ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸದಲ್ಲಿ 'ಕೆರೆಬೇಟೆ' ಸಿನಿಮಾ ಪ್ರದರ್ಶನ; ಕನ್ನಡ ಸಿನಿಮಾಕ್ಕೆ ಸಿಕ್ಕಿತು ಮನ್ನಣೆ
ಕನ್ನಡ ಸುದ್ದಿ  /  ಮನರಂಜನೆ  /  ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸದಲ್ಲಿ 'ಕೆರೆಬೇಟೆ' ಸಿನಿಮಾ ಪ್ರದರ್ಶನ; ಕನ್ನಡ ಸಿನಿಮಾಕ್ಕೆ ಸಿಕ್ಕಿತು ಮನ್ನಣೆ

ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸದಲ್ಲಿ 'ಕೆರೆಬೇಟೆ' ಸಿನಿಮಾ ಪ್ರದರ್ಶನ; ಕನ್ನಡ ಸಿನಿಮಾಕ್ಕೆ ಸಿಕ್ಕಿತು ಮನ್ನಣೆ

ಅಪ್ಪಟ ಹಳ್ಳಿ ಸೊಗಡಿನ ಚಿತ್ರ ನಮ್ಮ ಕನ್ನಡದ 'ಕೆರೆಬೇಟೆ' ಸಿನಿಮಾ ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸದಲ್ಲಿ ಪ್ರದರ್ಶನಗೊಂಡಿದೆ. ಭಾರತದ ಪ್ರತಿಷ್ಠಿತ ಫಿಲ್ಮ್ ಫೆಸ್ಟಿವಲ್‌ಗಳಲ್ಲಿ ಒಂದಾಗಿರುವ ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸದಲ್ಲಿ ಕೆರೆಬೇಟೆ ಸಿನಿಮಾಂಡ ಭಾಗಿಯಾಗಿದೆ.

ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸದಲ್ಲಿ 'ಕೆರೆಬೇಟೆ' ಸಿನಿಮಾ ಪ್ರದರ್ಶನ
ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸದಲ್ಲಿ 'ಕೆರೆಬೇಟೆ' ಸಿನಿಮಾ ಪ್ರದರ್ಶನ

ಭಾರತದ ಪ್ರತಿಷ್ಠಿತ ಫಿಲ್ಮ್ ಫೆಸ್ಟಿವಲ್‌ಗಳಲ್ಲಿ ಒಂದಾಗಿರುವ ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸದಲ್ಲಿ ಕೆರೆಬೇಟೆ ಸಿನಿಮಾಂಡ ಭಾಗಿಯಾಗಿದೆ. ಗೋವಾ ಫೆಸ್ಟಿವಲ್ ಪನೋರಮಾ ಫೀಚರ್ ಫಿಲ್ಮ್ ವಿಭಾಗದಲ್ಲಿ ಕನ್ನಡದ ಕೆರೆಬೇಟೆ ಸಿನಿಮಾ ಆಯ್ಕೆಯಾಗಿತ್ತು. ಸಿನಿಮಾದ ನಿರ್ಮಾಪಕ ಹಾಗೂ ನಾಯಕ ಗೌರಿಶಂಕರ್, ನಿರ್ದೇಶಕ ರಾಜ್ ಗುರು ಸೇರಿದಂತೆ ಇಡೀ ಸಿನಿಮಾತಂಡ ಭಾಗಿಯಾಗಿತ್ತು.

ಗೋವಾದಲ್ಲಿ ನಡೆಯುತ್ತಿರುವ 55ನೇ 'ಭಾರತದ ಅಂತಾರಾಷ್ಟ್ರೀಯಾ ಚನಲಚಿತ್ರೋತ್ಸವ' ನವೆಂಬರ್ 20ರಿಂದ ಪ್ರಾರಂಭವಾಗಿದೆ. 28ರವರೆಗೆ ಗೋವಾದ ಪಣಜಿಯಲ್ಲಿ ನಡೆಯುತ್ತಿರುವ ಚಿತ್ರೋತ್ಸವಕ್ಕೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯಾ ಅನೇಕ ಸಿನಿ ಗಣ್ಯರು ಸಾಕ್ಷಿಯಾಗಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವ ಗೋವಾ ಚಿತ್ರೋತ್ಸವದಲ್ಲಿ ಕನ್ನಡದ ಕೆರೆಬೇಟೆ ಸಿನಿಮಾ ಪ್ರದರ್ಶನ ಕಂಡಿರುವುದು ನಿಜಕ್ಕೂ ಸ್ಯಾಂಡಲ್‌ವುಡ್‌ಗೆ, ಕನ್ನಡಿಗರಿಗೆ ಹೆಮ್ಮೆಯ ವಿಚಾರ.

ಕನ್ನಡದ ‘ಕೆರೆಬೇಟೆ’ ಸಿನಿಮಾ ಗೋವಾದಲ್ಲಿ ಪ್ರದರ್ಶನ

ಭಾರತೀಯ ಪನೋರಮಾ ಭಾರತದ ಅಂತಾರಾಷ್ಟ್ರೀಯಾ ಚನಲಚಿತ್ರೋತ್ಸವದ ಪ್ರಮುಖ ವಿಭಾಗವಾಗಿದೆ. ಇದರಲ್ಲಿ 25 ಫೀಚರ್ ಫಿಲ್ಮ್ ಮತ್ತು 20 ನಾನ್-ಫೀಚರ್ ಫಿಲ್ಮ್‌ಗಳು ಪ್ರದರ್ಶನ ಕಾಣುತ್ತಿದೆ. ಇಂಡಿಯನ್ ಪನೋರಮಾ ವಿಭಾಗದ ಆರಂಭಿಕ ಸಿನಿಮಾವಾಗಿ 'ಸ್ವಾತಂತ್ರ್ಯ ವೀರ್ ಸಾವರ್ಕರ್' ಹಿಂದಿ ಸಿನಿಮಾ ಪ್ರದರ್ಶನಗೊಂಡಿದೆ. ಇನ್ನು 2ನೇ ಸಿನಿಮಾ ಕನ್ನಡದ ಕೆರೆಬೇಟೆ ಚಿತ್ರ ಪ್ರದರ್ಶನ ಕಂಡಿದೆ.

ಈ ಬಗ್ಗೆ ಸಿನಿಮಾತಂಡ ಸಂತಸಗೊಂಡಿದೆ. ಜೂರಿ ಮೆಂಬರ್ ಕೆರೆಬೇಟೆ ಸಿನಿಮಾಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ಪ್ರಪಂಚದ ವಿವಿಧ ಚಿತ್ರ ಪ್ರೇಮಿಗಳಿಂದನು ಸಹ ಬಾರ ಪ್ರಶಂಸೆ ವ್ಯಕ್ತವಾಗಿದೆ. ಅಂದಹಾಗೆ ಕೆರೆಬೇಟೆ ರಾಜ್‌ಗುರು ನಿರ್ದೇಶನದಲ್ಲಿ ಮೂಡಿಬಂದಿರುವ ಚೊಚ್ಚಲ ಸಿನಿಮಾ. ಗೌರಿ ಶಂಕರ್ ನಾಯಕನಾಗಿ ಈ ಸಿನಿಮಾದಲ್ಲಿ ಮಿಂಚಿದ್ದಾರೆ. ನಟನೆ ಜೊತೆಗೆ ಗೌರಿ ಶಂಕರ್ ನಿರ್ಮಾಣದ ಜವಾಬ್ದಾರಿಯಮನ್ನು ವಹಿಸಿಕೊಂಡಿದ್ದರು. ತುಂಬಾ ಕಷ್ಟಪಟ್ಟು ಇಷ್ಟ ಪಟ್ಟು ಮಾಡಿದ ಸಿನಿಮಾವಿದು.

ಅಪ್ಪಟ ಹಳ್ಳಿ ಸೊಗಡಿನ ಸಿನಿಮಾ

ಕೆರೆಬೇಟೆ ಸಿನಿಮಾ ಬಗ್ಗೆ ಹೇಳುವುದಾದರೆ ಅಪ್ಪಟ ಹಳ್ಳಿ ಸೊಗಡಿನ ಚಿತ್ರ. ಈ ಸಿನಿಮಾ ಮಾರ್ಚ್ 15ಕ್ಕೆ ರಾಜ್ಯದ್ಯಂತ ಅದ್ದೂರಿಯಾಗಿ ರಿಲೀಸ್ ಆಗಿತ್ತು. ಜನಮನ ಸಿನಿಮಾ ಸಂಸ್ಥೆಯಲ್ಲಿ ಮೂಡಿ ಬಂದಿದ್ದ ಈ ಸಿನಿಮಾ ಮಲೆನಾಡಿನ ಮೀನು ಬೇಟೆ ಸಂಸ್ಕೃತಿಯನ್ನು ಪರಿಚಯಿಸಿತ್ತು. ಸಿನಿಮಾದಲ್ಲಿ ನಾಯಕ ಗೌರಿಶಂಕರ್, ನಾಯಕಿ ಬಿಂದು ಗೌಡ ಜೊತೆಗೆ ಗೋಪಾಲ್ ದೇಶಪಾಂಡೆ, ಸಂಪತ್ ಕುಮಾರ್ ಹರಿಣಿ ಸೇರಿದಂತೆ ಅನೇಕ ದೊಡ್ಡ ಕಲಾವಿದರು ಬಣ್ಣ ಹಚ್ಚಿದರು.

Whats_app_banner