ಒಟಿಟಿಯಲ್ಲಿ ಮುಂದಿನ ವಾರ 270 ಕೋಟಿ ಬಜೆಟ್‌ನ ಆಕ್ಷನ್ ಥ್ರಿಲ್ಲರ್ ಸಿನಿಮಾ, ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ ಸ್ಟ್ರೀಮಿಂಗ್
ಕನ್ನಡ ಸುದ್ದಿ  /  ಮನರಂಜನೆ  /  ಒಟಿಟಿಯಲ್ಲಿ ಮುಂದಿನ ವಾರ 270 ಕೋಟಿ ಬಜೆಟ್‌ನ ಆಕ್ಷನ್ ಥ್ರಿಲ್ಲರ್ ಸಿನಿಮಾ, ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ ಸ್ಟ್ರೀಮಿಂಗ್

ಒಟಿಟಿಯಲ್ಲಿ ಮುಂದಿನ ವಾರ 270 ಕೋಟಿ ಬಜೆಟ್‌ನ ಆಕ್ಷನ್ ಥ್ರಿಲ್ಲರ್ ಸಿನಿಮಾ, ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ ಸ್ಟ್ರೀಮಿಂಗ್

ಒಟಿಟಿಯಲ್ಲಿ ಮುಂದಿನ ಶುಕ್ರವಾರ 270 ಕೋಟಿ ಬಜೆಟ್‌ನಲ್ಲಿ ನಿರ್ಮಿಸಿರುವ ಆಕ್ಷನ್ ಥ್ರಿಲ್ಲರ್ ಸಿನಿಮಾ "ಗುಡ್ ಬ್ಯಾಡ್ ಅಗ್ಲಿ" ಬಿಡುಗಡೆಯಾಗಲಿದೆ. ತಮಿಳು ಸ್ಟಾರ್ ಹೀರೋ ಅಜಿತ್ ಕುಮಾರ್ ನಟಿಸಿದ ಗುಡ್ ಬ್ಯಾಡ್ ಅಗ್ಲಿ ಒಟಿಟಿ ಬಿಡುಗಡೆ ದಿನಾಂಕವನ್ನು ಸ್ಟ್ರೀಮಿಂಗ್‌ ಸಂಸ್ಥೆ ಅಧಿಕೃತವಾಗಿ ಪ್ರಕಟಿಸಿದೆ.

ಒಟಿಟಿಯಲ್ಲಿ ಮುಂದಿನ ವಾರ 270 ಕೋಟಿ ಬಜೆಟ್‌ನ ಆಕ್ಷನ್ ಥ್ರಿಲ್ಲರ್ ಸಿನಿಮಾ
ಒಟಿಟಿಯಲ್ಲಿ ಮುಂದಿನ ವಾರ 270 ಕೋಟಿ ಬಜೆಟ್‌ನ ಆಕ್ಷನ್ ಥ್ರಿಲ್ಲರ್ ಸಿನಿಮಾ

ಗುಡ್‌ ಬ್ಯಾಡ್‌ ಅಗ್ಲಿ ಎಂಬ ಸಿನಿಮಾ ಇತ್ತೀಚೆಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಕಾಲಿವುಡ್ ಸ್ಟಾರ್ ಹೀರೋ ಅಜಿತ್ ಮತ್ತು ತ್ರಿಶಾ ಕೃಷ್ಣನ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿದ ಈ ಸಿನಿಮಾ ಒಟಿಟಿಯತ್ತ ಮುಖ ಮಾಡಿದೆ. ಗುಡ್ ಬ್ಯಾಡ್ ಆಗ್ಲಿ ಚಿತ್ರದಲ್ಲಿ ಅರ್ಜುನ್ ದಾಸ್, ಜಾಕಿ ಶ್ರಾಫ್, ಪ್ರಿಯಾ ಪ್ರಕಾಶ್ ವಾರಿಯರ್, ಸುನೀಲ್, ಶೈನ್ ಟೈಮ್ ಚಾಕೊ, ಪ್ರಭು, ಪ್ರಸನ್ನ ವೆಂಕಟ, ಯೋಗಿ ಬಾಬು, ರಾಹುಲ್‌ ದೇವ್‌ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಗುಡ್ ಬ್ಯಾಡ್ ಅಗ್ಲಿ ಏಪ್ರಿಲ್ 10 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು.

ಬಾಕ್ಸ್‌ ಆಫೀಸ್‌ ಗಳಿಕೆ

ಗುಡ್ ಬ್ಯಾಗ್ ಅಗ್ಲಿ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಸಾಧಾರಣವಾಗಿ ಗಳಿಕೆ ಮಾಡಿದೆ. ಈ ಸಿನಿಮಾ ದೇಶದಲ್ಲಿ 200 ಕೋಟಿ ರೂಪಾಯಿ ಸಂಗ್ರಹಿಸಿದೆ ಎಂದು ವರದಿಗಳು ತಿಳಿಸಿವೆ. ಈ ಸಿನಿಮಾದ ಜಾಗತಿಕ ಬಾಕ್ಸ್‌ ಆಫೀಸ್‌ ಗಳಿಕೆ 246 ಕೋಟಿ ರೂಪಾಯಿ ತಲುಪಿದೆ. ಆದರೆ, ಇದರ ಬಜೆಟ್‌ಗೆ ಹೋಲಿಸಿದರೆ ಗಳಿಕೆ ಕಡಿಮೆ. ಆದರೆ, ಒಟಿಟಿ ಹಕ್ಕುಗಳಿಂದ ತನ್ನ ನಷ್ಟವನ್ನು ಲಾಭವಾಗಿ ಪರಿವರ್ತಿಸಿಕೊಳ್ಳಬಹುದು.

ಒಟಿಟಿಯಲ್ಲಿ ಗುಡ್‌ ಬ್ಯಾಡ್‌ ಅಗ್ಲಿ ಸಿನಿಮಾ

ಗುಡ್‌ ಬ್ಯಾಡ್‌ ಅಗ್ಲಿ ಸಿನಿಮಾದ ಒಟಿಟಿ ಹಕ್ಕುಗಳನ್ನು ನೆಟ್‌ಫ್ಲಿಕ್ಸ್‌ ಖರೀದಿಸಿದೆ. ಮೇ 8ರಿಂದ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆರಂಭಿಸಲಿದೆ. ಇದು ತಮಿಳು, ತೆಲುಗು, ಹಿಂದಿ, ಮಲಯಾಳಂ ಮತ್ತು ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ ಆನ್‌ಲೈನ್‌ನಲ್ಲಿ ರಿಲೀಸ್‌ ಆಗಲಿದೆ.

ಐಎಂಡಿಬಿ ರೇಟಿಂಗ್‌

ಸರಿಸುಮಾರು ರೂ. 270 ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾದ ಗುಡ್ ಬ್ಯಾಡ್ ಅಗ್ಲಿ ಚಿತ್ರಕ್ಕೆ ಐಎಂಡಿಬಿ ವೆಬ್‌ಸೈಟ್‌ನಲ್ಲಿ ಹತ್ತರಲ್ಲಿ 6.9 ರೇಟಿಂಗ್ ದೊರಕಿದೆ. ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸಿರುವ 'ಗುಡ್ ಬ್ಯಾಡ್ ಅಗ್ಲಿ' ಚಿತ್ರಕ್ಕೆ ಜಿ.ವಿ. ಪ್ರಕಾಶ್ ಕುಮಾರ್ ಸಂಗೀತ ನೀಡಿದ್ದಾರೆ. ಅಭಿನಂದನ್ ರಾಮಾನುಜಂ ಛಾಯಾಗ್ರಹಣ, ವಿಜಯ್ ವೇಲುಕುಟ್ಟಿ ಸಂಕಲನ ಮತ್ತು ಸಂಗೀತ ನೀಡಿದ್ದಾರೆ.

ಹಿಂದೂಸ್ತಾನ್‌ ಟೈಮ್ಸ್‌ ಕನ್ನಡವು ಗುಡ್‌ ಬ್ಯಾಡ್‌ ಅಗ್ಲಿ ಸಿನಿಮಾದ ಕುರಿತು ಹೀಗಾಗಲೇ ವಿಮರ್ಶೆ ಪ್ರಕಟಿಸಿದೆ. "ಅಜಿತ್ ಕುಮಾರ್ ತಮ್ಮ ಅಭಿಮಾನಿಗಳು ಬಯಸುತ್ತಿದ್ದ ಮಾಸ್, ಕಮರ್ಷಿಯಲ್ ಎಂಟರ್‌ಟೈನರ್‌ ಅವತಾರವನ್ನು ಗುಡ್ ಬ್ಯಾಡ್ ಅಗ್ಲಿ ಚಿತ್ರದಲ್ಲಿ ನೀಡಿದ್ದಾರೆ. ನಿರ್ದೇಶಕ ಅಧಿಕ್ ರವಿಚಂದ್ರನ್ ತಮಿಳು ಚಿತ್ರರಂಗಕ್ಕೆ ಪರಿಚಿತವಲ್ಲದ ಕ್ಲಾಸಿಕ್ ಗ್ಯಾಂಗ್‌ಸ್ಟರ್-ಗಾನ್-ಕ್ಲೀನ್ ಟ್ರೋಪ್‌ನಲ್ಲಿ ಬೇರೂರಿರುವ ಕಥೆಯನ್ನು ಹೆಣೆದಿದ್ದಾರೆ. ಇದೇ ಸಮಯದಲ್ಲಿ ಅಜಿತ್‌ ಕುಮಾರ್‌ ಅವರ ವ್ಯಕ್ತಿತ್ವಕ್ಕೆ ತಕ್ಕಂತೆ ಸಿನಿಮಾ ಮಾಡಿದ್ದಾರೆ". ಪೂರ್ಣ ವಿಮರ್ಶೆ ಓದಲು ಇಲ್ಲಿ ಕ್ಲಿಕ್‌ ಮಾಡಿ.

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in