Keerthy Suresh Love Story: ಹೈಸ್ಕೂಲ್‌ ಸ್ನೇಹ, 15 ವರ್ಷದ ಪರಿಚಯ, ಮುಂದಿನ ತಿಂಗಳು ಮದುವೆ, ಸಂಭ್ರಮದ ಫೋಟೋ ಹಂಚಿಕೊಂಡ ಕೀರ್ತಿ ಸುರೇಶ್‌
ಕನ್ನಡ ಸುದ್ದಿ  /  ಮನರಂಜನೆ  /  Keerthy Suresh Love Story: ಹೈಸ್ಕೂಲ್‌ ಸ್ನೇಹ, 15 ವರ್ಷದ ಪರಿಚಯ, ಮುಂದಿನ ತಿಂಗಳು ಮದುವೆ, ಸಂಭ್ರಮದ ಫೋಟೋ ಹಂಚಿಕೊಂಡ ಕೀರ್ತಿ ಸುರೇಶ್‌

Keerthy Suresh Love Story: ಹೈಸ್ಕೂಲ್‌ ಸ್ನೇಹ, 15 ವರ್ಷದ ಪರಿಚಯ, ಮುಂದಿನ ತಿಂಗಳು ಮದುವೆ, ಸಂಭ್ರಮದ ಫೋಟೋ ಹಂಚಿಕೊಂಡ ಕೀರ್ತಿ ಸುರೇಶ್‌

ಜನಪ್ರಿಯ ನಟಿ ಕೀರ್ತಿ ಸುರೇಶ್‌ ತನ್ನ ಹೈಸ್ಕೂಲ್‌ ಗೆಳೆಯ ಆಂಟೋನಿ ತಟ್ಟಿಲ್ ಜತೆಗೆ ಮದುವೆಯಾಗುವುದನ್ನು ಖಚಿತಗೊಳಿಸಿದ್ದಾರೆ. ಡಿಸೆಂಬರ್‌ 14ರಂದು ಗೋವಾದಲ್ಲಿ ಇವರಿಬ್ಬರ ಮದುವೆ ನಡೆಯಲಿದೆ. ಇಂದು ಕೀರ್ತಿ ಸುರೇಶ್‌ ಸೋಷಿಯಲ್‌ ಮೀಡಿಯಾದಲ್ಲಿ ಆಂಟೋನಿ ತಟ್ಟಿಲ್ ಜತೆಗೆ ತಾನು ನಿಂತ ಸುಂದರ ಫೋಟೋ ಹಂಚಿಕೊಂಡಿದ್ದಾರೆ.

ಸಂಭ್ರಮದ ಫೋಟೋ ಹಂಚಿಕೊಂಡ ಕೀರ್ತಿ ಸುರೇಶ್‌
ಸಂಭ್ರಮದ ಫೋಟೋ ಹಂಚಿಕೊಂಡ ಕೀರ್ತಿ ಸುರೇಶ್‌

ಬೆಂಗಳೂರು: ವದಂತಿ ನಿಜವಾಗಿದೆ. ಜನಪ್ರಿಯ ನಟಿ ಕೀರ್ತಿ ಸುರೇಶ್‌ ತನ್ನ ಹೈಸ್ಕೂಲ್‌ ಗೆಳೆಯ ಆಂಟೋನಿ ತಟ್ಟಿಲ್ ಜತೆಗೆ ಮದುವೆಯಾಗುವುದನ್ನು ಖಚಿತಗೊಳಿಸಿದ್ದಾರೆ. ಡಿಸೆಂಬರ್‌ 14ರಂದು ಗೋವಾದಲ್ಲಿ ಇವರಿಬ್ಬರ ಮದುವೆ ನಡೆಯಲಿದೆ. ಇಂದು ಕೀರ್ತಿ ಸುರೇಶ್‌ ಸೋಷಿಯಲ್‌ ಮೀಡಿಯಾದಲ್ಲಿ ಆಂಟೋನಿ ತಟ್ಟಿಲ್ ಜತೆಗೆ ತಾನು ನಿಂತ ಸುಂದರ ಫೋಟೋ ಹಂಚಿಕೊಂಡಿದ್ದಾರೆ. ಜಾಣೆ, ಆಕೆ, ಆಕೆ ಬೆನ್ನು ತಿರುಗಿಸಿ ಆಕಾಶ ತೋರಿಸುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ.

ಪ್ರಿಯಕರನ ಚಿತ್ರ ಹಂಚಿಕೊಂಡ ಕೀರ್ತಿ ಸುರೇಶ್‌

ನವೆಂಬರ್‌ 27ರಂದು ಕೀರ್ತಿ ಸುರೇಶ್‌ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ತನ್ನ ಬಾಯ್‌ಫ್ರೆಂಡ್‌ ಆಂಟೋನಿ ತಟ್ಟಿಲ್ ಜತೆಗಿನ ಫೋಟೋ ಹಂಚಿಕೊಂಡಿದ್ದಾರೆ. ಇವರಿಬ್ಬರು ಪಟಾಕಿ ಹಚ್ಚಿ ಸಂಭ್ರಮಿಸುತ್ತಿರುವುದನ್ನು ಈ ಚಿತ್ರದಲ್ಲಿ ಕಾಣಬಹುದು. ಈ ಫೋಟೋಗಳಿಗೆ ಕೀರ್ತಿ ಅಭಿಮಾನಿಗಳು ಅಭಿನಂದನೆಗಳ ಸುರಿಮಳೆ ಸುರಿಸಿದ್ದಾರೆ.

ಹದಿನೈದು ವರ್ಷದ ಪ್ರೇಮಕಥೆ

ಕೀರ್ತಿ ಸುರೇಶ್‌ ಮತ್ತು ಆಂಟೋನಿ ತಟ್ಟಿಲ್ ಅವರದ್ದು ಹದಿನೈದು ವರ್ಷದ ಪ್ರೇಮಕಥೆಯಂತೆ. ಆಂಟೋನಿ ತಟ್ಟಿಲ್ ಅವರು ದುಬೈ ಮೂಲದ ಉದ್ಯಮಿ. ಗೋವಾದಲ್ಲಿ ರೆಸಾರ್ಟ್‌ಗಳನ್ನೂ ಹೊಂದಿದ್ದಾರಂತೆ. ಡಿಸೆಂಬರ್‌ 11-12ಕ್ಕೆ ಇವರಿಬ್ಬರ ವಿವಾಹ ನಡೆಯಲಿದೆ. ಗೋವಾದಲ್ಲಿ ಗ್ರ್ಯಾಂಡ್‌ ಆಗಿ ಮದುವೆಯಾಗಲಿದ್ದಾರೆ ಎಂದು ವರದಿಗಳು ತಿಳಿಸಿವೆ.

ಇವರಿಬ್ಬರ ಪ್ರೇಮಕಥೆಗೆ ಶಾಲಾ ದಿನಗಳ ಇತಿಹಾಸವಿದೆ. ಹೈಸ್ಕೂಲ್‌ನಲ್ಲಿ ಇವರಿಬ್ಬರು ಫ್ರೆಂಡ್ಸ್‌ ಆಗಿದ್ದರು. ಹದಿನೈದು ವರ್ಷದ ಲವ್‌ ಸ್ಟೋರಿ. ಇದೀಗ ತನ್ನ ಗೆಳೆಯ, ಪ್ರಿಯಕರ ಆಂಟೋನಿ ತಟ್ಟಿಲ್ ಜತೆ ಕೀರ್ತಿ ಸುರೇಶ್‌ ಮದುವೆಗೆ ಸಜ್ಜಾಗಿದ್ದಾರೆ.

ಕೀರ್ತಿ ಸುರೇಶ್‌ ಬಗ್ಗೆ

ಕೀರ್ತಿ ಸುರೇಶ್‌ ಅವರು ತಮಿಳು, ತೆಲುಗು, ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ. ನ್ಯಾಷನಲ್‌ ಫಿಲ್ಮ್‌ ಅವಾರ್ಡ್‌, ಐದು ಸೈಮಾ ಅವಾರ್ಡ್‌, ಎರಡು ಫಿಲ್ಮ್‌ಫೇರ್‌ ಸೌತ್‌ ಅವಾರ್ಡ್‌ ಪಡೆದಿದ್ದಾರೆ. 2021ರಲ್ಲಿ ಇವರು ಫೋರ್ಬ್ಸ್‌ ಇಂಡಿಯಾದ 30 ಪ್ರತಿಭೆಗಳ ಪಟ್ಟಿಯಲ್ಲಿದ್ದರು.

ಸಿನಿಮಾ ನಿರ್ಮಾಪಕ ಜಿ ಸುರೇಶ್‌ ಕುಮಾರ್‌ ಮತ್ತು ನಟಿ ಮೇನಕಾ ಪುತ್ರಿಯಾಗಿರುವ ಕೀರ್ತಿ 2000ರಲ್ಲಿ ಬಾಲಕಲಾವಿದೆಯಾಗಿ ಚಿತ್ರರಂಗಕ್ಕೆ ಕಾಲಿಟ್ಟರು. ಫ್ಯಾಷನ್‌ ಡಿಸೈನ್‌ ಕಲಿಕೆ ಮುಗಿಸಿದ ಬಳಿಕ ಇವರು 2013ರಲ್ಲಿ ಮಲಯಾಳಂ ಸಿನಿಮಾ ಗೀತಾಂಜಲಿ ಮೂಲಕ ನಾಯಕ ನಟಿಯಾಗಿ ಹೊರಹೊಮ್ಮಿದರು. ಗೀತಾಂಜಲಿ ಸಿನಿಮಾದ ನಟನೆಗೆ ಸೈಮಾ ಚೊಚ್ಚಲ ಪ್ರವೇಶ ಪ್ರಶಸ್ತಿ ಪಡೆದರು.

ಇತ್ತೀಚೆಗೆ ಕೀರ್ತಿ ಸುರೇಶ್‌ ನಟನೆಯ ರಘು ತಾತಾ ಸಿನಿಮಾ ಬಿಡುಗಡೆಯಾಗಿತ್ತು. ಪ್ರಭಾಸ್‌ ಜತೆ ಕಲ್ಕಿ 2898 ಎಡಿ ಸಿನಿಮಾದಲ್ಲೂ ನಟಿಸಿದ್ದಾರೆ. ಸೈರನ್‌, ಭೋಲಾ ಶಂಕರ್‌, ಮಾಮನನ್‌, ದಸರಾ, ವಾಶಿ, ಸರ್ಕಾರು ವಾರಿ ಪಾಟಾ, ಶಣಿ ಕಾಯೀಧಾಮ್‌, ಗುಡ್‌ ಲಕ್‌ ಸಖಿ, ರಂಗ್‌ ದೇ, ಜಟ್ಟಿ ರತ್ನಲು, ಮಿಸ್‌ ಇಂಡಿಯಾ, ಸರ್ಕಾರ್‌, ಮಹಾನಟಿ ಸೇರಿದಂತೆ ಹತ್ತು ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

Whats_app_banner