ನಾಗವಲ್ಲಿ ಬಂಗಲೆ ಚಿತ್ರದ ಟೀಸರ್‌ ಬಿಡುಗಡೆ; ಅರಿಷಡ್ವರ್ಗಗಳ ಹಿನ್ನೆಲೆಯಲ್ಲಿ ಸಾಗುವ ಸಿನಿಮಾ ಫೆಬ್ರವರಿ 28ಕ್ಕೆ ತೆರೆಗೆ
ಕನ್ನಡ ಸುದ್ದಿ  /  ಮನರಂಜನೆ  /  ನಾಗವಲ್ಲಿ ಬಂಗಲೆ ಚಿತ್ರದ ಟೀಸರ್‌ ಬಿಡುಗಡೆ; ಅರಿಷಡ್ವರ್ಗಗಳ ಹಿನ್ನೆಲೆಯಲ್ಲಿ ಸಾಗುವ ಸಿನಿಮಾ ಫೆಬ್ರವರಿ 28ಕ್ಕೆ ತೆರೆಗೆ

ನಾಗವಲ್ಲಿ ಬಂಗಲೆ ಚಿತ್ರದ ಟೀಸರ್‌ ಬಿಡುಗಡೆ; ಅರಿಷಡ್ವರ್ಗಗಳ ಹಿನ್ನೆಲೆಯಲ್ಲಿ ಸಾಗುವ ಸಿನಿಮಾ ಫೆಬ್ರವರಿ 28ಕ್ಕೆ ತೆರೆಗೆ

Nagavalli Bangale Teaser: ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ಈ ಆರು ಗುಣಗಳನ್ನು ಪ್ರತಿನಿಧಿಸುವ ಆರು ಮುಖ್ಯಪಾತ್ರಗಳ ಹಿನ್ನೆಲೆಯಲ್ಲಿ "ನಾಗವಲ್ಲಿ ಬಂಗಲೆ" ಸಿನಿಮಾ ಸಾಗಲಿದೆ. ಇತ್ತೀಚೆಗಷ್ಟೇ ಈ ಚಿತ್ರದ ಟೀಸರ್‌ ಬಿಡುಗಡೆ ಆಗಿದೆ.

ನಾಗವಲ್ಲಿ ಬಂಗಲೆ ಚಿತ್ರದ ಟೀಸರ್‌ ಬಿಡುಗಡೆ
ನಾಗವಲ್ಲಿ ಬಂಗಲೆ ಚಿತ್ರದ ಟೀಸರ್‌ ಬಿಡುಗಡೆ

Nagavalli Bangale Teaser: ವಿಭಿನ್ನ ಕಂಟೆಂಟ್ ಹೊಂದಿರುವ ಹಾರರ್ ಜಾನರ್ ಚಿತ್ರ ನಾಗವಲ್ಲಿ ಬಂಗಲೆ. ಇತ್ತೀಚೆಗೆ ಈ ಚಿತ್ರದ ಟೀಸರ್ ಹಾಗೂ ಪೋಸ್ಟರ್ ಬಿಡುಗಡೆಯಾಯಿತು. ಶಾಸಕ ಕೆ.ಗೋಪಾಲಯ್ಯ ಹಾಗೂ ಲಹರಿ ವೇಲು ಚಿತ್ರದ ಟೀಸರ್ ಹಾಗೂ ಪೋಸ್ಟರ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

"ನಾಗವಲ್ಲಿ ಬಂಗಲೆ" ಚಿತ್ರದಲ್ಲಿ ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ಈ ಆರು ಗುಣಗಳನ್ನು ಪ್ರತಿನಿಧಿಸುವ ಆರು ಮುಖ್ಯಪಾತ್ರಗಳಿರುತ್ತವೆ. ಆರು ಜನ ಹುಡುಗಿಯರು ಈ ಆರು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಆರು ಪಾತ್ರಗಳು "ನಾಗವಲ್ಲಿ ಬಂಗಲೆ" ಪ್ರವೇಶಿಸಿದಾಗ ಏನೆಲ್ಲಾ ಆಗುತ್ತದೆ ಎಂಬುದೇ ಚಿತ್ರದ ಕಥಾ ಹಂದರ ಎಂದು ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಜೆ.ಎಂ.ಪ್ರಹ್ಲಾದ್ ತಿಳಿಸಿದರು.‌

ನಮ್ಮ ಆಫೀಸ್‌ನಲ್ಲಿ ನಾನು ಹಾಗೂ ಜೆ.ಎಂ. ಪ್ರಹ್ಲಾದ್ ಅವರಿದ್ದಾಗ ಅಲ್ಲಿಗೆ ಆಗಮಿಸಿದ ನಿರ್ಮಾಪಕ ನೆ.ಲ ಮಹೇಶ್, ಜೆ.ಎಂ. ಪ್ರಹ್ಲಾದ್ ಅವರು ಹೇಳಿದ ಕಥೆ ಕೇಳಿ ಇಷ್ಟವಾಗಿ ನಿರ್ಮಾಣಕ್ಕೆ ಮುಂದಾದರು. ನಿರ್ಮಾಪಕರು ಕಥೆ ಕೇಳಿದ ಕೇವಲ ಐದೇ ದಿನಗಳಲ್ಲಿ ಚಿತ್ರೀಕರಣ ಆರಂಭವಾಯಿತು. ಇದು ಹಾರರ್ ಚಿತ್ರವಾದರೂ, ಕೊನೆಯಲ್ಲಿ ದೆವ್ವ ಭೂತಗಳು ಇಲ್ಲ.‌ ಇದೆಲ್ಲಾ ನಮ್ಮ ಮನಸ್ಸಿನ ಭ್ರಮೆ ಎಂಬ ವಿಷಯವನ್ನು ಹೇಳಿದ್ದೇವೆ ಎಂದರು ನಿರ್ದೇಶಕ ಕವಿ ರಾಜೇಶ್.

ಹಂಸ ವಿಷನ್ಸ್ ಬ್ಯಾನರ್‌ನಲ್ಲಿ ನಾನು ಹಾಗೂ ನೇವಿ ಮಂಜು ಈ ಚಿತ್ರ ನಿರ್ಮಾಣ ಮಾಡಿದ್ದೇವೆ. ನೆ.ಲ.ನರೇಂದ್ರ ಬಾಬು‌, ನೇವಿ ಮಂಜು ಹಾಗೂ ಹೊಸ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಫೆಬ್ರವರಿ 28 ರಂದು ಚಿತ್ರವನ್ನು ತೆರೆಗೆ ತರುತ್ತೇವೆ ಎಂದರು ನಿರ್ಮಾಪಕ ನೆ.ಲ.ಮಹೇಶ್.

ನಾಗವಲ್ಲಿ ಪಾತ್ರಧಾರಿ ‌ತೇಜಸ್ವಿನಿ, ಚಿತ್ರದಲ್ಲಿ ಅರಿಷಡ್ವರ್ಗಗಳನ್ನು ಪ್ರತಿನಿಧಿಸುವ ಸಿಮ್ರಾನ್, ಮಾನಸ, ರೂಪಶ್ರೀ, ಸುಷ್ಮಾ, ರಂಜಿತಾ, ಶ್ವೇತಾ,‌ ನಾಯಕ ಯಶ್ ಹಾಗೂ ನೃತ್ಯ ನಿರ್ದೇಶಕ ತ್ರಿಭುವನ್ ಮುಂತಾದವರು ಚಿತ್ರದ ಕುರಿತು ಮಾತನಾಡಿದರು.

Whats_app_banner