ಕಿರುತೆರೆ ನಟಿಯ ಮೇಲೆ ಅತ್ಯಾಚಾರ ಆರೋಪ, ಕುಲದಲ್ಲಿ ಕೀಳ್ಯಾವುದೋ ಸಿನಿಮಾ ನಟ ಮಡೆನೂರು ಮನು ಬಂಧನ
ಕಾಮಿಡಿ ಕಿಲಾಡಿ ರಿಯಾಲಿಟಿ ಶೋ ಮೂಲಕ ಖ್ಯಾತಿ ಪಡೆದ ಮಡೆನೂರು ಮನು ವಿರುದ್ಧ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಇದೀಗ ಪೊಲೀಸರು ಮಡೆನೂರು ಮನುವನ್ನು ಬಂಧಿಸಿದ್ದಾರೆ. ಮಡೆನೂರು ಮನು ನಟನೆಯ ಕುಲದಲ್ಲಿ ಕೀಳ್ಯಾವುದೋ ಕನ್ನಡ ಸಿನಿಮಾ ನಾಳೆ ಬಿಡುಗಡೆಯಾಗಬೇಕಿತ್ತು.

ಕಾಮಿಡಿ ಕಿಲಾಡಿ ರಿಯಾಲಿಟಿ ಶೋ ಮೂಲಕ ಖ್ಯಾತಿ ಪಡೆದ ಮಡೆನೂರು ಮನು ವಿರುದ್ಧ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಇದೀಗ ಪೊಲೀಸರು ಮಡೆನೂರು ಮನುವನ್ನು ಬಂಧಿಸಿದ್ದಾರೆ. ಮಡೆನೂರು ಮನು ನಟನೆಯ ಕುಲದಲ್ಲಿ ಕೀಳ್ಯಾವುದೋ ಕನ್ನಡ ಸಿನಿಮಾ ನಾಳೆ ಬಿಡುಗಡೆಯಾಗಬೇಕಿತ್ತು. ಅದಕ್ಕೆ ಮೊದಲೇ ಸಿನಿಮಾದ ಪ್ರಮುಖ ನಟನ ಬಂಧನವಾಗಿದೆ.
ಅತ್ಯಾಚಾರ ಆರೋಪದ ಕುರಿತು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗುತ್ತಿದ್ದಂತೆ ನಟ ಮನು ನಾಪತ್ತೆಯಾಗಿದ್ದನು. ಪೊಲೀಸರು ಈತನನ್ನು ಹುಡುಕಿ ಬಂಧಿಸಿದ್ದಾರೆ. "ನಮಗಿಬ್ಬರಿಗೂ 2018ರ ವರ್ಷ ಜೀ ಕನ್ನಡ ಕಾಮಿಡಿ ಕಿಲಾಡಿ ಶೋನಲ್ಲಿ ಪರಿಚಯವಾಗಿತ್ತು. ಇವರಿಗ ದಿವ್ಯಾ ಎಂಬವಳ ಜತೆ ಮದುವೆಯಾಗಿದೆ. ಹೆಣ್ಣು ಮಗುವೂ ಇದೆ. ಕಾಮಿಡಿ ಕಾರ್ಯಕ್ರಮವೊಂದಕ್ಕೆ ಶಿಕಾರಿಪುರಕ್ಕೆ ಹೋದ ಸಂದರ್ಭದಲ್ಲಿ ರೂಂನಲ್ಲಿ ಅತ್ಯಾಚಾರ ನಡೆಸಿದ್ದನು. 2022ರಲ್ಲಿ ಮನೆಗೆ ಬಂದು ಬಲವಂತವಾಗಿ ತಾಳಿ ಕಟ್ಟಿದ್ದಾನೆ. ನನಗೆ ಬೇರೆ ಮನೆ ಮಾಡಿ ಕೊಟ್ಟಿದ್ದನು. ಅಲ್ಲಿ ಹಲವು ಬಾರಿ ಅತ್ಯಾಚಾರ ಮಾಡಿದ್ದನು. ಗರ್ಭಿಣಿಯಾದ ಸಮಯದಲ್ಲಿ ಗರ್ಭಪಾತ ನಡೆಸಿದ್ದನು. ಖಾಸಗಿ ವಿಡಿಯೋ ರೆಕಾರ್ಡ್ ಮಾಡಿ ಬೆದರಿಕೆ ಹಾಕಿದ್ದನು" ಎಂದೆಲ್ಲ ನಟಿಯೊಬ್ಬರು ಮನುವಿನ ವಿರುದ್ಧ ಎಫ್‌ಐಆರ್‌ನಲ್ಲಿ ಆರೋಪಿಸಿದ್ದರು. ಇದೀಗ ಪೊಲೀಸರು ಕಾಮಿಡಿ ಕಿಲಾಡಿ ನಟನನ್ನು ಬಂಧಿಸಿದ್ದಾರೆ.