Hombale Movie with Sudeep: ಕಿಚ್ಚನ ಚಿತ್ರ ನಿರ್ಮಿಸಲಿದೆ ಹೊಂಬಾಳೆ ಫಿಲಂಸ್‌; ಆ್ಯಕ್ಷನ್ ಕಟ್ ಹೇಳಲಿದ್ದಾರೆ ಖ್ಯಾತ ಮಹಿಳಾ ನಿರ್ದೇಶಕಿ!?
ಕನ್ನಡ ಸುದ್ದಿ  /  ಮನರಂಜನೆ  /  Hombale Movie With Sudeep: ಕಿಚ್ಚನ ಚಿತ್ರ ನಿರ್ಮಿಸಲಿದೆ ಹೊಂಬಾಳೆ ಫಿಲಂಸ್‌; ಆ್ಯಕ್ಷನ್ ಕಟ್ ಹೇಳಲಿದ್ದಾರೆ ಖ್ಯಾತ ಮಹಿಳಾ ನಿರ್ದೇಶಕಿ!?

Hombale Movie with Sudeep: ಕಿಚ್ಚನ ಚಿತ್ರ ನಿರ್ಮಿಸಲಿದೆ ಹೊಂಬಾಳೆ ಫಿಲಂಸ್‌; ಆ್ಯಕ್ಷನ್ ಕಟ್ ಹೇಳಲಿದ್ದಾರೆ ಖ್ಯಾತ ಮಹಿಳಾ ನಿರ್ದೇಶಕಿ!?

ಸುದೀಪ್‌ ಜತೆ ಹೊಂಬಾಳೆ ಫಿಲಂಸ್‌ ಮೊದಲ ಸಲ ಕೈ ಜೋಡಿಸಲಿದೆ ಎಂಬ ವಿಚಾರ ಸದ್ಯ ಸುದ್ದಿಯಲ್ಲಿದೆ. ಅಭಿಮಾನಿ ವಲಯದಲ್ಲಿಯೂ ಈ ಗಾಸಿಪ್ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ

ಕಿಚ್ಚನ ಚಿತ್ರ ನಿರ್ಮಿಸಲಿದೆ ಹೊಂಬಾಳೆ ಫಿಲಂಸ್‌; ಆ್ಯಕ್ಷನ್ ಕಟ್ ಹೇಳಲಿದ್ದಾರೆ ಖ್ಯಾತ ಮಹಿಳಾ ನಿರ್ದೇಶಕಿ!?
ಕಿಚ್ಚನ ಚಿತ್ರ ನಿರ್ಮಿಸಲಿದೆ ಹೊಂಬಾಳೆ ಫಿಲಂಸ್‌; ಆ್ಯಕ್ಷನ್ ಕಟ್ ಹೇಳಲಿದ್ದಾರೆ ಖ್ಯಾತ ಮಹಿಳಾ ನಿರ್ದೇಶಕಿ!?

Hombale Movie with Sudeep: ‘ವಿಕ್ರಾಂತ್‌ ರೋಣ’ ಸಿನಿಮಾ ಬಳಿಕ ಕಿಚ್ಚ ಸುದೀಪ್‌ ಅವರ ಮುಂದಿನ ಸಿನಿಮಾ ಯಾವುದು ಎಂಬ ಬಗ್ಗೆ ಅಧಿಕೃತ ಘೋಷಣೆ ಆಗಿಲ್ಲ. ಆದರೆ, ಅನೂಪ್‌ ಭಂಡಾರಿ ನಿರ್ದೇಶನದ ‘ಬಿಲ್ಲ ರಂಗ ಬಾಷಾ’ ಚಿತ್ರದ ತೆರೆಮರೆಯ ಕೆಲಸಗಳಲ್ಲಿ ಸುದೀಪ್‌ ಬಿಜಿಯಾಗಿದ್ದಾರೆ. ಈ ನಡುವೆ ಕಿಚ್ಚನ ಬಗ್ಗೆ ಹೊಸ ಸುದ್ದಿಯೊಂದು ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ತೇಲಿಬಂದಿದೆ. ಅದೇನೆಂದರೆ, ಕನ್ನಡದ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್‌, ಸುದೀಪ್‌ ಚಿತ್ರವನ್ನು ನಿರ್ಮಾಣ ಮಾಡಲಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ.

ಬೆಂಕಿ ಇಲ್ಲದೆ ಹೊಗೆಯಾಡದು ಎಂಬ ಮಾತಿನಂತೆ, ಇದೀಗ ಸುದೀಪ್‌ ಜತೆ ಹೊಂಬಾಳೆ ಫಿಲಂಸ್‌ ಮೊದಲ ಸಲ ಕೈ ಜೋಡಿಸಲಿದೆ ಎಂದೇ ಹೇಳಲಾಗುತ್ತಿದೆ. ಈ ವಿಚಾರ ಅಭಿಮಾನಿ ವಲಯದಲ್ಲಿಯೂ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಕನ್ನಡ ಚಿತ್ರೋದ್ಯಮವನ್ನು ಬೇರೆ ಹಂತಕ್ಕೆ ಕೊಂಡೊಯ್ದಿರುವ ಹೊಂಬಾಳೆ ಫಿಲಂಸ್‌ ಕಿಚ್ಚನ 46ನೇ ಚಿತ್ರವನ್ನು ನಿರ್ಮಾಣ ಮಾಡಲು ಮನಸ್ಸು ಮಾಡಿದೆಯಂತೆ. ಅಷ್ಟೇ ಅಲ್ಲ ತೆರೆಮರೆಯಲ್ಲಿ ಕೆಲಸಗಳೂ ಆರಂಭವಾಗಿವೆಯಂತೆ.

ಹಾಗಾದರೆ ನಿರ್ದೇಶಕರು ಯಾರು?

ಈ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ. ಸದ್ಯ ಕಿಚ್ಚನ ‘ಬಿಲ್ಲ ರಂಗ ಬಾಷಾ’ ಸಿನಿಮಾವನ್ನು ಅನೂಪ್‌ ಭಂಡಾರಿ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈಗ ಹೊಂಬಾಳೆ ಫಿಲಂಸ್‌ ಬ್ಯಾನರ್‌ನಲ್ಲಿನ ಸುದೀಪ್‌ ಚಿತ್ರವನ್ನು ಮಹಿಳಾ ನಿರ್ದೇಶಕರು ಆಕ್ಷನ್‌ ಕಟ್‌ ಹೇಳಲಿದ್ದಾರಂತೆ. ತಮಿಳಿನಲ್ಲಿ ಈ ಹಿಂದೆ ರಿಲೀಸ್‌ ಆಗಿದ್ದ ‘ಸೂರರೈ ಪೊಟ್ರು’ ಚಿತ್ರ ನಿರ್ದೇಶನ ಮಾಡಿದ್ದ ಸುಧಾ ಕೊಂಗಾರ, ಸುದೀಪ್‌ ಅವರ ಚಿತ್ರವನ್ನು ನಿರ್ದೇಶಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.

ಸುಧಾ ಕೊಂಗಾರ ಅವರ ಜತೆಗೆ ಸಿನಿಮಾ ಮಾಡುವುದಾಗಿ ಹೊಂಬಾಳೆ ಫಿಲಂಸ್‌ ಕಳೆದ ಎರಡು ವರ್ಷದ ಹಿಂದೆಯೇ ಘೋಷಣೆ ಮಾಡಿತ್ತು. ಆದರೆ, ಆ ಚಿತ್ರ ಯಾವುದು, ನಾಯಕ ಯಾರಿರಲಿದ್ದಾರೆ ಎಂಬ ವಿಚಾರ ಮಾತ್ರ ಬಹಿರಂಗ ಆಗಿರಲಿಲ್ಲ. ಈಗ ಹರಿದಾಡುತ್ತಿರುವ ಸುದ್ದಿಗಳ ಕಡೆ ಗಮನ ಹರಿಸಿದರೆ, ಸುಧಾ ಕೊಂಗಾರ ಅವರೇ ಸುದೀಪ್‌ ಚಿತ್ರ ನಿರ್ದೇಶಿಸಲಿದ್ದಾರೆ ಎಂಬ ಸುದ್ದಿ ದಟ್ಟವಾಗಿದೆ.

ಒಟ್ಟಿಗೆ ಎರಡೆರಡು ಸಿನಿಮಾಗಳಲ್ಲಿ ಸುದೀಪ್..‌

ಈಗಾಗಲೇ ‘ಬಿಲ್ಲ ರಂಗ ಬಾಷಾ’ ಸಿನಿಮಾ ಕೆಲಸಗಳು ನಡೆಯುತ್ತಿವೆ. ಪ್ರೀ ಪ್ರೊಡಕ್ಷನ್‌ ಹಂತದಲ್ಲಿ ಈ ಸಿನಿಮಾ ಇರುವುದರಿಂದ, ಇನ್ನೇನು ಚಿತ್ರೀಕರಣ ಪೂರ್ವ ಕೆಲಸ ಮುಗಿಸಿ ಶೂಟಿಂಗ್‌ಗೆ ತಂಡ ಚಾಲನೆ ನೀಡಲಿದೆ. ಒಂದು ವೇಳೆ ಹೊಂಬಾಳೆ ಜತೆಗಿನ ಸಿನಿಮಾ ಘೋಷಣೆ ಆದರೆ, ಎರಡೂ ಪ್ರಾಜೆಕ್ಟ್‌ಗಳಲ್ಲಿ ಒಟ್ಟಿಗೆ ಸುದೀಪ್‌ ಡೇಟ್ಸ್‌ ನೀಡಲಿದ್ದಾರೆ ಎಂದೂ ಹೇಳಲಾಗುತ್ತಿದೆ.

ಆವತ್ತೇ ಮೂಡಿತ್ತು ಅನುಮಾನ..

ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಹೊಂಬಾಳೆ ಫಿಲಂಸ್‌ನ ಕಾರ್ತಿಕ್‌ ಗೌಡ ಕಿಚ್ಚ ಸುದೀಪ್‌ ಜತೆಗಿನ ಫೋಟೋ ಹಂಚಿಕೊಂಡು "ಹೊಸ ಆರಂಭವೊಂದು ಸುದೀಪ್‌ ಸರ್‌ ಜತೆ ಶುರುವಾಗಲಿದೆ" ಎಂದು ಟ್ವಿಟ್‌ ಮಾಡಿದ್ದರು. ಆಗಲೇ ಹೊಂಬಾಳೆ ಜತೆ ಸುದೀಪ್‌ ಸಿನಿಮಾ ಮಾಡಲಿದ್ದಾರಾ ಎಂಬ ಪುಕಾರು ಹಬ್ಬಿತ್ತು. ಈಗ ಆ ಸುದ್ದಿ ಮತ್ತೆ ಮುನ್ನೆಲೆಗೆ ಬಂದಿದೆ.

ಹೀಗೂ ಆಗಬಹುದು...

ಮಾನಾಡು ಸಿನಿಮಾ ಖ್ಯಾತಿಯ ನಿರ್ದೇಶಕ ವೆಂಕಟ್‌ ಪ್ರಭು ಜತೆಗೂ ಸುದೀಪ್‌ ಸಿನಿಮಾ ಮಾಡಲಿದ್ದಾರೆ ಎಂಬುದು ಹಳೇ ಸುದ್ದಿ. ಇದೀಗ #Kichcha46 ಚಿತ್ರವನ್ನು ವೆಂಕಟ್‌ ಪ್ರಭು ಅವರೇ ಮಾಡಿದರೂ ಅಚ್ಚರಿ ಪಡಬೇಕಿಲ್ಲ. ಇತ್ತ ಸದ್ಯ ನಾಗ ಚೈತನ್ಯ ಜತೆ ಕಸ್ಟಡಿ ಎಂಬ ಚಿತ್ರದಲ್ಲಿ ಈ ನಿರ್ದೇಶಕರು ಬಿಜಿಯಾಗಿದ್ದಾರೆ.

Whats_app_banner