ಕನ್ನಡ ಸುದ್ದಿ  /  Entertainment  /  Kiara Back To Work: Kiara Back To Work After Marriage

Kiara back to work: ಮದುವೆಯ ಬಳಿಕ ಶೂಟಿಂಗ್‌ಗೆ ಮರಳಿದ ಕಿಯಾರ, ಇನ್‌ಸ್ಟಾಗ್ರಾಂ ಸ್ಟೋರಿಯಲ್ಲೇನಿತ್ತು?

Kiara back to work: ಮದುವೆಯ ಬಳಿಕ ಇಂದು ಮೊದಲ ಬಾರಿ ಕಿಯಾರ ಶೂಟಿಂಗ್‌ನಲ್ಲಿ ಭಾಗವಹಿಸಿದ್ದಾರೆ. ಇನ್‌ಸ್ಟಾಗ್ರಾಂ ಸ್ಟೋರಿ ಹಾಕಿರುವ ಈ ಬೆಡಗಿ ʼಬ್ಯಾಕ್‌ ಟು ವರ್ಕ್‌ʼ ಎಂದು ಬರೆದುಕೊಂಡಿದ್ದಾರೆ. ಆದರೆ ಇದರಲ್ಲಿ ಶೂಟಿಂಗ್‌ ಸಂಬಂಧಿಸಿದ ಯಾವ ಮಾಹಿತಿಯನ್ನೂ ತಿಳಿಸಿಲ್ಲ.

ಕಿಯಾರ ಅಡ್ವಾನಿ
ಕಿಯಾರ ಅಡ್ವಾನಿ (MINT_PRINT)

ಕಳೆದೊಂದು ತಿಂಗಳಿನಿಂದ ಬಿ-ಟೌನ್‌ನಲ್ಲಿ ಕಿಯಾರ-ಸಿದ್ಧಾರ್ಥ್‌ ಮದುವೆಯದ್ದೇ ಸುದ್ದಿ ಹರಿದಾಡುತ್ತಿತ್ತು. ಫೆಬ್ರುವರಿ 7 ರಂದು ಈ ಜೋಡಿ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಅದ್ಧೂರಿಯಾಗಿ ಮದುವೆಯಾಗಿತ್ತು. ಇದು ಹಳೇ ಸುದ್ದಿಯಾದರೆ, ಈಗಿನ ಸುದ್ದಿ ಎಂದರೆ ಕಿಯಾರ ಮದುವೆಯ ಬಳಿಕ ಮೊದಲ ಬಾರಿ ಶೂಟಿಂಗ್‌ನಲ್ಲಿ ಭಾಗವಹಿಸಿದ್ದಾರೆ.

ಸಿದ್ಧಾರ್ಥ್‌ ಕೂಡ ಎರಡು ದಿನಗಳ ಹಿಂದೆ ಫರ್ಪ್ಯೂಮ್‌ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಇದೀಗ ಕಿಯಾರ ಸರದಿ.

ಇನ್‌ಸ್ಟಾಗ್ರಾಂ ಸ್ಟೋರಿ

ಇನ್‌ಸ್ಟಾಗ್ರಾಂ ಸ್ಟೋರಿ ಹಾಕಿರುವ ಈ ಬೆಡಗಿ ʼಬ್ಯಾಕ್‌ ಟು ವರ್ಕ್‌ʼ ಎಂದು ಬರೆದುಕೊಂಡಿದ್ದಾರೆ. ವ್ಯಾನಿಟಿ ವ್ಯಾನ್‌ನಲ್ಲಿ ಕುಳಿತು ಮೇಕಪ್‌ ಮಾಡಿಕೊಳ್ಳುತ್ತಿರುವ ಚಿಕ್ಕ ವಿಡಿಯೊವನ್ನು ಹರಿ ಬಿಡುವ ಮೂಲಕ ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ. ಇದರಲ್ಲಿ ಶೂಟಿಂಗ್‌ ಸಂಬಂಧಿಸಿದ ಯಾವ ಮಾಹಿತಿಯನ್ನೂ ತಿಳಿಸಿಲ್ಲ. ಆದರೆ ಕನ್ನಡಿ ಹಿಡಿದು ಕಣ್ಣು ಮಿಟುಕಿಸುತ್ತಿರುವ ಕಿಯಾರ ನೋಟ ಅಭಿಮಾನಿಗಳ ಎದೆಗೆ ಚೂರಿ ಚುಚ್ಚುವಂತಿರುವುದು ಸುಳ್ಳಲ್ಲ.

ಸಿದ್ಧಾರ್ಥ್‌ ಮಲ್ಹೋತ್ರಾ ಹಾಗೂ ಕಿಯಾರ ಅಡ್ವಾನಿ ರಾಜಸ್ಥಾನದ ಜೈಸಲ್ಮೇರ್‌ ಪ್ಯಾಲೆಸ್‌ನ ಸೂರ್ಯಘರ್‌ ಪ್ಯಾಲೆಸ್‌ನಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದರು. ಸಿನಿಮಾರಂಗದ ಸ್ನೇಹಿತರಿಗಾಗಿ ಫೆಬ್ರುವರಿ 12ರಂದು ಮುಂಬೈನಲ್ಲಿ ಆರಕ್ಷತೆ ಕಾರ್ಯಕ್ರಮ ನೆರವೇರಿತ್ತು. ಇದಾದ ಬಳಿಕ ಇಂದು ಕಿಯಾರ ಮೊದಲ ಬಾರಿ ಶೂಟಿಂಗ್‌ನಲ್ಲಿ ಭಾಗವಹಿಸಿದ್ದಾರೆ.

ಶೇರ್‌ ಷಾ ಜೋಡಿ ಪ್ರೀತಿಯಲ್ಲಿ ಬಿದ್ದಿದ್ದು ಹೇಗೆ?

2021ರಲ್ಲಿ ಬಿಡುಗಡೆಯಾದ ʼಶೇರ್‌ ಷಾʼ ಸಿನಿಮಾದಲ್ಲಿ ಈ ಜೋಡಿ ಒಟ್ಟಾಗಿ ನಟಿಸಿದ್ದರೂ, ಇವರ ಮೊದಲ ಭೇಟಿಯಾಗಿದ್ದು 2018ರ ʼಲಸ್ಟ್‌ ಸ್ಟೋರಿʼ ಸಿನಿಮಾದ ಶೂಟಿಂಗ್‌ನ ಕೊನೆಯ ದಿನದ ಪಾರ್ಟಿಯಲ್ಲಿ. ಆದರೆ ಶೇರ್‌ ಷಾ ಸಿನಿಮಾದ ನಂತರ ಈ ಜೋಡಿ ಒಟ್ಟಾಗಿ ಕಾಣಿಸಿಕೊಳ್ಳಲು ಆರಂಭಿಸಿದ್ದರು. 2019ರಲ್ಲಿ ಇವರು ದಕ್ಷಿಣ ಆಫ್ರಿಕಾದಲ್ಲಿ ಹೊಸವರ್ಷವನ್ನು ಜೊತೆಯಾಗಿ ಆಚರಿಸಿದ್ದರು. ಇಬ್ಬರು ಜೊತೆಯಾಗಿರುವ ಫೋಟೊಗಳನ್ನು ಅಪ್‌ಲೋಡ್‌ ಮಾಡದೇ ಇದ್ದರು, ಇಬ್ಬರು ಪೋಸ್ಟ್‌ ಮಾಡಿದ್ದ ಫೋಟೊಗಳಲ್ಲಿನ ಸಾಮ್ಯತೆಯನ್ನು ಗುರುತಿಸಿದ ಅಭಿಮಾನಿಗಳು ಇವರು ಡೇಟಿಂಗ್‌ ಮಾಡುತ್ತಿದ್ದಾರೆ ಎಂಬ ವಿಷಯವನ್ನು ಕಂಡುಕೊಂಡಿದ್ದರು. ಆದರೆ ಇವರಿಬ್ಬರು ಅದನ್ನು ಒಪ್ಪದೆ, ತಾವಿಬ್ಬರೂ ಸ್ನೇಹಿತರು ಎಂದಷ್ಟೇ ಹೇಳಿ ಜಾರಿಗೊಳ್ಳುತ್ತಿದ್ದರು. ಕೊನೆಗೂ ಪ್ರೀತಿಯನ್ನು ಹೇಳಿಕೊಂಡ ಈ ಜೋಡಿ ಮದುವೆಯಾಗುವ ಮೂಲಕ ತಮ್ಮ ಪ್ರೇಮವನ್ನು ಬಹಿರಂಗ ಪಡಿಸಿದ್ದರು.

ಮುಂದಿನ ಸಿನಿಮಾಗಳು

ಸದ್ಯ ಕಿಯಾರ ಕೈಯಲ್ಲಿ ಎರಡು ಸಿನಿಮಾಗಳಿದ್ದು ಶೂಟಿಂಗ್‌ ಹಂತದಲ್ಲಿದೆ. ʼಸತ್ಯಪ್ರೇಮ್‌ ಕೀ ಕಥಾʼ ಸಿನಿಮಾದಲ್ಲಿ ಕಾರ್ತಿಕ್‌ ಆರ್ಯನ್‌ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ ಈ ಚೆಲುವೆ. ರಾಮ್‌ಚರಣ್‌ ನಟನೆಯ ʼಆರ್‌ಸಿ 15ʼ ಸಿನಿಮಾದಲ್ಲೂ ನಾಯಕಿಯಾಗಿ ನಟಿಸಲಿದ್ದಾರೆ ಕಿಯಾರ.

ಇನ್ನು ಸಿದ್ಧಾರ್ಥ್‌ ರೋಹಿತ್‌ ಶೆಟ್ಟಿ ನಿರ್ದೇಶನ ಇಂಡಿಯನ್‌ ಪೊಲೀಸ್‌ ಫೋರ್ಸ್‌ ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ.

ಮತ್ತಷ್ಟು ಮನರಂಜನೆ ಸುದ್ದಿಗಳು ಇಲ್ಲಿವೆ:

ಟೀಸರ್‌ ಬಿಡುಗಡೆಗೆ ಪ್ರೀಮಿಯರ್‌ ಷೋ; ಭಿನ್ನ ಯತ್ನದ ಮೂಲಕ ಗಮನ ಸೆಳೆದ ʼಮಾರ್ಟಿನ್‌ʼ ಚಿತ್ರತಂಡ

ಮಾರ್ಟಿನ್‌ ಸೆಟ್ಟೇರಿದ ಸಮಯದಿಂದಲೂ ಸುದ್ದಿ ಮಾಡುತ್ತಲೇ ಇದೆ. ಇತ್ತೀಚೆಗಷ್ಟೇ ಚಿತ್ರ ಟೀಸರ್‌ ಅನ್ನು ಪ್ರೀಮಿಯರ್‌ ಷೋ ಮಾಡುವ ಮೂಲಕ ಬಿಡುಗಡೆ ಮಾಡಲಾಗಿದ್ದು, ಪ್ರೇಕ್ಷಕ ಪ್ರಭುಗಳು ಇದನ್ನು ಮೆಚ್ಚಿಕೊಂಡು ಪ್ರಶಂಸೆಯ ಸುರಿಮಳೆ ಸುರಿಸಿದ್ದಾರೆ.

ನವಾಜುದ್ದೀನ್ ಸಿದ್ದಿಕಿ ವಿರುದ್ಧ ರೇಪ್‌ ಕೇಸ್‌ ದಾಖಲಿಸಿದ ಪತ್ನಿ.. ಅಳಲು ತೋಡಿಕೊಂಡ ಆಲಿಯಾ: ವಿಡಿಯೋ

ನವಾಜುದ್ದೀನ್ ಸಿದ್ದಿಕಿ, ತಮ್ಮ ಅದ್ಭುತ ಅಭಿನಯದಿಂದಲೇ ಕೋಟ್ಯಂತರ ಸಿನಿ ಪ್ರೇಕ್ಷಕರನ್ನು ರಂಜಿಸಿದ ನಟ. ಚಿತ್ರರಂಗದಲ್ಲಿ ಉತ್ತುಂಗದಲ್ಲಿರುವ ಅವರು, ವೈಯಕ್ತಿಕ ಜೀವನದಲ್ಲಿ ಮಾತ್ರ ಸಮಸ್ಯೆ ಎದುರಿಸುತ್ತಿದ್ಧಾರೆ. ಪತಿ ನನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ನವಾಜುದ್ದೀನ್‌ ಸಿದಿಕಿ ಪತ್ನಿ ಆಲಿಯಾ 3 ವರ್ಷಗಳ ಹಿಂದೆಯೇ ಆರೋಪಿಸಿದ್ದರು.

IPL_Entry_Point

ವಿಭಾಗ