ಕನ್ನಡ ಸುದ್ದಿ  /  Entertainment  /  Kichcha Sudeep Talks About Shah Rukh Khan Film Pathaan

Sudeep on Pathaan: ‘ಬಾಲಿವುಡ್‌ನ ಗೆಲುವಿನ ನಕ್ಷೆ ಬದಲಿಸಲು ಪಠಾಣ್‌ ಬರಬೇಕಾಯಿತು’; ಮುಂಬೈನಲ್ಲಿ ಕಬ್ಜ ಪ್ರಚಾರದ ವೇಳೆ ಕಿಚ್ಚನ ಮಾತು

ಇತ್ತೀಚಿನ ದಿನಗಳಲ್ಲಿ ಬಾಲಿವುಡ್‌ನಲ್ಲಿ ಸೌತ್ ಚಿತ್ರಗಳು ಪ್ರಾಬಲ್ಯ ಸಾಧಿಸುತ್ತಿವೆ. ಹಿಂದಿ ಚಿತ್ರಗಳಿಗೆ ಹೋಲಿಸಿದರೆ ಹಲವು ಸೌತ್ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಗಿವೆ. ಆದರೆ ಈ ವರ್ಷ 'ಪಠಾಣ್' ಯಶಸ್ಸು ಬಾಲಿವುಡ್ ತಯಾರಕರಲ್ಲಿ ಹೊಸ ಭರವಸೆ ಮೂಡಿಸಿದೆ.

‘ಬಾಲಿವುಡ್‌ನ ಗೆಲುವಿನ ನಕ್ಷೆ ಬದಲಿಸಲು ಪಠಾಣ್‌ ಬರಬೇಕಾಯಿತು’; ಮುಂಬೈನಲ್ಲಿ ಕಬ್ಜ ಪ್ರಚಾರದ ವೇಳೆ ಕಿಚ್ಚನ ಮಾತು
‘ಬಾಲಿವುಡ್‌ನ ಗೆಲುವಿನ ನಕ್ಷೆ ಬದಲಿಸಲು ಪಠಾಣ್‌ ಬರಬೇಕಾಯಿತು’; ಮುಂಬೈನಲ್ಲಿ ಕಬ್ಜ ಪ್ರಚಾರದ ವೇಳೆ ಕಿಚ್ಚನ ಮಾತು

kichcha Sudeep on Pathaan: ಕಬ್ಜ ಸಿನಿಮಾ ಇದೀಗ ಕರ್ನಾಟಕ ಮಾತ್ರವಲ್ಲ ಮುಂಬೈನಲ್ಲೂ ಸದ್ದು ಮಾಡುತ್ತಿದೆ. ಇತ್ತೀಚೆಗಷ್ಟೇ ಮಾಯಾನಗರಿ ಮುಂಬೈನಲ್ಲಿ ಕಬ್ಜ ಚಿತ್ರತಂಡ ಬೀಡು ಬಿಟ್ಟು, ಸಿನಿಮಾ ಬಗ್ಗೆ ಹೇಳಿಕೊಂಡಿದೆ. ಚಿತ್ರದ ಬಿಡುಗಡೆ ಪೂರ್ವ ಇವೆಂಟ್‌ನಲ್ಲಿ 50ಕ್ಕೂ ಅಧಿಕ ಮಂದಿ ಬೈಕ್‌ ರ್ಯಾಲಿ ಮಾಡಿ ಚಿತ್ರದ ಪ್ರಚಾರ ಮಾಡಿದ್ದರು. ಬಳಿಕ ವೇದಿಕೆ ಏರಿದ್ದ ಇಡೀ ತಂಡ ಚಿತ್ರದ ಬಗ್ಗೆ ಎಳೆ ಎಳೆಯಾಗಿ ಮಾಹಿತಿ ನೀಡಿತ್ತು. ಈ ನಡುವೆ ಪಠಾಣ್‌ ಚಿತ್ರದ ಮೂಲಕ ಬಾಲಿವುಡ್‌ ಮರುಜನ್ಮ ಪಡೆದ ವಿಚಾರವೂ ರಿಂಗಣಿಸಿತು.

ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಉಪೇಂದ್ರ ಅವರ 'ಕಬ್ಜ' ಸಿನಿಮಾವನ್ನು ‘ಕೆಜಿಎಫ್’ಗೆ ಹೋಲಿಸಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಉಪೇಂದ್ರ, ‘ಯಾವುದೇ ಸಿನಿಮಾದೊಂದಿಗೆ ಯಾವುದೇ ಸಿನಿಮಾವನ್ನು ಹೋಲಿಕೆ ಮಾಡಬಾರದು. 'ಕಬ್ಜ' ಚಿತ್ರದ ಟೀಸರ್ ಬಿಡುಗಡೆಯಾದಾಗ, ಈ ಚಿತ್ರವು 'ಕೆಜಿಎಫ್'ನಂತೆ ಇದೆ ಎಂದು ಜನರು ಭಾವಿಸಿದ್ದಾರೆ. ಆದರೆ ಚಿತ್ರದ ಟ್ರೇಲರ್ ಲಾಂಚ್ ಆದ ನಂತರ 'ಕಬ್ಜ' ಕೂಡ ‘ಕೆಜಿಎಫ್’ನಂತಹ ಚಿತ್ರ ಎಂಬ ಜನರ ಭ್ರಮೆ ಬುಡಮೇಲಾಗಿದೆ. ಅದೇ ರೀತಿ 'ಕೆಜಿಎಫ್' ಪ್ಯಾನ್ ಇಂಡಿಯಾ ಯಶಸ್ಸನ್ನು ಹೇಗೆ ಪಡೆದುಕೊಂಡಿದೆಯೋ, ನಮ್ಮ ಚಿತ್ರವೂ ಅದೇ ಯಶಸ್ಸನ್ನು ಪಡೆಯುತ್ತದೆ ಎಂದು ನಾನು ಭಾವಿಸುತ್ತೇನೆ" ಎಂದರು.

ಪಠಾಣ್‌ ಬಗ್ಗೆ ಮಾತನಾಡಿದ ಕಿಚ್ಚ

ಕಳೆದ ಕೆಲವು ವರ್ಷಗಳಿಂದ ಬಾಲಿವುಡ್‌ನಲ್ಲಿ ಸೌತ್ ಚಿತ್ರಗಳು ಪ್ರಾಬಲ್ಯ ಸಾಧಿಸುತ್ತಿವೆ. ಹಿಂದಿ ಚಿತ್ರಗಳಿಗೆ ಹೋಲಿಸಿದರೆ ಹಲವು ಸೌತ್ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಗಿವೆ. ಆದರೆ ಈ ವರ್ಷ 'ಪಠಾಣ್' ಯಶಸ್ಸು ಬಾಲಿವುಡ್ ತಯಾರಕರಲ್ಲಿ ಹೊಸ ಭರವಸೆ ಮೂಡಿಸಿದೆ. ಈ ಬಗ್ಗೆ ಮಾತನಾಡಿದ ಕಿಚ್ಚ ಸುದೀಪ್, 'ಇದು ತುಂಬಾ ಒಳ್ಳೆಯ ಕೆಲಸ. ‘ಪಠಾಣ್’ನಂತಹ ಚಿತ್ರ ರಿಲೀಸ್‌ ಆಗಿ ಯಶಸ್ವಿಯಾದಾಗ ಅದು ಬಾಲಿವುಡ್‌ನ ನಕ್ಷೆಯನ್ನೇ ಬದಲಿಸುತ್ತದೆ. ಇಂತಹ ಚಿತ್ರಗಳು ಎಲ್ಲರಿಗೂ ಬೇಕು" ಎಂದು ಸುದೀಪ್‌ ಹೇಳಿದರು.

'ಕೋವಿಡ್ ನಂತರ ಚಿತ್ರರಂಗದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಚಿತ್ರವು ಯಾವುದೇ ಭಾಷೆಯದ್ದಾಗಿರಬಹುದು, ಉತ್ತಮ ಕಂಟೆಂಟ್ ಮಾತ್ರ ವರ್ಕೌಟ್‌ ಆಗುತ್ತಿದೆ ಎಂದರು ಚಿತ್ರದ ನಿರ್ಮಾಪಕರಲ್ಲೊಬ್ಬರಾದ ಆನಂದ್ ಪಂಡಿತ್.

ಟ್ರೇಲರ್‌ಗೆ ಮೆಚ್ಚುಗೆ

ಆರ್‌ ಚಂದ್ರು ನಿರ್ದೇಶನದಲ್ಲಿ ಮೂಡಿಬಂದಿರುವ ಕಬ್ಜ ಚಿತ್ರದ ಮೂರು ನಿಮಿಷದ ಟ್ರೇಲರ್‌ನಲ್ಲಿ ರಕ್ತಪಾತದ ರೌಡಿಸಂ ಲೋಕವನ್ನು ಅನಾವರಣ ಮಾಡಿದ್ದಾರೆ. ಶಿವಣ್ಣ, ಸುದೀಪ್‌ ಸಣ್ಣ ಝಲಕ್‌ ಚಿತ್ರದಲ್ಲಿ ಕಾಣಿಸಿದರೆ, ಉಪೇಂದ್ರ ಮಾಸ್‌ ಅವತಾರದಲ್ಲಿ ಮೋಡಿ ಮಾಡಿದ್ದಾರೆ. ರವಿ ಬಸ್ರೂರು ಅವರ ಹಿನ್ನೆಲೆ ಸಂಗೀತ, ಶಿವಕುಮಾರ್‌ ಅವರ ಕಲಾ ನಿರ್ದೇಶನ ಇಡೀ ಟ್ರೇಲರ್‌ನ ಹೈಲೈಟ್.‌

ಬ್ರಿಟೀಷ್‌ ಕಾಲದ ಕಥೆಯ ಜತೆಗೆ ಸ್ವಾತಂತ್ರ್ಯ ನಂತರದ ಮತ್ತೊಂದು ಪಾತಕ ಲೋಕವನ್ನೂ ಈ ಸಿನಿಮಾದಲ್ಲಿ ನಿರ್ದೇಶಕರು ಅನಾವರಣ ಮಾಡಿದ್ದಾರೆ. 'ಕಬ್ಜ' ಚಿತ್ರವು ಪುನೀತ್‌ ರಾಜ್‌ಕುಮಾರ್‌ ಅವರ ಜನ್ಮ ದಿನವಾದ ಮಾರ್ಚ್ 17ರಂದು ಜಗತ್ತಿನಾದ್ಯಂತ 50 ದೇಶಗಳ 4 ಸಾವಿರ ಪರದೆಗಳಲ್ಲಿ, ಐದು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ