ಧನುಷ್‌ ಆಯ್ತು, ನಯನತಾರಾಗೆ ಈಗ ಚಂದ್ರಮುಖಿಯಿಂದ ಸಂಕಷ್ಟ; ಲೀಗಲ್‌ ನೋಟಿಸ್‌ ಕಳುಹಿಸಿ 5 ಕೋಟಿ ರೂ ಪರಿಹಾರಕ್ಕೆ ಬೇಡಿಕೆ
ಕನ್ನಡ ಸುದ್ದಿ  /  ಮನರಂಜನೆ  /  ಧನುಷ್‌ ಆಯ್ತು, ನಯನತಾರಾಗೆ ಈಗ ಚಂದ್ರಮುಖಿಯಿಂದ ಸಂಕಷ್ಟ; ಲೀಗಲ್‌ ನೋಟಿಸ್‌ ಕಳುಹಿಸಿ 5 ಕೋಟಿ ರೂ ಪರಿಹಾರಕ್ಕೆ ಬೇಡಿಕೆ

ಧನುಷ್‌ ಆಯ್ತು, ನಯನತಾರಾಗೆ ಈಗ ಚಂದ್ರಮುಖಿಯಿಂದ ಸಂಕಷ್ಟ; ಲೀಗಲ್‌ ನೋಟಿಸ್‌ ಕಳುಹಿಸಿ 5 ಕೋಟಿ ರೂ ಪರಿಹಾರಕ್ಕೆ ಬೇಡಿಕೆ

Nayanthara Chandramukhi controversy: ಧನುಷ್‌ ಬಳಿಕ ಇದೀಗ ಚಂದ್ರಮುಖಿ ಚಿತ್ರತಂಡವು ಲೇಡಿ ಸೂಪರ್‌ಸ್ಟಾರ್‌ ನಯನತಾರಾಗೆ ಲೀಗಲ್‌ ನೋಟಿಸ್‌ ಕಳುಹಿಸಿ 5 ಕೋಟಿ ರೂ ಪರಿಹಾರಕ್ಕೆ ಬೇಡಿಕೆ ಇಟ್ಟಿದೆ. "ನಯನತಾರಾ: ಬಿಯಾಂಡ್ ದಿ ಫೇರಿ ಟೇಲ್" ಎಂಬ ನೆಟ್‌ಫ್ಲಿಕ್ಸ್‌ ಡಾಕ್ಯುಮೆಂಟರಿಯಲ್ಲಿ ಚಂದ್ರಮುಖಿ ಸಿನಿಮಾದ ಕೆಲವು ಸೆಕೆಂಡ್‌ಗಳ ದೃಶ್ಯಗಳಿರುವುದು ಇದಕ್ಕೆ ಕಾರಣ.

ನಯನತಾರಾಗೆ  ಚಂದ್ರಮುಖಿ ಚಿತ್ರತಂಡದಿಂದ ಲೀಗಲ್‌ ನೋಟಿಸ್‌
ನಯನತಾರಾಗೆ ಚಂದ್ರಮುಖಿ ಚಿತ್ರತಂಡದಿಂದ ಲೀಗಲ್‌ ನೋಟಿಸ್‌

Nayanthara Chandramukhi controversy: ಲೇಡಿ ಸೂಪರ್‌ಸ್ಟಾರ್‌ ನಯನತಾರಾ ವಿರುದ್ಧ ಇತ್ತೀಚೆಗೆ ನಟ ಧನುಷ್‌ ಕಾನೂನು ಸಮರ ಸಾರಿದ್ದರು. ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ ನಯನತಾರಾ ಡಾಕ್ಯುಮೆಂಟರಿ "ನಯನತಾರಾ: ಬಿಯಾಂಡ್ ದಿ ಫೇರಿ ಟೇಲ್"ನಲ್ಲಿ 'ನಾನುಮ್ ರೌಡಿ ದಾನ್' ಚಿತ್ರದ ಕ್ಲಿಪ್ಸ್‌ಗಳನ್ನು ಬಳಸಿರುವ ಕಾರಣ ನೋಟಿಸ್‌ ನೀಡಲಾಗಿತ್ತು. ಈ ರೀತಿ ಸಿನಿಮಾದ ದೃಶ್ಯಗಳನ್ನು ಬಳಸಿರುವುದಕ್ಕೆ 10 ಕೋಟಿ ರೂಪಾಯಿ ಪರಿಹಾರವನ್ನೂ ಕೇಳಲಾಗಿತ್ತು. ಇದಾದ ಬಳಿಕ ನಯನತಾರಾ ಮೂರು ಪುಟದ ದೀರ್ಘ ಟಿಪ್ಪಣಿಯನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದೀಗ ನಯನತಾರಾರ ವಿರುದ್ಧ ಮತ್ತೊಂದು ಲೀಗಲ್‌ ನೋಟಿಸ್‌ ದಾಖಲಾಗಿದೆ ಎಂದು ಗುಲ್ಟೆ.ಕಾಂ ವರದಿ ಮಾಡಿದೆ. ಈ ಬಾರಿ ಚಂದ್ರಮುಖಿ ಚಿತ್ರತಂಡವು ದೂರು ದಾಖಲಿಸಿದೆ ಎಂದು ವರದಿಯಾಗಿದೆ.

ನಯನತಾರಾ ಅವರು 2003ರಲ್ಲಿ ಮಲಯಾಳಂ ಚಿತ್ರ ಮನಸ್ಸಿನಕ್ಕರೆ ಮೂಲಕ ಚಿತ್ರರಂಗ ಪ್ರವೇಶಿಸಿದರು. ಬಳಿಕ ವಿಸ್ಮಯತುಂಬತು ಮತ್ತು ನಟ್ಟುರಾಜವು ಚಿತ್ರಗಳಲ್ಲಿ ನಟಿಸಿದರು. 2005ರಲ್ಲಿ ತಮ್ಮ ಮೊದಲು ತಮಿಳು ಚಿತ್ರ ಅಯ್ಯದಲ್ಲಿ ನಟಿಸಿದರು ಇದಾದ ಬಳಿಕ ಚಂದ್ರಮುಖಿ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. ಚಂದ್ರಮುಖಿಯಲ್ಲಿ ರಜನಿಕಾಂತ್ ಮತ್ತು ಜ್ಯೋತಿಕಾ ನಟಿಸಿದ್ದಾರೆ. ನಯನತಾರಾ: ಬಿಯಾಂಡ್ ದಿ ಫೇರಿ ಟೇಲ್ ಎಂಬ ಸಾಕ್ಷ್ಯಚಿತ್ರದಲ್ಲಿ ನಟಿಯ ವೃತ್ತಿಜೀವನ, ವೈಯಕ್ತಿಕ ಜೀವನದ ಕಥೆಗಳಿವೆ. ಇದರಲ್ಲಿ ನಯನತಾರಾ ನಟಿಸಿರುವ ಸಿನಿಮಾಗಳ ತುಣುಕುಗಳೂ ಇವೆ.

ಚಂದ್ರಮುಖಿ ಸಿನಿಮಾದ ಕೆಲವು ಸೆಕೆಂಡ್‌ಗಳ ತುಣುಕುಗಳನ್ನು ಬಳಸಿರುವುದಕ್ಕೆ ಚಿತ್ರತಂಡವು ಲೀಗಲ್‌ ನೋಟಿಸ್‌ ಕಳುಹಿಸಿದೆ ಮತ್ತು 5 ಕೋಟಿ ರೂಪಾಯಿ ಪರಿಹಾರ ಬಯಸಿದೆ ಎಂದು ಗುಲ್ಟೆ.ಕಾಂ ವರದಿ ಮಾಡಿದೆ.

ಧನುಷ್‌ ಮತ್ತು ನಯನತಾರಾ ವಿವಾದ ಇತ್ತೀಚೆಗೆ ದೊಡ್ಡಮಟ್ಟದಲ್ಲಿ ಸುದ್ದಿಯಾಗಿತ್ತು. 'ನಾನುಮ್ ರೌಡಿ ದಾನ್' ನಟ ಧನುಷ್ ಅವರ ವಂಡರ್‌ಬಾರ್ ಫಿಲ್ಮ್ಸ್, ಚಲನಚಿತ್ರದ ದೃಶ್ಯಗಳನ್ನು ಬಳಸಿದ್ದಕ್ಕಾಗಿ ನಯನತಾರಾ, ಅವರ ನಿರ್ದೇಶಕ-ಪತಿ ವಿಘ್ನೇಶ್ ಶಿವನ್ ಮತ್ತು ಅವರ ರೌಡಿ ಪಿಕ್ಚರ್ಸ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ಮದ್ರಾಸ್ ಹೈಕೋರ್ಟ್‌ನಲ್ಲಿ ಸಿವಿಲ್ ದಾವೆ ಹೂಡಲಾಗಿತ್ತು. ಅನುಮತಿ ಇಲ್ಲದೆ ವಿಡಿಯೋ ಹಾಗೂ ಹಾಡುಗಳನ್ನು ಬಳಕೆ ಮಾಡಿರುವುದಕ್ಕೆ ಪರಿಹಾರ ಕೇಳಲಾಗಿತ್ತು.

ನಾನುಮ್ ರೌಡಿ ಧಾನ್ ಎನ್ನವುದು ನಯನತಾರಾ ಅವರ ಬದುಕು ಬದಲಿಸಿದ ಚಿತ್ರವಾಗಿತ್ತು. ಇವರ ಕರಿಯರ್‌ನಲ್ಲಿ ಮೈಲುಗಲ್ಲು. ಈ ಸಿನಿಮಾದಲ್ಲಿ ಅದ್ಭುತವಾಗಿ ನಟಿಸುವ ಮೂಲಕ ತಾನೊಬ್ಬಳು ಪ್ರತಿಭಾನ್ವಿತ ನಟಿ ಎಂದು ತೋರಿಸಿಕೊಟ್ಟಿದ್ದರು ನಯನತಾರಾ. ಈಗ ಇವರ ಪತಿಯಾಗಿರುವ ವಿಘ್ನೇಶ್‌ ಶಿವನ್‌ ಬದುಕು ಬದಲಾಯಿಸಲು ಈ ಚಿತ್ರ ನೆರವಾಗಿತ್ತು. ಆದರೆ, ಈ ಸಿನಿಮಾದ ಬಳಿಕ ಧನುಷ್‌ ಜತೆ ನಯನತಾರಾಳ ವೈಯಕ್ತಿಕ ಮತ್ತು ವೃತ್ತಿಪರ ಬದುಕು ಹಾಳಾಗಿತ್ತು. ನಾನುಮ್‌ ರೌಡಿ ಧಾನ್‌ ಸಿನಿಮಾವನ್ನು ಧನುಷ್‌ ನಿರ್ಮಾಣ ಮಾಡಿದ್ದರು.

ಧನುಷ್ ವಿರುದ್ಧ ನಯನತಾರಾ ಇನ್‌ಸ್ಟಾಗ್ರಾಮ್‌ನಲ್ಲಿ ಮೂರು ಪುಟಗಳ ಪೋಸ್ಟ್ ಹಂಚಿಕೊಂಡಿದ್ದರು. "ನನ್ನ ನೆಟ್‌ಫ್ಲಿಕ್ಸ್ ಒಟಿಟಿ ಸಾಕ್ಷ್ಯಚಿತ್ರಕ್ಕಾಗಿ ಕೆಲವು ಸೆಲೆಬ್ರಿಟಿಗಳು ನನಗೆ ಸಹಾಯ ಮಾಡಿದರು. ಆದರೆ, ನಿಮಗೆ (ಧನುಷ್‌) ನಮ್ಮ ಮೇಲೆ ದ್ವೇಷವಿದೆ. ಆದರೆ ಈ ಸಾಕ್ಷ್ಯಚಿತ್ರಕ್ಕಾಗಿ ಶ್ರಮಿಸಿದವರ ಜೀವನದ ಮೇಲೆ ನಿಮ್ಮ ಈ ನಡೆ ಪರಿಣಾಮ ಬೀರುತ್ತದೆ.ಈ ಡಾಕ್ಯುಮೆಂಟರಿಯಲ್ಲಿ ನಾನು ನನ್ನ ಸಿನಿಮಾ ತುಣುಕುಗಳನ್ನು ಆಪ್ತರ ಮಾತು ಕೇಳಿ ಸೇರಿಸಿದ್ದೇನೆ. ಆದರೆ, ನನಗೆ ತುಂಬಾ ವಿಶೇಷವಾದ ಕ್ಲಿಪ್‌ ಎಂದರೆ ನಾನುಮ್‌ ರೌಡಿ ದಾನ್‌ ಸಿನಿಮಾದ್ದು. ಅದು ಈ ಡಾಕ್ಯುಮೆಂಟರಿಗೆ ಹೇಳಿಮಾಡಿಸಿದಂತಿದೆ. ಹಕ್ಕುಸ್ವಾಮ್ಯ ವಿಚಾರದಲ್ಲಿ ಸಮಸ್ಯೆ ಬರಬಹುದು ಎಂಬ ಕಾರಣಕ್ಕೆ ನೀವು ಹೀಗೆ ಮಾಡಬಹುದು. ಆದರೆ, ನಮ್ಮ ವಿರುದ್ಧ ನೀವು ಬಹುಕಾಲದಿಂದ ಕಟ್ಟಿಕೊಂಡಿರುವ ದ್ವೇಷವನ್ನು ಇದು ತೋರಿಸುತ್ತಿದೆ" ಎಂದು ನಟಿ ನಯನತಾರಾ ಸುದೀರ್ಘ ಪತ್ರ ಬರೆದಿದ್ದರು.

Whats_app_banner