Kannada News  /  Entertainment  /  Kollywood News A Room Boy Misbehaves With A Young Lady At A Resort Owned By Tamil Actress Kadhal Sandhya Mnk
ಆಪ್ತರಕ್ಷಕ ನಟಿ ಸಂಧ್ಯಾ ಒಡೆತನದ ರೆಸಾರ್ಟ್‌ನಲ್ಲಿ ಯುವತಿಯರ ನಗ್ನ ವಿಡಿಯೋ ಚಿತ್ರೀಕರಣ; ರೂಮ್‌ ಬಾಯ್ ಬಾಯ್ಬಿಟ್ಟ ಸತ್ಯ
ಆಪ್ತರಕ್ಷಕ ನಟಿ ಸಂಧ್ಯಾ ಒಡೆತನದ ರೆಸಾರ್ಟ್‌ನಲ್ಲಿ ಯುವತಿಯರ ನಗ್ನ ವಿಡಿಯೋ ಚಿತ್ರೀಕರಣ; ರೂಮ್‌ ಬಾಯ್ ಬಾಯ್ಬಿಟ್ಟ ಸತ್ಯ

Kaadhal Sandhya: ಆಪ್ತರಕ್ಷಕ ನಟಿ ಸಂಧ್ಯಾ ಒಡೆತನದ ರೆಸಾರ್ಟ್‌ನಲ್ಲಿ ಯುವತಿಯರ ನಗ್ನ ವಿಡಿಯೋ ಚಿತ್ರೀಕರಣ; ರೂಮ್‌ ಬಾಯ್ ಬಾಯ್ಬಿಟ್ಟ ಸತ್ಯ

25 May 2023, 16:21 ISTHT Kannada Desk
25 May 2023, 16:21 IST

ನಟಿ ಕಾದಲ್‌ ಸಂಧ್ಯಾ ಒಡೆತನದ ರೆಸಾರ್ಟ್‌ನಲ್ಲಿ ಯುವತಿಯ ಜತೆ ಅನುಚಿತವಾಗಿ ವರ್ತಿಸಿದ ರೂಮ್‌ ಬಾಯ್‌ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

Kaadhal Sandhya: ಬಹುಭಾಷಾ ನಟಿ ಕಾದಲ್‌ ಸಂಧ್ಯಾ ಸಿನಿಮಾಗಳಿಂದ ದೂರವೇ ಉಳಿದಿದ್ದಾರೆ. ಕನ್ನಡದಲ್ಲಿ ವಿಷ್ಣುವರ್ಧನ್‌ (Vishnuvardhan) ಜತೆಗೆ ಆಪ್ತರಕ್ಷಕ (Aptarakshaka) ಸಿನಿಮಾದಲ್ಲಿ ನಟಿಸಿದ್ದ ಈ ನಟಿ, ಅದಾದ ಬಳಿಕ ವೆಂಕಟೇಶ್‌ ಜತೆ ಮದುವೆ ಬಂಧಕ್ಕೆ ಒಳಗಾಗಿ, ನಟನೆ ಬಿಟ್ಟು ಸಾಂಸಾರಿಕ ಜೀವನದಲ್ಲಿ ಬಿಜಿಯಾದರು. ಈ ನಡುವೆ ಪತಿಯ ರೆಸಾರ್ಟ್‌ಗಳ ಉಸ್ತುವಾರಿ ಮತ್ತು ಉದ್ಯಮಗಳಿಗೆ ಸಾಥ್‌ ನೀಡುತ್ತಿದ್ದಾರೆ ಸಂಧ್ಯಾ. ಹೀಗಿರುವಾಗಲೇ ಇದೇ ನಟಿಯ ರೆಸಾರ್ಟ್‌ನಲ್ಲಿ ಇತ್ತೀಚೆಗೆ ನಡೆದ ಕೃತ್ಯವೊಂದು ನಿಜಕ್ಕೂ ಎಲ್ಲರನ್ನೂ ಶಾಕ್‌ಗೆ ದೂಡಿದೆ.

ಚೆನ್ನೈನಿಂದ ಕೂಗಳತೆ ದೂರದಲ್ಲಿ ಕೂವತ್ತೂತು ಪರಮಕುಡಿಯಲ್ಲಿ ಸಂಧ್ಯಾ ಮತ್ತವರ ಪತಿ ವೆಂಕಟೇಶ್‌ ಪರ್ಲ್‌ ಬೀಚ್‌ ರೆಸಾರ್ಟ್‌ ನಡೆಸುತ್ತಿದ್ದಾರೆ. ಈ ಐಶಾರಾಮಿ ರೆಸಾರ್ಟ್‌ನಲ್ಲಿ ರೂಮ್‌ ಬಾಯ್‌ ಮಾಡಿದ ಹೀನಕೃತ್ಯವೀಗ ಬೆಳಕಿಗೆ ಬರುತ್ತಿದ್ದಂತೆ, ಪ್ರವಾಸಿಗರು ಅತ್ತ ಸುಳಿಯುತ್ತಿಲ್ಲ. ಹಾಗಾದರೆ ಅಷ್ಟಕ್ಕೂ ಆಗಿದ್ದೇನು?

ನಕಲಿ ಕೀ ಬಳಸಿ ಕೋಣೆ ಪ್ರವೇಶ

ರಾಮಚಂದ್ರ ಹೆಸರಿನ ವ್ಯಕ್ತಿಯೊಬ್ಬರು ತಮ್ಮ ಗರ್ಲ್‌ಫ್ರೆಂಡ್‌ ಜತೆಗೆ ಪರ್ಲ್‌ ಬೀಚ್‌ ರೆಸಾರ್ಟ್‌ಗೆ ಬಂದಿದ್ದರು. ಮತ್ತವರ ಸ್ನೇಹಿತರು ಜತೆಗಿದ್ದರು. ಮೊದಲ ದಿನ ಎಂದಿನಂತೆ ಮೂರು ವಿಲ್ಲಾಗಳನ್ನು ಬುಕ್‌ ಮಾಡಿ ಅಲ್ಲಿಯೇ ವಾಸ್ತವ್ಯ ಹೂಡಿದ್ದಾರೆ. ಅದೇ ರೀತಿ ಎರಡನೇ ದಿನದ ರಾತ್ರಿ ವೇಳೆ ಸುಭಾಷ್‌ ಹೆಸರಿನ ರೂಮ್‌ ಬಾಯ್‌ವೊಬ್ಬ ಏಕಾಏಕಿ ನಕಲಿ ಕೀ ಬಳಸಿ ಯುವತಿಯ ರೂಮಿಗೆ ನುಗ್ಗಿದ್ದಾನೆ. ಎಣ್ಣೆಮತ್ತಲ್ಲಿ ಮಲಗಿದ್ದ ರಾಮಚಂದ್ರ ಮತ್ತೆ ಗರ್ಲ್‌ಫ್ರೆಂಡ್‌ ಬಳಿ ತೆರಳಿ ಯುವತಿ ಪಕ್ಕದಲ್ಲಿ ಮಲಗಿದ್ದಾನೆ. ಅಪರಿಚಿತ ವ್ಯಕ್ತಿ ಮಲಗಿದ್ದನ್ನು ಕಂಡ ಯುವತಿ ಗಾಬರಿಯಿಂದ ಕೂಗಿಕೊಂಡಿದ್ದಾರೆ. ತಕ್ಷಣ ರೂಮ್‌ ಬಾಯ್‌ ಮಂಚದ ಕೆಳಗೆ ಬಚ್ಚಿಟ್ಟುಕೊಂಡಿದ್ದಾನೆ.

ಯುವತಿಯರ ನಗ್ನ ವಿಡಿಯೋ ರೆಕಾರ್ಡ್‌

ಈ ವಿಚಾರ ತಿಳಿಯುತ್ತಿದ್ದಂತೆ, ರಾಮಚಂದ್ರ ಮತ್ತವರ ಸ್ನೇಹಿತರು ಸುಭಾಷ್‌ನನ್ನು ಹಿಡಿದು ಥಳಿಸಿದ್ದಾರೆ. ಪೊಲೀಸರಿಗೂ ಮಾಹಿತಿ ನೀಡಿ ಅವರಿಗೆ ಒಪ್ಪಿಸಿದ್ದಾರೆ. ವಿಚಾರಣೆ ನಡೆಸಿದ ಬಳಿಕ ಮತ್ತಷ್ಟು ಮಗದಷ್ಟು ಶಾಕಿಂಗ್‌ ವಿಚಾರಗಳನ್ನು ಸುಭಾಷ್‌ ಬಾಯಿಬಿಟ್ಟಿದ್ದಾನೆ. ಬಾತ್‌ರೂಮ್‌ನಲ್ಲಿ ಸ್ನಾನ ಮಾಡುತ್ತಿದ್ದ ಯುವತಿಯರ ನಗ್ನ ವಿಡಿಯೋಗಳನ್ನು ಸೆರೆಹಿಡಿಯುತ್ತಿದ್ದ ಬಗ್ಗೆ ಹೇಳಿಕೊಂಡಿದ್ದಾನೆ. ಸ್ವಿಮ್ಮಿಂಗ್‌ ಪೂಲ್‌ನಲ್ಲಿ ಅರೆಬರೆ ಬಟ್ಟೆ ಧರಿಸಿದ ಯುವತಿಯರ ಫೋಟೋ ಕ್ಲಿಕ್ಕಿಸಿದ್ದನ್ನು ಬಾಯ್ಬಿಟ್ಟಿದ್ದಾನೆ. ಅದಕ್ಕೆ ಸಾಕ್ಷ್ಯ ಎಂಬಂತೆ ಕೆಲವು ಫೋಟೋಗಳು ಸುಭಾಷ್‌ ಫೋನ್‌ನಲ್ಲಿ ಪತ್ತೆಯಾಗಿವೆ. ಈ ಕೃತ್ಯದ ಹಿನ್ನೆಲೆಯಲ್ಲಿ ಸುಭಾಷ್‌ ವಿರುದ್ಧ ಕೇಸ್‌ ದಾಖಲಿಸಿಕೊಳ್ಳಲಾಗಿದೆ.