ಕಿಚ್ಚ ಸುದೀಪ್‌ ನಟನೆಯ ಮ್ಯಾಕ್ಸ್‌ ಸಿನಿಮಾ ಬಗ್ಗೆ ಬಿಗ್‌ ಸರ್ಪ್ರೈಸ್‌ ಕೊಟ್ಟ ವಾಹಿನಿ! ಒಟಿಟಿಗೂ ಮುನ್ನವೇ ಕಿರುತೆರೆಗೆ ಬರುತ್ತಾ?
ಕನ್ನಡ ಸುದ್ದಿ  /  ಮನರಂಜನೆ  /  ಕಿಚ್ಚ ಸುದೀಪ್‌ ನಟನೆಯ ಮ್ಯಾಕ್ಸ್‌ ಸಿನಿಮಾ ಬಗ್ಗೆ ಬಿಗ್‌ ಸರ್ಪ್ರೈಸ್‌ ಕೊಟ್ಟ ವಾಹಿನಿ! ಒಟಿಟಿಗೂ ಮುನ್ನವೇ ಕಿರುತೆರೆಗೆ ಬರುತ್ತಾ?

ಕಿಚ್ಚ ಸುದೀಪ್‌ ನಟನೆಯ ಮ್ಯಾಕ್ಸ್‌ ಸಿನಿಮಾ ಬಗ್ಗೆ ಬಿಗ್‌ ಸರ್ಪ್ರೈಸ್‌ ಕೊಟ್ಟ ವಾಹಿನಿ! ಒಟಿಟಿಗೂ ಮುನ್ನವೇ ಕಿರುತೆರೆಗೆ ಬರುತ್ತಾ?

ಮ್ಯಾಕ್ಸ್‌ ಸಿನಿಮಾ ಬಿಡುಗಡೆ ಆಗಿ ತಿಂಗಳು ಕಳೆದರೂ, ಅದರ ಒಟಿಟಿ ರಿಲೀಸ್‌ ಅಪ್‌ಡೇಟ್‌ ಇನ್ನೂ ಹೊರಬಿದ್ದಿಲ್ಲ. ಈ ನಡುವೆ ಇದೇ ಸಿನಿಮಾ ಒಟಿಟಿಗೂ ಮುನ್ನವೇ ಕಿರುತೆರೆಗೆ ಬರುವ ಸಾಧ್ಯತೆ ಇದೆ. ಅತಿ ಶೀಘ್ರದಲ್ಲಿ ಕಿರುತೆರೆಗೆ ಮ್ಯಾಕ್ಸ್‌ ಸಿನಿಮಾ ಎಂಟ್ರಿಕೊಡಲಿದೆ ಎಂದು ಜೀ ಕನ್ನಡ ಪೋಸ್ಟ್‌ ಮಾಡಿದೆ.

ಕಿಚ್ಚ ಸುದೀಪ್‌ ನಟನೆಯ ಮ್ಯಾಕ್ಸ್‌ ಸಿನಿಮಾ ಒಟಿಟಿಗೂ ಮುನ್ನವೇ ಕಿರುತೆರೆಗೆ ಬರುತ್ತಾ?
ಕಿಚ್ಚ ಸುದೀಪ್‌ ನಟನೆಯ ಮ್ಯಾಕ್ಸ್‌ ಸಿನಿಮಾ ಒಟಿಟಿಗೂ ಮುನ್ನವೇ ಕಿರುತೆರೆಗೆ ಬರುತ್ತಾ?

Max Box World Television Premiere: ಕಿಚ್ಚ ಸುದೀಪ್‌ ನಾಯಕನಾಗಿ ನಟಿಸಿರುವ ಮ್ಯಾಕ್ಸ್‌ ಸಿನಿಮಾ ಡಿಸೆಂಬರ್‌ 25ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಕಾರ್ತಿಕೇಯನ್‌ ನಿರ್ದೇಶನದಲ್ಲಿ ಮೂಡಿಬಂದ ಪ್ಯಾನ್‌ ಇಂಡಿಯಾ ಮಟ್ಟದ ಈ ಸಿನಿಮಾ, ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳಿನಲ್ಲಿಯೂ ಬಿಡುಗಡೆ ಆಗಿತ್ತು. ವಿಮರ್ಶೆ ದೃಷ್ಟಿಯಿಂದ ಮೆಚ್ಚುಗೆ ಪಡೆದಿದ್ದ ಈ ಸಿನಿಮಾ, ಕಿಚ್ಚನ ಅಭಿಮಾನಿಗಳಿಗೂ ಮ್ಯಾಕ್ಸಿಮಮ್‌ ಇಷ್ಟವಾಗಿತ್ತು. ಈಗ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಒಂದು ತಿಂಗಳ ಮೇಲಾದರೂ, ಒಟಿಟಿ ಅಪ್‌ಡೇಟ್‌ ಸಿಕ್ಕಿಲ್ಲ. ಈ ನಡುವೆ ಜೀ ಕನ್ನಡದಿಂದ ಅಚ್ಚರಿಯ ಸರ್ಪ್ರೈಸ್‌ ಹೊರಬಿದ್ದಿದೆ.

ಮ್ಯಾಕ್ಸ್‌ ಸಿನಿಮಾಕ್ಕೂ ಮುನ್ನ ಕಿಚ್ಚ ಸುದೀಪ್‍ ಅಭಿನಯದ ಸಿನಿಮಾವೊಂದು ಬಿಡುಗಡೆಯಾಗಿ ಸರಿ ಸುಮಾರು ಎರಡೂವರೆ ವರ್ಷಗಳೇ ಆಗಿವೆ. ವಿಕ್ರಾಂತ್ ರೋಣದಲ್ಲಿ ಎದುರಾಗಿದ್ದನ್ನು ಬಿಟ್ಟರೆ, ಚಿತ್ರಮಂದಿರಗಳಲ್ಲಿ ಕಿಚ್ಚನ ದರ್ಶನ ಆಗಿರಲಿಲ್ಲ. ಆ ಕಾಯುವಿಕೆಗೆ ಮ್ಯಾಕ್ಸ್‌ ಸಿನಿಮಾ ಉತ್ತರವಾಗಿತ್ತು. ಲೇಟ್‌ ಆಗಿ ಎಂಟ್ರಿಕೊಟ್ಟರೂ ಲೇಟೆಸ್ಟ್‌ ಆಗಿಯೇ ಕಿಚ್ಚ ಸುದೀಪ್‌ ಅಬ್ಬರಿಸಿದ್ದರು. ತಮಿಳಿನ ನಿರ್ಮಾಪಕ ಕಲೈಪುಲಿ ಎಸ್‌ ದಾನು ನಿರ್ಮಾಣದಲ್ಲಿ ಮೂಡಿಬಂದ ಈ ಸಿನಿಮಾ, ಕಲೆಕ್ಷನ್‌ ವಿಚಾರದಲ್ಲಿಯೂ ಮೋಡಿ ಮಾಡಿತ್ತು. ಸ್ಯಾಕ್ನಿಲ್‌ ತಾಣದ ಮಾಹಿತಿ ಪ್ರಕಾರ 45.95 ಕೋಟಿ ರೂ. ಕಲೆಕ್ಷನ್‌ ಮಾಡಿತ್ತು ಈ ಸಿನಿಮಾ.

ಸಹಜವಾಗಿ ಒಂದು ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿ, ಅಲ್ಲಿಂದ ಡಿಜಿಟಲ್‌ ವೇದಿಕೆ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗುತ್ತದೆ. ಆದರೆ, ಮ್ಯಾಕ್ಸ್‌ ಸಿನಿಮಾ ವಿಚಾರದಲ್ಲಿ ಅದ್ಯಾಕೋ ಕೊಂಚ ಭಿನ್ನವಾಗಿದೆ. ಅಂದರೆ, ಮ್ಯಾಕ್ಸ್‌ ಸಿನಿಮಾ ಒಟಿಟಿಗೂ ಮುನ್ನವೇ ಕಿರುತೆರೆಯ ಮೇಲೆ ಅಬ್ಬರಿಸಲಿದೆ ಎಂದೇ ಹೇಳಲಾಗುತ್ತಿದೆ. 

ಸರ್ಪ್ರೈಸ್‌ ನೀಡಿದ ವಾಹಿನಿ

ಇದೀಗ ಜೀ ಕನ್ನಡ ತನ್ನ ಅಧಿಕೃತ ಸೋಷಿಯಲ್‌ ಮೀಡಿಯಾದಲ್ಲಿ ಮ್ಯಾಕ್ಸ್‌ ಚಿತ್ರದ ಪೋಸ್ಟರ್‌ ಹಂಚಿಕೊಂಡು ಅತಿ ಶೀಘ್ರದಲ್ಲಿ ಎಂಬ ಸುಳಿವು ನೀಡಿದೆ. “ಕಿರುತೆರೆಯಲ್ಲಿ Maximum ಮನರಂಜನೆ ನೀಡೋಕೆ ಶೀಘ್ರದಲ್ಲೇ ಬರ್ತಿದೆ ಕಿಚ್ಚ ಸುದೀಪ್ ‌ಅಭಿನಯದ ಬ್ಲಾಕ್ ಬಸ್ಟರ್ ‘MAX’..!” ಎಂದಿದೆ. ಆದರೆ, ಮ್ಯಾಕ್ಸ್‌ ಸಿನಿಮಾದ ಪ್ರಸಾರ ಯಾವಾಗ ಎಂಬುದನ್ನು ಜೀ ಕನ್ನಡ ಖಚಿತಪಡಿಸಿಲ್ಲ. ಹಾಗಾದರೆ, ಒಟಿಟಿಗೂ ಮುನ್ನವೇ ಕಿರುತೆರೆಯಲ್ಲಿ ಈ ಸಿನಿಮಾ ಪ್ರಸಾರವಾಗಲಿದ್ಯಾ? ಈ ಬಗ್ಗೆ ಮುಂದಿನ ದಿನಗಳಲ್ಲಿಯೇ ಉತ್ತರ ಸಿಗಲಿದೆ.

ಮ್ಯಾಕ್ಸ್‌ ಯಾವ ಒಟಿಟಿಯಲ್ಲಿ?

ಮ್ಯಾಕ್ಸ್‌ ಸಿನಿಮಾ ಯಾವ ಒಟಿಟಿಯಲ್ಲಿ, ಯಾವಾಗಿನಿಂದ ಸ್ಟ್ರೀಮಿಂಗ್‌ ಆರಂಭಿಸಲಿದೆ? ಈ ಪ್ರಶ್ನೆಗೆ ಈ ವರೆಗೂ ಅಧಿಕೃತ ಘೋಷಣೆ ಆಗಿಲ್ಲ. ಇದರಾಚೆಗೆ ಈ ಸಿನಿಮಾದ ಸ್ಯಾಟಲೈಟ್‌ ಹಕ್ಕುಗಳನ್ನು ಜೀ ಕನ್ನಡ ಪಡೆದುಕೊಂಡಿದೆ. ಅದೇ ರೀತಿ ಒಟಿಟಿಯ ಡಿಜಿಟಲ್‌ ಹಕ್ಕುಗಳನ್ನೂ ಜೀ5 ಖರೀದಿಸಿದೆ ಎಂದೇ ಹೇಳಲಾಗುತ್ತಿದೆ. ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವ ಮಾಹಿತಿ ಪ್ರಕಾರ, ಮ್ಯಾಕ್ಸ್‌ ಸಿನಿಮಾ ಜೀ5 ಒಟಿಟಿಯಲ್ಲಿ ಪ್ರಸಾರವಾಗಲಿದೆ ಎನ್ನಲಾಗುತ್ತಿದೆ. ಯಾವಾಗ ಎಂಬುದು ಇನ್ನಷ್ಟೇ ಅಧಿಕೃತವಾಗಬೇಕಿದೆ.

(ಗಮನಿಸಿ: ಈ ಬರಹದಲ್ಲಿ ನೀಡಲಾದ ಮಾಹಿತಿಯು ಸಾಮಾಜಿಕ ಮಾಧ್ಯಮಗಳು ಹಾಗೂ ಸಿನಿಮಾ ಉದ್ಯಮದ ಮೂಲಗಳನ್ನು ಆಧರಿಸಿದೆ. ಈ ಸಿನಿಮಾದ ಡಿಜಿಟಲ್ ಹಕ್ಕು ಪಡೆದ ಒಟಿಟಿ ಸಂಸ್ಥೆಗಳು ಶೀಘ್ರದಲ್ಲಿಯೇ ಅಧಿಕೃತವಾಗಿ ದಿನಾಂಕವನ್ನು ಘೋಷಿಸಲಿವೆ)

Whats_app_banner