ಸೋತ ಸೂರ್ಯನಿಗೆ ಗೆಲುವಿನ ಸಿಹಿ ಉಣಬಡಿಸುತ್ತಾ ʻರೆಟ್ರೋʼ ಸಿನಿಮಾ? ಇಲ್ಲಿದೆ ಟ್ವಿಟ್ಟರ್ ವಿಮರ್ಶೆ
ತಮಿಳು ನಟ ಸೂರ್ಯ, ನಟಿ ಪೂಜಾ ಹೆಗ್ಡೆ ನಟನೆಯ ರೆಟ್ರೋ ಸಿನಿಮಾ ಇಂದು (ಮೇ 1) ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಕಾರ್ತಿಕ್ ಸುಬ್ಬರಾಜು ನಿರ್ದೇಶನದ ಈ ಸಿನಿಮಾದ ಟ್ವಿಟ್ಟರ್ ವಿಮರ್ಶೆ ಇಲ್ಲಿದೆ.

ಕಾಲಿವುಡ್ ಸ್ಟಾರ್ ನಟ ಸೂರ್ಯ ಇದೀಗ ಹೊಸ ಅವತಾರದ ಜತೆಗೆ ಚಿತ್ರಮಂದಿರಗಳಿಗೆ ಆಗಮಿಸಿದ್ದಾರೆ. ಅವರ ಬಹುನಿರೀಕ್ಷಿತ ʻರೆಟ್ರೋʼ ಸಿನಿಮಾ ಇಂದು (ಮೇ 1) ಬಿಡುಗಡೆ ಆಗಿದೆ. ಕಾರ್ತಿಕ್ ಸುಬ್ಬರಾಜು ನಿರ್ದೇಶನದ ಈ ಸಿನಿಮಾದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಿದ್ದಾರೆ. ಶೀರ್ಷಿಕೆಗೆ ತಕ್ಕಂತೆ ಮೂರು ವಿಭಿನ್ನ ಗೆಟಪ್‌ಗಳಲ್ಲಿ ಸೂರ್ಯ ಕಾಣಿಸಿದ್ದಾರೆ. ಟ್ರೇಲರ್ ಮೂಲಕ ನಿರೀಕ್ಷೆ ಹೆಚ್ಚಿಸಿದ್ದ ಈ ಸಿನಿಮಾ, ಇದೀಗ ವಿಮರ್ಶೆ ದೃಷ್ಟಿಯಿಂದಲೂ ಚಿತ್ರ ಪ್ರೇಮಿಗಳನ್ನು ಮೋಡಿ ಮಾಡ್ತಾ? ಸಿನಿಮಾ ನೋಡಿದವರು ಏನಂದ್ರು? ಹೀಗಿದೆ ಟ್ವಿಟ್ಟರ್ ವಿಮರ್ಶೆ.
ನಟ ಸೂರ್ಯ ಅವರ ಸಿನಿಮಾಗಳು ಅದ್ಯಾಕೋ ಮೊದಲಿಂತೆ ಚಿತ್ರಮಂದಿರಗಳಲ್ಲಿ ಸದ್ದು ಮಾಡುತ್ತಿಲ್ಲ. ಬಹುಕೋಟಿ ವೆಚ್ಚದ ಸಿನಿಮಾಗಳು ಮಕಾಡೆ ಮಲಗಿವೆ. ಅದಕ್ಕೆ ಲೇಟೆಸ್ಟ್ ಉದಾಹರಣೆ ಕಂಗುವ ಸಿನಿಮಾ. ಸೂರ್ಯ ನಟನೆಯ ಸಿನಿಮಾಗಳಷ್ಟೇ ಅಲ್ಲದೆ, ತಾವೇ ಹಣ ಹೂಡಿ ನಿರ್ಮಿಸಿದ ಸಿನಿಮಾಗಳು ಅವರ ಕೈ ಹಿಡಿದಿಲ್ಲ. ಹಾಗಂತ ಸೂರ್ಯ ಅವರ ಕ್ರೇಜ್‌ಗೇನು ಕಡಿಮೆ ಆಗಿಲ್ಲ. ಇಂದಿಗೂ ಅವರ ಸಿನಿಮಾ ನೋಡುವ ಕೋಟಿ ಕೋಟಿ ಅಭಿಮಾನಿಗಳಿದ್ದಾರೆ. ಇದೀಗ ಅದೇ ಫ್ಯಾನ್ಸ್‌ಗೆ ರೆಟ್ರೋ ಮೂಲಕ ಮತ್ತೆ ಥಿಯೇಟರ್‌ಗಳಿಗೆ ಆಗಮಿಸಿದ್ದಾರವರು.
ಅಚ್ಚರಿಯ ವಿಚಾರ ಏನೆಂದರೆ ಎಲ್ಲಿಯೂ ರೆಟ್ರೋ ಸಿನಿಮಾದ ಪ್ರೀಮಿಯರ್ ಶೋಗಳು ನಡೆದಿಲ್ಲ. ಈ ಹಿಂದೆ ಕಂಗುವ ಸಿನಿಮಾದ ಪ್ರೀಮಿಯರ್ ಶೋ ಮುಗಿಯುತ್ತಿದ್ದಂತೆ, ಚಿತ್ರದ ಬಗ್ಗೆ ನೆಗೆಟಿವ್ ಟಾಕ್ ಕೇಳಿಬಂದಿತ್ತು. ಈಗ ರೆಟ್ರೋ ಚಿತ್ರಕ್ಕೂ ಅಂಥದ್ದೇ ಸಮಸ್ಯೆ ಎದುರಾಗಬಾರದು ಎಂಬ ಕಾರಣಕ್ಕೆ ಆ ಸಾಹಸಕ್ಕೆ ಮುಂದಾಗಿಲ್ಲ ಎಂಬುದು ಮೇಲ್ನೋಟಕ್ಕೆ ಕಾಣಿಸುತ್ತದೆ. ಇದೀಗ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾ ಬಗ್ಗೆ ಪಾಸಿಟಿವ್ ಟಾಕ್ ಕೇಳಿಬರುತ್ತಿದೆ. ಇನ್ನೇನು ಶೀಘ್ರದಲ್ಲಿ ಚಿತ್ರದ ವಿಮರ್ಶೆಗಳು ಹೊರಬೀಳಲಿವೆ.
ಈ ಚಿತ್ರವನ್ನು 2ಡಿ ಎಂಟರ್‌ಟೈನ್‌ಮೆಂಟ್ ಮತ್ತು ಸ್ಟೋನ್ ಬೆಂಚ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದೆ. ಸೂರ್ಯ ಮತ್ತು ಪೂಜಾ ಹೆಗ್ಡೆ ಜೊತೆಗೆ ಜೋಜು ಜಾರ್ಜ್, ಜಯರಾಮ್, ನಾಜರ್, ಪ್ರಕಾಶ್ ರಾಜ್, ಕರುಣಾಕರಣ್ ಸೇರಿ ಇನ್ನೂ ಹಲವರು ನಟಿಸಿದ್ದಾರೆ. ಸಂತೋಷ್ ನಾರಾಯಣನ್ ಸಂಗೀತ, ಶ್ರೇಯಸ್ ಕೃಷ್ಣ ಛಾಯಾಗ್ರಹಣ, ಶಫಿಕ್ ಮಹಮ್ಮದ್ ಅಲಿ ಸಂಕಲನ ಚಿತ್ರಕ್ಕಿದೆ.


