Max Movie: ಕರುನಾಡಲ್ಲಿ ಶುರುವಾಯ್ತು ‘ಮ್ಯಾಕ್ಸ್’ ಅಬ್ಬರ; ಥಿಯೇಟರ್‌ ಎದುರು ಕಿಚ್ಚ ಸುದೀಪ್ ಅಭಿಮಾನಿಗಳಿಂದ ಸಂಭ್ರಮಾಚರಣೆ
ಕನ್ನಡ ಸುದ್ದಿ  /  ಮನರಂಜನೆ  /  Max Movie: ಕರುನಾಡಲ್ಲಿ ಶುರುವಾಯ್ತು ‘ಮ್ಯಾಕ್ಸ್’ ಅಬ್ಬರ; ಥಿಯೇಟರ್‌ ಎದುರು ಕಿಚ್ಚ ಸುದೀಪ್ ಅಭಿಮಾನಿಗಳಿಂದ ಸಂಭ್ರಮಾಚರಣೆ

Max Movie: ಕರುನಾಡಲ್ಲಿ ಶುರುವಾಯ್ತು ‘ಮ್ಯಾಕ್ಸ್’ ಅಬ್ಬರ; ಥಿಯೇಟರ್‌ ಎದುರು ಕಿಚ್ಚ ಸುದೀಪ್ ಅಭಿಮಾನಿಗಳಿಂದ ಸಂಭ್ರಮಾಚರಣೆ

ಕಿಚ್ಚ ಸುದೀಪ್ ಅಭಿಮಾನಿಗಳು ‘ಮಾಕ್ಸ್‌’ ಸಿನಿಮಾದ ಫಸ್ಟ್‌ ಡೇ, ಫಸ್ಟ್ ಶೋ ಖುಷಿಯಲ್ಲಿದ್ದಾರೆ. ಥಿಯೇಟರ್‌ಗಳ ಎದುರು ಸಂಭ್ರಮಾಚರಣೆ ನಡೆಯುತ್ತಿದೆ. ಮಾಕ್ಸ್‌ ಸಿನಿಮಾಗೆ ಅಭಿಮಾನಿಗಳಿಂದ ಒಳ್ಳೆಯ ಆರಂಭ ಸಿಕ್ಕಿದೆ.

ಕರುನಾಡಲ್ಲಿ ಶುರುವಾಯ್ತು ‘ಮ್ಯಾಕ್ಸ್’ ಅಬ್ಬರ
ಕರುನಾಡಲ್ಲಿ ಶುರುವಾಯ್ತು ‘ಮ್ಯಾಕ್ಸ್’ ಅಬ್ಬರ

ಇಂದು ಕರ್ನಾಟಕದಲ್ಲಿ ಕಿಚ್ಚ ಸುದೀಪ್ ಅಭಿಮಾನಿಗಳು ಖುಷಿಯಲ್ಲಿ ಮುಳುಗಿದ್ದಾರೆ. ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್‌ ಸಿನಿಮಾ ಥಿಯೇಟರ್‌ಗಳಲ್ಲಿ ರಿಲೀಸ್‌ ಆಗಿದೆ. ಮುಂಗಡ ಟಿಕೆಟ್ ಬುಕ್ಕಿಂಗ್ ಕೂಡ ತುಂಬಾ ಜೋರಾಗಿಯೇ ಆಗಿತ್ತು. ಅದೇ ರೀತಿ ಇಂದು ಸಾಕಷ್ಟು ಅಭಿಮಾನಿಗಳು ಫಸ್ಟ್‌ ಡೇ ಫಸ್ಟ್ ಶೋ ನೋಡಲು ಬಯಸಿದ್ದಾರೆ. ಹಲವರು ತಮ್ಮ ಎಕ್ಸ್‌ ಖಾತೆಯಲ್ಲಿ ಅಲ್ಲಿನ ಸಂಭ್ರಮಾಚರಣೆಯ ತುಣುಕುಗಳನ್ನು ಹಂಚಿಕೊಂಡಿದ್ದಾರೆ ಅಷ್ಟೇ ಅಲ್ಲ ಮ್ಯಾಕ್ಸ್‌ ಸಿನಿಮಾದ ಟೈಟಲ್ ತೆರೆಯ ಮೇಲೆ ಕಾಣಿಸುತ್ತಿದ್ದಂತೆ ಕೂಗಾಡಿದ್ದಾರೆ. ಇನ್ನೊಂದೆಡೆ ಕನ್ನಡ ಭಾವುಟ ಹಾರಿಸಿದ್ದಾರೆ ಹೀಗೆ ನಾನಾ ರೀತಿಯಲ್ಲಿ ಅಭಿಮಾನಿಗಳು ಈ ಸಿನಿಮಾವನ್ನು ಸಂಭ್ರಮಿಸುತ್ತಿದ್ದಾರೆ.

ಟಿ ನರಸಿಪುರದಲ್ಲಿ ಅಭಿಮಾನಿಗಳು ಮ್ಯಾಕ್ಸ್ ಸಿನಿಮಾ ಆರಂಭದಲ್ಲಿ ಅಭಿನಯ ಚಕ್ರವರ್ತಿ ಬಾದ್‌ ಶಾ ಸುದೀಪ್ ಎಂಬ ಹೆಸರು ರಿವೀಲ್ ಆಗುತ್ತಿದ್ದಂತೆ ಕನ್ನಡ ಭಾವುಟ ಹಿಡಿದು ಕುಣಿದು ಕುಪ್ಪಳಿಸಿದ್ದಾರೆ. ಎಲ್ಲೆಲ್ಲೂ ಖುಷಿಯ ವಾತಾವರಣ ನಿರ್ಮಾಣವಾಗಿದೆ. ಬೆಳ್ಳಂಬೆಳಿಗ್ಗೆ 5:30 ರಿಂದಲೇ ಈ ಸಂಭ್ರಮ ಆರಂಭವಾಗಿದೆ.

ಕೊಳ್ಳೆಗಾಲ, ಚಿತ್ರದುರ್ಗ ಹೀಗೆ ಸಾಕಷ್ಟು ಥಿಯೇಟರ್‌ಗಳಲ್ಲಿ ಅಭಿಮಾನಿಗಳು ಖುಷಿಯಿಂದ ಕುಣಿದಾಡುತ್ತಿದ್ದಾರೆ. ಬೆಳಗಿನ ಚಳಿಯಲ್ಲೂ ಅಭಿಮಾನಿಗಳು ತಮ್ಮ ಜೋಶ್‌ ಹೆಚ್ಚಿಸಿಕೊಂಡು ಚಿತ್ರಮಂದಿರಗಳಲ್ಲಿ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಎಲ್ಲ ಕಡೆಯಲ್ಲೂ ಕಿಚ್ಚನ ಸಿನಿಮಾ ಮಾಕ್ಸ್‌ಗೆ ಉತ್ತಮ ಆರಂಭ ಸಿಕ್ಕಿದೆ. ಅಭಿಮಾನಿಗಳು ಎಕ್ಸ್‌ನಲ್ಲಿ ಹಂಚಿಕೊಂಡ ಕೆಲವು ಗ್ಲಿಂಪ್ಸ್‌ ಇಲ್ಲಿದೆ.

Whats_app_banner