Kanguva First Review: ಸೂರ್ಯ ಅಭಿನಯದ ಬಿಗ್ ಬಜೆಟ್ ಸಿನಿಮಾ ಕಂಗುವಾ ಸಿನಿಮಾದ ವಿಮರ್ಶೆ ಹಂಚಿಕೊಂಡ ಮದನ್‌ ಕರ್ಕಿ
ಕನ್ನಡ ಸುದ್ದಿ  /  ಮನರಂಜನೆ  /  Kanguva First Review: ಸೂರ್ಯ ಅಭಿನಯದ ಬಿಗ್ ಬಜೆಟ್ ಸಿನಿಮಾ ಕಂಗುವಾ ಸಿನಿಮಾದ ವಿಮರ್ಶೆ ಹಂಚಿಕೊಂಡ ಮದನ್‌ ಕರ್ಕಿ

Kanguva First Review: ಸೂರ್ಯ ಅಭಿನಯದ ಬಿಗ್ ಬಜೆಟ್ ಸಿನಿಮಾ ಕಂಗುವಾ ಸಿನಿಮಾದ ವಿಮರ್ಶೆ ಹಂಚಿಕೊಂಡ ಮದನ್‌ ಕರ್ಕಿ

ಕಂಗುವಾ ಸಿನಿಮಾ ವಿಮರ್ಶೆ: ಸೂರ್ಯ ಅಭಿನಯದ ಕಂಗುವಾ ಸಿನಿಮಾದ ಬಗ್ಗೆ ಮೊದಲ ವಿಮರ್ಶೆ ಹೊರಬಿದ್ದಿದೆ. ಈ ಸಿನಿಮಾದ ಪ್ರಚಾರ ಕೂಡ ಭರ್ಜರಿಯಾಗಿ ನಡೆಯುತ್ತಿದೆ. ಮೊದಲ ವಿಮರ್ಶೆಯನ್ನು ಗೀತರಚನೆಗಾರ ಮದನ್ ಕರ್ಕಿ ಹಂಚಿಕೊಂಡಿದ್ದಾರೆ.

 ಸೂರ್ಯ ಅಭಿನಯದ ಬಿಗ್ ಬಜೆಟ್ ಸಿನಿಮಾ 'ಕಂಗುವ'
ಸೂರ್ಯ ಅಭಿನಯದ ಬಿಗ್ ಬಜೆಟ್ ಸಿನಿಮಾ 'ಕಂಗುವ'

Kanguva First Review: ತಮಿಳಿನ ಸ್ಟಾರ್ ಹೀರೋ ಸೂರ್ಯ ಅವರ ಫ್ಯಾಂಟಸಿ ಆ್ಯಕ್ಷನ್ ಸಿನಿಮಾ 'ಕಂಗುವಾ' ಸಿನಿಮಾದ ಮೇಲೆ ಅಭಿಮಾನಿಗಳು ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಶಿವ ನಿರ್ದೇಶನದ ಈ ಬಿಗ್ ಬಜೆಟ್ ಸಿನಿಮಾ ನವೆಂಬರ್ 14 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ಈ ಸಿನಿಮಾದ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದೆ. ನಾಯಕ ಸೂರ್ಯ ಸಂಪೂರ್ಣವಾಗಿ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಹಲವು ಸಂದರ್ಶನಗಳಲ್ಲಿ ಭಾಗವಹಿಸುತ್ತಿದ್ದಾರೆ. ಈ ನಡುವೆ ಕಂಗುವಾ ಸಿನಿಮಾ ವಿಮರ್ಶೆ ಬಂದಿದೆ.

ಕಂಗುವಾ ಚಿತ್ರಕ್ಕೆ ಸಂಭಾಷಣೆ ನೀಡಿರುವ ಗೀತರಚನೆಗಾರ ಮದನ್ ಕರ್ಕಿ ಚಿತ್ರದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಸಿನಿಮಾವನ್ನು ಪೂರ್ತಿಯಾಗಿ ನೋಡಿದ್ದೇನೆ ಎಂದು ಬರೆದುಕೊಂಡಿದ್ದಾರೆ. ವಿಮರ್ಶೆಯನ್ನೂ ಬರೆದಿದ್ದಾರೆ. ಚಿತ್ರವು ಉತ್ತಮ ಸೀನ್‌ಗಳನ್ನು ಹೊಂದಿದೆ. ಡೀಪ್‌ ಸ್ಟೋರಿ ಮತ್ತು ಸೂರ್ಯ ಅವರ ಅಭಿನಯ ಎಲ್ಲವೂ ತುಂಬಾ ಚೆನ್ನಾಗಿದೆ ಎಂದು ಬರೆದಿದ್ದಾರೆ. ಕಂಗುವಾ ಚಿತ್ರ ಅದ್ಭುತ ಚಿತ್ರ ಎಂದು ತಮ್ಮ X ಖಾತೆಯಲ್ಲಿ ಬರೆದಿದುಕೊಂಡಿದ್ದಾರೆ.

ಡಬ್ಬಿಂಗ್ ಪ್ರಕ್ರಿಯೆಯಲ್ಲಿ ನಾನು ಪ್ರತಿ ದೃಶ್ಯವನ್ನು ನೂರಕ್ಕೂ ಹೆಚ್ಚು ಬಾರಿ ನೋಡಿದ್ದೇನೆ. ಆದರೆ ಪ್ರತಿ ಬಾರಿಯೂ ಈ ಸಿನಿಮಾ ಹೊಸ ರೀತಿಯ ಪರಿಣಾಮವನ್ನು ನನ್ನ ಮೇಲೆ ಭಿನ್ನವಾಗಿ ಬೀರಿದೆ ಎಂದು ಹೇಳಿದ್ದಾರೆ. ದೃಶ್ಯಗಳು, ಕಲೆಯ ವಿವರಗಳು, ಉತ್ತಮ ಕಥೆ ಮತ್ತು ಸಂಗೀತ ಹಾಗೂ ಸೂರ್ಯ ಅವರ ಅದ್ಭುತ ಅಭಿನಯ ಇದಕ್ಕೊಂದು ಪವರ್ ನೀಡಿದೆ ಎಂದು ಬರೆದುಕೊಂಡಿದ್ದಾರೆ.

ಕನಸನ್ನು ನನಸಾಗಿಸಿದ ಸ್ಟುಡಿಯೋ ಗ್ರೀನ್‌ಗೆ ಧನ್ಯವಾದ ಎಂದು ಮದನ್ ಕರ್ಕಿ ಪೋಸ್ಟ್ ಮಾಡಿದ್ದಾರೆ.

ಯಾವೆಲ್ಲ ಭಾಷೆಗಳಲ್ಲಿ ಸಿನಿಮಾ ಬರಲಿದೆ?

ಕಂಗುವಾ ಚಿತ್ರ ನವೆಂಬರ್ 14 ರಂದು ತಮಿಳು, ತೆಲುಗು, ಹಿಂದಿ, ಮಲಯಾಳಂ, ಕನ್ನಡ, ಇಂಗ್ಲಿಷ್, ಫ್ರೆಂಚ್ ಮತ್ತು ಸ್ಪ್ಯಾನಿಷ್ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರವನ್ನು ವಿಶ್ವದಾದ್ಯಂತ ಸುಮಾರು 3,500 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಯೋಚಿಸಿದ್ದಾರೆ. ಈ ಚಿತ್ರ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ನಾಯಕ ಸೂರ್ಯ ಸೇರಿದಂತೆ ಚಿತ್ರತಂಡ ಪ್ರಚಾರದಲ್ಲಿ ಬ್ಯುಸಿಯಾಗಿದೆ. ತಯಾರಕರು ದೇಶಾದ್ಯಂತ ಪ್ರಚಾರ ಕಾರ್ಯಕ್ರಮಗಳನ್ನು ಆಯೋಜಿಸಲು ಪ್ರಯತ್ನಿಸುತ್ತಿದ್ದಾರೆ.

ದಿಶಾ ಪಟಾನಿ ಕಂಗುವಾ ಚಿತ್ರದಲ್ಲಿ ಸೂರ್ಯ ಜೊತೆ ನಟಿಸಿದ್ದರು . ಈ ಚಿತ್ರದಲ್ಲಿ ಸೂರ್ಯ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಬಾಬಿ ಡಿಯೋಲ್, ಜಗಪತಿ ಬಾಬು, ಯೋಗಿ ಬಾಬು, ನಟರಾಜನ್ ಸುಬ್ರಮಣ್ಯಂ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ಸೂರ್ಯನನ್ನು ಡಬ್ಬಿಂಗ್ ಮಾಡಲು AI ತಂತ್ರಜ್ಞಾನವನ್ನು ಬಳಸಲಾಗಿದೆ. ತಮಿಳಿನ ಹೊರತಾಗಿ ಇತರ ಭಾಷೆಗಳಲ್ಲಿ ಕಲಾವಿದರನ್ನು ಬಳಸಿ ಡಬ್ಬಿಂಗ್ ಮಾಡುವ ಬದಲು, ಸೂರ್ಯನ ಧ್ವನಿಗಾಗಿ AI ಅನ್ನು ಬಳಸಲಾಯಿತು.

ಕಂಗುವ ಚಿತ್ರವನ್ನು ಸ್ಟುಡಿಯೋ ಗ್ರೀನ್ ಮತ್ತು ಯುವಿ ಕ್ರಿಯೇಷನ್ಸ್ ಬ್ಯಾನರ್‌ಗಳ ಅಡಿಯಲ್ಲಿ ಕೆಇ ಜ್ಞಾನವೇಲ್ ರಾಜಾ, ವಂಶಿಕೃಷ್ಣ ಮತ್ತು ಪ್ರಮೋದ್ ನಿರ್ಮಿಸಿದ್ದಾರೆ. ಸುಮಾರು 300 ಕೋಟಿ ರೂಪಾಯಿಗಳ ಅದ್ಧೂರಿ ಬಜೆಟ್‌ನಲ್ಲಿ ಈ ಚಿತ್ರವನ್ನು ನಿರ್ಮಿಸಲಾಗಿದೆ ಎಂದು ಅಂದಾಜಿಸಲಾಗಿದೆ. ಕಂಗುವಾ ಚಿತ್ರ 2000 ಕೋಟಿ ಕಲೆಕ್ಷನ್ ಮಾಡಲಿದೆ ಎಂದು ನಿರ್ಮಾಪಕ ಜ್ಞಾನವೇಲ್ ರಾಜಾ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ. ಈಗಾಗಲೇ ಬಿಡುಗಡೆಯಾದ ಟ್ರೈಲರ್‌ಗೆ ಸೂಪರ್ ರೆಸ್ಪಾನ್ಸ್‌ ಸಿಕ್ಕಿದೆ.