ಕನ್ನಡ ಸುದ್ದಿ  /  Entertainment  /  Kichcha Sudeep Met Kpcc President D K Shivakumar; What Could Be The Reason?

Sudeep Meets D K Shivakumar: ಸುದೀಪ್-‌ ಡಿ.ಕೆ. ಶಿವಕುಮಾರ್‌ ಭೋಜನ ಕೂಟ; ಇದು ವಿಧಾನಸಭಾ ಚುನಾವಣೆ ‘ಕೈ’ ಪ್ರಚಾರದ ರಣತಂತ್ರವೇ?

ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಕಾವು ಹೆಚ್ಚಾಗುತ್ತಿದೆ. ಈ ನಡುವೆ ರಾಜಕೀಯ ಪಕ್ಷಗಳ ನಾಯಕರ ಜತೆಗೆ ಸಿನಿಮಾ ನಟರ ಹೆಸರುಗಳೂ ತಳುಕು ಹಾಕಿಕೊಳ್ಳುತ್ತಿವೆ. ಅದರಲ್ಲಿ ಸುದೀಪ್‌ ಹೆಸರು ಮುಂಚೂಣಿಯಲ್ಲಿದೆ.

ಸುದೀಪ್-‌ ಡಿಕೆ ಶಿವಕುಮಾರ್‌ ಭೋಜನ ಕೂಟ; ಇದು ವಿಧಾನಸಭೆ ಚುನಾವಣೆ ‘ಕೈ’ ಪ್ರಚಾರದ ರಣತಂತ್ರವೇ?
ಸುದೀಪ್-‌ ಡಿಕೆ ಶಿವಕುಮಾರ್‌ ಭೋಜನ ಕೂಟ; ಇದು ವಿಧಾನಸಭೆ ಚುನಾವಣೆ ‘ಕೈ’ ಪ್ರಚಾರದ ರಣತಂತ್ರವೇ?

Sudeep Meets D K Shivakumar: ಕರ್ನಾಟಕದಲ್ಲಿ ಇನ್ನೇನು ವಿಧಾನಸಭೆ ಚುನಾವಣೆ ಅಖಾಡ ರಂಗೇರುತ್ತಿದೆ. ಈ ಹಿನ್ನೆಲೆಯಲ್ಲಿ ಮತದಾರನನ್ನು ಸೆಳೆಯಲು ರಾಜಕೀಯ ಪಕ್ಷಗಳು ತೆರೆಮರೆಯಲ್ಲಿಯೇ ರಣತಂತ್ರ ಹೆಣೆಯುತ್ತಿವೆ. ಈ ನಡುವೆ ಕಿಚ್ಚ ಸುದೀಪ್‌ ಹೆಸರು ಪದೇ ಪದೆ ಕೈ ಪಾಳಯದಲ್ಲಿ ಕೇಳಿಬರುತ್ತಿದೆಯಾದರೂ, ಸ್ಪಷ್ಟತೆ ಮಾತ್ರ ಸಿಕ್ಕಿಲ್ಲ. ಇದೀಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಅವರೊಂದಿಗೆ ಸುದೀಪ್‌ ಫೋಟೋ ಕ್ಲಿಕ್‌ ಆಗಿದೆ. ರಾಜಕೀಯ ವಲಯದಲ್ಲಿ ಈ ಫೋಟೋ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಸಿನಿಮಾದಲ್ಲಿ ಮಿಂಚಿದವರು ರಾಜಕೀಯ ಅಖಾಡಕ್ಕಿಳಿದ ಉದಾಹರಣೆಗಳು ಒಂದೆರಡಲ್ಲ. ಭಾರತೀಯ ಸಿನಿಮಾ ಇಂಡಸ್ಟ್ರಿಯಲ್ಲಿ ಅಂಥ ನೂರಾರು ಉದಾಹರಣೆಗಳಿವೆ. ಸಿನಿಮಾದ ಜತೆಗೆ ರಾಜಕೀಯವಾಗಿಯೂ ದೊಡ್ಡ ಹೆಸರು ಮಾಡಿದ ಸೆಲೆಬ್ರಿಟಿಗಳಿದ್ದಾರೆ. ಸಿನಿಮಾ ಮತ್ತು ರಾಜಕೀಯ ಎರಡೂ ದೋಣಿಯ ಮೇಲೆ ಕಾಲಿಟ್ಟು ಯಶಸ್ಸು ಕಂಡ ಸಿನಿಮಾದವರಿದ್ದಾರೆ. ಆ ಪೈಕಿ ಸ್ಯಾಂಡಲ್‌ವುಡ್‌ನಲ್ಲಿ ಬೇಡ ಎಂದರೂ ನಟ ಕಿಚ್ಚ ಸುದೀಪ್‌ ಅವರ ಹೆಸರು ರಾಜಕೀಯದಲ್ಲಿ ತಳುಕು ಹಾಕಿಕೊಳ್ಳುತ್ತಲೇ ಇದೆ.

ಕಿಚ್ಚ ಸುದೀಪ್‌ ಅವರ ಮೇಲೆ ಕಾಂಗ್ರೆಸ್‌ ನಾಯಕರು ಕಣ್ಣಿಟ್ಟಿದ್ದಾರೆ ಎಂಬ ಮಾತು ಇತ್ತೀಚೆಗಷ್ಟೇ ಹರಿದಾಡಿತ್ತು. ಸ್ಯಾಂಡಲ್‌ವುಡ್‌ ಮೋಹಕ ತಾರೆ ರಮ್ಯಾ ಅವರ ಮೂಲಕ ಕಾಂಗ್ರೆಸ್‌ ನಾಯಕರು ಸುದೀಪ್‌ ಅವರನ್ನು ಸೆಳೆದುಕೊಳ್ಳಲು ಯತ್ನಿಸಿದ್ದಾರೆ ಎಂಬ ಮಾತೂ ಕೇಳಿಬಂದಿತ್ತು. ಹೇಗಾದರೂ ಮಾಡಿ ಸುದೀಪ್‌ ಅವರನ್ನು ಕಾಂಗ್ರೆಸ್‌ಗೆ ಕರೆ ತರುವ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಗುಸು ಗುಸು ಕೇಳಿಬರುತ್ತಲೇ ಇತ್ತು. ಈಗ ಅಂಥದ್ದೇ ಮತ್ತೊಂದು ಬೆಳವಣಿಗೆ ಕುತೂಹಲಕ್ಕೆ ಕಾರಣವಾಗಿದೆ.

ಸುದೀಪ್‌ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್‌ ಜತೆಗಿರುವ ಫೋಟೋಗಳಿಗ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ. ಈ ಮೂಲಕ ಸುದೀಪ್‌ ಕೈ ಪಡೆ ಸೇರುತ್ತಿದ್ದಾರೆಯೇ ಎಂಬ ಮಾತುಗಳು ಕಾಳ್ಗಿಚ್ಚಿನಂತೆ ಹಬ್ಬುತ್ತಿವೆ. ಆದರೆ, ಈ ಭೇಟಿಯ ಹಿನ್ನೆಲೆಯ ಬಗ್ಗೆ ನಿಖರ ಕಾರಣವಿಲ್ಲ. ಇದೊಂದು ಸಹಜ ಭೇಟಿ ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಸುದೀಪ್‌ ಕಾಂಗ್ರೆಸ್‌ ಸೇರುತ್ತಿದ್ದಾರೆಯೇ ಎಂಬ ಗುಮಾನಿ ಇದೆ.

ಇನ್ನೊಂದೆಡೆ ಡಿಕೆ ಶಿವಕುಮಾರ್, ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಹಮ್ಮದ್ ನಲ್ಪಾಡ್ ಹಾಗೂ ಸುದೀಪ್ ‌ಒಟ್ಟಿಗೆ ಭೋಜನ ಸವಿದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ವೇಳೆ ಮುಂಬರುವ ಚುನಾವಣೆಗೆ ಪ್ರಚಾರಕ್ಕೆ ಆಗಮಿಸುವಂತೆ ಸುದೀಪ್‌ಗೆ ಡಿಕೆಶಿ ಕೋರಿದ್ದಾರೆ ಎನ್ನಲಾಗುತ್ತಿದೆ. ಆದರೆ, ಆ ವಿಚಾರವನ್ನು ಸುದೀಪ್‌ ಆಗಲಿ, ಕೈ ಪಾಳಯವಾಗಲಿ ಸ್ಪಷ್ಟಪಡಿಸಿಲ್ಲ.

ಈ ಸಿನಿಮಾ ಸುದ್ದಿಯನ್ನೂ ಓದಿ..

Darshan on Sudeep: ‘ಭಿನ್ನಾಭಿಪ್ರಾಯ ಬಿಟ್ಟು ಸುದೀಪ್‌ ಮತ್ತೆ ನೀವು ಒಂದಾಗಬೇಕು!’; ಮುಖ್ಯಮಂತ್ರಿ ಚಂದ್ರು ಮಾತಿಗೆ ನಕ್ಕ ದರ್ಶನ್‌!

Darshan on Sudeep: ಹೊಸಪೇಟೆಯಲ್ಲಿ ‘ಕ್ರಾಂತಿ’ ಚಿತ್ರದ ಪ್ರಚಾರದ ಸಂದರ್ಭದಲ್ಲಿ ದರ್ಶನ್‌ ಮೇಲೆ ಚಪ್ಪಲಿ ಎಸೆದ ಪ್ರಕರಣ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಘಟನೆಯ ಬಳಿಕ ಇಡೀ ಸ್ಯಾಂಡಲ್‌ವುಡ್‌ ಅವರ ಪರವಾಗಿ ನಿಂತಿತ್ತು. ಸಿನಿಮಾ ಸ್ನೇಹಿತರು, ಕಲಾವಿದರು ಒಟ್ಟಾಗಿ ನಾವಿದ್ದೇವೆ ಎಂದು ಹೇಳಿ ದರ್ಶನ್‌ಗೆ ಸಾಥ್‌ ನೀಡಿದ್ದರು. ಇದೆಲ್ಲದರ ನಡುವೆ ಅಭಿಮಾನಿಗಳ ಖುಷಿ ಇಮ್ಮಡಿಯಾಗುವಂತೆ ಮಾಡಿದ್ದು ನಟ ಸುದೀಪ್‌, ದರ್ಶನ್‌ಗೆ ಬೆಂಬಲಕ್ಕೆ ನಿಂತು ಬರೆದ ಸಾಲುಗಳು. ಅದಾದ ಮೇಲೆ ಸುದೀಪ್‌ ಮಾತಿಗೆ ದರ್ಶನ್‌ ಸಹ ಪ್ರತಿಕ್ರಿಯೆ ನೀಡಿ ಧನ್ಯವಾದ ಅರ್ಪಿಸಿದ್ದರು. ಈ ಎರಡು ಟ್ವಿಟ್‌ಗಳು ದರ್ಶನ್‌ ಮತ್ತು ಸುದೀಪ್‌ ಅಭಿಮಾನಿಗಳನ್ನು ಒಂದು ಮಾಡಿತ್ತು. ಸಂಭ್ರಮಕ್ಕೂ ಹಾಲೆರೆದಿತ್ತು. ಪೂರ್ಣ ವಿವರಕ್ಕೆ ಇಲ್ಲಿ ಕ್ಲಿಕ್‌ ಮಾಡಿ

IPL_Entry_Point