Dhanush: ತಮಿಳು ನಟ ಧನುಷ್‌ ನನ್ನ ಮಗ ಎಂದು ಕೋರ್ಟ್‌ ಮೆಟ್ಟಿಲೇರಿದ್ದ ವೃದ್ಧ ಕದಿರೇಶನ್‌ ಸಾವು!
ಕನ್ನಡ ಸುದ್ದಿ  /  ಮನರಂಜನೆ  /  Dhanush: ತಮಿಳು ನಟ ಧನುಷ್‌ ನನ್ನ ಮಗ ಎಂದು ಕೋರ್ಟ್‌ ಮೆಟ್ಟಿಲೇರಿದ್ದ ವೃದ್ಧ ಕದಿರೇಶನ್‌ ಸಾವು!

Dhanush: ತಮಿಳು ನಟ ಧನುಷ್‌ ನನ್ನ ಮಗ ಎಂದು ಕೋರ್ಟ್‌ ಮೆಟ್ಟಿಲೇರಿದ್ದ ವೃದ್ಧ ಕದಿರೇಶನ್‌ ಸಾವು!

ನಟ ಧನುಷ್‌ ತಮ್ಮ ಪುತ್ರ ಎಂದು ಹೇಳಿಕೊಂಡು ಕೋರ್ಟ್‌ ಮೆಟ್ಟಿಲೇರಿದ್ದ ತಮಿಳುನಾಡಿನ ಮಧುರೈ ಮೂಲದ ವೃದ್ಧ ಕದಿರೇಶನ್‌ ಅನಾರೋಗ್ಯದ ಹಿನ್ನೆಲೆಯಲ್ಲಿ ನಿಧನರಾಗಿದ್ದಾರೆ.

Dhanush: ತಮಿಳು ನಟ ಧನುಷ್‌ ನನ್ನ ಮಗ ಎಂದು ಕೋರ್ಟ್‌ ಮೆಟ್ಟಿಲೇರಿದ್ದ ವೃದ್ಧ ಕದಿರೇಶನ್‌ ಸಾವು!
Dhanush: ತಮಿಳು ನಟ ಧನುಷ್‌ ನನ್ನ ಮಗ ಎಂದು ಕೋರ್ಟ್‌ ಮೆಟ್ಟಿಲೇರಿದ್ದ ವೃದ್ಧ ಕದಿರೇಶನ್‌ ಸಾವು!

Dhanush: ಕಾಲಿವುಡ್‌ ನಟ ಧನುಷ್‌ ತಮ್ಮ ಪುತ್ರ ಎಂದು ತಮಿಳುನಾಡಿನ ವೃದ್ಧ ದಂಪತಿ ಕಳೆದ ಕೆಲ ವರ್ಷಗಳಿಂದ ಹೇಳಿಕೊಳ್ಳುತ್ತಲೇ ಬಂದಿತ್ತು. ತಮಿಳು ಸಿನಿಮಾ ಇಂಡಸ್ಟ್ರಿಯಲ್ಲೂ ಈ ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಒಂದು ಹೆಜ್ಜೆ ಮುಂದೆ ಹೋಗಿ, ಕೋರ್ಟ್‌ ಮೆಟ್ಟಿಲೇರಿ, ನನ್ನ ಮಗನನ್ನು ನಮಗೆ ಮರಳಿಸಿ ಎಂದಿದ್ದರು ಕದಿರೇಶನ್‌ ಮತ್ತು ಮೀನಾಕ್ಷಿ ದಂಪತಿ. ಈಗ ಧನುಷ್ ತಂದೆ ಎಂದು ಹೇಳಿಕೊಂಡಿದ್ದ ಕದಿರೇಶನ್ ನಿಧನರಾಗಿದ್ದಾರೆ. 70ನೇ ವಯಸ್ಸಿನಲ್ಲಿ ಅನಾರೋಗ್ಯದ ಹಿನ್ನೆಲೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಮಧುರೈನ ಮಲಂಪಟ್ಟಿ ಗ್ರಾಮದ ದಂಪತಿ

ಮಧುರೈ ಮೂಲದ ಕದಿರೇಶನ್‌ ಸ್ಥಳೀಯ ರಾಜಾಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವಯಸ್ಸಹಜ ಅನಾರೋಗ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ. ಕದಿರೇಶನ್ ಮತ್ತು ಮೀನಾಕ್ಷಿ ಮಧುರೈನ ಮೇಲೂರು ತಾಲೂಕಿನ ಮಲಂಪಟ್ಟಿ ಗ್ರಾಮದ ನಿವಾಸಿಗಳು. ಧನುಷ್ ತಮಗೆ ಹುಟ್ಟಿದ ಮೂರನೇ ಮಗ ಎಂದು ಹೇಳಿಕೊಂಡು ಸುದೀರ್ಘ ಕಾನೂನು ಸಮರವನ್ನೇ ನಡೆಸಿತ್ತು ಈ ದಂಪತಿ. ಆದರೆ, ನಿರ್ದೇಶಕ ಕಸ್ತೂರಿ ರಾಜ ಮತ್ತು ವಿಜಯಲಕ್ಷ್ಮಿ ದಂಪತಿಯ ಪುತ್ರ ಈ ಧನುಷ್ ಎಂಬುದು ಬಹುತೇಕರಿಗೆ ತಿಳಿದ ವಿಚಾರ.

ಧನುಷ್‌ ನನ್ನ ಮಗ ಎಂದಿದ್ದ ಕದಿರೇಶನ್

11ನೇ ತರಗತಿಯಲ್ಲಿ ಓದಲು ಮನೆ ತೊರೆದ ಮಗ ಮರಳಿ ಮನೆಗೆ ಬಾರಲಿಲ್ಲ. ಕಸ್ತೂರಿ ರಾಜ ಮನೆಯ ದತ್ತು ಮಗನಾದ. ಆ ಮಗನೇ ಈಗಿನ ಧನುಷ್‌ ಎಂದು ಕದಿರೇಶನ್ ಮತ್ತು ಅವರ ಪತ್ನಿ ಮೀನಾಕ್ಷಿ ಕೋರ್ಟ್‌ನಲ್ಲಿ ಹೇಳಿಕೊಂಡಿದ್ದರು. ಅಷ್ಟೇ ಅಲ್ಲ ಧನುಷ್‌ ಕಡೆಯಿಂದ ತಿಂಗಳಿಗೆ 65,000 ರೂಪಾಯಿ ಪರಿಹಾರ ನೀಡುವಂತೆಯೂ ಈ ದಂಪತಿ ಕೋರ್ಟ್‌ನಲ್ಲಿ ಕೇಳಿಕೊಂಡಿದ್ದರು. ಧನುಷ್ ಸಹ ಈ ಸಂಬಂಧ ವಕೀಲರನ್ನು ನಿಯೋಜಿಸಿದ್ದರು. ಅವರಿಂದ ನೋಟೀಸ್‌ ಸಹ ರವಾನೆಯಾಗಿತ್ತು. ಹೀಗೆ ಮುಂದುವರಿದು, ಮಧುರೈ ಮೇಲೂರು ನ್ಯಾಯಾಲಯದಲ್ಲಿ ದಂಪತಿ ಸಲ್ಲಿಸಿದ್ದ ಪ್ರಕರಣವನ್ನು ಚೆನ್ನೈ ಹೈಕೋರ್ಟ್ ವಜಾಗೊಳಿಸಿತ್ತು.‌

ಸುಪ್ರೀಂ ಕೋರ್ಟ್‌ ಮೊರೆಗೆ ಮುಂದಾಗಿದ್ದ ದಂಪತಿ

ಕಳೆದ ಕೆಲವು ತಿಂಗಳುಗಳಿಂದ ಮಧುರೈ ಹೈಕೋರ್ಟ್ ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದು, ಮಾರ್ಚ್ 14 ರಂದು ಹೈಕೋರ್ಟ್ ತೀರ್ಪು ನೀಡಿತ್ತು. ಅರ್ಜಿದಾರರು ದುರುದ್ದೇಶದಿಂದ ಈ ಅರ್ಜಿಯನ್ನು ಸಲ್ಲಿಸಿದ್ದಾರೆ ಮತ್ತು ಆರೋಪಗಳನ್ನು ಸಾಬೀತುಪಡಿಸಲು ಸರಿಯಾದ ಸಾಕ್ಷ್ಯವನ್ನು ಒದಗಿಸುವಲ್ಲಿ ವಿಫಲರಾಗಿದ್ದಾರೆ ಎಂದು ತೀರ್ಪು ನೀಡಿತ್ತು. ಈ ತೀರ್ಪಿಗೆ ಬಗ್ಗದ ಕದಿರೇಶನ್‌ ಮತ್ತು ಮೀನಾಕ್ಷಿ, ಈ ಕೇಸ್‌ನಿಂದ ನಾವು ಹಿಂದೆ ಸರಿಯುವುದಿಲ್ಲ. ಸುಪ್ರೀಂ ಕೋರ್ಟ್‌ನ ಮೊರೆ ಹೋಗುತ್ತೇವೆ ಎಂದೂ ಹೇಳಿದ್ದರು.

ಈ ನಡುವೆ ಈ ದಂಪತಿ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದ್ದರಿಂದ ಸಂಕಷ್ಟಕ್ಕೆ ಸಿಲುಕಿದ್ದರು. ಇದೀಗ ಕದಿರೇಶನ್‌ ನಿಧನರಾಗಿದ್ದಾರೆ. ಧನುಷ್ ಅವರನ್ನು ತಮ್ಮ ಮಗ ಎಂದು ಘೋಷಿಸುವಂತೆ ಕೋರಿ ಮೇಲೂರು ನ್ಯಾಯಾಲಯ ಮತ್ತು ಮಧುರೈ ಹೈಕೋರ್ಟ್‌ನಲ್ಲಿ ಕತಿರೇಸನ್ ಸಲ್ಲಿಸಿದ್ದ ಪ್ರಕರಣಗಳು ವಜಾಗೊಂಡಿದ್ದರೂ, ಅವರು ಜಿಲ್ಲಾ ನ್ಯಾಯಾಲಯದಲ್ಲಿ ಹೂಡಿರುವ ಪ್ರಕರಣ ಇನ್ನೂ ವಿಚಾರಣೆಗೆ ಬಾಕಿ ಉಳಿದಿರುವುದು ಗಮನಿಸಬೇಕಾದ ಸಂಗತಿ.

Whats_app_banner