Indian 2 Day 1 Collection: ಬಾಕ್ಸ್‌ಆಫೀಸ್‌ನಲ್ಲಿ ನಿರೀಕ್ಷೆ ಮಟ್ಟ ತಲುಪದ ಇಂಡಿಯನ್‌ 2 ಸಿನಿಮಾ, ಮೊದಲ ದಿನದ ಗಳಿಕೆ ಇಷ್ಟೊಂದು ಹೀನಾಯವೇ?
ಕನ್ನಡ ಸುದ್ದಿ  /  ಮನರಂಜನೆ  /  Indian 2 Day 1 Collection: ಬಾಕ್ಸ್‌ಆಫೀಸ್‌ನಲ್ಲಿ ನಿರೀಕ್ಷೆ ಮಟ್ಟ ತಲುಪದ ಇಂಡಿಯನ್‌ 2 ಸಿನಿಮಾ, ಮೊದಲ ದಿನದ ಗಳಿಕೆ ಇಷ್ಟೊಂದು ಹೀನಾಯವೇ?

Indian 2 Day 1 Collection: ಬಾಕ್ಸ್‌ಆಫೀಸ್‌ನಲ್ಲಿ ನಿರೀಕ್ಷೆ ಮಟ್ಟ ತಲುಪದ ಇಂಡಿಯನ್‌ 2 ಸಿನಿಮಾ, ಮೊದಲ ದಿನದ ಗಳಿಕೆ ಇಷ್ಟೊಂದು ಹೀನಾಯವೇ?

ಬಹು ನಿರೀಕ್ಷೆ ಮೂಡಿಸಿ ತೆರೆಗೆ ಬಂದಿದ್ದ ಕಮಲ್‌ ಹಾಸನ್‌ ಅವರ ಇಂಡಿಯನ್‌ 2 ಸಿನಿಮಾ, ನೋಡುಗರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ನೆಗೆಟಿವ್‌ ಟಾಕ್‌ ಸಹ ಕ್ರಿಯೇಟ್‌ ಆಗಿದ್ದು, ಇದು ಕಲೆಕ್ಷನ್‌ ಮೇಲೆ ದೊಡ್ಡ ಮಟ್ಟದಲ್ಲಿಯೇ ಪರಿಣಾಮ ಬೀರಿದೆ.

Indian 2 Day 1 Collection: ಬಾಕ್ಸ್‌ಆಫೀಸ್‌ನಲ್ಲಿ ನಿರೀಕ್ಷೆ ಮಟ್ಟ ತಲುಪದ ಇಂಡಿಯನ್‌ 2 ಸಿನಿಮಾ, ಮೊದಲ ದಿನದ ಗಳಿಕೆ ಇಷ್ಟೊಂದು ಹೀನಾಯವೇ?
Indian 2 Day 1 Collection: ಬಾಕ್ಸ್‌ಆಫೀಸ್‌ನಲ್ಲಿ ನಿರೀಕ್ಷೆ ಮಟ್ಟ ತಲುಪದ ಇಂಡಿಯನ್‌ 2 ಸಿನಿಮಾ, ಮೊದಲ ದಿನದ ಗಳಿಕೆ ಇಷ್ಟೊಂದು ಹೀನಾಯವೇ?

Indian 2 Day 1 Box Office Collection: ಉಳಗನಾಯಗನ್‌ ಕಮಲ್ ಹಾಸನ್ ನಾಯಕನಾಗಿ ನಟಿಸಿರುವ ಇಂಡಿಯನ್‌ 2 ಸಿನಿಮಾ ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ನಿರಾಸೆ ಮೂಡಿಸಿದೆ. ಕಮಲ್‌ ಹಾಸನ್‌ ಅವರ ಈ ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ, ಅತಿ ಕಡಿಮೆ ಓಪನಿಂಗ್‌ ಕಂಡ ಸಿನಿಮಾ ಎಂಬ ಹಣೆಪಟ್ಟಿ ಹೊತ್ತುಕೊಂಡಿದೆ ಇಂಡಿಯನ್‌ 2. 1996ರಲ್ಲಿ ತೆರೆಕಂಡ ಇಂಡಿಯನ್‌ ಸಿನಿಮಾದ ಮುಂದುವರಿದ ಭಾಗವಾಗಿ ನಿರ್ದೇಶಕ ಶಂಕರ್ ಭರ್ಜರಿ ಆಕ್ಷನ್‌ಗಳ ಜತೆಗೆ ಈ ಸಿನಿಮಾ ಮಾಡಿದ್ದಾರೆ. 150 ಕೋಟಿ ಬಜೆಟ್‌ನಲ್ಲಿ ಪಾರ್ಟ್‌ 2 ಚಿತ್ರಕ್ಕೆ ಬಂಡವಾಳ ಹೂಡಿದೆ ಲೈಕಾ ಸಂಸ್ಥೆ.

ಕಮಲ್ ಹಾಸನ್ ಮತ್ತು ಶಂಕರ್ ಕಾಂಬಿನೇಷನ್‌ನ ಕ್ರೇಜ್‌ನಿಂದಾಗಿ, ಈ ಚಿತ್ರದ ಬಗ್ಗೆ ತೆಲುಗು, ತಮಿಳು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಇತ್ತು. ಇಂಡಿಯನ್ 2 ಬಾಕ್ಸ್ ಆಫೀಸ್‌ನಲ್ಲಿ ಈ ಹಿಂದಿನ ಒಂದಷ್ಟು ದಾಖಲೆಗಳನ್ನು ಪುಡಿಗಟ್ಟಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಆ ನಿರೀಕ್ಷೆ ಸಂಪೂರ್ಣ ಹುಸಿಯಾಗಿದೆ. ಚಿತ್ರವು ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ಸೋತಿದೆ. ಇದು ಶನಿವಾರ ಮತ್ತು ಭಾನುವಾರದ ಕಲೆಕ್ಷನ್‌ ಮೇಲೆಯೂ ಪರಿಣಾಮ ಬೀರಲಿದೆ.

ಇಂಡಿಯನ್‌ 2 ಮೊದಲ ದಿನದ ಕಲೆಕ್ಷನ್...

ಇಂಡಿಯನ್‌ 2 ಚಿತ್ರ ಮೊದಲ ದಿನವೇ 26 ಕೋಟಿ ಕಲೆಕ್ಷನ್ ಮಾಡಿದೆ ಎನ್ನುತ್ತಿದೆ ಟ್ರೇಡ್ ಲೆಕ್ಕಾಚಾರಗಳು. ಆ ಪೈಕಿ ತಮಿಳಿನಲ್ಲಿ ಮೊದಲ ದಿನವಾದ ಶುಕ್ರವಾರ ಕೇವಲ 17 ಕೋಟಿ ಕಲೆಕ್ಷನ್ ಮಾಡಿದೆ. ತೆಲುಗಿನಲ್ಲಿ 7.7 ಕೋಟಿ, ಹಿಂದಿ ಭಾಷೆಯಲ್ಲಿ 1.2 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಹಿಂದಿ ಪ್ರೇಕ್ಷಕರನ್ನು ಮೆಚ್ಚಿಸುವಲ್ಲಿ ಇಂಡಿಯನ್‌ 2 ಸಿನಿಮಾ ಸಂಪೂರ್ಣವಾಗಿ ವಿಫಲವಾಗಿದೆ ಎಂದು Sacnilk ತಾಣ ವರದಿ ಮಾಡಿದೆ. ಮೊದಲ ದಿನ ಏನಿಲ್ಲ ಅಂದರೂ 50 ಕೋಟಿ ರೂಪಾಯಿ ಗಳಿಕೆ ಮಾಡಲಿದೆ ಎಂದೇ ಅಂದಾಜಿಸಲಾಗಿತ್ತು. ಆದರೆ, ಚಿತ್ರಕ್ಕೆ ನೆಗೆಟಿವ್‌ ಕಾಮೆಂಟ್‌ಗಳಿಂದಾಗಿ ಕಲೆಕ್ಷನ್‌ ಕುಸಿಯಿತು.

ವಿಕ್ರಮ್ ಮೊದಲ ದಿನ ಅರವತ್ತು ಕೋಟಿ...

ಕಮಲ್ ಹಾಸನ್ ಅಭಿನಯದ ಬ್ಲಾಕ್ ಬಸ್ಟರ್ ಚಿತ್ರ ವಿಕ್ರಮ್ ಮೊದಲ ದಿನವೇ 60 ಕೋಟಿ ಕಲೆಕ್ಷನ್ ಮಾಡಿ ದಾಖಲೆ ನಿರ್ಮಿಸಿತ್ತು. ಕಮಲ್ ಹಾಸನ್ ವಿಲನ್ ಆಗಿ ನಟಿಸಿದ್ದ ಕಲ್ಕಿ 2898 ಎಡಿ ಸಿನಿಮಾ ಮೊದಲ ದಿನವೇ 190 ಕೋಟಿ ಕಲೆಕ್ಷನ್ ಮಾಡಿತ್ತು. ಆ ಸಿನಿಮಾಗಳಿಗೆ ಹೋಲಿಕೆ ಮಾಡಿದರೆ, ಇಂಡಿಯನ್ 2 ಸಿನಿಮಾ ಕಳಪೆ ಪ್ರದರ್ಶನ ನೀಡಿದೆ. ಇದಲ್ಲದೇ ಶಂಕರ್ ಅವರ ಕೊನೆಯ ಚಿತ್ರ ರೋಬೋ 2.O ಮೊದಲ ದಿನವೇ ವಿಶ್ವಾದ್ಯಂತ 93.3 ಕೋಟಿ ಕಲೆಕ್ಷನ್ ಮಾಡಿತ್ತು. ಇಂಡಿಯನ್‌ 2 ಈ ಸಿನಿಮಾದ ಅರ್ಧದಷ್ಟು ಕಲೆಕ್ಷನ್ ಅನ್ನು ಮಾಡದಿರುವುದು ವಿಪರ್ಯಾಸ.

ವಿದೇಶಿ ಪ್ರೀಮಿಯರ್‌ನಿಂದ ನೆಗೆಟಿವ್‌ ಟಾಕ್‌..

ವಿದೇಶದಲ್ಲಿ ಪ್ರೀಮಿಯರ್‌ಗಳಿಂದ ಇಂಡಿಯನ್ 2 ಚಿತ್ರದ ನೆಗೆಟಿವ್ ಟಾಕ್ ಮೊದಲ ದಿನದ ಕಲೆಕ್ಷನ್ ಮೇಲೆ ದೊಡ್ಡ ಪರಿಣಾಮ ಬೀರಿದೆ ಎಂದು ಹೇಳಲಾಗುತ್ತಿದೆ. ಶನಿವಾರದ ಕಲೆಕ್ಷನ್ ಮತ್ತಷ್ಟು ಕಡಿಮೆಯಾಗುವ ಸಾಧ್ಯತೆ ಇದೆಯಂತೆ. ತೆಲುಗು ಅವತರಣಿಕೆ ಇಂಡಿಯನ್‌ 2 ಮೊದಲ ದಿನ ಸುಮಾರು 15 ಕೋಟಿ ಕಲೆಕ್ಷನ್ ಮಾಡುವ ನಿರೀಕ್ಷೆ ಇತ್ತು. ಆದರೆ ಅದರಲ್ಲಿ ಅರ್ಧದಷ್ಟು ಕೂಡ ಸಂಗ್ರಹಿಸಲು ಸಾಧ್ಯವಾಗಲಿಲ್ಲ.

ಇಂಡಿಯನ್‌ 2ರಲ್ಲಿ ಪಾರ್ಟ್‌ 3 ಝಲಕ್‌

ಇಂಡಿಯನ್ 2 ಚಿತ್ರದಲ್ಲಿ ಕಮಲ್ ಹಾಸನ್ ಜೊತೆಗೆ ಸಿದ್ಧಾರ್ಥ್, ರಾಕುಲ್ ಪ್ರೀತ್ ಸಿಂಗ್ ಮತ್ತು ಪ್ರಿಯಾ ಭವಾನಿ ಶಂಕರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ದೇಶದಲ್ಲಿ ಭ್ರಷ್ಟಾಚಾರ ಹೆಚ್ಚಾಗುತ್ತಿದ್ದಂತೆ ಸೇನಾಧಿಕಾರಿ (ಕಮಲ್ ಹಾಸನ್) ರೀ ಎಂಟ್ರಿ ಕೊಡುತ್ತಾನೆ. ಭ್ರಷ್ಟಾಚಾರವನ್ನು ಕೊನೆಗಾಣಿಸುತ್ತಾನೆ. ಇದರ ಜತೆಗೆ ಇಂಡಿಯನ್ 2 ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಇಂಡಿಯನ್ 3 ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಪಾರ್ಟ್‌ 3ರ ಕಿರು ಝಲಕ್‌ ತೋರಿಸಿ ಕುತೂಹಲಕ್ಕೆ ಒಗ್ಗರಣೆ ಹಾಕಿದ್ದಾರೆ ನಿರ್ದೇಶಕರು.

Whats_app_banner