ್ತಿದ್ದಾರೆ.
‘ಕರಿಕಾಡ’ ಚಿತ್ರಕ್ಕೆ ಅತೀಶಯ್ ಜೈನ್ ಹಾಗೂ ಶಶಾಂಕ್ ಶೇಷಗಿರಿ ರಾಗ ಸಂಯೋಜನೆ ಇದೆ. ಶಶಾಂಕ್ ಶೇಷಗರಿ ಅವರು ರಾಗ ಸಂಯೋಜನೆ ಜೊತೆಗೆ ಜಬರ್ದಸ್ತ್ ಹಿನ್ನಲೆ ಸಂಗೀತವನ್ನ ನೀಡಿದ್ದಾರೆ. ಕ್ಯಾಮರಾ ಸಾರಥಿಯಾಗಿ ಜೀವನ್ ಗೌಡ ಕೆಲಸ ಮಾಡಿದ್ದಾರೆ. ದೀಪಕ್ ಸಿ.ಎಸ್ ಸಂಕಲನವಿದೆ. ಚಿಕ್ಕಮಗಳೂರು , ಕಳಸ , ಕುದುರೆ ಮುಖ , ಮಂಡ್ಯ , ಚನ್ನರಾಯಪಟ್ಟಣ ಸೇರಿದಂತೆ ರಾಜ್ಯದ ಅನೇಕ ಸ್ಥಳಗಳಲ್ಲಿ ‘ಕರಿಕಾಡ’ ಚಿತ್ರೀಕರಣವಾಗಿದೆ.
ವಿಭಾಗ