ಸ್ಥಳೀಯ ಭಾಷೆಯ ಹಾಡು ಕೇಳುವುದು ಭಯೋತ್ಪಾದನೆಯೇ? ಸೋನು ನಿಗಮ್‌ ನಡೆಗೆ ಕನ್ನಡಿಗರ ಆಕ್ರೋಶ ಹೀಗಿದೆ ನೋಡಿ
ಕನ್ನಡ ಸುದ್ದಿ  /  ಮನರಂಜನೆ  /  ಸ್ಥಳೀಯ ಭಾಷೆಯ ಹಾಡು ಕೇಳುವುದು ಭಯೋತ್ಪಾದನೆಯೇ? ಸೋನು ನಿಗಮ್‌ ನಡೆಗೆ ಕನ್ನಡಿಗರ ಆಕ್ರೋಶ ಹೀಗಿದೆ ನೋಡಿ

ಸ್ಥಳೀಯ ಭಾಷೆಯ ಹಾಡು ಕೇಳುವುದು ಭಯೋತ್ಪಾದನೆಯೇ? ಸೋನು ನಿಗಮ್‌ ನಡೆಗೆ ಕನ್ನಡಿಗರ ಆಕ್ರೋಶ ಹೀಗಿದೆ ನೋಡಿ

ಬೆಂಗಳೂರಿನ ಈಸ್ಟ್‌ ಪಾಯಿಂಟ್‌ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಹಾಡು ಹಾಡುವಂತೆ ವೀಕ್ಷಕರಿಂದ ವಿನಂತಿ ಬಂದಾಗ ಖ್ಯಾತ ಗಾಯಕ ಸೋನು ನಿಗಮ್‌‌ ಅವರು "ಕನ್ನಡ... ಕನ್ನಡ... ಪೆಹಲ್ಗಾಮ್‌ ದಾಳಿ ಆಗಿರುವುದು ಇದೇ ಕಾರಣಕ್ಕೆ" ಎಂದಿರುವುದು ಸಾಕಷ್ಟು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಸ್ಥಳೀಯ ಭಾಷೆಯ ಹಾಡು ಕೇಳುವುದು ಭಯೋತ್ಪದನೆಯೇ? ಸೋನು ನಿಗಮ್‌ ನಡೆಗೆ  ಕನ್ನಡಿಗರ ಆಕ್ರೋಶ
ಸ್ಥಳೀಯ ಭಾಷೆಯ ಹಾಡು ಕೇಳುವುದು ಭಯೋತ್ಪದನೆಯೇ? ಸೋನು ನಿಗಮ್‌ ನಡೆಗೆ ಕನ್ನಡಿಗರ ಆಕ್ರೋಶ

ಬೆಂಗಳೂರಿನ ಈಸ್ಟ್‌ ಪಾಯಿಂಟ್‌ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಹಾಡು ಹಾಡುವಂತೆ ವೀಕ್ಷಕರಿಂದ ವಿನಂತಿ ಬಂದಾಗ ಖ್ಯಾತ ಗಾಯಕ ಸೋನು ನಿಗಮ್‌‌ ಅವರು "ಕನ್ನಡ... ಕನ್ನಡ... ಪೆಹಲ್ಗಾಮ್‌ ದಾಳಿ ಆಗಿರುವುದು ಇದೇ ಕಾರಣಕ್ಕೆ" ಎಂದಿರುವುದು ಸಾಕಷ್ಟು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಕಂಡ ಕೆಲವು ಅಭಿಪ್ರಾಯಗಳನ್ನು ಇಲ್ಲಿ ನೀಡಲಾಗಿದೆ.

ಹರೀಶ್‌ ಗಂಗಾಧರ್‌ ಅಭಿಪ್ರಾಯ

ಬಾಲಿವುಡ್‌ನಲ್ಲಿ ನೇಪೋಟಿಸಂ ಇದೆ. ಅಲ್ಲಿ ಗುಂಪುಗಾರಿಕೆ ಇದೆ. ಬೇರೆ ಭಾಷೆಯ ಹಾಡು, ಕಥೆಗಳನ್ನು ಡಬ್ ಮಾಡಿ ತಮ್ಮದಾಗಿಸಿಕೊಳ್ಳುವ ಕನ್ನಿಂಗ್ನೆಸ್ ಇದೆ. ಆದ್ರೆ ಅವರಲ್ಲಿ ಸೋನು ನಿಗಮ್ ನಂತಹ ಧಿಮಾಕಿನ ಮನುಷ್ಯನನ್ನು ಹೊರದಬ್ಬುವ ಗುಣವು ಇದೆ. ನಾನೇ ಶ್ರೇಷ್ಠ, ನಾನೇ ಶ್ರೇಷ್ಠ ಎನ್ನುವ ಶ್ರೇಷ್ಠತೆಯ ವ್ಯಸನ ತಲೆಗೇರಿದ ಮೇಲೆ ಬಾಲಿವುಡ್ ಇವನನ್ನು ಮುಲಾಜಿಲ್ಲದೆ ಹೊರದಬ್ಬಿತ್ತು.

ಅರಿಜಿತ್ ಸಿಂಗ್, ಜುಬಿನ್, ಅರ್ಮಾನ್ ಮಲಿಕ್, ವಿಶಾಲ್ ಮಿಶ್ರ, ಅಮಿತ್ ತಿವಾರಿ, ಅನುಪಮ್ ರಾಯ್ ಬಂದ ಮೇಲೆ ಸೋನು ನಿಗಮ್ ಆವರಿಗೆ ರಿಯಾಲಿಟಿ ಶೋ, ಕಾನ್ಸರ್ಟ್ಸ್ ಗಟ್ಟಿಯಾಗಿದೆ. ವೆಂಟಿಲೇಟರ್‌ನಲ್ಲಿದ್ದ ಇಂತಹ ಹಾಡುಗಾರನಿಗೆ ಉಸಿರುಕೊಟ್ಟಿದ್ದು ಕನ್ನಡ. ವಯಸ್ಸು, ಹೊಸ ದನಿ, ಟ್ರೆಂಡ್ ನೋಡದೆ ಆತನ ಪ್ರತಿಭೆ ಮಣೆ ಹಾಕಿದ ಕನ್ನಡಿಗರು ನಿಗಮ್ ಅವರನ್ನು ದೇವರ ಮಟ್ಟಕ್ಕೆ ಏರಿಸಿದರು. ಮೊನ್ನೆ ಮೊನ್ನೆವರೆಗೆ ಸಾಧಾರಣ ಲಿರಿಕ್ಸ್ ಇರುವ ಮಾಯಾವಿ ಹಾಡು ಕೂಡ ಹಿಟ್ ಆಗುವಂತೆ ಕನ್ನಡಿಗರು ನೋಡಿಕೊಂಡರು. ಆದ್ರೆ ಅವ ಮಾಡಿದ್ದೇನು??? ಕನ್ನಡದ ವ್ಯಂಗ್ಯ. ಕನ್ನಡಿಗರು ಇಟ್ಟಿದ್ದ ಪ್ರೀತಿ, ಅಭಿಮಾನಕ್ಕೆ?? ದೊಡ್ಡ ಅವಮಾನ...

ಕನ್ನಡಾಭಿಮಾನಕ್ಕೂ ಪೆಹಲ್ಗಾಮ್ ಭಯೋತ್ಪಾದಕ ಹೇಯ ಕೃತ್ಯಕ್ಕೂ ಏನಪ್ಪಾ ಸಂಬಂಧ? What is he hinting at? Let me clarify. ಇವನಿಗೆ ಹಣ ಮಾಡಲು ಕನ್ನಡ ಬೇಕು, ಆದ್ರೆ ಇವನಲ್ಲಿ ಒಳಗೊಳಗೆ ಹಿಂದಿಯ ಕುರಿತು ಅತಿಯಾದ ಆರಾಧನೆ ಅಭಿಮಾನ ಇದೆ. ಅದನ್ನು ನಾವು ಕಲಿಯದೇ ಇದ್ದಿದ್ದಕ್ಕೆ, ಆ ಭಾಷೆಯನ್ನು ನಾವು ರಾಷ್ಟ್ರೀಯ ಭಾಷೆ ಎಂದು ಒಪ್ಪದಿದ್ದಿದಕ್ಕೆ ನಮ್ಮ ದೇಶದಲ್ಲಿ ಐಕ್ಯತೆ ಇಲ್ಲ ಎಂದು ಸೂಚಿಸಲು ಹೋಗಿದ್ದಾನೆ ಅಷ್ಟೇ... Such flawed logic...

ಪರಭಾಷೆಯವರನ್ನು ಕರೆಸಿ ಕನ್ನಡಿಗರು ಅವಮಾನ ಮಾಡಿಸಿಕೊಂಡಿದ್ದು ಇದೆ ಮೊದಲಲ್ಲ. ಆದರೆ ನಾವು ಏನನ್ನೂ ಕಲಿತಿಲ್ಲ. ನಮ್ಮ ನೆಲದ ಪ್ರತಿಭೆಗಳನ್ನು ಗುರುತಿಸಿ ಬೆಳೆಸುವುದಕ್ಕೆ ಈ ಅವಮಾನ ಪಾಠವಾಗಲಿ ಅಷ್ಟೆ... ಎಂದು ಹರೀಶ್‌ ಗಂಗಾಧರ್‌ ಅಭಿಪ್ರಾಯಪಟ್ಟಿದ್ದಾರೆ.

ಶಿವಕುಮಾರ್‌ ಮಾವಳ್ಳಿ ಅಭಿಪ್ರಾಯ

ಕಾರ್ಯಕ್ರಮ ಇದ್ದದ್ದೆಲ್ಲಿ?

ಬೆಂಗಳೂರಿನಲ್ಲಿ...

ಹಾಡಲು ಬೇಡಿಕೆ ಇಟ್ಟದ್ದು ಯಾವ ಹಾಡಿಗೆ?

ಕನ್ನಡ ಹಾಡಿಗೆ...

ಸೋನು ನಿಗಮ್ ಇದುವರೆಗೆ ಎಷ್ಟು ಕನ್ನಡ ಹಾಡು ಹಾಡಿದ್ದಾರೆ?

900ಕ್ಕೂ ಹೆಚ್ಚು...

ಹಾಗಿದ್ದಮೇಲೆ ವಿದ್ಯಾರ್ಥಿಯೊಬ್ಬ ಕನ್ನಡ ಹಾಡು ಹಾಡಿ ಎಂದಾಗ ಅದರಲ್ಲಿ ಭಯೋತ್ಪಾದನೆಯ ಅಂಶ ಹೇಗೆ ಕಂಡಿತು? ಹಣಕ್ಕಾಗಿ ಹಾಡುವ ಈತ ಕಾಲೇಜಿನ ಕಾರ್ಯಕ್ರಮಕ್ಕೂ ಹಣಕ್ಕಾಗಿಯೇ ಬಂದಿರುತ್ತಾನೆ ಅಲ್ಲವೆ? ಆ ದೃಷ್ಟಿಕೋನದಲ್ಲಿ ನೋಡಿದರೂ ಹಣ ಕೊಡುವವರಿಗೆ ಆತನೇ ಸಿನಿಮಾದಲ್ಲಿ ದುಡ್ಡು ಪಡೆದು ಹಾಡಿರುವ ಹಾಡನ್ನೇ ಇಲ್ಲಿಯೂ ದುಡ್ಡಿಗಾಗಿಯೇ ಹಾಡಲು ಹೇಳಿದರೆ ಏಕೆ ಅದು 'ಭಾಷಾ ಹೇರಿಕೆ'ಯಂತೆ ಭಾಸವಾಗಬೇಕು? ತಾನು ಹೋಗುತ್ತಿರುವುದು ಬೆಂಗಳೂರಿನ ಕಾರ್ಯಕ್ರಮಕ್ಕೆ ಎಂಬ ಸಾಮಾನ್ಯ ಪ್ರಜ್ಞೆಯಿಲ್ಲದೆ ಹೋದರೆ ತನ್ನ ಭಾಷೆಯಲ್ಲಿ ಹಾಡು ಕೇಳುವ ಸ್ಥಳೀಯನ ಬೇಡಿಕೆ ಭಯೋತ್ಪಾದನೆಯಂತೆ ಭಾಸವಾಗುವುದಾದರೂ ಹೇಗೆ? ಎಂದು ಶಿವಕುಮಾರ್‌ ಮಾವಳ್ಳಿ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.

ಮನೋಜ್‌ ಆರ್‌ ಕಂಬಳಿ ಅಭಿಪ್ರಾಯ

ಬೆಂಗಳೂರಿನ ಈಸ್ಟ್ ಪಾಯಿಂಟ್ ಕಾಲೇಜು ಕಾರ್ಯಕ್ರಮಕ್ಕೆ ಹಾಡಲು ಸೋನು‌ ನಿಗಮ್ ನನ್ನು ಕರೆಸಿತ್ತು. ಹಾಡಿನ ಕಾರ್ಯಕ್ರಮದ ನಡುವೆ ಒಬ್ಬ ವಿದ್ಯಾರ್ಥಿ "ಕನ್ನಡ ಸಾಂಗ್" ಅಂತ ಕೇಳಿದ್ದಾನೆ. ಅದಕ್ಕೆ ಸೋನು ನಿಗಮ್ "ಈ ಕಾರಣಕ್ಕೆ ಪಹಲ್ಗಾಮ್ನಲ್ಲಿ ಅಟ್ಯಾಕ್ ಆಗಿದ್ದು" ಅಂತ ಉತ್ತರ ಕೊಟ್ಟಿದ್ದಾನೆ.

ಈ ಹೇಳಿಕೆಯನ್ನು ಖಂಡಿಸಿದ ತಕ್ಷಣ "ನಾನು ಈಗಾಗಲೇ ಸಾವಿರಾರು ಹಾಡುಗಳನ್ನು ಹಾಡಿದ್ದೇನೆ. ಆದರೆ ನನ್ನ ಜೀವನದ ಬೆಸ್ಟ್ ಸಾಂಗ್ ಗಳನ್ನು ಹಾಡಿದ್ದು ಕನ್ನಡದಲ್ಲಿಯೇ" ಅಂತ ಹೇಳಿ ಮೆತ್ತಗೆ ಜಾರಿಕೊಳ್ಳಲು ಯತ್ನಸಿದ್ದಾನೆ.

ಬಾಲಿವುಡ್ ನಿಂದ ಹೊರದೊಬ್ಬಿದ ಮೇಲೆ ಆತನಿಗೆ ಅನ್ನ ಕೊಟ್ಟಿದ್ದು ಕನ್ನಡ, ಕನ್ನಡಿಗರು. ಆತನಿಗಿರುವ ವಾಯ್ಸ್, ಟ್ಯಾಲೆಂಟ್‌ನಿಂದ ಕನ್ನಡದ ಹಲವಾರು ಸಿನಿಮಾಗಳಿಗೆ ಹಾಡಲು ಅವಕಾಶ ಸಿಕ್ಕಿತು. ಆತ ಬೇರೆ ಯಾವುದೇ ಭಾಷೆಯ ಚಿತ್ರದಲ್ಲಿ ಹಾಡಿದ್ದಕ್ಕಿಂತ ಕನ್ನಡದಲ್ಲಿಯೇ ಅತಿ ಹೆಚ್ಚು ಹಾಡುಗಳನ್ನು ಹಾಡಿದ್ದು. ಅಂದ್ರೆ ಆತನಿಗೆ ಅನ್ನ ಹಾಕಿ ಬೆಳೆಸಿದ್ದು ಕನ್ನಡದ ನಿರ್ಮಾಪಕರು ಮತ್ತು ಸಂಗೀತ ನಿರ್ದೇಶಕರು. ಈಗ ಈ ದುಷ್ಟ ಕರ್ನಾಟಕದಲ್ಲಿಯೇ ಕನ್ನಡಿಗರ ಬಗ್ಗೆ ಕನ್ನಡದ ಬಗ್ಗೆ ಇಂತಹ ಆರೋಪ ಮಾಡಿದ್ದು ನಿಜಕ್ಕೂ ಕೋಪ ತರಿಸುವಂತಹದ್ದು.

ಈವನಿಗೆ ನಾನೇ ಶ್ರೇಷ್ಠ ಎನ್ನುವ ವ್ಯಸನ ಸಾಕಷ್ಟಿದೆ. ಈ ದುರಹಂಕಾರಿಯ‌ನ್ನು ಕನ್ನಡಿಗರು ಸಹಿಸಿಕೊಳ್ಳಬೇಕಾ? ಮುಂಗಾರುಮಳೆಯಿಂದ ಹಿಡಿದು ಮೊನ್ನೆ ಮೊನ್ನೆ 'ಮಾಯಾವಿ' ಸಾಂಗ್ ನ್ನು ಹಿಟ್ ಮಾಡಿದ್ದು ಕನ್ನಡಿಗರು. ಕನ್ನಡದ ಕಿವಿಗಳು.‌ ಆದರೆ ಇವನು ಮಾಡಿದ್ದು ಕನ್ನಡಿಗರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಹೊರಟಿದ್ದಾನೆ.

ಕಳೆದ ವಾರ ನಾರ್ತಿ ಕಮ್ಯಾಂಡರ್ ಕನ್ನಡಿಗನ ಮೇಲೆ ಹಲ್ಲೆ ಮಾಡಿದ್ದ. ಧ್ರುವ್ ರಾಠಿ ಎನ್ನುವ ಯೂಟ್ಯೂಬರ್ ಕರ್ನಾಟಕದ ಮೇಲೆ ಸುಲಭವಾಗಿ ಆರೋಪ ಮಾಡಿದ.

ಪಹಾಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕರ ಕೃತ್ಯಕ್ಕೂ ಕನ್ನಡಿಗರೂ ಏನು ಸಂಬಂದ? ಕನ್ನಡಿಗರು ಅಂದರೆ ಏನೂ ಬೇಕಾದರೂ ಹೇಳಬಹುದು ಅಂದ್ಕೊಂಡ್ಯಾ? ಇವನಿಗೆ ತಿನ್ನಲು ಕನ್ನಡಿಗರ ದುಡ್ಡು ಬೇಕು. ಇವನ ಹಾಡು ಕೇಳಲು ಕನ್ನಡಿಗರು ಬೇಕು. ಈ ರೀತಿಯಲ್ಲಿ ಸುಲಭವಾಗಿ ಕನ್ನಡಿಗರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ್ದು ಇದು‌ ಮೊದಲೆನಲ್ಲ. ಇಂತಹ ದುರಹಂಕಾರದ ಮಾತುಗಳಿಂದ ನಾವು ಏನನ್ನು ಕಲಿತಿಲ್ಲ ಅನಿಸುತ್ತದೆ. ಕನ್ನಡಿಗರಿಗೆ ಅವಕಾಶ ಕೊಟ್ಟರೆ ಇಂತಹ ದುಷ್ಟರು ಕನ್ನಡದ ನೆಲಕ್ಕೆ, ಕರ್ನಾಟಕಕ್ಕೆ ಕಾಲಿಡಲು ಯೋಚಿಸುತ್ತಾರೆ ಎಂದು ಮನೋಜ್‌ ಆರ್‌ ಕಂಬಳಿ ಅಭಿಪ್ರಾಯಪಟ್ಟಿದ್ದಾರೆ.

ವೆಂಕಟೇಶ್‌ ಪ್ರಸಾದ್‌ ಅಭಿಮತ

"ಕನ್ನಡ ಹಾಡುಗಳನ್ನು ಹಾಡಿಯೇ ಸೋನು ನಿಗಮ್ ಕೋಟ್ಯಾಂತರ ಹಣ ದುಡಿದಿದ್ದಾರೆ. ನಮ್ಮ ನಾಡಿನಲ್ಲಿ ನಡೆದ ಬಹುತೇಕ ಎಲ್ಲಾ ದೊಡ್ಡ ಕಾರ್ಯಕ್ರಮಗಳ ವೇದಿಕೆಗಳಲ್ಲಿ ಹಾಡಿ ಅಲ್ಲೂ ಹಣ ದುಡಿದಿದ್ದಾರೆ. ಅಷ್ಟಕ್ಕೂ ಇದು ಎಷ್ಟು ದುಡಿದರು ಪ್ರಶ್ನೆ ಅಲ್ಲ‌. ಉತ್ತರ ಭಾರತದವರಿಗೆ ನಮ್ಮ ದಕ್ಷಿಣ ಭಾರತದವರನ್ನು ಕಂಡರೆ ಇರುವ ತಾತ್ಸಾರ. ಅದರಲ್ಲೂ ನಾವು ಕನ್ನಡಿಗರು ಹಿಂದಿ ಮಾತಾಡುವವರು ಅಂದರೆ ತಲೆ‌ ಮೇಲೆ ಕೂರಿಸಿಕೊಳ್ಳುವವರು, ಅದಕ್ಕೆ ನಮ್ಮ ತಲೆ ಮೇಲೆ ಯಾವಾಗಲೂ ಅವರು ಸವಾರಿ ಮಾಡ್ತಾನೇ ಇರ್ತಾರೆ. ಇನ್ನಾದರೂ ನಾವು ಇಂಥವರಿಗೆ ಮಣೆ ಹಾಕುವುದನ್ನು ನಿಲ್ಲಿಸಿ ನಮ್ಮ ಪ್ರತಿಭೆಗಳಿಗೆ ಬೆಲೆ ಕೊಡುವುದನ್ನು ಕಲಿಯಬೇಕು. ಸೋನು ನಿಗಮ್ ಹಾಡಿರುವ ಎಷ್ಟೋ ಹಾಡುಗಳನ್ನು ಕೇಳಿ ಮೆಚ್ಚಿರುವ ಕೊಟ್ಯಾಂತರ ಜನರಲ್ಲಿ ನಾನೂ ಒಬ್ಬ. ಆದರೆ ಇನ್ನು ಮುಂದೆ ಆತನ ಹಾಡು ಕೇಳಿದರೆ ಮನಸ್ಸಿಗೆ ಕಿರಿಕಿರಿಯಾಗುವುದು ಖಂಡಿತ. ಕನ್ನಡ ಭಾಷೆಗೆ ಅವಮಾನ ಮಾಡಿದ ಸೋನು ನಿಗಮ್ ಗೆ ಧಿಕ್ಕಾರ , ಧಿಕ್ಕಾರ, ಧಿಕ್ಕಾರ" ಎಂದು ವೆಂಕಟೇಶ್‌ ಪ್ರಸಾದ್‌ ಬರೆದಿದ್ದಾರೆ.

ಕನ್ನಡ‌...ಕನ್ನಡ ಹಾಡು ಹಾಡಿ‌.. ಅಂದಿದ್ದಕ್ಕೂ ಪೆಹಲ್ಗಾಮ್ ಘಟನೆಗೂ ಏನ್ ಸಂಬಂಧ? ಭಾಷೆ ಹೇರಿಕೆಗೂ, ಪೆಹಲ್ಗಾಮ್ ದಾಳಿಗೆ ಹೇಗೆ ಕಾರಣ?

ಅಂದ್ರೆ, ಸೋನು ನಿಗಮ್ ಉಗ್ರರ ಪರವಾಗಿ ಮಾತನಾಡಿದ್ದಾ? ಉಗ್ರರ ದಾಳಿ ಸಮರ್ಥಿಸಿಕೊಂಡಿದ್ದಾ? ಕನ್ನಡಿಗರಿಗೆ ತಕ್ಕ ಶಾಸ್ತಿಯಾಯ್ತು ಅಂತ ಖುಷಿಪಟ್ಟು ಹೇಳಿದ್ದಾ? ಪೆಹಲ್ಗಾಮ್​ನಲ್ಲಿ ಇಬ್ಬರು ಕನ್ನಡಿಗರ ಹತ್ಯೆಗೆ ಸಂತಾಪ ಸೂಚಿಸಬೇಕಿತ್ತಲ್ವಾ ? ಅದು ಬಿಟ್ಟು, ಕನ್ನಡ ಅಂತ ಭಯಪಡಿಸಿದ್ದಕ್ಕೆ ಉಗ್ರರು ಕೊಂದು ಹಾಕಿದ್ದು ಅನ್ನೋ ಮಾತಾ?

ಉಗ್ರರು ಕನ್ನಡಿಗರನ್ನು ಕೊಂದು ತಕ್ಕ ಶಾಸ್ತಿ ಮಾಡಿದ್ರು ಅನ್ನೋ ಒಳಾರ್ಥವಾ? ಭಯಪಡಿಸೋದೂ ಭಯೋತ್ಪಾದನೆ, ಅದಕ್ಕೆ ಭಯೋತ್ಪಾದಕರು ಹೊಡೆದು ಹಾಕಿದ್ರು ಅನ್ನೋ ಸಮರ್ಥನೆಯ ಮಾತಾ?

ಭಾಷಾಭಿಮಾನಕ್ಕೂ ಮತಾಂಧತೆಗೂ ವ್ಯತ್ಯಾಸ ತಿಳಿಯದಷ್ಟು ಮೂಢರೇ ನೋನು?

ಆಗಿದ್ದಿಷ್ಟು- ಬೆಂಗಳೂರು ಕಾಲೇಜಿನಲ್ಲಿ ಸಂಗೀತ ಕಾರ್ಯಕ್ರಮ. ಸೋನು ನಿಗಮ್ ಅಂದ್ರೆ ಕನ್ನಡಿಗರಿಗೆ ಹುಚ್ಚು ಪ್ರೀತಿ. ಎಂದಿನಂತೆ, ಕನ್ನಡ ಹಾಡು ಹಾಡಿ ಅಂತ ಪ್ರೇಕ್ಷಕರಿಂದ ಡಿಮ್ಯಾಂಡ್.

ಯಾಕೋ ಇರಿಟೇಟ್ ಆದ ಸೋನು ನಿಗಮ್​, ‘ಕರ್ನಾಟಕಕ್ಕೆ ಬರುವಾಗ ತುಂಬಾ ಖುಷಿಯಾಗುತ್ತೆ. ದಿ ಬೆಸ್ಟ್ ಸಾಂಗ್ಸ್ ಹಾಡಿರೋದು ಹೆಚ್ಚು ಕನ್ನಡದಲ್ಲಿ. ಸಾಮಾನ್ಯವಾಗಿ ಕನ್ನಡ ಸಾಂಗ್ಸ್ ಹಾಡಿ ಅಂತ ಕೇಳ್ತಾರೆ

ಆದರೆ, ಕೆಲವರು ಕನ್ನಡ...ಕನ್ನಡ.. ಅಂತ ಭಯಪಡಿಸ್ತೀರ. ಇದೇ ಇದೇ, ಕಾರಣಕ್ಕೆ ಪೆಹಲ್ಗಾಮ್ ಘಟನೆ ಆಗಿದ್ದು’ ಎಂದು ಬಿಟ್ಟರು.

ಹಿಂದಿ ಭಾಷಿಗರಿಗೆ ಕನ್ನಡ ಮಾತಾಡಿ ಅಂತ ಒತ್ತಾಯಿದ್ದನ್ನು ಬಹುಶಃ ಸೋನು ನಿಗಮ್​ ಮನಸ್ಸಲ್ಲಿಟ್ಟುಕೊಂಡಿರಬೇಕು. ಅವರ ಮಾತೃಭಾಷಾಭಿಮಾನದ ಕಿಚ್ಚು ಹೊತ್ತಿಕೊಂಡಿರಬೇಕು.

ಕನ್ನಡ, ಕನ್ನಡ ಎಂದು ಅಭಿಮಾನಿಗಳು ಕೂಗಿಕೊಂಡಿದ್ದೇ AK47 ಶಬ್ಧದಂತೆ ಸೋನು ನಿಗಮ್​ಗೆ ಕೇಳಿಸಿಬಿಟ್ಟಿತಾ? ಹಿಂದೆಲ್ಲ, ತಾವಾಗಿಯೇ ಕನ್ನಡ ಹಾಡು ಹಾಡಿ, ಕನ್ನಡಿಗರನ್ನು ಹಾಡಿಹೊಗಳುತ್ತಿದ್ದ ಸೋನುಗೆ ಈಗ್ಯಾಕೆ ಕನ್ನಡ ಹಾಡಿ ಅಂದ್ರೆ ಭಯವಾಗುತ್ತೆ? ಕನ್ನಡ ಹಾಡುಗಳಿಂದ ಸೋನು ನಿಗಮ್​ ಇಮೇಜ್​ ಬದಲಾಯ್ತು, ಅವರ ಸಂಭಾವನೆಯೂ ಏರಿತು. ಕನ್ನಡದಿಂದ ಸೋನು ನಿಗಮ್ ಗಳಿಸಿದ್ದಕ್ಕೆ ಲೆಕ್ಕವಿಲ್ಲ.

ಇತ್ತೀಚಿಗೆ ಕನ್ನಡ, ಕನ್ನಡಿಗರು, ಬೆಂಗಳೂರಿಗರ ಬಗ್ಗೆ ಉತ್ತರ ಭಾರತೀಯರಲ್ಲಿ ಹೆಚ್ಚುತ್ತಿರೋ ಅಸಹನೆಯೇ ಸೋನು ನಿಗಮ್​ಗೂ ತಾಕಿದಂತಾಗಿದೆ. ಕನ್ನಡ ಎಂದು ಭಯಪಡಿಸಬೇಡಿ, ಹೀಗೆ ಭಯಪಡಿಸಿದ್ರೆ ಪಹಲ್ಗಾಮ್​ನಲ್ಲಿ ಉಗ್ರರು ಗುಂಡಿಕ್ಕಿದಂಥ ಘಟನೆ ಆಗಬಹುದು ಅನ್ನೋ ಪರೋಕ್ಷ ಎಚ್ಚರಿಕೆಯೇ?

ಯಾಕೋ ಸೋನಿ ನಿಗಮ್ ಸ್ವರ ಹಳಿತಪ್ಪಿದೆ.

ಶೃತಿ ಹಿಡಿದು ಸ್ವರ ಹಳಿಗೆ ತರುವುದು ಕನ್ನಡಿಗರಿಗೆ ಗೊತ್ತು ಬಿಡಿ.

ಕನ್ನಡಿಗರ ಪ್ರೀತಿಯನ್ನಷ್ಟೇ ಸವಿದಿದ್ದ ಸೋನು ನಿಗಮ್​ಗೆ ಮೊದಲ ಬಾರಿಗೆ ಕನ್ನಡಿಗರ ಕೆಂಗಣ್ಣಿನ ದರ್ಶನವಾಗುತ್ತಿದೆ. ಇದು ಆಗಬೇಕಿತ್ತು.

ಶೋಭಾ ಮಳವಳ್ಳಿ ಅಭಿಪ್ರಾಯ

" ಕನ್ನಡ‌...ಕನ್ನಡ ಹಾಡು ಹಾಡಿ‌.. ಅಂದಿದ್ದಕ್ಕೂ ಪೆಹಲ್ಗಾಮ್ ಘಟನೆಗೂ ಏನ್ ಸಂಬಂಧ? ಭಾಷೆ ಹೇರಿಕೆಗೂ, ಪೆಹಲ್ಗಾಮ್ ದಾಳಿಗೆ ಹೇಗೆ ಕಾರಣ?

ಅಂದ್ರೆ, ಸೋನು ನಿಗಮ್ ಉಗ್ರರ ಪರವಾಗಿ ಮಾತನಾಡಿದ್ದಾ? ಉಗ್ರರ ದಾಳಿ ಸಮರ್ಥಿಸಿಕೊಂಡಿದ್ದಾ? ಕನ್ನಡಿಗರಿಗೆ ತಕ್ಕ ಶಾಸ್ತಿಯಾಯ್ತು ಅಂತ ಖುಷಿಪಟ್ಟು ಹೇಳಿದ್ದಾ? ಪೆಹಲ್ಗಾಮ್​ನಲ್ಲಿ ಇಬ್ಬರು ಕನ್ನಡಿಗರ ಹತ್ಯೆಗೆ ಸಂತಾಪ ಸೂಚಿಸಬೇಕಿತ್ತಲ್ವಾ ? ಅದು ಬಿಟ್ಟು, ಕನ್ನಡ ಅಂತ ಭಯಪಡಿಸಿದ್ದಕ್ಕೆ ಉಗ್ರರು ಕೊಂದು ಹಾಕಿದ್ದು ಅನ್ನೋ ಮಾತಾ?

ಉಗ್ರರು ಕನ್ನಡಿಗರನ್ನು ಕೊಂದು ತಕ್ಕ ಶಾಸ್ತಿ ಮಾಡಿದ್ರು ಅನ್ನೋ ಒಳಾರ್ಥವಾ? ಭಯಪಡಿಸೋದೂ ಭಯೋತ್ಪಾದನೆ, ಅದಕ್ಕೆ ಭಯೋತ್ಪಾದಕರು ಹೊಡೆದು ಹಾಕಿದ್ರು ಅನ್ನೋ ಸಮರ್ಥನೆಯ ಮಾತಾ?

ಭಾಷಾಭಿಮಾನಕ್ಕೂ ಮತಾಂಧತೆಗೂ ವ್ಯತ್ಯಾಸ ತಿಳಿಯದಷ್ಟು ಮೂಢರೇ ನೋನು?

ಆಗಿದ್ದಿಷ್ಟು- ಬೆಂಗಳೂರು ಕಾಲೇಜಿನಲ್ಲಿ ಸಂಗೀತ ಕಾರ್ಯಕ್ರಮ. ಸೋನು ನಿಗಮ್ ಅಂದ್ರೆ ಕನ್ನಡಿಗರಿಗೆ ಹುಚ್ಚು ಪ್ರೀತಿ. ಎಂದಿನಂತೆ, ಕನ್ನಡ ಹಾಡು ಹಾಡಿ ಅಂತ ಪ್ರೇಕ್ಷಕರಿಂದ ಡಿಮ್ಯಾಂಡ್.

ಯಾಕೋ ಇರಿಟೇಟ್ ಆದ ಸೋನು ನಿಗಮ್​, ‘ಕರ್ನಾಟಕಕ್ಕೆ ಬರುವಾಗ ತುಂಬಾ ಖುಷಿಯಾಗುತ್ತೆ. ದಿ ಬೆಸ್ಟ್ ಸಾಂಗ್ಸ್ ಹಾಡಿರೋದು ಹೆಚ್ಚು ಕನ್ನಡದಲ್ಲಿ. ಸಾಮಾನ್ಯವಾಗಿ ಕನ್ನಡ ಸಾಂಗ್ಸ್ ಹಾಡಿ ಅಂತ ಕೇಳ್ತಾರೆ

ಆದರೆ, ಕೆಲವರು ಕನ್ನಡ...ಕನ್ನಡ.. ಅಂತ ಭಯಪಡಿಸ್ತೀರ. ಇದೇ ಇದೇ, ಕಾರಣಕ್ಕೆ ಪೆಹಲ್ಗಾಮ್ ಘಟನೆ ಆಗಿದ್ದು’ ಎಂದು ಬಿಟ್ಟರು.

ಹಿಂದಿ ಭಾಷಿಗರಿಗೆ ಕನ್ನಡ ಮಾತಾಡಿ ಅಂತ ಒತ್ತಾಯಿದ್ದನ್ನು ಬಹುಶಃ ಸೋನು ನಿಗಮ್​ ಮನಸ್ಸಲ್ಲಿಟ್ಟುಕೊಂಡಿರಬೇಕು. ಅವರ ಮಾತೃಭಾಷಾಭಿಮಾನದ ಕಿಚ್ಚು ಹೊತ್ತಿಕೊಂಡಿರಬೇಕು.

ಕನ್ನಡ, ಕನ್ನಡ ಎಂದು ಅಭಿಮಾನಿಗಳು ಕೂಗಿಕೊಂಡಿದ್ದೇ AK47 ಶಬ್ಧದಂತೆ ಸೋನು ನಿಗಮ್​ಗೆ ಕೇಳಿಸಿಬಿಟ್ಟಿತಾ? ಹಿಂದೆಲ್ಲ, ತಾವಾಗಿಯೇ ಕನ್ನಡ ಹಾಡು ಹಾಡಿ, ಕನ್ನಡಿಗರನ್ನು ಹಾಡಿಹೊಗಳುತ್ತಿದ್ದ ಸೋನುಗೆ ಈಗ್ಯಾಕೆ ಕನ್ನಡ ಹಾಡಿ ಅಂದ್ರೆ ಭಯವಾಗುತ್ತೆ? ಕನ್ನಡ ಹಾಡುಗಳಿಂದ ಸೋನು ನಿಗಮ್​ ಇಮೇಜ್​ ಬದಲಾಯ್ತು, ಅವರ ಸಂಭಾವನೆಯೂ ಏರಿತು. ಕನ್ನಡದಿಂದ ಸೋನು ನಿಗಮ್ ಗಳಿಸಿದ್ದಕ್ಕೆ ಲೆಕ್ಕವಿಲ್ಲ.

ಇತ್ತೀಚಿಗೆ ಕನ್ನಡ, ಕನ್ನಡಿಗರು, ಬೆಂಗಳೂರಿಗರ ಬಗ್ಗೆ ಉತ್ತರ ಭಾರತೀಯರಲ್ಲಿ ಹೆಚ್ಚುತ್ತಿರೋ ಅಸಹನೆಯೇ ಸೋನು ನಿಗಮ್​ಗೂ ತಾಕಿದಂತಾಗಿದೆ. ಕನ್ನಡ ಎಂದು ಭಯಪಡಿಸಬೇಡಿ, ಹೀಗೆ ಭಯಪಡಿಸಿದ್ರೆ ಪಹಲ್ಗಾಮ್​ನಲ್ಲಿ ಉಗ್ರರು ಗುಂಡಿಕ್ಕಿದಂಥ ಘಟನೆ ಆಗಬಹುದು ಅನ್ನೋ ಪರೋಕ್ಷ ಎಚ್ಚರಿಕೆಯೇ?

ಯಾಕೋ ಸೋನಿ ನಿಗಮ್ ಸ್ವರ ಹಳಿತಪ್ಪಿದೆ.

ಶೃತಿ ಹಿಡಿದು ಸ್ವರ ಹಳಿಗೆ ತರುವುದು ಕನ್ನಡಿಗರಿಗೆ ಗೊತ್ತು ಬಿಡಿ.

ಕನ್ನಡಿಗರ ಪ್ರೀತಿಯನ್ನಷ್ಟೇ ಸವಿದಿದ್ದ ಸೋನು ನಿಗಮ್​ಗೆ ಮೊದಲ ಬಾರಿಗೆ ಕನ್ನಡಿಗರ ಕೆಂಗಣ್ಣಿನ ದರ್ಶನವಾಗುತ್ತಿದೆ. ಇದು ಆಗಬೇಕಿತ್ತು." ಎಂದು ಶೋಭಾ ಮಳವಳ್ಳಿ ಅಭಿಪ್ರಾಯಪಟ್ಟಿದ್ದಾರೆ.

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in